Home
Apps

ವಾಟ್ಸ್‌ಆಪ್‌ನಲ್ಲಿ ನಕಲಿ ಸುದ್ದಿ ತಡೆಯಲು ಬರ್ತಿದೆ ಹೊಸ ಆಪ್..!

By Gizbot Bureau

ಭಾರತದಲ್ಲಿ ವಾಟ್ಸ್ಆಪ್ ಮೂಲಕ ಹರಡುತ್ತಿರುವ ಫೇಕ್ ನ್ಯೂಸ್ ಗಳಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಜರುಗುತ್ತಿದೆ. ವಾಟ್ಸ್ಆಪ್ ಸೇರಿದಂತೆ ಸೋಶಿಯಲ್ ಮೀಡಿಯಾಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದೆ. ಇದಲ್ಲದೇ ಜನರನ್ನು ಹಾದಿತಪ್ಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಮಾದರಿಯ ಸುಳ್ಳು ಸುದ್ದಿಗಳನ್ನು ತಡೆಯಲು ಹಲವಾರು ಮಾದರಿಯಲ್ಲಿ ಪ್ರಯತ್ನಿಸಲಾಗುತ್ತಿದೆ.

ವಾಟ್ಸ್ಆಪ್ ಮೂಲಕ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಕಂಡುಹಿಡಿಯಲು, ಬಳಕೆದಾರರಗೆ ಯಾವುದು ನಿಜವಾದ ಸುದ್ದಿ, ಯಾವುದು ಸುಳ್ಳು ಸುದ್ದಿ ಎಂಬುದನ್ನು ನಿರ್ಧರಿಸಲು ಸಹಾಯ ಮಾಡಲು ಆಪ್ ವೊಂದನ್ನು ಲಾಂಚ್ ಮಾಡಲು ತಯಾರಿಯನ್ನು ನಡೆಸಲಾಗಿದೆ. ಭಾರತೀಯ ಮೂಲದ ತಜ್ಞರ ತಂಡವೊಂದು ಸುಳ್ಳು ಸುದ್ದಿಯನ್ನು ಹರಡುವುದನ್ನು ತಡೆಯಲು ಆಪ್ ವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ.

ವಾಟ್ಸ್‌ಆಪ್‌ನಲ್ಲಿ ನಕಲಿ ಸುದ್ದಿ ತಡೆಯಲು ಬರ್ತಿದೆ ಹೊಸ ಆಪ್..!

ಇದಕ್ಕಾಗಿ ದೆಹಲಿಯ IIT ಸಂಶೋಧಕರ ಸಹಾಯವನ್ನು ಪಡೆಯಲಾಗುತ್ತಿದ್ದು, ಸುದ್ದಿಯ ಮೂಲಗಳನ್ನು ಕಂಡು ಹಿಡಿಯುವ ಮೂಲಕ ಅದು ಸುಳ್ಳು ಸುದ್ದಿಯೇ ಇಲ್ಲ ಸರಿಯಾದ ಸುದ್ದಿಯೇ ಎಂಬುದನ್ನು ನಿರ್ಧರಿಸಬಹುದು ಎಂಬುದನ್ನು ಕಂಡುಕೊಂಡಿರುವ ತಜ್ಞರು, ಇದೇ ಹಾದಿಯಲ್ಲಿ ಮುಂದು ವರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶೀಘ್ರವೇ ಮಾರುಕಟ್ಟೆಯಲ್ಲಿ ನಕಲಿ ಸುದ್ದಿಯನ್ನು ಕಂಡು ಹಿಡಿಯುವ ಆಪ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಇತ್ತಿಚೀನ ದಿನಗಳಲ್ಲಿ ವಾಟ್ಸ್ಆಪ್ ನಲ್ಲಿ ಕೋಮುಗಲಭೆಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ. ಇದಲ್ಲದೇ ನಮ್ಮ ರಾಜ್ಯದಲ್ಲಿಯೇ ಮಕ್ಕಳ ಕಳ್ಳರು ಬರುತ್ತಿದ್ದಾರೆ ಎಂಬ ಸುದ್ದಿಯೂ ವಾಟ್ಸ್ಆಪ್ ನಲ್ಲಿ ಒಬ್ಬರಿಂದ ಒಬ್ಬರಿಗೆ ಹರಿದಾಡಿದ ಪರಿಣಾಮದಿಂದಾಗಿ ಅಪರಿಚಿತ ವ್ಯಕ್ತಿಯೋರ್ವನ್ನು ಗುಂಪೊಂದು ಹೊಡೆದು ಸಾಯಿಸಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ಜರುಗುತ್ತಲೇ ಇದೆ.

ಈಗಾಗಲೇ ವಾಟ್ಸ್ಆಪ್ ನಿಂದ ಹರಡುತ್ತಿರುವ ಸುಳ್ಳು ಸುದ್ದಿಗಳಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಗುಂಪುಗಳಿಂದ ಮಾರಣಾಂತಿಕವಾಗಿ ಹಲ್ಲೆಗಳು ಜರುಗುತ್ತಿದೆ. ಇದರಿಂದ ಸರಕಾರಗಳು ಸಹ ಸುಳ್ಳು ಸುದ್ದಿ ಹರಡುವುದನ್ನು ತಡೆಯಬೇಕಾಗಿದ್ದು, ಇದಕ್ಕಾಗಿ ಈ ಫೇಕ್ ನ್ಯೂಸ್ ಅನ್ನು ಕಂಡು ಹಿಡಿಯು ಆಪ್ ಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುವಲ್ಲಿ ಮುಂದೆ ಬಂದಿದೆ.

ವಾಟ್ಸ್ಆಪ್ ನಲ್ಲಿ ಬಂದ ಸುದ್ದಿಗಳನ್ನು ಜನರು ನಿಜವೆಂದು ನಂಬುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರಗಳು ನಡೆಯುತ್ತಿದೆ. ಈಗಾಗಲೇ ಫೇಸ್ ಬುಕ್ ಸುಳ್ಳು ಸುದ್ದಿಯನ್ನು ತಡೆಯಲು ಹಲವಾರು ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಿದ್ದು, ಇದೇ ಮಾದರಿಯನ್ನು ಸ್ವಲ್ಪ ಪ್ರಮಾಣದಲ್ಲಿ ಪರಿಷರಿಸಿ ಆಪ್ ವೊಮದನ್ನು ಲಾಂಚ್ ಮಾಡಲು ಸಿದ್ದತೆಯನ್ನು ನಡೆಸಲಾಗಿದೆ.

ಈಗಾಗಲೇ ನ್ಯಾಯಾಂಗ ವ್ಯವಸ್ಥೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವವರಿಗೆ ದೊಡ್ಡ ಪ್ರಮಾಣದಲ್ಲಿ ದಂಡ ಮತ್ತು ಶಿಕ್ಷೆಯನ್ನು ವಿಧಿಸಲು ಮುಂದಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಎಚ್ಚೆತ್ತು ಕೊಳ್ಳಬೇಕಾಗಿದೆ. ಸುಳ್ಳು ಸುದ್ದಿಯ ವಿರುದ್ಧ ಹೋರಡಬೇಕಾಗಿದೆ.

Best Mobiles in India

English summary
Seeking to scotch rumours and identify fake news on social media platform WhatsApp, a team of experts at a New Delhi-based institution is working on developing an application that may be able to tell you whether a message is fake or not. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+