ವಿಡಿಯೋ ಡೌನ್‌ಲೋಡ್ ಮಾಡಲು ಇವುಗಳಿಗಿಂತ ಬೆಸ್ಟ್ ಆಪ್‌ಗಳಿಲ್ಲ..!
ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಲ್ಲಿ ಯಾವುದೋ ವಿಡಿಯೋ ನೋಡಿರ್ತಿವಿ, ಆ ವಿಡಿಯೋವನ್ನು ಸ್ನೇಹಿತರಿಗೆ ಕಳಿಸಬೇಕೆಂದರೆ ಕೇವಲ ಲಿಂಕ್ ಮಾತ್ರ ಕಳುಹಿಸುವ ಆಯ್ಕೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇರುತ್ತದೆ. ಆದರೆ, ನೇರವಾಗಿ ನೀವೇ ಡೌನ್‌ಲೋಡ್ ಮಾಡಿಯೂ ವಿಡಿಯೋ ಕಳಿಸಬಹುದು.
ಸ್ಮಾರ್ಟ್‌ಫೋನ್ ಬಂದ ನಂತರವಂತೂ ಮನರಂಜನಾ ಕ್ಷೇತ್ರ ಮತ್ತೊಂದು ಮಗ್ಗುಲಿಗೆ ಬದಲಾಗಿದ್ದು, ಎಲ್ಲವೂ ವಿಡಿಯೋಮಯವಾಗಿದೆ. ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣಗಳು ವಿಡಿಯೋಗಳಿಂದ ತುಂಬಿ ತುಳುಕುತ್ತಿವೆ. ಯೂಟ್ಯೂಬ್ ಸೇರಿದಂತೆ ಎಲ್ಲಾ ವಿಡಿಯೋ ಪ್ಲಾಟ್‌ಫಾರ್ಮ್‌ಗಳು ಆಫ್‌ಲೈನ್ ಡೌನ್‌ಲೋಡ್ ಮಾಡಿ ವಿಡಿಯೋ ವೀಕ್ಷಿಸುವ ಅವಕಾಶ ನೀಡಿವೆ.

ಆದರೆ, ಆ ವಿಡಿಯೋಗಳು ಕೇವಲ ಸ್ಮಾರ್ಟ್‌ಫೋನ್‌ನಲ್ಲಿ ಅಥವಾ ಸೀಮಿತ ಆಪ್‌ನಲ್ಲಿ ಮಾತ್ರ ವೀಕ್ಷಿಸುವ ಆಯ್ಕೆ ಹೊಂದಿವೆ. ಅದಕ್ಕಾಗಿಯೇ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಆಗಿರಲಿ, ಯೂಟ್ಯೂಬ್‌ನಂತಹ ವಿಡಿಯೋ ಪ್ಲಾಟ್‌ಫಾರ್ಮ್ ಆಗಿರಲಿ ನಿಮಗೆ ಬೇಕಾದ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಕೆಳಗೆ ನೀಡಿರುವ ಆಂಡ್ರಾಯ್ಡ್ ಆಪ್‌ಗಳು ನಿಮಗೆ ವಿಡಿಯೋ ಡೌನ್‌ಲೋಡ್ ಮಾಡಲು ಸಹಾಯ ಮಾಡುತ್ತವೆ.

1.ಟ್ಯೂಬ್‌ಮೇಟ್ TubeMate
ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಯೂಟ್ಯೂಬ್ ಡೌನ್‌ಲೋಡರ್ ಎಂದರೆ ಅದು ಟ್ಯೂಬ್‌ಮೇಟ್. ಈ ಆಪ್‌ನಲ್ಲಿ ವಿಡಿಯೋಗಳನ್ನು ಆಪ್‌ಲೈನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಡಿಯೋ ಮತ್ತು ವಿಡಿಯೋಗಳನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಟ್ಯೂಬ್‌ಮೇಟ್‌ನಲ್ಲಿ ನೀಡಲಾಗಿದೆ. ಆದರೆ, ಕೇವಲ ಯೂಟ್ಯೂಬ್ ವಿಡಿಯೋಗಳಿಗೆ ಮಾತ್ರ ಸೀಮಿತವಾಗಿರುವ ಆಪ್ ಆಗಿದೆ.

