ನಿಮ್ಮ ರೇಸ್‌ ಕ್ರೇಜ್‌ ಹೆಚ್ಚಿಸಲಿವೆ ಈ ರೇಸಿಂಗ್ ಗೇಮ್‌ಗಳು..!

|

ಇತ್ತೀಚಿನ ದಿನಗಳಲ್ಲಿ ಬ್ಯಾಟಲ್ ರಾಯಲ್ ಗೇಮ್ ಗಳು ಅನ್ನಿಸಿಕೊಂಡಿರುವ ಪಿಯುಬಿಜಿ ಮತ್ತು ಫೋರ್ಟ್ ನೈಟ್ ಅತೀ ಹೆಚ್ಚು ಮಂದಿ ಆಟವಾಡುವ ಗೇಮ್ ಗಳು ಅನ್ನಿಸಿಕೊಂಡಿವೆ. ಆದರೆ ಇದನ್ನು ಹೊರತುಪಡಿಸಿ ಇತರೆ ಕೆಲವು ಗೇಮ್ ಗಳೂ ಕೂಡ ಇದ್ದು , ಅವುಗಳು ಬ್ಯಾಟಲ್ ರಾಯಲ್ ಗೇಮ್ ಕಾನ್ಸೆಪ್ಟ್ ಗಿಂತ ಬಹಳ ಹಿಂದೆಯೇ ಪ್ರಚಲಿತಕ್ಕೆ ಬಂದವುಗಳಾಗಿವೆ.

ನಿಮ್ಮ ರೇಸ್‌ ಕ್ರೇಜ್‌ ಹೆಚ್ಚಿಸಲಿವೆ ಈ ರೇಸಿಂಗ್ ಗೇಮ್‌ಗಳು..!

ಅವುಗಳಲ್ಲಿ ಒಂದು ರೇಸಿಂಗ್ ಗೇಮ್. ಇವುಗಳು ಸುಲಭದಲ್ಲಿ ಆಡಬಹುದಾದ ಗೇಮ್ ಗಳು ಮತ್ತು ಟೀನೇಜ್ ಯುವಕ-ಯುವತಿಯರಲ್ಲಿ ಮತ್ತು ಮೇಲಿನವರು ಇವುಗಳನ್ನು ಹೆಚ್ಚು ಆಡುತ್ತಾರೆ ಮತ್ತು ಅವರಿಂದಲೇ ಹೆಚ್ಚು ಪ್ರಸಿದ್ಧಿ ಪಡೆದ ಗೇಮ್ ಗಳಿವು. ಒಂದು ವೇಳೆ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಈ ಗೇಮ್ ಗಳನ್ನು ಆಡಲು ಇಷ್ಟಪಡುವುದಾದರೆ, ಟಾಪ್ 5 ರೇಸಿಂಗ್ ಗೇಮ್ ಗಳ ಪಟ್ಟಿ ಇಲ್ಲಿದೆ ನೋಡಿ.

1. ಆಸ್ಫಾಲ್ಟ್ 9: ಲೆಜೆಂಡ್ಸ್

1. ಆಸ್ಫಾಲ್ಟ್ 9: ಲೆಜೆಂಡ್ಸ್

ಆಸ್ಫಾಲ್ಟ್ ಖಂಡಿತ ನಿಮಗೆ ಹೊಸ ಹೆಸರಾಗಿರಲಿಕ್ಕಿಲ್ಲ. ಹಳೆಯ ಕೀಪ್ಯಾಡ್ ಫೋನ್ ಗಳು ಬಂದ ಕಾಲದಲ್ಲಿ ಗೇಮ್ಫಾಲ್ಟ್ ನಿರ್ಮಿಸಿದ ರೇಸಿಂಗ್ ಗೇಮ್ ಇದು. ಬಹಳ ಹಿಂದೆ ಈ ಗೇಮ್ ಪ್ರಸಿದ್ಧಿಯಾಗಿತ್ತು ಮತ್ತು ನಂತರದ ದಿನಗಳಲ್ಲಿ ಹೆಚ್ಚಿನ ಗ್ರಾಫಿಕ್ಸ್ ಮತ್ತು ಥ್ರಿಲ್ಲಿಂಗ್ ಗೇಮ್ ಪ್ಲೇ ಜೊತೆಗೆ ಹೆಚ್ಚು ವೈಶಿಷ್ಟ್ಯತೆಗಳಿಂದ ಆಟಗಾರರನ್ನು ಆಕರ್ಷಿಸಲು ಇದು ಯಶಸ್ವಿಯಾಗಿದೆ. ಈ ಗೇಮ್ ನಲ್ಲಿ 800 ಇವೆಂಟ್ ಗಳಿದ್ದು ಅವುಗಳಲ್ಲಿ ವಾರದ ಮತ್ತು ತಿಂಗಳಿನ ಇವೆಂಟ್ ಗಳೂ ಸೇರಿವೆ, ಕರಿಯರ್ ಮೋಡ್, ಮಲ್ಟಿಪ್ಲೇಯರ್ ಮೋಡ್ ಮತ್ತು ಕಾರ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಸುಮಾರು 50 ಕಾರುಗಳು ಇರುತ್ತದೆ.

