ಟಿಕ್ ಟಾಕ್ ನಲ್ಲಿ ಫೇಮಸ್ ಆದ ವ್ಯಕ್ತಿಯ ಕಗ್ಗೊಲೆ

By Gizbot Bureau
|

ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಫಿಟ್ನೆಸ್ ಬೋಧಕ, ಟಿಕ್ ಟಾಕ್ ನಲ್ಲಿ ಪ್ರಸಿದ್ಧಿಯಾದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕಳೆದವಾರ ನಡೆದಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಮುಂಜಾನೆ ನಡೆದ ಕೃತ್ಯ:

ಮುಂಜಾನೆ ನಡೆದ ಕೃತ್ಯ:

ಸಂಜೆ ಅಂದಾಜು 5.15ಕ್ಕೆ ಈ ಘಟನೆ ನಡೆದಿದ್ದು ಇಡೀ ದೆಹಲಿಯನ್ನೇ ಬೆಚ್ಚಿಬೀಳಿಸಿದೆ. ಮೃತಪಟ್ಟಿರುವ 27 ವರ್ಷದ ಮೋಹಿತ್ ಮೋರ್ ಎಂಬ ವ್ಯಕ್ತಿ ಧರ್ಮಾಪುರ ಏರಿಯಾದ ನಝಫ್ ಗ್ರಹದಲ್ಲಿರುವ ತನ್ನ ಸ್ನೇಹಿತನ ಫೋಟೋಸ್ಟ್ಯಾಟ್ ಅಂಗಡಿಯಲ್ಲಿ ಗೆಳೆಯನನ್ನು ಭೇಟಿಯಾಗಲು ತೆರಳಿದ್ದ ಸಂದರ್ಬದಲ್ಲಿ ಈ ಘಟನೆ ನಡೆದಿದೆ.

13 ಬುಲೆಟ್ ಗಳ ಪ್ರಯೋಗ:

13 ಬುಲೆಟ್ ಗಳ ಪ್ರಯೋಗ:

ಅಂಗಡಿಯ ಒಳಗೆ ಮೋಹಿತ್ ಮೋರ್ ತನ್ನ ಸ್ನೇಹಿತನ ಜೊತೆಗೆ ಮಾತುಕತೆಯಲ್ಲಿ ಬ್ಯುಸಿಯಾಗಿದ್ದ ಸಂದರ್ಬದಲ್ಲಿ ಮೂರು ಜನ ವ್ಯಕ್ತಿಗಳು ಶಾಪಿನ ಒಳಗೆ ಪ್ರವೇಶಿಸಿದ್ದಾರೆ ಮತ್ತು 13 ಬುಲೆಟ್ ಗಳನ್ನು ಆತನ ಮೇಲೆ ಪ್ರಯೋಗಿಸಿದ್ದಾರೆ. ಶಾಪ್ ನ ಒಳಗೆ ಇಟ್ಟಿರುವ ಸೋಫಾ ಮೇಲೆ ಮೋಹಿತ್ ಮೋರ್ ಬಿದ್ದಿದ್ದಾರೆ.ಕೆಲವೇ ಕ್ಷಣಗಳಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸಿದ್ದ ದಾಳಿಕೋರರು:

ಹೆಲ್ಮೆಟ್ ಧರಿಸಿದ್ದ ದಾಳಿಕೋರರು:

ಎಲ್ಲಾ ಮೂರು ಮಂದಿ ದಾಳಿಕೋರರು ಕಪ್ಪು ಬಣ್ಣದ ಹೆಲ್ಮೆಟ್ ನ್ನು ಧರಿಸಿದ್ದರು ಮತ್ತು ಸ್ಕೂಟಿಯಲ್ಲಿ ಬಂದು ಈ ಕೃತ್ಯವೆಸಗಿದ್ದಾರೆ. ಕ್ರೈಮ್ ನಡೆಸಿದ ನಂತರ ಅವರು ಬಿಡುವಿಲ್ಲದ ಕಿರಿದಾದ ಬೀದಿಯಲ್ಲಿ ಅವರು ಕಾಣಿಸಿಕೊಂಡಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ.

5 ಲಕ್ಷ ಚಂದಾದಾರರು:

5 ಲಕ್ಷ ಚಂದಾದಾರರು:

ಟಿಕ್ ಟಾಕ್ ನಲ್ಲಿ ಮೋಹಿತ್ ಮೋರ್ ಗೆ 5 ಲಕ್ಷ ಚಂದಾದಾರರಿದ್ದಾರೆ ಮತ್ತು ಆತ ಈಗಾಗಲೇ ಹಲವು ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದ. ಇನ್ಸ್ಟಾಗ್ರಾಂನಲ್ಲಿ ಸುಮಾರು 1000 ಫಾಲೋವರ್ ಗಳು ಈತನಿಗಿದ್ದರು ಮತ್ತು ಈತ ಯಾವಾಗಲೂ ಫಿಟ್ನೆಸ್ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ.

ವಯಕ್ತಿಕ ದ್ವೇಷದ ಹಿನ್ನೆಲೆ:

ವಯಕ್ತಿಕ ದ್ವೇಷದ ಹಿನ್ನೆಲೆ:

ಹಣದ ವಿಚಾರಕ್ಕಾಗಿ ಅಥವಾ ವಯಕ್ತಿಕ ದ್ವೇಷದ ಕಾರಣದಿಂದ ನಡೆದಿರುವ ಕೃತ್ಯವೆಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪೋಲೀಸರು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಂ ಅಕೌಂಟಿನಲ್ಲಿ ಹಾಕಲಾಗಿರುವ ಕಮೆಂಟ್ ಗಳನ್ನು ಮತ್ತು ಕರೆಗಳ ರೆಕಾರ್ಡಿಂಗ್ ಗಳನ್ನು ಪರಿಶೀಲಿಸುತ್ತಿದ್ದು ಕೇಸ್ ನ್ನು ಪರಿಹರಿಸುವುದಕ್ಕೆ ಸಾಮಾಜಿಕ ಜಾಲತಾಣವೇ ನಮಗೆ ಸಹಾಯ ಮಾಡುವ ಸಾಧ್ಯತೆ ಇದೆ ಎಂದು ಪೋಲೀಸರು ಅಭಿಪ್ರಾಯ ಪಟ್ಟಿದ್ದಾರೆ.

Best Mobiles in India

Read more about:
English summary
Tik Tok' celebrity gunned down in Delhi

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X