ಅಪಾಯಕಾರಿ ಸಂದೇಶಗಳ ಬಗ್ಗೆ ತಿಳಿಸುತ್ತೆ ವಾಟ್ಸ್‌ಆಪ್ ಹೊಸ ಫೀಚರ್..!

By GizBot Bureau
|

ವಾಟ್ಸ್ ಆಪ್ ದಿನದಿಂದ ದಿನಕ್ಕೆ ಪ್ರಸಿದ್ಧಿಯಾಗುತ್ತಿರುವುದು ಸಮಾಜಘಾತುಕರಿಗೆ ಮತ್ತು ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರಿಗೆ ವರದಾನವಾದಂತೆ ಕಾಣುತ್ತಿದೆ. ಅಂತರ್ಜಾಲವನ್ನು ಬಳಸಿಕೊಂಡು ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೇನು ಕಡಿಮೆ ಇಲ್ಲ. ಆದರೆ ಇವರಿಗೆಲ್ಲ ಕಡಿವಾಣ ಬೀಳಲೇಬೇಕಲ್ಲ!

ಹೌದು, ಹೀಗೆ ವಾಟ್ಸ್ ಆಪ್ ನ್ನು ಕ್ರಿಮಿನಲ್ ಗಳು ಬಳಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ವಾಟ್ಸ್ ಆಪ್ ಎಚ್ಚೆತ್ತುಕೊಂಡಿದೆ ಅನ್ನಿಸುತ್ತದೆ. ಅದಕ್ಕಾಗಿ ವಾಟ್ಸ್ ಆಪ್ ಇನ್ಸ್ ಟೆಂಟ್ ಆಪ್ ಗೆ ಹೊಸ ವೈಶಿಷ್ಟ್ಯವೊಂದನ್ನು ಸೇರಿಸುತ್ತಿದೆ. ಫೇಸ್ಬುಕ್ ಮಾಲೀಕತ್ವದ ವಾಟ್ಸ್ ಆಪ್ ಈ ಹೊಸ ವೈಶಿಷ್ಟ್ಯದ ಬಗ್ಗೆ ಬಹಳಷ್ಟು ಪರೀಕ್ಷೆಗಳನ್ನು ಮಾಡುತ್ತಿದೆ.

ಅಪಾಯಕಾರಿ ಸಂದೇಶಗಳ ಬಗ್ಗೆ ತಿಳಿಸುತ್ತೆ ವಾಟ್ಸ್‌ಆಪ್ ಹೊಸ ಫೀಚರ್..!

ಅದು ನಕಲಿ ಸುದ್ದಿಗಳನ್ನು ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಮಾಡುವವರಿಗೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದೆ ಮತ್ತು ಇಂತಹ ಮೆಸೇಜ್ ಗಳ ಬಗ್ಗೆ ಬಳಕೆದಾರರಿಗೆ ಅಲರ್ಟ್ ನೀಡಲು ಮುಂದಾಗುತ್ತಿದೆ. ಈ ಹೊಸ ವೈಶಿಷ್ಟ್ಯದ ಹೆಸರು “Suspicious Link” ಅಂದರೆ “ ಅನುಮಾನಾಸ್ಪದ ಲಿಂಕ್ “ ಎಂದರ್ಥ. ವೈಶಿಷ್ಟ್ಯದ ಮೂಲಕ ವಾಟ್ಸ್ ಆಪ್ ಹಂಚಿಕೆಯಾಗುವ ವೆಬೈ ಸೈಟ್ ಲಿಂಕ್ ನ ದೃಢೀಕರಣವನ್ನು ಪರೀಕ್ಷೆ ಮಾಡಲಿದೆ.


ಈ “ ಅನುಮಾನಾಸ್ಪದ ಲಿಂಕ್ “ ವೈಶಿಷ್ಟ್ಯ ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಒಮ್ಮೆ ಈ ವೈಶಿಷ್ಟ್ಯವು ಬಿಡುಗಡೆಗೊಡ ನಂತರ, ಯಾವುದೇ ವೆಬ್ ಸೈಟ್ ನ ಲಿಂಕ್ ನ್ನು ನೀವು ವಾಟ್ಸ್ ಆಪ್ ನಲ್ಲಿ ರಿಸೀವ್ ಮಾಡಿದ ಕೂಡಲೇ, ಆ ಆಪ್ ಬ್ಯಾಕ್ ಗ್ರೌಂಡ್ ನಲ್ಲಿ ವೆಬ್ ಸೈಟ್ ಲಿಂಕ್ ನ್ನು ಪರೀಕ್ಷಿಸುತ್ತದೆ ಮತ್ತು ಅನುಮಾನಾಸ್ಪದವಾಗಿ ಕಂಡರೆ ನಿಮಗೆ ಅಲರ್ಟ್ ನ್ನು ನೀಡುತ್ತದೆ. ಯಾವಾಗ ವಾಟ್ಸ್ ಆಪ್ ಅನುಮಾನಾಸ್ಪದ ಲಿಂಕ್ ನ್ನು ಗಮನಿಸುತ್ತದೆಯೋ ಆಗ ಆ ಮೆಸೇಜ್ ನಿಮಗೆ ಕೆಂಪು ಬಣ್ಣದ ಲೇಬಲ್ ನ್ನು ನೀಡುತ್ತದೆ ಎಂದು ವಾಬೇಟಾಇನ್ಫೋ ವರದಿ ತಿಳಿಸುತ್ತಿದೆ. ರೆಡ್ ಲೇಬಲ್ ನಿಮಗೆ ಆ ಮೆಸೇಜ್ ಸ್ಪ್ಯಾಮ್ ಅಥವಾ ಅನಧಿಕೃತ ವೆಬ್ ಲಿಂಕ್ ಎಂಬ ಸೂಚನೆಯನ್ನು ನೀಡುತ್ತದೆ..

