Home
Apps

ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ತಿಳಿಸುವ ಮನೆಮದ್ದು ಆಪ್

By Gizbot Bureau

ಮನುಷ್ಯರಾಗಿ ಹುಟ್ಟಿದ ಮೇಲೆ ಸಣ್ಣಪುಟ್ಟ ಕಾಯಿಲೆಗಳು ಆಗಾಗ ಬಾಧಿಸುವುದು ಸರ್ವೇಸಾಮಾನ್ಯ. ಆದರೆ ಸಣ್ಣಪುಟ್ಟದಕ್ಕೂ ಆಸ್ಪತ್ರೆಗೆ ಹೋಗುವುದಕ್ಕೆ ಯಾರಿಗೆ ತಾನೇ ಮನಸ್ಸು ಬರುತ್ತದೆ ಹೇಳಿ? ಈಗಂತೂ ಡಾಕ್ಟರ್ ಫೀಸ್ ಕೇಳಿದ್ರೇನೇ ಚಳಿಜ್ವರ ಇದ್ದವರಿಗೆ ಇನ್ನಷ್ಟು ಅಧಿಕವಾಗಿ ಬಿಡುತ್ತದೆ! ಅದೂ ಅಲ್ಲದೇ ಇಂಗ್ಲೀಷ್ ಔಷಧಿಯ ಬಗ್ಗೆ ಜನರಲ್ಲಿ ಒಂದು ಅಸಮಾಧಾನದ ಭಾವನೆ ಇರುವುದು ಕೂಡ ಸುಳ್ಳಲ್ಲ. ಹಾಗಾಗಿ ಹೆಚ್ಚಿನವರಿಗೆ ಮನೆಮದ್ದು ತಿಳಿದುಕೊಳ್ಳುವ ಆಸಕ್ತಿ ಹೆಚ್ಚು.

ಮನೆಮದ್ದುಗಳು

ಮನೆಮದ್ದಿನಿಂದ ಅಡ್ಡಪರಿಣಾಮಗಳಾಗುವುದು ಕಡಿಮೆ ಎಂಬುದು ಇದಕ್ಕಿರುವ ಪ್ರಮುಖ ಕಾರಣ. ಆದರೆ ಏನು ಮಾಡುವುದು ಹಿಂದಿನವರಿಗೆ ತಿಳಿದಿರುವಷ್ಟು ಮನೆಮದ್ದುಗಳು ಈಗಿನವರಿಗೆ ತಿಳಿದಿಲ್ಲ. ಅಯ್ಯೋ ಅಮ್ಮಂಗೋ,ಅಜ್ಜಿಗೋ ಗೊತ್ತಿರೋ ಔಷಧಿ ನನಗೆ ಗೊತ್ತಿಲ್ಲವೆಂದು ನೀವೇನು ಚಿಂತಿಸುವ ಅಗತ್ಯವಿಲ್ಲ. ನಿಮಗೆ ಔಷಧಿ ತಿಳಿಸಿಕೊಡುವುದಕ್ಕಾಗಿ ನಿಮ್ಮ ಕೈಯಲ್ಲಿರುವ ಮೊಬೈಲೇ ಸಾಕು!

ಕನ್ನಡದಲ್ಲಿ ಲಭ್ಯವಿರುವ ಮನೆಮದ್ದು ಆಪ್:

ಕನ್ನಡದಲ್ಲಿ ಲಭ್ಯವಿರುವ ಮನೆಮದ್ದು ಆಪ್:

ನಿಮಗೆ ಇಂಗ್ಲೀಷ್ ಓದುವುದಕ್ಕಿಂತ ಕನ್ನಡವೇ ಸುಲಭವೆನ್ನುವವರು ಖಂಡಿತ ಈ ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಹೌದು ನಿಮ್ಮ ಕಾಯಿಲೆಗೆ ಸೂಕ್ತ ಔಷಧಿಯನ್ನು ತಿಳಿಸುವ ಮನೆಮದ್ದು ಆಪ್ ನಿಮ್ಮ ಅಂಗೈಯಲ್ಲಿಯೇ ಇದೆ.ಜಸ್ಟ್ ಪ್ಲೇ ಸ್ಟೋರ್ ಗೆ ತೆರಳಿ ಮನೆಮದ್ದು ಎಂದು ಟೈಪ್ ಮಾಡಿದರೆ ನಿಮಗೆ ಆಪ್ ಲಭ್ಯವಾಗುತ್ತದೆ. ಇದನ್ನು ಡೌನ್ ಲೋಡ್ ಮಾಡಿ ನಿಮ್ಮ ಸ್ಮಾರ್ಟ್ ಫೋನಿಗೆ ಇನ್ಸ್ಟಾಲ್ ಮಾಡಿಕೊಳ್ಳಿ.

