ಐಫೋನ್ X ಬಳಕೆದಾರರ ಮುಖವನ್ನು ಅದೃಶ್ಯಮಾಡಬಲ್ಲದು ಈ ಆಪ್!

By Tejaswini P G
|

ಆಪಲ್ ಸಂಸ್ಥೆಯು ಎಆರ್ ಗೆ ಸಂಬಂಧಿಸಿದಂತೆ ದೊಡ್ಡ ಯೋಜನೆಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ. ಕೆಲ ಸಮಯದ ಹಿಂದೆ ಆಪಲ್ ಸಂಸ್ಥೆಯು ಎಆರ್ ಕಿಟ್ ಒಂದನ್ನು ಲಾಂಚ್ ಮಾಡಿದ್ದು ಈ ಮೂಲಕ ಜನರು ತಮ್ಮ ನೂತನ ಐಫೋನ್ ಗಳ ಮೂಲಕ ಎಆರ್ ಆಪ್ಗಳನ್ನು ಬಳಸಬಹುದಾಗಿದೆ.

ಐಫೋನ್ X ಬಳಕೆದಾರರ ಮುಖವನ್ನು ಅದೃಶ್ಯಮಾಡಬಲ್ಲದು ಈ ಆಪ್!

ಐಫೋನ್ X ತನ್ನ ಎಆರ್ ಸಾಮರ್ಥ್ಯದಿಂದಲೇ ಜನಪ್ರಿಯತೆ ಗಳಿಸಿದೆ. ಈಗ ಕಝುಯಾ ನೋಶಿರೋ ಎಂಬ ಜಪಾನಿನ ಆಪ್ ಡೆವೆಲಪರ್ ಒಬ್ಬರು ಐಫೋನ್ X ನ ಕ್ಯಾಮೆರಾ ಮೂಲಕ ಜನರ ಮುಖಗಳಿಗೆ ಪಾರದರ್ಶಕ ಎಫೆಕ್ಟ್ ನೀಡುವ ಆಪ್ ಒಂದನ್ನು ಸೃಷ್ಟಿಸಿದ್ದಾರೆ. ಈ ಆಪ್ ಹೇಗೆ ಕೆಲಸಮಾಡುತ್ತದೆ ಎಂಬುದರ ಕುರಿತಾಗಿ ಚಿಕ್ಕ ವೀಡಿಯೋ ಒಂದನ್ನು ಕೂಡ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ಟ್ವೀಟ್ ನಲ್ಲಿ ಹೇಳಿರುವಂತೆ ಈ ಆಪ್ ನಲ್ಲಿ ಲಭ್ಯವಿರುವ ಸರಳ ಮಾಸ್ಕ್ ಬಳಸಿ ಐಫೋನ್ X ನ ಕ್ಯಾಮೆರಾ ಮೂಲಕ ಜನರ ಮುಖವನ್ನು ಪಾರದರ್ಶಕವಾಗಿಸಿ ಅವರ ಹಿಂದಿರುವ ವಸ್ತುಗಳನ್ನು ಕಾಣಬಹುದು!

ಇದೆಲ್ಲಾ ಕೇಳಲು ಬಹಳ ಕ್ಲಿಷ್ಟಕರವನಿಸಬಹುದು , ಆದರೆ ಈ ಆಪ್ ಅನ್ನು ಸರಳ ವಿಧಾನವನ್ನುಸರಿಸಿ ಸೃಷ್ಟಿಸಲಾಗಿದೆ. ಈ ಆಪ್ ಮೊದಲಿಗೆ ಐಫೋನ್ X ಫ್ರಂಟ್ ಕ್ಯಾಮೆರಾ ಮೂಲಕ ಕೊಠಡಿಯ ಫೋಟೋ ತೆಗೆಯುತ್ತದೆ. ನಂತರ ಬಳಕೆದಾರರ ಮುಖವನ್ನು ಸ್ಕ್ಯಾನ್ ಮಾಡುತ್ತದೆ. ನಂತರ ಈ ಎರಡು ಫೋಟೋಗಳನ್ನು ಪರಿಷ್ಕರಿಸಿ ಬಳಕೆದಾರರ ಮುಖದ ಮೇಲೆ ಹಿನ್ನಲೆಯ ಚಿತ್ರವನ್ನು ಹಾಕುತ್ತದೆ.ಈ ಆಪ್ ಅನ್ನು ಗೇಮ್ ಡೆವೆಲಪ್ಮೆಂಟ್ ಪ್ಲ್ಯಾಟ್ಫಾರ್ಮ್ ಆದ ಯುನಿಟಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

ಡೆಮೋ ವೀಡಿಯೋದಲ್ಲಿ ಈ ಆಪ್ ಮುಖವನ್ನು ಪಾರದರ್ಶಕವಾಗಿಸಿ ಹಿನ್ನಲೆಯ ಚಿತ್ರವನ್ನು ಆ ಸ್ಥಾನದಲ್ಲಿ ತುಂಬುತ್ತದೆ. ಆದರೆ ಈ ಆಪ್ ಲೈಟಿಂಗ್ ಕಂಡೀಶನ್ ಮತ್ತು ಹಿನ್ನಲೆ ಬದಲಾದರೂ ಇಷ್ಟೇ ಸಮರ್ಪಕವಾಗಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಿ ತಿಳಿಯಬೇಕಾಗಿದೆ.

ನಿರಾಶೆ ತರುವ ವಿಷಯವೆಂದರೆ ಈ ಆಪ್ ಇನ್ನೂ ಡೌನ್ಲೋಡ್ ಗೆ ಲಭ್ಯವಿಲ್ಲ. ಈ ಆಪ್ ನ ಡೆವೆಲಪರ್ ಈ ಆಪ್ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ.

ಈ ಆಪ್ ಅನ್ನು ನಿರ್ದಿಷ್ಟವಾಗಿ ಐಫೋನ್ X ಗಾಗಿ ತಯಾರಿಸಲಾಗಿದೆಯೇ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಅದು ಐಫೋನ್ 7 ಮತ್ತು ಐಫೋನ್ 8 ನೊಂದಿಗೂ ಕೆಲಸಮಾಡಬಹುದು ಎಂದು ನಮ್ಮ ಅನಿಸಿಕೆ. ಏನೇ ಆಗಲಿ ಈ ಆಪ್ ಅನ್ನು ಬಳಸಲು ನಾವು ಉತ್ಸುಕರಾಗಿರುವದಂತೂ ನಿಜ.

Best Mobiles in India

Read more about:
English summary
This app can create a see-through effect for people’s faces, using only the front-facing cameras of the iPhone X.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X