ಚಂದ ಚಂದದ ಮೆಹಂದಿ ಚಿತ್ತಾರ ಕಲಿಯೋಕೆ ಈ ಆಪ್ ಬಳಸಿ..!

|

ಮೆಹಂದಿಯ ಒಂದೊಂದು ಗೆರೆಯೂ ಯಾವ ಹೆಣ್ಣಿನ ಕೈ ಸೇರಬೇಕು ಅಂತಿರುತ್ತೋ ಅದೇ ಹೆಣ್ಣಿನ ಕೈಸೇರುತ್ತೆ ಆದರೆ ಹೇಗೆ ಸೇರಬೇಕು ಎಂಬುದನ್ನು ಇದೀಗ ನೀವೇ ನಿರ್ಧರಿಸಿಕೊಳ್ಳಬಹುದು. ಹೌದು ಹಬ್ಬ, ಸಂಭ್ರಮ ಅಂದರೆ ಮಹಿಳೆಯರಿಗೆ, ಹುಡುಗಿಯರಿಗೆ ಮೆಹಂದಿ ಚಿತ್ತಾರ ಬಿಡಿಸಿಕೊಳ್ಳೋದು ಅಂದ್ರೆ ಎಲ್ಲಿಲ್ಲದ ಸಂಭ್ರಮ. ಇದೀಗ ಹಬ್ಬದ ದಿನಗಳು ಆರಂಭವಾಗುತ್ತಿದೆ. ಹಾಗಾಗಿ ಮೆಹಂದಿ ಹಾಕಿಕೊಳ್ಳೋಕೆ ನೀವು ಮನಸ್ಸು ಮಾಡಿದ್ದರೆ, ನಿಮಗೆ ಸಹಾಯ ಮಾಡುವ ಆಪ್ ಇಲ್ಲಿದೆ.

ಚಂದ ಚಂದದ ಮೆಹಂದಿ ಚಿತ್ತಾರ ಕಲಿಯೋಕೆ ಈ ಆಪ್ ಬಳಸಿ..!

ಹೌದು ಕೈಗಳಿಗೆ, ಕಾಲುಗಳಿಗೆ ಮೆಹಂದಿ ಹಾಕಿಸಿಕೊಳ್ಳೋಕೆ ಸಾವಿರಾರು ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಉಚಿತವಾಗಿ ಲಭ್ಯವಾಗುವ ಈ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಾಕು. ಸಾವಿರಕ್ಕೂ ಅಧಿಕ ವೆರೈಟಿಯ ಡಿಸೈನ್ ಗಳು ಲಭ್ಯವಾಗುತ್ತೆ. ನಿಮಗೆ ಯಾವುದು ಬೇಕು ಎಂದು ಆರಿಸಿಕೊಳ್ಳಬಹುದು.

ಯಾವುದು ಆ ಆಪ್?

ಯಾವುದು ಆ ಆಪ್?

icyarena ಲೇಟೆಸ್ಟ್ ಮೆಹಂದಿ ಡಿಸೈನ್ಸ್ (ಆಫ್ ಲೈನ್) ನ ವರ್ಷನ್ 2.3.8 ನಲ್ಲಿ ನಿಮಗೆ ಹಲವು ಆಯ್ಕೆಗಳು ಲಭ್ಯವಾಗುತ್ತದೆ ಮತ್ತು ವಿಭಿನ್ನ ಮೆಹಂದಿ ಡಿಸೈನ್ ಗಳಿವೆ. ಸುಲಭವಾಗಿರುವ ಡಿಸೈನ್ಸ್ ನಿಂದ ಹಿಡಿದು ಕಠಿಣವಾಗಿರುವ ಚಿತ್ತಾರ ಕೂಡ ಇದರಲ್ಲಿ ಲಭ್ಯ. ಸುಲಭದಲ್ಲಿ ಆಂಡ್ರಾಯ್ಡ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದಾದ ಈ ಆಪ್ ನ್ನು ಈಗಾಗಲೇ 10M+ ಮಂದಿ ಇನ್ಸ್ಟಾಲ್ ಮಾಡಿಕೊಂಡು ಬಳಸುತ್ತಿದ್ದಾರೆ. ಅಷ್ಟೇ ಅಲ್ಲ ಅವರು 4.3 ಸ್ಟಾರ್ ಕೊಟ್ಟು ಬೆಸ್ಟ್ ಆಪ್ ಗಳಲ್ಲಿ ಇದು ಒಂದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆಫ್ ಲೈನ್ ನಲ್ಲೂ ಬಳಕೆ ಮಾಡಲು ಅವಕಾಶ:

ಆಫ್ ಲೈನ್ ನಲ್ಲೂ ಬಳಕೆ ಮಾಡಲು ಅವಕಾಶ:

ಈ ಆಪ್ ನ ಪ್ರಮುಖ ಪ್ರಯೋಜನವೇನೆಂದರೆ ಇದರಲ್ಲಿ ಲಭ್ಯವಾಗುವ ಮೆಹಂದಿ ಚಿತ್ರವನ್ನು ಅಥವಾ ವೀಡಿಯೋವನ್ನು ಆಫ್ ಲೈನ್ ನಲ್ಲಿ ಬಳಕೆ ಮಾಡಲೂ ಕೂಡ ಅವಕಾಶ ಇದೆ. ಇಂಟರ್ನೆಟ್ ಸಂಪರ್ಕವಿಲ್ಲದೇ ಇದ್ದಾಗಲೂ ಕೂಡ ಡಿಸೈನ್ ನ್ನು ಸೇವ್ ಮಾಡಿಕೊಂಡು ಉಪಯೋಗಿಸಬಹುದು.

ಆಪ್ ನ ಇನ್ನಷ್ಟು ಉಪಯೋಗಗಳು:

ಆಪ್ ನ ಇನ್ನಷ್ಟು ಉಪಯೋಗಗಳು:

ಆಪ್ ನಲ್ಲಿ ಮೆಹಂದಿ ಚಿತ್ತಾರದ ಫೋಟೋಗಳು ಮಾತ್ರವಲ್ಲ ಸ್ಟೆಪ್ ಬೈ ಸ್ಟೆಪ್ ಬಿಡಿಸುವ ವೀಡಿಯೋಗಳು ಕೂಡ ಲಭ್ಯವಿದೆ. ಅಷ್ಟೇ ಅಲ್ಲದೆ ಫೋಟೋಗಳನ್ನು ಝೂಮ್ ಮಾಡಿ ನೋಡಲು ಅವಕಾಶವಿರುತ್ತದೆ. ಅಷ್ಟೇ ಅಲ್ಲ, ನೀವು ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಅದರ ಕಲೆಕ್ಷನ್ ಗೆ ಇನ್ನಷ್ಟು ಸೇರಿಸುವ ಅಥವಾ ರಿಮೂವ್ ಮಾಡುವ ಅವಕಾಶವಿದೆ. ಅಷ್ಟೇ ಅಲ್ಲದೆ ಇಷ್ಟವಾಗುವ ಮೆಹಂದಿ ಡಿಸೈನ್ ನ್ನು ನಿಮ್ಮವರೊಂದಿಗೆ ಬೇರೆಬೇರೆ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದಕ್ಕೂ ಕೂಡ ಆಪ್ ಅವಕಾಶ ನೀಡುತ್ತದೆ.

How to recharge your Bangalore Metro card online - KANNADA
ಯಾವ ರೀತಿಯ ಡಿಸೈನ್ ಗಳು ಲಭ್ಯ?

ಯಾವ ರೀತಿಯ ಡಿಸೈನ್ ಗಳು ಲಭ್ಯ?

