ವಾಟ್ಸ್ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ಸಿಕ್ಕಿರುವ ವಿಶೇಷ ವೈಶಿಷ್ಟ್ಯಗಳಿವು!!

    ಜನಪ್ರಿಯ ಮೆಸೇಂಜಿಂಗ್ ಆಪ್ಲಿಕೇಷನ್ ವಾಟ್ಸ್ಆಪ್‌ನಲ್ಲಿ ನಾವೀಗ ಮತ್ತಷ್ಟು ವೈಶಿಷ್ಟ್ಯಗಳನ್ನು ನಾವು ಕಾಣಬಹುದಾಗಿದೆ. ಅದರಲ್ಲಿಯೂ ಪ್ರಮುಖವಾಗಿ ವಾಟ್ಸ್‌ಆಪ್ ಗುಂಪಿನಲ್ಲಿ ಹೆಚ್ಚು ಅವಕಾಶಗಳು ವಾಟ್ಸ್‌ಆಪ್ ಬಳಕೆದಾರರಿಗೆ ಲಭ್ಯವಾಗಿವೆ. ಈ ಹೊಸ ವೈಶಿಷ್ಟ್ಯಗಳು ಸ್ಟೇಬಲ್ ಆಂಡ್ರಾಯ್ಡ್ ಮತ್ತು iOS ವರ್ಷನ್ ಗಳಲ್ಲಿ ಲಭ್ಯವಿದೆ.!

    ಈಗಾಗಲೇ ಚಾಲ್ತಿಯಲ್ಲಿರುವ ಗುಂಪುಗಳಿಗೆ ಮತ್ತು ಹೊಸದಾಗಿ ಹುಟ್ಟುವ ಎಲ್ಲಾ ಗುಂಪುಗಳಿಗೂ ಹೊಸ ವೈಶಿಷ್ಟ್ಯಗಳು ಅನ್ವಯವಾಗಲಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ ವಾಟ್ಸ್ ಅಪ್ ಗುಂಪುಗಳು, ಒಟ್ಟು ವಾಟ್ಸ್ ಆಪ್‌ನ ಅನುಭವಕ್ಕೆ ಹೆಚ್ಚಿನ ಅವಕಾಶ ನೀಡಲಿದೆ ಅನ್ನುವುದು ದೃಢವಾಗಿದ್ದು, ಈ ಎಲ್ಲಾ ಹೊಸ ವೈಶಿಷ್ಟ್ಯತೆಗಳ ಬಗ್ಗೆ ಈ ಮೇಲ್ ಮೂಲಕ ತಿಳಿಸಲಾಗಿದೆ.

    ವಾಟ್ಸ್ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ಸಿಕ್ಕಿರುವ ವಿಶೇಷ ವೈಶಿಷ್ಟ್ಯಗಳಿವು!!

    ಈ ವೈಶಿಷ್ಟ್ಯಗಳು ವಾಟ್ಸ್‌ಆಪ್ ಬಳಕೆದಾರರಿಗೆ ಮತ್ತು ವಾಟ್ಸ್ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚಿನ ಅನುಕೂಲವನ್ನು ಸೃಷ್ಟಿ ಮಾಡಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇಲ್ಲಿ ಗ್ರೂಪ್ ಅಡ್ಮಿನ್ ಗಳಿಗೆ ನೀಡಲಾಗಿರುವ ಹೊಸ ಅವಕಾಶಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಹಾಗಾದರೆ, ಗ್ರೂಪ್ ಅಡ್ಮಿನ್‌ಗಳಿಗೆ ಸಿಕ್ಕಿರುವ ವಿಶೇಷ ಹೊಸ ವೈಶಿಷ್ಟ್ಯಗಳು ಯಾವುವು ಎಂದು ಮುಂದೆ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಗ್ರೂಪ್ ವಿವರಣೆ

    ಇತ್ತೀಚೆಗಿನ ಅಪ್ಡೇಟ್ ಪ್ರಕಾರ, ಫೇಸ್ಬುಕ್ ಮಾಲೀಕತ್ವದ ಮೇಸೇಜ್ ಮಾಡುವ ವೇದಿಕೆಯಾಗಿರುವ ವಾಟ್ಸ್ ಆಪ್, ಗುಂಪಿನ ನಾಯಕನಿಗೆ ಗುಂಪಿನ ವಿವರಣೆಯನ್ನು ಜೋಡಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅಂದರೆ ಗ್ರೂಪ್ ಅಡ್ಮಿನ್ ಗಳು Add a group description ಅನ್ನುವ ಹೊಸ ಅವಕಾಶವನ್ನು ಗ್ರೂಪಿನ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಬಳಸಿಕೊಳ್ಳಬಹುದಾಗಿದೆ.

    ಗ್ರೂಪಿಗೆ ಸಂಬಂಧಿಸಿದ ನಿಯಮಾವಳಿ

    ಗ್ರೂಪಿನ ಉದ್ದೇಶ ಮತ್ತು ಗ್ರೂಪಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಎಲ್ಲಾ ಸದಸ್ಯರಿಗೆ ತಿಳಿಯುವಂತೆ ಬರೆಯಬಹುದು. ಈ ಡಿಸ್ಕ್ರಿಪ್ಶನ್ ನ್ನು ಗುಂಪಿನ ನಾಯಕ ಬದಲಾಯಿಸಬಹುದು. ಅಷ್ಟೇ ಅಲ್ಲ ,ಗುಂಪಿನ ಯಾವುದಾದರೂ ಸದಸ್ಯರಿಗೆ ಬೇಕಾದರೂ ಇದನ್ನು ಬದಲಾಯಿಸಲು ಗುಂಪಿನ ನಾಯಕ ಅವಕಾಶ ಕೊಡಬಹುದು ಅಥವಾ ಕೊಡದೆಯೂ ಇರಬಹುದು.

