ಈ ಪ್ರಸಿದ್ಧ ಆಪ್‌ನಲ್ಲಿನ ಈ ಫೀಚರ್ ಅನ್ನು ಇದುವರೆಗೂ ಯಾರೂ ಬಳಸಿಲ್ಲ!!
ಈ ಮೆಸೇಜಿಂಗ್ ಸೇವೆಯು ಹೊಸ ಹೊಸ ಫೀಚರ್ ಗಳನ್ನು ಆಯಾ ಸಮಯಕ್ಕೆ ತನ್ನೊಡಲಿಗೆ ಸೇರಿಸುತ್ತಲೇ ಇದ್ದು ತನ್ನ ಫ್ಲ್ಯಾಟ್ ಫಾರ್ಮ್ ಬಗ್ಗೆ ಬಳಕೆದಾರರು ಇನ್ನಷ್ಟು ಕುತೂಹಲಕಾರಿಯಾಗಿರಬೇಕು ಎಂದು ಬಯಸುತ್ತದೆ.ವಾಟ್ಸ್ ಆಪ್, ವಿಚಾಟ್, ಆಪಲ್ ಮೆಸೇಜಸ್, ಟೆಲಿಗ್ರಾಮ್ ಮತ್ತು ಫೇಸ್ ಬುಕ್ ಮೆಸೇಂಜರ್ ಗಳು ಪ್ರತಿ ತಿಂಗಳು ಏನಾದರೊಂದು ಹೊಸ ಅಪ್ ಡೇಟ್ ನೊಂದಿಗೆ ಹೊರಬರುತ್ತವೆ.ಆದರೆ ಇಲ್ಲಿ ಮತ್ತೊಂದು ಮೆಸೇಜಿಂಗ್ ಆಪ್ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಇದು ವಿಭಿನ್ನ ವೈಶಿಷ್ಟ್ಯತೆಯೊಂದನ್ನು ಸೇರಿಸಿದೆ. ಯಾವುದು ಆ ಮೆಸೇಜಿಂಗ್ ಆಪ್ ಎಂದು ಕೇಳುತ್ತಿದ್ದೀರಾ? ಅದುವೇ ವೈಬರ್. ಹೌದು ಇದರಲ್ಲಿ ಸುಮಾರು 1 ಬಿಲಿಯನ್ ಬಳಕೆದಾರರ ಗ್ರೂಪ್ ನ್ನು ಕ್ರಿಯೇಟ್ ಮಾಡುವ ವೈಶಿಷ್ಟ್ಯತೆಯಿದೆ.

ಒಂದು ಬಿಲಿಯನ್ ಮಂದಿ ಒಂದೇ ಗ್ರೂಪಿನಲ್ಲಿ!
‘ಸದ್ಯದ ಮೆಸೇಜಿಂಗ್ ಮಾರುಕಟ್ಟೆಯಲ್ಲಿ ಗ್ರೂಪ್ ಚಾಟ್ ನಲ್ಲಿ 100 ಅಥವಾ 1000 ಮಂದಿಗೆ ಸೀಮಿತಗೊಳಿಸಲಾಗಿದೆ. ಆದರೆ ವೈಬರ್ ನಲ್ಲಿ ದೊಡ್ಡ ಮಟ್ಟದ ಅವಕಾಶವಿದ್ದು ವಿಶ್ವವನ್ನು ಕನೆಕ್ಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮೆಸೇಜಿಂಗ್ ಆಪ್ ಇಂಡಸ್ಟ್ರಿಯಲ್ಲಿ ಇದುವರೆಗೂ ಇಲ್ಲದ ದೊಡ್ಡ ಮಟ್ಟದ ಜನರನ್ನು ಒಂದು ಗೂಡಿಸುವ ಫೀಚರ್ ನ್ನು ಸೇರಿಸಲಾಗಿದೆ- ಒಂದು ಬಿಲಿಯನ್ ಮಂದಿಯನ್ನು ಒಂದೇ ಗ್ರೂಪ್ ಗೆ ಸೇರಿಸುವುದಕ್ಕೆ ವೈಬರ್ ಅವಕಾಶ ನೀಡುತ್ತದೆ.