ಈಗಾಗಲೇ ಈ ವೈಶಿಷ್ಟ್ಯವ ವಾಟ್ಸ್ಆಪ್ ನ 2.18.204 ಬೆಟಾ ವರ್ಷನ್ ನಲ್ಲಿ ಲಭ್ಯವಾಗುತ್ತಿದೆ. ಸದ್ಯದಲ್ಲೇ ಎಲ್ಲರ ವಾಟ್ಸ್ ಆಪ್ ಗೂ ಕೂಡ ಈ ವೈಶಿಷ್ಟ್ಯ ಲಭ್ಯವಾಗುವ ನಿರೀಕ್ಷೆ ಇದೆ.

ಅಪಾಯಕಾರಿ ಸಂದೇಶಗಳ ಬಗ್ಗೆ ತಿಳಿಸುತ್ತೆ ವಾಟ್ಸ್‌ಆಪ್ ಹೊಸ ಫೀಚರ್..!

ಈ ರೀತಿ ಸುಳ್ಳು ಸುದ್ಧಿಗಳು ಮತ್ತು ಅನಧಿಕೃತ ಚಟುವಟಿಕೆಗಳು ವಾಟ್ಸ್ ಆಪ್ ನಲ್ಲಿ ನಡೆಯದಂತೆ ತಡೆಯಲು ಏನು ಮಾಡಬಹುದು ಎಂಬ ಬಗ್ಗೆ ವಾಟ್ಸ್ ಆಪ್ ಹಲವು ದಿನಗಳಿಂದ ಕೆಲಸ ಮಾಡಿದೆ. ಈಗಾಗಲೇ ವಾಟ್ಸ್ ಆಪ್ ತೆಗೆದುಕೊಂಡು ಇನ್ನಿತರೆ ಹಂತಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

* ವ್ಯಕ್ತಿಗಳನ್ನು ಬ್ಲಾಕ್ ಮಾಡಲು ವಾಟ್ಸ್ ಆಪ್ ನಲ್ಲಿ ಅವಕಾಶವಿದೆ. ಅಪರಿಚಿತ ವ್ಯಕ್ತಿಗಳ ಕಿರಿಕಿರಿಯನ್ನು ವಾಟ್ಸ್ ಆಪ್ ನಲ್ಲಿ ಸುಲಭದಲ್ಲಿ ತಪ್ಪಿಸಬಹುದಾದ ವಾಟ್ಸ್ ಆಪ್ ನ ಆಯ್ಕೆ ಇದು.

* ಯಾವುದೇ ಗ್ರೂಪಿಂದ ಹೊರಬಂದಿದ್ದರೆ ಆ ಗ್ರೂಪಿಗೆ ಇನ್ನಿತರೆ ಯಾವುದೇ ಸದಸ್ಯರು ಪುನಃ ನಿಮ್ಮನ್ನು ಸೇರಿದಂತೆ ನೋಡಿಕೊಳ್ಳಬಹುದಾದ ವೈಶಿಷ್ಟ್ಯತೆಯೂ ವಾಟ್ಸ್ ಆಪ್ ನಲ್ಲಿದೆ.

* ಗ್ರೂಪ್ ಅಡ್ಮಿನ್ ಗಳು ಇತರೆ ಸದಸ್ಯರು ಯಾವುದೇ ಮೆಸೇಜ್ ಗಳನ್ನು ತಮ್ಮ ನಿರ್ಧಿಷ್ಟ ಗ್ರೂಪಿಗೆ ಕಳುಹಿಸದಂತೆ ರಿಸ್ಟ್ರಿಕ್ಟ್ ಮಾಡಬಹುದು.

* ಗ್ರೂಪ್ ಅಡ್ಮಿನ್ ಡಿಮೋಟ್ ಆಯ್ಕೆಯೂ ಲಭ್ಯವಿದೆ, ಇದರ ಮೂಲಕ ನೀವು ಎಲ್ಲಾ ಸದಸ್ಯರಿಗೆ ನಿಯಮಿತ ಹಕ್ಕುಗಳನ್ನು ನೀಡಿ ಗ್ರೂಪನ್ನು ಭದ್ರತೆಯಲ್ಲಿ ಇರಿಸಬಹುದು.

* “Forwarded” ಲೇಬಲ್ ವೈಶಿಷ್ಟ್ಯದಿಂದಾಗಿ ಬಳಕೆದಾರರು ತಮಗೆ ಲಭ್ಯವಾದ ಮೆಸೇಜ್ ಟೈಪ್ ಮಾಡಿದ್ದಾ ಅಥವಾ ಫಾರ್ವಡ್ ಮಾಡಿರುವುದಾ ಎಂಬುದು ತಿಳಿಯುತ್ತದೆ.

Best Mobiles in India

English summary
This new WhatsApp feature will alert you of ‘dangerous’ messages. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X