ಈದ್ ಮೆಹಂದಿ ಡಿಸೈನ್,ಇಂಡಿಯನ್ ಮೆಹಂದಿ ಡಿಸೈನ್, ಪಾಕಿಸ್ತಾನಿ ಮೆಹಂದಿ ಡಿಸೈನ್, ಅರೇಬಿಕ್ ಮೆಹಂದಿ,ಬ್ರೈಡಲ್ ಮೆಹಂದಿ, ಸರ್ಕ್ಯೂಲರ್ ಮೆಹಂದಿ ಡಿಸೈನ್, ಹಾರ್ಟ್ ಹೆನ್ನಾ ಡಿಸೈನ್ ಹೀಗೆ ವಿಭಿನ್ನ ಮೆಹಂದಿ ಡಿಸೈನ್ ಇದರಲ್ಲಿದೆ.

ಇನ್ನು ಒಮ್ಮೆ ಆಪ್ ಇನ್ಸ್ಟಾಲ್ ಮಾಡಿಕೊಂಡು ಓಪನ್ ಮಾಡಿದ ಮೇಲೆ ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ ಸಾಗಿದರೆ ಸಿಂಪಲ್ ಮೆಹಂದಿ ಡಿಸೈನ್,ಲೇಟೆಸ್ಟ್ ಮೆಹಂದಿ ಡಿಸೈನ್, ಕೈನ ಮೇಲ್ಬಾಗದ ಡಿಸೈನ್, ಅಂಗೈ ಡಿಸೈನ್, ತೋಳಿನ ಮೆಹಂದಿ ಡಿಸೈನ್, ಮಕ್ಕಳಿಗೆ ಮೆಹಂದಿ ಡಿಸೈನ್, ಸೆಲೆಬ್ರಿಟಿ ಮೆಹಂದಿ ಡಿಸೈನ್, ಪಾರ್ಟಿ ಮೆಹಂದಿ ಡಿಸೈನ್, ಬ್ರೈಡಲ್ ಮೆಹಂದಿ ಡಿಸೈನ್ ಎಂಬ ವಿಭಿನ್ನ ಆಯ್ಕೆಗಳು ಸಿಗುತ್ತವೆ. ನೀವು ಎಲ್ಲಿಗೆ ಮೆಹಂದಿ ಹಾಕಿಕೊಳ್ಳಬೇಕು ಎಂಬುದನ್ನು ಆಧರಿಸಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಒಟ್ಟಾರೆ ಪ್ರತಿಯೊಂದಕ್ಕೂ ಕ್ಲಾಸ್ ಗೆ ಹೋಗಿ ಕಲಿತು ಬರಬೇಕಾದ ಅಗತ್ಯ ಈಗಿಲ್ಲ. ಮೊಬೈಲ್ ವೊಂದಿದ್ದರೆ ಬ್ರಹ್ಮವಿದ್ಯೆಯನ್ನೂ ಕೋತಿವಿದ್ಯೆಯನ್ನಾಗಿಸಿಕೊಳ್ಳಬಹುದು. ಹಾಗಂತ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದೊಂದೆ ಆಪ್ ಅಂದುಕೊಳ್ಳಬೇಡಿ ಮದರಂಗಿ ಡಿಸೈನ್ ಅಂತ ಟೈಪ್ ಮಾಡಿದರೆ ಅದೆಷ್ಟೋ ಆಪ್ ಗಳು ತೆರೆದುಕೊಳ್ಳುತ್ತದೆ. ಹೆಚ್ಚು ಕಡಿಮೆ ಎಲ್ಲಾ ಆಪ್ ಗಳದ್ದೂ ಕೂಡ ಒಂದೇ ವಿವಿಧ ಕಾರ್ಯವೈಖರಿ. ಒಟ್ಟಿನಲ್ಲಿ ಮದರಂಗಿ ಬಿಡಿಸೋಕೆ ಆಪ್ ಬಳಕೆ ಮಾಡುವುದರಿಂದ ಕೆಲಸ ಸುಲಭಗೊಳ್ಳುವುದು ಮಾತ್ರ ನಿಜ.

Best Mobiles in India

English summary
This app will help you drawing the beautiful mehandi. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X