ನಿಮ್ಮ ಟಿಕ್ ಟಾಕ್ ಖಾತೆಗೆ ಸುರಕ್ಷತೆ- ಡಿವೈಸ್ ಮ್ಯಾನೇಜ್ ಮೆಂಟ್ ಫೀಚರ್ ಬಿಡುಗಡೆ

By Gizbot Bureau
|

ಪ್ರಸಿದ್ಧ ಶಾರ್ಟ್ ವೀಡಿಯೋ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಆಗಿರುವ ಟಿಕ್ ಟಾಕ್ ಇದೀಗ ಹೊಸದಾಗಿ ಡಿವೈಸ್ ಮ್ಯಾನೇಜ್ ಮೆಂಟ್ ಸುರಕ್ಷತೆಗೆ ಆದ್ಯತೆ ನೀಡುವ ಫೀಚರ್ ನ್ನು ಬಿಡುಗಡೆಗೊಳಿಸಿದ್ದು ಆ ಮೂಲಕ ಬಳಕೆದಾರರು ತಮ್ಮ ಅಕೌಂಟಿನ ಸಂಪೂರ್ಣ ಕಂಟ್ರೋಲ್ ಇಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ.

ಖಾತೆಗೆ ಸುರಕ್ಷತೆ:

ಖಾತೆಗೆ ಸುರಕ್ಷತೆ:

ಟಿಕ್ ಟಾಕ್ ಆಪ್ ನ ಒಳಗೆಯೇ ಸೆಷನ್ ನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಇತರೆ ಡಿವೈಸ್ ನಿಂದ ತಮ್ಮ ಖಾತೆಯನ್ನು ರಿಮೂವ್ ಮಾಡುವುದಕ್ಕೆ ನೇರವಾಗಿ ಅವಕಾಶ ನೀಡುತ್ತದೆ. ಆ ಮೂಲಕ ತಮ್ಮ ಖಾತೆಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಯಾವುದೇ ರೀತಿಯಲ್ಲೂ ನಿಮ್ಮ ಖಾತೆಯನ್ನು ಇತರರು ತಪ್ಪಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಡಿವೈಸ್ ಮ್ಯಾನೇಜ್ ಮೆಂಟ್ ಒಟ್ಟು 13 ಸೇಫ್ಟಿ ಫೀಚರ್ ನ್ನು ಒಳಗೊಂಡಿರುತ್ತದೆ.

ಜಾಗೃತಿ ಮೂಡಿಸುವ ವೀಡಿಯೋಗಳು:

ಜಾಗೃತಿ ಮೂಡಿಸುವ ವೀಡಿಯೋಗಳು:

ಸುರಕ್ಷತಾ ಫೀಚರ್ ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಸರಣಿ ವೀಡಿಯೋಗಳನ್ನು ಬಿಡುಗಡೆಗೊಳಿಸಿದ್ದು ಏಜ್ ಗೇಟ್ , ರಿಸ್ಟ್ರಿಕ್ಟೆಡ್ ಮೋಡ್, ಸ್ಕ್ರೀನ್ ಟೈಮ್ ಮ್ಯಾನೇಜ್ ಮೆಂಟ್, ಕಮೆಂಟ್ಸ್ ಫಿಲ್ಟರ್, ಸೇಫ್ಟಿ ಸೆಂಟರ್ ಮತ್ತು ಇತ್ಯಾದಿಗಳಿಗೆ ಸಂಬಂಧಿಸಿದ ವಿವರಣೆ ಇದೆ.

ಧನಾತ್ಮಕ ವಾತಾವರಣದಲ್ಲಿ ಕಟೆಂಟ್ ತಯಾರಿಕೆಗೆ ಅವಕಾಶ ನೀಡುವ ಹೊಸ ಟೂಲ್ ಗಳನ್ನು ಕಂಪೆನಿಯು ಆಗಾಗ ಪರಿಚಯಿಸುತ್ತಲೇ ಇರುತ್ತದೆ ಎಂದು ಟಿಕ್ ಟಾಕ್ ಸಂಸ್ಥೆ ತಿಳಿಸಿದೆ.

ಟಿಕ್ ಟಾಕ್ ಹೇಳಿಕೆ:

ಟಿಕ್ ಟಾಕ್ ಹೇಳಿಕೆ:

ಬ್ಲಾಗ್ ಪೋಸ್ಟ್ ನಲ್ಲಿ ಟಿಕ್ ಟಾಕ್ ಹೀಗೆ ಹೇಳಿದೆ" ವಿವಿಧ ವೈವಿದ್ಯತೆಯನ್ನು ಮತ್ತು ಪ್ರವೃತ್ತಿಯನ್ನು ಬಯಸುವ ವೇದಿಕೆಯಾಗಿ ಟಿಕ್ ಟಾಕ್ ಫ್ಲ್ಯಾಟ್ ಫಾರ್ಮ್ ಹೊಸತನದ ಸೃಷ್ಟಿಗೆ, ಅಭಿವ್ಯಕ್ತಿಗೆ, ಹಂಚಿಕೆಗೆ ಅವಕಾಶ ನೀಡುತ್ತದೆ. ಸುಮಾರು 200 ಮಿಲಿಯನ್ ಭಾರತೀಯ ಬಳಕೆದಾರರು ಇದನ್ನು ತಮ್ಮ ಮೊಬೈಲ್ ನಲ್ಲಿ ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದ್ದು ಟಿಕ್ ಟಾಕ್ ಹೊಸ ಟೂಲ್ ಗಳನ್ನು ಬಿಡುಗಡೆಗೊಳಿಸುತ್ತದೆ ಮತ್ತು ಧನಾತ್ಮಕ ಸೃಷ್ಟಿಗೆ, ಸುರಕ್ಷತೆಯ ವಾತಾವರಣೆಕ್ಕೆ ಆಪ್ ಬೆಂಬಲ ನೀಡುತ್ತದೆ. ಬಳಕೆದಾರರು ತಮ್ಮನ್ನ ತಾವು ಅಭಿವ್ಯಕ್ತಿಗೊಳಿಸಿಕೊಳ್ಳಬಹುದು ಮತ್ತು ಸಂತೋಷಿಸಬಹುದು"

ಹೊಸ ಫೀಚರ್:

ಹೊಸ ಫೀಚರ್:

ಟಿಕ್ ಟಾಕ್ ಇತ್ತೀಚೆಗೆ ಹೊಸದಾಗಿ ಬಳಕೆದಾರರಿಗೆ ವೀಡಿಯೋದಲ್ಲಿ ಟೆಕ್ಸ್ಟ್ ಕ್ಯಾಪ್ಶನ್ ಓವರ್ ಲೇಗೆ ಅವಕಾಶ ನೀಡುವುದಕ್ಕೆ ಪ್ರಾರಂಭಿಸಿತ್ತು. 5ನೇ ತ್ರೈಮಾಸಿಕದಲ್ಲಿ ಆಪಲ್ ಆಪ್ ಸ್ಟೋರ್ ನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆಗಿರುವ ಆಪ್ ಎಂದರೆ ಅದು ಟಿಕ್ ಟಾಕ್ ಆಗಿದೆ. ಅಂದರೆ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಗಿಂತ ಹೆಚ್ಚು ಡೌನ್ ಲೋಡ್ ಆಗಿರುವ ಆಪ್ ಇದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ 2019 ರ ಮೊದಲ ತ್ರೈಮಾಸಿಕದಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆಗಿರುವ ಮೂರನೇ ಆಪ್ ನಲ್ಲಿ ಟಿಕ್ ಟಾಕ್ ಸ್ಥಾನ ಪಡೆದಿದೆ.

Best Mobiles in India

Read more about:
English summary
TikTok Device Management Feature Now Available In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X