    How to send WhatsApp Payments invitation to others - GIZBOT KANNADA
    ಗ್ರೂಪಿನ ಅಡ್ಮಿನ್ ನಿಯಂತ್ರಿಸಬಹುದಾದ ಅಂಶಗಳು

    ಗ್ರೂಪಿನ ಅಡ್ಮಿನ್ ನಿಯಂತ್ರಿಸಬಹುದಾದ ಅಂಶಗಳು

    ಗ್ರೂಪ್ ಡಿಸ್ಕ್ರಿಪ್ಶನ್ ಹೊರತು ಪಡಿಸಿ ಇನ್ನಿತರೆ ಹಲವು ಅಧಿಕಾರಗಳನ್ನು ಗ್ರೂಪ್ ಅಡ್ಮಿನ್ ಗಳಿಗೆ ನೀಡಲಾಗಿದೆ. ಗ್ರೂಪ್ ಅಡ್ಮಿನ್ ಗಳು ಬೇಕಾದರೆ ಸದಸ್ಯರಿಗೆ ವಿಷಯ ಬದಲಾವಣೆಗೆ ಮತ್ತು ಗ್ರೂಪಿನ ಐಕಾನ್ ಬದಲಾವಣೆಗೆ ಅವಕಾಶ ನೀಡಬಹುದು. ಅಷ್ಟೇ ಅಲ್ಲ., ಇತರೆ ಸದಸ್ಯರ ಅಡ್ಮಿನ್ ಪರ್ಮಿಷನ್ ಗಳನ್ನು ಬೇಕಿದ್ದರೆ ತೆಗೆದುಹಾಕುವ ಅವಕಾಶವನ್ನು ನೀಡಲಾಗಿದೆ.ಗ್ರೂಪಿನ ಸೃಷ್ಟಿಕರ್ತನನ್ನು ಅಡ್ಮಿನ್ ಅಧಿಕಾರವಿರುವ ಇತರೆ ಯಾವುದೇ ಸದಸ್ಯನೂ ತೆಗೆದುಹೊಕಲು ಸಾಧ್ಯವಿಲ್ಲ.

    ಗ್ರೂಪ್ ಕ್ಯಾಚ್ ಅಪ್

    ಗ್ರೂಪ್ ಕ್ಯಾಚ್ ಅಪ್ ವೈಶಿಷ್ಟ್ಯವು ಬಳಕೆದಾರನಿಗೆ ತನಗೆ ಬೇಕು ಅನ್ನಿಸಿರುವ ವ್ಯಕ್ತಿಯ ಇಲ್ಲವೇ ವಿಷಯದ ಮೆಸೇಜ್ ಗಳನ್ನು ಹುಡುಕಲು ಅವಕಾಶ ನೀಡುತ್ತೆ. ಅಥವಾ ಮೇಸೇಜ್ ಗೆ ನೀಡಿದ ಪ್ರತ್ಯುತ್ತರವನ್ನು ಹುಡುಕಬಹುದು. ಈ ರೀತಿ ಮೆಸೇಜ್ ಗಳನ್ನು ಹುಡುಕಲು ಮಾಡಬೇಕಾಗಿರುವುದು ಇಷ್ಟೇ.. ಚಾಟ್ ಮಾಡಿದ ಪರದೆಯ ಬಲಭಾಗದ ಮೂಲೆಯಲ್ಲಿರುವ @ ಬಟನ್ ನ್ನು ಒತ್ತಬೇಕು.

    ಗುಂಪಿನ ಸದಸ್ಯರ ಹುಡುಕಾಟಕ್ಕೆ ಅವಕಾಶ

    ಇಷ್ಟು ದಿನ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಮಾತ್ರ ವ್ಯಕ್ತಿಗಳನ್ನು ಹುಡುಕಬಹುದಿತ್ತು. ಆದರೆ ಈಗ ಗುಂಪಿನ ಸದಸ್ಯರ ಪಟ್ಟಿಯಲ್ಲೂ ಕೂಡ ನಿಮಗೆ ಬೇಕಿರುವ ವ್ಯಕ್ತಿಯ ಕಾಂಟ್ಯಾಕ್ಟ್ ನ್ನು ಗುಂಪಿನ ಪಟ್ಟಿಯಲ್ಲಿ ಹುಡುಕಬಹುದು. ಇದು ಗ್ರೂಪಿನ ಇನ್ಫೋ ವಿಭಾಗಕ್ಕೆ ತೆರಳಿದರೆ ಹುಡುಕಾಟ ಮಾಡಬಹುದು. ಯಾರು ಗುಂಪನ್ನು ಬಿಟ್ಟು ಹೊರಹೋಗಿದ್ದಾರೋ ಅವರನ್ನು ಮತ್ತೆ ಗುಂಪಿಗೆ ಸೇರಿಸುವುದು ಒಂದು ಕಷ್ಟದ ಕೆಲಸ, ಹಾಗಾಗಿ ಅವರನ್ನು ಮತ್ತೆ ಆಮಂತ್ರಿಸಲು ಇದು ನೆರವಾಗುತ್ತೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    WhatsApp group tend to be quite irritating sometimes with all participants responding at the same time.to know more visit to kannada.gizbot.com
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more