2.ವಿಡ್‌ಮೇಟ್ Vidmate
ವಿಡ್‌ಮೇಟ್ ಉತ್ತಮವಾಗಿದ್ದು, ಅನೇಕ ಸಂಪನ್ಮೂಲಗಳಿಂದ ವಿಡಿಯೋಗಳನ್ನು ವೀಕ್ಷಿಸುವ ಆಯ್ಕೆ ಇದೆ. ಅದಲ್ಲದೇ ಟಿವಿ ಶೋ, ಅನಿಮೇಷನ್ ಸರಣಿಗಳಂತಹ ಸಂಚಿಕೆಗಳನ್ನು ನೋಡಬಹುದಾಗಿದೆ. ಎಲ್ಲಾ ವಿಡಿಯೋಗಳು ಉಚಿತವಾಗಿ ದೊರೆಯುತ್ತವೆ. ಈ ಆಪ್ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಕ್ಕೂ ಬೆಂಬಲಿಸುವುದರಿಂದ ಈ ಆಪ್ ನಿಮ್ಮಲ್ಲಿದ್ದರೆ ನಿಮ್ಮ ಬಳಿ ಉತ್ತಮ ವಿಡಿಯೋ ಸಂಗ್ರಹ ಇದೇ ಎಂದರ್ಥ.

3. ಯೂಟ್ಯೂಬ್ ಗೋ Youtube Go
ಅನೇಕ ಅಭಿವೃದ್ಧಿಯ ನಂತರ ಆಂಡ್ರಾಯ್ಡ್‌ನಲ್ಲಿ ಯೂಟ್ಯೂಬ್ ಗೋ ಬಂದಿದೆ. ಈ ಆಪ್‌ನ್ನು ಯೂಟ್ಯೂಬ್ ಅಭಿವೃದ್ಧಿಪಡಿಸುತ್ತಿದ್ದು, ಇನ್ನು ಪ್ರಗತಿಯಲ್ಲಿದೆ. ಈ ಆಪ್‌ನಿಂದ ವಿಡಿಯೋ ಡೌನ್‌ಲೋಡ್ ಮಾಡುವುದಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ನೋಡುವ ಅವಕಾಶ ನೀಡಲಾಗಿದೆ. ಇನ್ನೊಂದು ಪ್ರಮುಖ ಫೀಚರ್ ಏನೆಂದರೆ ಬಹಳ ಸುಲಭವಾಗಿ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ.

4. ವಿಡಿಯೋಡರ್ Videoder
ಈ ಆಪ್‌ನಲ್ಲಿ 20ಕ್ಕೂ ಹೆಚ್ಚು ವೆಬ್ ಸಂಪನ್ಮೂಲಗಳಿಂದ ವಿಡಿಯೋಗಳು ಲಭ್ಯವಿವೆ. ಹೈ ಕ್ವಾಲಿಟಿ ವಿಡಿಯೋ ಡೌನ್‌ಲೋಡ್ ಮಾಡಲು ಸಹ ಇದು ಸಹಕರಿಸುತ್ತದೆ. ಬಳಕೆಗೆ ಸರಳವಾಗಿರುವ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಈ ಆಪ್ ಲಿಂಕ್‌ನ್ನು ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

5. ಸ್ನಾಪ್‌ಟ್ಯೂಬ್ Snaptube
ಹೈ-ಎಂಡ್ ವಿಡಿಯೋ ಡೌನ್‌ಲೋಡಿಂಗ್ ಆಪ್ ಆಗಿದ್ದು, ಇಂಟರ್‌ನೆಟ್‌ನಿಂದ ಮ್ಯೂಸಿಕ್ ಡೌನ್‌ಲೋಡ್ ಮಾಡುವುದಕ್ಕೂ ಈ ಆಪ್ ಬಳಸಬಹುದಾಗಿದೆ. ಮತ್ತೊಂದು ವಿಶಿಷ್ಟ ಫೀಚರ್ ಏನೆಂದರೆ ಅಂತರ್ಜಾಲದ ಯಾವುದೇ ವಿಡಿಯೋ ಸಂಪನ್ಮೂಲದಿಂದಲೂ ಸಹ ವಿಡಿಯೋ ಡೌನ್‌ಲೋಡ್ ಮಾಡಬಹುದಾಗಿದೆ. ಈ ಆಪ್ ಉಚಿತವಾಗಿದ್ದು, ಬಹಳ ಸುಲಭವಾಗಿ ಡೌನ್‌ಲೋಡ್ ಅಥವಾ ವೀಕ್ಷಿಸಬಹುದಾಗಿದೆ.

