ಕಡಿಮೆ ಬೆಲೆಯಲ್ಲಿ 'ಒನ್ ಪ್ಲಸ್ 6' ಖರೀದಿಸುವ ಕೊನೆಯ ಅವಕಾಶ ಇದು!
ಶಾರ್ಟ್ ಸ್ಟೋರಿ – ಅಕ್ಟೋಬರ್ 29 ರಂದು ಅಧಿಕೃತವಾಗಿ ಒನ್ ಪ್ಲಸ್ 6ಟಿ ಫೋನ್ ನ್ನು ಬಿಡುಗಡೆಗೊಳಿಸಲಾಗಿತ್ತು. ಭಾರತದಲ್ಲಿ ನವೆಂಬರ್ 2 ರಿಂದ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಒನ್ ಪ್ಲಸ್ 6 ಟಿ ವೈಶಿಷ್ಟ್ಯತೆಗಳು ಮತ್ತು ಭಾರತೀಯ ಮಾರುಕಟ್ಟೆಯಲ್ಲಿನ ಬೆಲೆಯ ವಿವರ ಇಲ್ಲಿದೆ.ಅಕ್ಟೋಬರ್ 29 ರಂದು ಅಧಿಕೃತವಾಗಿ ಒನ್ ಪ್ಲಸ್ 6ಟಿ ಫೋನ್ ನ್ನು ಬಿಡುಗಡೆಗೊಳಿಸಲಾಗಿತ್ತು. ಭಾರತದಲ್ಲಿ ನವೆಂಬರ್ 2 ರಿಂದ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ.
ಅಮೇಜಾನ್ ಫೆಸ್ಟೀವ್ ಸೇಲ್ ನಲ್ಲಿ ಒನ್ ಪ್ಲಸ್ 6 ಅಧಿಕೃತವಾಗಿ ಅತೀ ಕಡಿಮೆ ಬೆಲೆಗೆ ಕೊನೆಯ ಬಾರಿಗೆ ಲಭ್ಯವಾಗುತ್ತಿದೆ. ಒನ್ ಪ್ಲಸ್ 6 ನ ಎಲ್ಲಾ ವೇರಿಯಂಟ್ ನ ಫೋನ್ ಗಳು 5,000 ರೂಪಾಯಿ ಬೆಲೆಯ ಫ್ಲಾಟ್ ಡಿಸ್ಕೌಂಟ್ ನಲ್ಲಿ ಲಭ್ಯವಿದೆ. ಒನ್ ಪ್ಲಸ್ 6 ನ 6ಜಿಬಿ ವೇರಿಯಂಟ್ ನ ಫೋನ್ 34,999 ರೂಪಾಯಿಯ ಬದಲಾಗಿ 29,999 ರುಪಾಯಿ ಬೆಲೆಗೆ ಲಭ್ಯವಿದೆ.ಒನ್ ಪ್ಲಸ್ 6 8ಜಿಬಿ RAM/128ಜಿಬಿ ಸ್ಟೋರೇಜ್ ವೇರಿಯಂಟ್ ನ ಫೋನ್ 39,999 ರುಪಾಯಿಯ ಬದಲಾಗಿ 34,999 ರುಪಾಯಿ ಬೆಲೆಗೆ ಲಭ್ಯವಿದೆ.

ಆದರೆ ಒನ್ ಪ್ಲಸ್ 6 ನ 6ಜಿಬಿ ವೇರಿಯಂಟ್ ನ ಫೋನ್ ಕಂಪೆನಿನ್ನು ಕಂಪೆನಿಯು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ ಮತ್ತು ಕಂಪೆನಿಯ ಆನ್ ಲೈನ್ ಸಹಭಾಗಿಗಳಾಗಿರುವ ಅಮೇಜಾನ್.ಇನ್ ನಲ್ಲೂ ಕೂಡ ಈಗಾಗಲೇ ಲಭ್ಯವಿಲ್ಲ. 8ಜಿಬಿ ಮೆಮೊರಿಯ ಒನ್ ಪ್ಲಸ್ ವರ್ಷನ್ 34,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.
ಒನ್ ಪ್ಲಸ್ 6ಟಿ ಭಾರತೀಯ ಬೆಲೆ:
ಒನ್ ಪ್ಲಸ್ 6ಟಿ ಫೋನಿನ ಭಾರತೀಯ ಬೆಲೆ ಪ್ರಕಟಗೊಂಡಿದೆ. ಮೂರು ವೇರಿಯಂಟ್ ನ ಮೆಮೊರಿ ಮತ್ತು ಸ್ಟೋರೇಜ್ ಆಯ್ಕೆಯನ್ನು ಭಾರತದಲ್ಲಿ ನೀಡಲಾಗುತ್ತದೆ. ಒನ್ ಪ್ಲಸ್ 6ಟಿ ನ(ಮಿರರ್ ಬ್ಲಾಕ್) 6ಜಿಬಿ RAM+128ಜಿಬಿ ಸ್ಟೋರೇಜ್ - 37,999ರೂಪಾಯಿ
ಒನ್ ಪ್ಲಸ್ 6ಟಿ (ಮಿರರ್/ಮಿಡ್ ನೈಟ್ ಬ್ಲಾಕ್) 8ಜಿಬಿ RAM+128ಜಿಬಿ ಸ್ಟೋರೇಜ್ - 40,999 ರುಪಾಯಿ.
