ನಿಮ್ಮ ಸೃಜನಶೀಲತೆಗೆ ಈ ಡ್ರಾಯಿಂಗ್ ಆಪ್‌ಗಳು ಬೆಸ್ಟ್..!
ನಿಮಗೆ ಚಿತ್ರ ಬಿಡಿಸುವ ಹವ್ಯಾಸವಿದ್ದು ಮೊಬೈಲ್ ನಲ್ಲೆ ಡ್ರಾಯಿಂಗ್ ಮಾಡುತ್ತೀರಾದ್ರೆ ಯಾವುದು ಈ ವರ್ಷದ ಬೆಸ್ಟ್ ಆಪ್ ಗಳು ಎಂಬ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ನಿಮ್ಮನ್ನ ಕ್ರಿಯೇಟಿವ್ ಆಗಿಸುವ ಬೆಸ್ಟ್ ಆಂಡ್ರಾಯ್ಡ್ ಆಪ್ ಗಳು ಇವಾಗಿದ್ದು ನಿಮ್ಮಿಂದ ಅಧ್ಬುತ ಚಿತ್ರಗಳನ್ನು ನಿರೀಕ್ಷಿಸಬಹುದು. ಅಷ್ಟೇ ಅಲ್ಲ ಈ ಎಲ್ಲಾ ಆಪ್ ಗಳನ್ನು ನೀವು ಉಚಿತವಾಗಿ ಪಡೆಯಲು ಸಾಧ್ಯವಿದೆ.

ಚಿತ್ರ ಬಿಡಿಸುವುದೊಂದು ಕಲೆ. ಅದಕ್ಕೆ ತನ್ನದೇ ವಿಭಿನ್ನ ಆಸಕ್ತಿಯ ಅಗತ್ಯತೆ ಇದ್ದು, ಅದಕ್ಕಾಗಿ ಬೇರೆಬೇರೆ ಸ್ವತ್ತುಗಳು ಕೂಡ ಬೇಕಾಗುತ್ತದೆ. ಆದರೆ ಮೊಬೈಲ್ ನಲ್ಲಿ ಬಿಡಿಸುವುದಾದರೆ ಕೇವಲ ಟೂಲ್ ಗಳೇ ಸಾಕು.ಈ ಕೆಳಗಿನ ಆಪ್ ಗಳನ್ನು ಬಳಕೆ ಮಾಡಿದರೆ ಅಧ್ಬುತ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗುತ್ತದೆ. ಈ ಲೇಖನ ಓದಿದರೆ ಯಾವುದು ಬೆಸ್ಟ್ ಡ್ರಾಯಿಂಗ್ ಆಪ್ ಎಂದು ಹುಡುಕಾಡುವ ಅಗತ್ಯವೇ ಇಲ್ಲ.

ibis ಪೇಯಿಂಟ್ X
ಇದು ಉತ್ತಮ ಶ್ರೇಣಿಯಲ್ಲಿರುವ ಬೆಸ್ಟ್ ಡ್ರಾಯಿಂಗ್ ಆಪ್ ಎಂದರೆ ಅದು ಐಬಿಐಎಸ್ ಪೇಯಿಂಟ್ ಎಕ್ಸ್..ಇದಕ್ಕಾಗಿ ನೀವು ಹಣ ಪಾವತಿ ಮಾಡಬೇಕಿಲ್ಲ. ಉಚಿತವಾಗಿ ಸಿಗುವ ಆಪ್ ಇದು. ಇದರಲ್ಲಿ ಸುಮಾರು 142 ಕ್ಕೂ ಹೆಚ್ಚು ಬ್ರಷ್ ಗಳು ಲಭ್ಯವಿದೆ. ಹಲವಾರು ಶೇಡ್ ಗಳು , ಬಣ್ಣಗಳು, ಅದ್ಭುತ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಟೂಲ್ಸ್ ಗಳನ್ನು ಇದು ಒಳಗೊಂಡಿದೆ. ಆಂಡ್ರಾಯ್ಡ್ ಗಾಗಿ ನೀವು ಬೆಸ್ಟ್ ಆಂಡ್ರಾಯ್ಡ್ ಆಪ್ ಹುಡುಕಾಟದಲ್ಲಿ ನೀವೇನಾದರೂ ಇದ್ದಲ್ಲಿ ಇದು ನಿಮಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ.

ಮೆಡಿಬ್ಯಾಂಗ್ ಪೇಯಿಂಟ್
ಫ್ರೊಫೆಷನಲ್ ಆಪ್ ನಲ್ಲಿ ಇರುವ ಕೆಲವು ವೈಶಿಷ್ಟ್ಯತೆಗಳು ಈ ಆಪ್‌ನಲ್ಲಿ ಲಭ್ಯವಿದೆ. ಸಾವಿರಾರು ಟೂಲ್ಸ್ ಗಳ ಆಯ್ಕೆ ಮತ್ತು ಯುಐ ರೀತಿಯಲ್ಲೇ ಇರುವ ಇದು ಫೋಟೋಶಾಪ್‌ನಂತೆಯೇ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಈ ಡ್ರಾಯಿಂಗ್ ಟೂಲ್ ನಲ್ಲಿ ಅನೇಕ ಪ್ರಯೋಜನಕಾರಿ ಟೂಲ್ ಗಳು ಲಭ್ಯವಿದ್ದು ಉತ್ತಮ ಚಿತ್ರಗಳನ್ನು ಬಿಡಿಸಲು ಅನುಕೂಲಕರವಾಗಿದೆ. ಈ ಆಪ್ ಉಚಿತವಾಗಿದ್ದು ಸುಲಭದಲ್ಲಿ ಇನ್ಸ್ಟಾಲ್ ಮಾಡಲು ಸಾಧ್ಯವಿದೆ. ಪ್ಲೇ ಸ್ಟೋರ್ ನಲ್ಲಿ ನೀವು ಈ ಆಪ್ ನ್ನು ಸುಲಭವಾಗಿ ಪಡೆದು ಇನ್ಸ್ಟಾಲ್ ಮಾಡಲು ಸಾಧ್ಯವಿದೆ.