6. ಕೀಪ್‌ವಿಡ್ Keepvid
ಕೀಪ್‌ವಿಡ್ ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಉತ್ತಮ ವಿಡಿಯೋ ಡೌನ್‌ಲೋಡರ್ ಆಗಿದೆ. ಬೇರೆ ವಿಡಿಯೋ ಡೌನ್‌ಲೋಡರ್‌ಗಳಿಗಿಂತ ಕೀಪ್ ವಿಡ್ ವೇಗವಾಗಿ ವಿಡಿಯೋ ಡೌನ್‌ಲೋಡ್ ಮಾಡುತ್ತದೆ. ಈ ಆಪ್ ಥಂಬ್ಲರ್, ಫೇಸ್‌ಬುಕ್, ಟ್ವಿಟ್ಟರ್, ಇನ್ಸ್‌ಟಾಗ್ರಾಂನಂತಹ ಸಾಮಾಜಿಕ ತಾಣಗಳಿಂದ ವಿಡಿಯೋ ಡೌನ್‌ಲೋಡ್ ಮಾಡಹುದು.

7. ಇನ್ಸ್‌ಟ್ಯೂಬ್ Instube
ಇನ್ಸ್‌ಟ್ಯೂಬ್ ಮತ್ತೊಂದು ಉತ್ತಮ ವಿಡಿಯೋ ಡೌನ್‌ಲೋಡರ್ ಆಗಿದೆ. ಟ್ವಿಟ್ಟರ್, ವಿಮಿಒ, ಇನ್ಸ್‌ಟಾಗ್ರಾಂನಂತಹ ಸಾಮಾಜಿಕ ಜಾಲತಾಣದಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇನ್ಸ್‌ಟ್ಯೂಬ್ ಅತಿವೇಗದ ವಿಡಿಯೋ ಡೌನ್‌ಲೋಡಿಂಗ್ ಅನುಭವವನ್ನು ನೀಡುತ್ತದೆ.

8. ವೈಟಿ3 YT3
ಈ ಆಪ್‌ನ್ನು ಯೂಟ್ಯೂಬ್ ಕೇಂದ್ರಿತವಾಗಿಯೇ ರೂಪಿಸಲಾಗಿದೆ. MP3 ಮತ್ತು MP4 ಆವೃತ್ತಿಗಳಲ್ಲಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ. ಬಳಕೆದಾರ ಸ್ನೇಹಿಯಾಗಿರುವ ಈ ಆಪ್‌ನಲ್ಲಿ ನಿಮಗೆ ಬೇಕಾದ ವಿಡಿಯೋವನ್ನು ಹುಡುಕಿ ಅದನ್ನು MP3ಯಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

9. ಟ್ಯೂಬ್ ಎಕ್ಸ್ TubeX
ಟ್ಯೂಬ್ ಎಕ್ಸ್ ಆಪ್ ಯೂಟ್ಯೂಬ್‌ನಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಟ್ಯೂಬ್ ಎಕ್ಸ್ ವಿಶಿಷ್ಟ ಫೀಚರ್ ಏನೆಂದರೆ ವಿಡಿಯೋಗಳನ್ನು FLV, MP3, MP4ನಂತಹ ಫಾರ್ಮ್ಯಾಟ್‌ಗಳಲ್ಲಿ ವಿಡಿಯೋ ಡೌನ್‌ಲೋಡ್ ಮಾಡಬಹುದಾಗಿದೆ. ನೀವು ಒಂದೇ ಬಾರಿಗೆ ಹಲವು ಫೈಲ್‌ಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆ ಇದೆ.

10. ನ್ಯೂಪೈಪ್ NewPipe
ನ್ಯೂಪೈಪ್ ಆಪ್ ಯೂಟ್ಯೂಬ್‌ನಂತೆಯಿದ್ದರೂ ಯಾವುದೇ ಜಾಹೀರಾತುಗಳನ್ನು ವಿಡಿಯೋ ಪ್ಲೇ ಆಗುವಾಗ ಮಧ್ಯದಲ್ಲಿ ತೋರಿಸುವುದಿಲ್ಲ. ಈ ಆಪ್‌ನಲ್ಲಿ ನಿಮಗಿಷ್ಟವಾದ ವಿಡಿಯೋಗಳನ್ನುಕೇವಲ ಒಂದೇ ಕ್ಲಿಕ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications








