ಗೇಮಿಂಗ್‌ಗೂ ಎಂಟ್ರಿ ಕೊಟ್ಟ ಟಿಕ್‌ಟಾಕ್‌ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌..!

By Gizbot Bureau
|

ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಹೊಸ ಕ್ಷೇತ್ರದತ್ತ ದಾಪುಗಾಲಿಡಲು ಸಜ್ಜಾಗಿದೆ. ಹೌದು, ಗೇಮಿಂಗ್‌ ಕ್ಷೇತ್ರಕ್ಕೆ ಕಾಲಿಡುತ್ತಿರುವ ಬೈಟ್‌ಡ್ಯಾನ್ಸ್‌ ದಶಕಗಳಿಂದ ಈ ಕ್ಷೇತ್ರದಲ್ಲಿ ಪಾರುಪತ್ಯ ಸ್ಥಾಪಿಸಿರುವ ಟೆನ್ಸೆಂಟ್ ಕಂಪನಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ವಿಶ್ವದಾದ್ಯಂತ ಜನಪ್ರಿಯವಾಗಿರುವ ಬೈಟ್‌ಡ್ಯಾನ್ಸ್‌ ಆಪ್‌ಗಳ ಮೂಲಕವೇ ಗೇಮಿಂಗ್‌ನ ಜಾಹೀರಾತು ನೀಡಲು ಮುಂದಾಗಿರುವ ಸಂಸ್ಥೆಯು ಹೊಸ ತಂಡವನ್ನು ಕಟ್ಟುವಲ್ಲಿ ನಿರತವಾಗಿದೆ.

ಗೇಮಿಂಗ್‌ ತಂಡದ ಅಭಿವೃದ್ಧಿ

ಗೇಮಿಂಗ್‌ ತಂಡದ ಅಭಿವೃದ್ಧಿ

ಗೇಮಿಂಗ್‌ ಕ್ಷೇತ್ರಕ್ಕೆ ಕಾಲಿಡಲು ತಯಾರಾಗಿರುವ ಬೈಟ್‌ಡ್ಯಾನ್ಸ್‌ ಹೊಸ ತಂಡದ ಅಭಿವೃದ್ಧಿಯಲ್ಲಿ ಹೆಜ್ಜೆಗಳನ್ನಿಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಪ್ರತಿಸ್ಪರ್ಧಿ ಕಂಪನಿಗಳ ಉತ್ತಮ ಪ್ರತಿಭೆಗಳನ್ನು ಸಂಸ್ಥೆಗೆ ಸೇರಿಸಿಕೊಳ್ಳುತ್ತಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಗೇಮಿಂಗ್‌ ಟೀಂ ರೆಡಿಯಾಗಿದೆ.

ಸ್ಟುಡಿಯೋಗಳ ಖರೀದಿ

ಸ್ಟುಡಿಯೋಗಳ ಖರೀದಿ

ಉದ್ಯೋಗಿಗಳನ್ನು ಸೇರಿಸಿಕೊಳ್ಳುವುದರ ಜೊತೆಗೆ ಬೈಟ್‌ಡ್ಯಾನ್ಸ್‌ ಗೇಮಿಂಗ್‌ ಸ್ಟುಡಿಯೋಗಳನ್ನು ಖರೀದಿಸುತ್ತಿದೆ. ಇದರ ಜೊತೆ ಎಕ್ಸ್‌ಕ್ಲೂಸಿವ್‌ ಗೇಮಿಂಗ್‌ ವಿತರಣೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಚೀನಾದ ಸ್ಥಳೀಯ ಹಾಗೂ ವಿದೇಶಿ ಆಟಗಾರರಿಬ್ಬರನ್ನು ಗುರಿಯಾಗಿಸಿಕೊಂಡು ಗೇಮ್‌ಗಳ ಅಭಿವೃದ್ಧಿಯಾಗುತ್ತಿದೆ ಎನ್ನಲಾಗಿದೆ.

ನ್ಯೂಸ್‌ನಿಂದ ಗೇಮಿಂಗ್‌ವರೆಗೆ

ನ್ಯೂಸ್‌ನಿಂದ ಗೇಮಿಂಗ್‌ವರೆಗೆ

ಬೈಟ್‌ಡ್ಯಾನ್ಸ್‌ ಕಂಪನಿ ಚೀನಾದಲ್ಲಿ ಮೊದಲು ಸುದ್ದಿ ನೀಡುವ ಟ್ಯುಟಿಯೋ ಆಪ್‌ನಿಂದ ತನ್ನ ಕಾರ್ಯ ಪ್ರಾರಂಭಿಸಿತು. ನಂತರ ಟಿಕ್‌ಟಾಕ್‌, ಹೆಲೋ, ಡ್ಯುಯಿನ್‌ ಮುಂತಾದ ಆಪ್‌ಗಳ ಮೂಲಕ ವಿಶ್ವದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿತು. ಈಗ ಇವೆಲ್ಲವೂಗಳ ನಂತರ ಗೇಮಿಂಗ್‌ಗೆ ಕಾಲಿಟ್ಟು ಈ ಕ್ಷೇತ್ರದಲ್ಲೂ ಯಶಸ್ಸು ತನ್ನದಾಗಿಸಿಕೊಳ್ಳಲು ಮುಂದಾಗಿದೆ.

ಪ್ಲಸ್‌ ಆದ ಟ್ಯುಟಿಯೋ

ಪ್ಲಸ್‌ ಆದ ಟ್ಯುಟಿಯೋ

ಬೈಟ್‌ಡ್ಯಾನ್ಸ್‌ಗೆ ಟ್ಯುಟಿಯೋ ಆಪ್‌ ಚೀನಾದಲ್ಲಿ ಪ್ಲಸ್‌ ಆಗಲಿದೆ. ಏಕೆಂದರೆ, ಚೀನಾದ ಟಾಪ್‌ ಗೇಮಿಂಗ್‌ ಕಂಪನಿಗಳು ಹೊಸ ಬಳಕೆದಾರರನ್ನು ತಲುಪಲು ಟ್ಯಟಿಯೋ ಆಪ್‌ನ್ನು ಅವಲಂಭಿಸಿದ್ದಾರೆ. ನ್ಯೂಸ್‌ ಆಪ್‌ನಲ್ಲಿ ಪ್ರಕಟವಾದ ಟಾಪ್‌ 100 ಜಾಹೀರಾತುಗಳಲ್ಲಿ 63 ಜಾಹೀರಾತುಗಳು ಮೊಬೈಲ್‌ ಗೇಮ್‌ಗಳ ಬಗ್ಗೆಯೇ ಎಂದು ಡೇಟಾ ಟ್ರಾಕ್‌ ಕಂಪನಿ ಆಪ್‌ ಗ್ರೋಯಿಂಗ್‌ ಹೇಳಿದೆ.

Most Read Articles
Best Mobiles in India

Read more about:
English summary
TikTok Owner ByteDance Enters Gaming Space To Compete With Tencent

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X