ಆರ್ಟ್ ಫ್ಲೋ
ಒಂದೇ ನಿಮಿಷದಲ್ಲಿ ಕ್ರಿಯೇಟಿವ್ ಆಗಿ ಆರ್ಟ್ ಮಾಡಬೇಕು ಎಂದು ನೀವು ಇಚ್ಛಿಸಿದರೆ ಅದಕ್ಕೆ ಸಹಾಯ ಮಾಡುವ ಆಪ್ ಇದು. ಆಪ್ ನ ಹಣದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಯಾಕೆಂದರೆ ಉಚಿತವಾಗಿ ಲಭ್ಯವಾಗುವ ಆಪ್ ನಲ್ಲೆ ಸಾಕಷ್ಟು ಟೂಲ್ಸ್ ಗಳು ಲಭ್ಯವಿದೆ. ನೀವು ಪ್ರೋ ವರ್ಷನ್ ಬಗ್ಗೆ ಜಾಗೃತಿ ವಹಿಸಬೇಕಾಗಿದ್ದು, ನಿಮಗೆ ಅಗತ್ಯ ಬಿದ್ದರೆ ಅದನ್ನು ಖರೀದಿಸಬಹುದು.

ರಫ್ ಎನಿಮೇಟರ್
ಈ ಆಪ್ ಗೆ ಉತ್ತಮ ವಿಮರ್ಷೆಗಳು ಸಿಕ್ಕಿವೆ ಮತ್ತು ರೇಟಿಂಗ್ ಕೂಡ ಚೆನ್ನಾಗಿದೆ. ಅದೇ ಕಾರಣಕ್ಕೆ ನಾವು ಈ ಪಟ್ಟಿಯಲ್ಲಿ ಇದನ್ನು ಸೇರಿಸಿದ್ದೇವೆ. ಅನಿಮೇಷನ್ ಗಳು, ಜಿಫ್ ಫೈಲ್ ಗಳು, ಇತರೆ ಇಂತಹ ಕೆಲಸಗಳಿಗಾಗಿ ಈ ಆಪ್ ನ್ನು ಬಳಕೆ ಮಾಡಲಾಗುತ್ತದೆ.ಒಂದು ವೇಳೆ ನೀವು ನಿಮ್ಮದೇ ಸ್ವಂತ ಇಂತ ಎನಿಮೇಷನ್ ಮತ್ತು ಜಿಫ್ ಫೈಲ್ ಗಳನ್ನು ಸೈಷ್ಟಿಸುವ ಸಾಮರ್ಥ್ಯ ವಿರುವವರಾಗಿದ್ದರೆ ಖಂಡಿತ ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಪೇಪರ್ ಒನ್
ಸಣ್ಣ ಪ್ರಮಾಣದ ಎಡಿಟಿಂಗ್ ಮತ್ತು ಡ್ರಾಯಿಂಗ್ ಗಾಗಿ ನೀವು ಈ ಆಪ್ ನ್ನು ಬಳಕೆ ಮಾಡಬಹುದು. ಹೆಚ್ಚು ರೆಸಲ್ಯೂಷನ್ ಇರುವ ಡ್ರಾಯಿಂಗ್ ಅಥವಾ ಚಿತ್ರಗಳನ್ನು ಸೃಷ್ಟಿಸಲು ಈ ಆಪ್ ನೆರವಿಗೆ ಬರುತ್ತದೆ. ಈ ಆಪ್ ನಲ್ಲಿ ಬರುವ ಔಟ್ ಕಂ ಬಗ್ಗೆ ನೀವೇ ಆಶ್ಚರ್ಯ ಪಡುತ್ತೀರಿ.
ಇದನ್ನು ಓದಿದ ಮೇಲೆ ನಿಮಗೆ ಯಾವುದು ಈ ವರ್ಷದ ಬೆಸ್ಟ್ ಡ್ರಾಯಿಂಗ್ ಆಪ್ ಯಾವುದು ಎಂಬುವುದರ ಪರಿಕಲ್ಪನೆ ನಿಮಗೆ ಖಂಡಿ ಸಿಕ್ಕಿರುತ್ತದೆ. ನಿಮಗೆ ಈ ಲೇಖನ ಇಷ್ಟ ಆದರೆ ಶೇರ್ ಮಾಡುವುದನ್ನು ಮರೆಯಬೇಡಿ. ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.


Click it and Unblock the Notifications