ಒನ್ ಪ್ಲಸ್ 6ಟಿ(ಮಿಡ್ ನೈಟ್ ಬ್ಲಾಕ್) 8ಜಿಬಿ RAM+256ಜಿಬಿ ಸ್ಟೋರೇಜ್ - 44,999ರುಪಾಯಿ.
ಒಂದು ವೇಳೆ ಇದು ನಿಮ್ಮ ಬಜೆಟ್ ಗೂ ಮೀರಿದ ಬೆಲೆಯದ್ದಾಗಿದ್ದರೆ ಆಗ ಒನ್ ಪ್ಲಸ್ 6ಟಿ ಬದಲಾಗಿ ಒನ್ ಪ್ಲಸ್ 6 ಫೋನ್ ನ್ನು ಖರೀದಿಸಬಹುದು. ಆದರೆ ಒನ್ ಪ್ಲಸ್ 6ಟಿ ಯಲ್ಲಿ 3.5ಎಂಎಂ ಹೆಡ್ ಫೋನ್ ಜಾಕ್ ನ್ನು ಇರುವುದಿಲ್ಲ. ಒಂದು ವೇಳೆ ನೀವು ಕೆಟ್ಟ ಇಯರ್ ಫೋನ್ ನ್ನು ನಿಮ್ಮ ಫೋನಿಗೆ ಬಯಸುವುದಿಲ್ಲವಾದಲ್ಲಿ ಒನ್ ಪ್ಲಸ್ 6ಟಿ ಬದಲಾಗಿ ಒನ್ ಪ್ಲಸ್ 6ನ್ನು ಖರೀದಿಸಬಹುದು. ಒನ್ ಪ್ಲಸ್ 6ಟಿ ಇನ-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹೊಂದಿರುತ್ತದೆ.
ಒನ್ ಪ್ಲಸ್ 6ಟಿ ನ ವೈಶಿಷ್ಟ್ಯತೆಗಳು:
ಒನ್ ಪ್ಲಸ್ 6ಟಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಹೊಂದಿರುತ್ತದೆ ಮತ್ತು ಇದು 6ಜಿಬಿ ಮತ್ತು 8ಜಿಬಿ ಮೆಮೊರಿ ಆಯ್ಕೆಗಳಲ್ಲಿ ಬರುತ್ತದೆ. ಎಂದಿನಂತೆ ಮೈಕ್ರೋ ಎಸ್ ಡಿ ಕಾರ್ಡ್ ಗೆ ಬೆಂಬಲವಿರುವುದಿಲ್ಲ. ಒನ್ ಪ್ಲಸ್ 6ಟಿ 6.4 ಇಂಚಿನ AMOLED ಡಿಸ್ಪ್ಲೇ ಜೊತೆಗೆ ಫುಲ್ HD+ ರೆಸಲ್ಯೂಷನ್ 2340p x 1080 ಪಿಕ್ಸಲ್ಸ್ ನ್ನು ಹೊಂದಿದೆ. ಒನ್ ಪ್ಲಸ್ 6ಟಿ ಆಂಡ್ರಾಯ್ಡ್ 9.0 ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿರಲಿದೆ.
ಒನ್ ಪ್ಲಸ್ 6ಟಿಯಲ್ಲಿ ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ ಜೊತೆಗೆ 16ಎಂಪಿ ಮುಂಭಾಗದ ಸೆಲ್ಫೀ ಕ್ಯಾಮರಾ ಇರಲಿದೆ. ಈ ಡಿವೈಸ್ ನ ಬ್ಯಾಟರಿ 3,700mAh. ಒನ್ ಪ್ಲಸ್ 6 ನಲ್ಲಿ ಇರುವಂತೆ ಒನ್ ಪ್ಲಸ್ 6ಟಿಯಲ್ಲೂ ಕೂಡ ಡುಯಲ್ ಲೆನ್ಸ್ ನ ಹಿಂಭಾಗದ ಕ್ಯಾಮರಾವಿದ್ದು 20ಎಂಪಿ ಪ್ರೈಮರಿ ಸೆನ್ಸರ್ ಮತ್ತು 16ಎಂಪಿ ಸೆಕೆಂಡರಿ ಸೆನ್ಸರ್ ನ್ನು ಒಳಗೊಂಡಿದೆ. ಹಿಂಭಾಗದ ಕ್ಯಾಮರಾವು HDR ಮೋಡ್ ಮತ್ತು ಡೆಡಿಕೇಟೆಡ್ ನೈಟ್ ಮೋಡ್ ನ್ನು ಹೊಂದಿದೆ. ಇದು ಕಡಿಮೆ ಬೆಳಕಿನಲ್ಲೂ ಕೂಡ ಉತ್ತಮ ಫೋಟೋಗ್ರಫಿಗೆ ಅವಕಾಶ ನೀಡಲಿದೆ.


Click it and Unblock the Notifications