ಎರಡು ಆಯ್ಕೆಗಳು:

ಎರಡು ಆಯ್ಕೆಗಳು:

ಆಪ್ ತೆರೆದಾಗ ನಿಮಗೆ ಎರಡು ಆಯ್ಕೆಗಳಿರುತ್ತದೆ. "ರೋಗ ನಿವಾರಣೆಗಾಗಿ" ಮತ್ತು "ರೋಗ ತಪ್ಪಿಸುವುದಕ್ಕಾಗಿ" ಎಂದು. ನಿಮ್ಮ ಆಯ್ಕೆಯ ಅನುಸಾರ ಮಾಹಿತಿಗಳು ತೆರೆದುಕೊಳ್ಳುತ್ತದೆ. ಕಾಯಿಲೆ ಮತ್ತು ಅವುಗಳ ಗುಣಲಕ್ಷಣಗಳ ಆಧಾರದಲ್ಲಿ ನಿಮಗೆ ಮನೆಮದ್ದುಗಳನ್ನು ಇದರೊಳಗೆ ವಿವರಿಸಲಾಗಿರುತ್ತದೆ.

ಇತರರೊಡನೆ ಹಂಚಿಕೊಳ್ಳುವುದಕ್ಕೆ ಅವಕಾಶ:

ಇತರರೊಡನೆ ಹಂಚಿಕೊಳ್ಳುವುದಕ್ಕೆ ಅವಕಾಶ:

ಇನ್ನು ಆಪ್ ನಲ್ಲಿ ಸಿಗುವ ಮನೆಮದ್ದುಗಳನ್ನು ನೀವು ನಿಮ್ಮವರೊಡನೆ ಹಂಚಿಕೊಳ್ಳುವುದಕ್ಕೂ ಕೂಡ ಅವಕಾಶವಿದೆ. ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ನೀವಿದನ್ನು ಹಂಚಿಕೊಳ್ಳಬಹುದು.

ಕೆಮ್ಮು,ಶೀತ, ಜ್ವರ, ತಲೆನೋವು, ಮಂಡಿನೋವು, ಹೀಗೆ ಹಲವು ಕಾಯಿಲೆಗಳಿಗೆ ಅಡುಗೆ ಮನೆಯಲ್ಲಿಯೇ ಇರುವ ವಸ್ತುಗಳು ಹೇಗೆ ಪ್ರಯೋಜನಕಾರಿಯಾಗಬಲ್ಲದು ಮತ್ತು ಅವುಗಳನ್ನು ಬಳಸಿ ಕಾಯಿಲೆ ಗುಣಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ಆಪ್ ಮೂಲಕ ನೀವು ತಿಳಿದುಕೊಳ್ಳಬಹುದು.

ಆಪ್

ಅಷ್ಟೇ ಅಲ್ಲ ಅದೆಷ್ಟೊ ಕಾಯಿಲೆಗಳು ಬರದಂತೆ ತಡೆಯಬೇಕೆಂದರೆ ನಮಗೆ ಆ ಕಾಯಿಲೆಗಳು ಯಾಕೆ ಬರುತ್ತವೆ ಎಂಬ ಬಗ್ಗೆ ತಿಳಿದಿರಬೇಕು. ಹಾಗಾಗಿ ಮನೆಮದ್ದು ಆಪ್ ಮೂಲಕ ನೀವು ಕಾಯಿಲೆಯ ಬಗ್ಗೆ ಮಾಹಿತಿ ತಿಳಿಯಬಹುದು ಮತ್ತು ಅವುಗಳಿಗೆ ಕಾರಣವಾಗುವ ಅಂಶಗಳು ಯಾವುದು? ಕಾಯಿಲೆಗೆ ಕಾರಣವಾಗುವ ಅಂಶಗಳನ್ನು ಮನೆಯಲ್ಲಿ ಲಭ್ಯವಿರುವ ಯಾವ ವಸ್ತುವಿನಿಂದ ನಿಗ್ರಹಿಸಿಕೊಂಡು ಕಾಯಿಲೆ ಬರದಂತೆ ತಡೆಯಬಹುದು ಎಂಬುದನ್ನು ಈ ಆಪ್ ನಿಮಗೆ ತಿಳಿಸುತ್ತದೆ. ನಿಮಗೂ ನಿಮ್ಮ ಮೊಬೈಲ್ ನಲ್ಲಿ ಔಷಧಿ ಆಪ್ ಬೇಕು ಎಂಬ ಆಸೆ ಇದ್ದರೆ ಖಂಡಿತ ಮನೆಮದ್ದು ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು.

ಈಗಾಗಲೇ ಇನ್ಸ್ಟಾಲ್ ಮಾಡಿಕೊಂಡಿರುವವರಿಂದ ಉತ್ತಮ ಪ್ರತಿಕ್ರಿಯೆ ಪಡೆದು 4.6 ಸ್ಟಾರ್ ನ್ನು ಪಡೆದಿರುವ ಈ ಆಪ್ ನಿಮಗೂ ಕೂಡ ಪ್ರಯೋಜನಕಾರಿಯಾಗಬಹುದು. ಟ್ರೈ ಮಾಡಿ ನೋಡಿ. ನಿಮ್ಮ ಅಭಿಪ್ರಾಯವನ್ನು ನಮಗೂ ಕಮೆಂಟ್ ಮಾಡಿ ತಿಳಿಸಿ.

Best Mobiles in India

English summary
This App Will Suggest Home Remedies For Small Diseases
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+