ವಿಶ್ವದ ಮೊದಲ ಫೀಚರ್:
ವಿಶ್ವದ ಪ್ರಸಿದ್ಧ ಮೆಸೇಜಿಂಗ್ ಆಪ್ ಗಳಲ್ಲಿ ಇಷ್ಟು ದೊಡ್ಡ ಮೊತ್ತದ ಗ್ರೂಪ್ ಗೆ ಅವಕಾಶವನ್ನು ನೀಡುತ್ತಿರುವುದು ಕೇವಲ ವೈಬರ್ ಮಾತ್ರ. ಹೌದು ವಾಟ್ಸ್ ಆಪ್ ನಲ್ಲಿ ಕೇವಲ 257 ಸದಸ್ಯರ ತಂಡವನ್ನು ಮಾಡಬಹುದು ಇನ್ನು ಟೆಲಿಗ್ರಾಮ್ ನಲ್ಲಿ 75,000 ಸದಸ್ಯರ ಗ್ರೂಪನ್ನು ತಯಾರಿಸುವುದಕ್ಕೆ ಅವಕಾಶವಿದೆ. ಸದ್ಯ ವೈಬರ್ ಪ್ರಕಟಿಸಿರುವುದೇ ಅತೀ ದೊಡ್ಡ ಮೊತ್ತದ ಗ್ರೂಪ್ ಆಗಿದೆ.

ದೊಡ್ಡ ನಿರ್ವಹಣೆಗೆ ಶಕ್ತವಾಗಿರುವ ವೈಬರ್:
ಈ ದೊಡ್ಡ ಗ್ರೂಪ್ ನಿರ್ಮಾಣದ ಅವಕಾಶವು ವೈಬರ್ ಕಮ್ಯುನಿಕೇಷನ್ ನ ಒಂದು ಭಾಗವಾಗಿ ಬಿಡುಗಡೆಗೊಂಡಿದೆ.ಇನ್ನು ಇಷ್ಟು ದೊಡ್ಡ ಮೊತ್ತದ ಗ್ರೂಪನ್ನು ನಿರ್ವಹಿಸುವ ನಿಟ್ಟಿನಲ್ಲಿ ಪ್ರಬಲ ಸಾಧನಗಳನ್ನು ಸಂಸ್ಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಗುಂಪಿನ ಹೊಸ ಸದಸ್ಯರಿಗೆ ಗುಂಪಿನ ಸಂಪೂರ್ಣ ಹಿಸ್ಟರಿ ತಿಳಿಯುವುದಕ್ಕೆ ಅವಕಾಶವಿರುತ್ತದೆ ಮತ್ತು ಜಿಫ್,ಸ್ಟಿಕ್ಕರ್ಸ್, ಪಿಕ್ಚರ್ಸ್, ವೀಡಿಯೋ ಮತ್ತು ಟೆಕ್ಸ್ಟ್ ಗಳನ್ನು ಮುಂದಿನ ಸಂಭಾಷಣೆಯಲ್ಲಿ ಸೇರಿಸುವುದಕ್ಕೆ ಅವರಿಗೆ ಅವಕಾಶವಿರುತ್ತದೆ.

ಸದ್ಯದಲ್ಲೇ ಎಲ್ಲರಿಗೂ ಲಭ್ಯ:
ಸೂಪರ್ ಅಡ್ಮಿನ್ ಗಳಿಗೆ ಕೆಲವು ಆಯ್ಕೆಗಳಿದ್ದು ಅವರು ಅವರು ಗುಂಪಿನ ಸದಸ್ಯರನ್ನು ಪ್ರಮೋಟ್ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ಅವರಿಗೆ ಬ್ಯಾನ್ ಮತ್ತು ಬ್ಲಾಕ್ ಮಾಡಲು ಕೂಡ ಅವಕಾಶವಿದೆ. ಫೀಚರ್ ಗಳಾದ ಪಿನ್ನಿಂಗ್ ಮೆಸೇಜಿಂಗ್, ಡಿಲೀಟ್ ಒನ್ ಅಥವಾ ಆನ್ ಮೆಸೇಜ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯತೆಗಳು ಇದರಲ್ಲಿ ಸೇರಿದೆ.ಎಲ್ಲಾ ಬಳಕೆದಾರರಿಗೂ ಕೂಡಲೇ ಈ ಸೌಲಭ್ಯ ಲಭ್ಯವಾಗುವುದಿಲ್ಲ ಆದರೆ ಕೆಲವೇ ದಿನಗಳಲ್ಲಿ ವೈಬರ್ ನ ಎಲ್ಲಾ ಬಳಕೆದಾರರೂ ಈ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.


Click it and Unblock the Notifications