2. ನೀಡ್ ಫಾರ್ ಸ್ಪೀಡ್: ಮೋಸ್ಟ್ ವಾಟೆಂಡ್

2. ನೀಡ್ ಫಾರ್ ಸ್ಪೀಡ್: ಮೋಸ್ಟ್ ವಾಟೆಂಡ್

ಪಿಸಿಯಲ್ಲಿ ಆಡುವ ಎಲ್ಲಾ ಎನ್ಎಫ್ ಸಿ ಗೇಮ್ ಗಳಲ್ಲಿ ಅತೀ ಹೆಚ್ಚು ಆಡಲ್ಪಟ್ಟ ಗೇಮ್ ಎಂದರೆ ಅದು "ನೀಡ್ ಫಾರ್ ಸ್ಪೀಡ್ :ಮೋಸ್ಟ್ ವಾಟೆಂಡ್" ಗೇಮ್ ಆಗಿದೆ. ಇದೇ ಗೇಮನ್ನು ಮೊಬೈಲ್ ನಲ್ಲೂ ಆಡುವುದಕ್ಕೆ ಇಎ ಅವಕಾಶ ನೀಡಿದ್ದು ಉತ್ತಮ ಗೇಮಿಂಗ್ ಅನುಭವವನ್ನು ಸ್ಮಾರ್ಟ್ ಫೋನ್ ನಲ್ಲಿ ನೀಡುವ ಉದ್ದೇಶದಿಂದ ಗ್ರಾಫಿಕ್ಸ್ ಮತ್ತು ಇತರೆ ವೈಶಿಷ್ಟ್ಯತೆಗಳನ್ನು ಅಧ್ಬುತವಾಗಿ ಅಳವಡಿಸಲಾಗಿದೆ. ಈ ಗೇಮ್ ನಲ್ಲಿ ಸುಮಾರು 40 ಕ್ಕೂ ಅಧಿಕ ಪ್ರಸಿದ್ಧ ಕಾರ್ ಗಳಿದ್ದು, ಹಲವಾರು ಮೋಡ್ ಗಳು, ಕಸ್ಟಮೈಜೇಷನ್ ಗಳು ಮತ್ತು ಹಲವಾರು ಮ್ಯಾಪ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಗಲ್ಲಿಗಳಲ್ಲಿ ಓಡಿಸುವುದಕ್ಕೆ, ರೂಲ್ಸ್ ಗಳನ್ನು ಬ್ರೇಕ್ ಮಾಡುವುದಕ್ಕೆ, ಡ್ರಿಫ್ಟ್ ಮಾಡುವುದಕ್ಕೆ, ಡ್ರಾಫ್ಟ್ ಮಾಡುವುದಕ್ಕೆ, ಪೋಲೀಸ್ ವೆಹಿಕಲ್ ಗಳನ್ನು ಹಿಟ್ ಮಾಡುವುದಕ್ಕೆ ಸೇರಿದಂತೆ ಹಲವು ಆಯ್ಕೆಗಳನ್ನು ಈ ಗೇಮ್ ನೀಡುತ್ತದೆ.

3. ರಿಯಲ್ ರೇಸಿಂಗ್ 3

3. ರಿಯಲ್ ರೇಸಿಂಗ್ 3

ಈ ಗೇಮ್ ಯಾವಾಗ ಬಿಡುಗಡೆಗೊಂಡಿದ್ದು ಎಂದು ನೋಡಿದರೆ ಗೇಮಿಗೆ ವಯಸ್ಸಾದಂತೆ ಕಾಣಬಹುದು ಆದರೆ ರಿಯಲ್ ರೇಸಿಂಗ್ ಗೇಮ್ 3 ಅಧಿಕೃತವಾಗಿ ಲೈಸನ್ಸ್ ಇರುವ ಟ್ರ್ಯಾಕ್ ಗಳನ್ನು ಜೊತೆಗೆ 39 ಸರ್ಕ್ಯೂಟ್ಸ್ ಗಳನ್ನು 17 ರಿಯಲ್ ವರ್ಡ್ ಲೋಕೇಷನ್ ಗಳಲ್ಲಿ ಹೊಂದಿದೆ. ಈ ಗೇಮ್ ನಲ್ಲಿ ರಿಯಲ್ ಟೈಮ್ ಮಲ್ಟಿಪ್ಲೇಯರ್ ಮೋಡ್, ಸೋಷಿಯಲ್ ಲೀಡರ್ ಬೋರ್ಡ್, ಟೈಮ್ ಟ್ರಯಲ್, ನೈಟ್ ರೇಸಿಂಗ್ ಮತ್ತು ಟೈಮ್ ಶಿಫ್ಟೆಡ್ ಮಲ್ಟಿಪ್ಲೇಯರ್ ಮೋಡ್ ಗಳಿರುತ್ತದೆ.ನಿಜವಾದ ರೇಸರ್ ಒಬ್ಬನ ಭಾವನೆ ಬರುವಂತೆ ರಿಯಲ್ ರೇಸ್ 3 ಗೇಮ್ ನ್ನು ಡಿಸೈನ್ ಮಾಡಲಾಗಿದೆ.

4. ಸಿಎಸ್ಆರ್ ರೇಸಿಂಗ್ 2

4. ಸಿಎಸ್ಆರ್ ರೇಸಿಂಗ್ 2

ಸಿಎಸ್ಆರ್ ರೇಸಿಂಗ್ ಗೇಮ್ ಒಂದು ಡ್ರ್ಯಾಗ್ ರೇಸಿಂಗ್ ಗೇಮ್ ಆಗಿದ್ದು ಇಲ್ಲಿ ಪ್ಲೇಯರ್ ಗಳು ಕಾರ್ ಗಳನ್ನು ಖರೀದಿಸಬೇಕು, ಅಪ್ ಗ್ರೇಡ್ ಮಾಡಬೇಕು ಮತ್ತು ಕಸ್ಟಮೈಸ್ ಮಾಡಿಕೊಂಡು ನಂತರ ಅದನ್ನು ರೇಸ್ ನಲ್ಲಿ ತೊಡಗಿಸಬೇಕು. ಇದರಲ್ಲಿ ಕ್ಯಾಂಪೈನ್ ಮೋಡ್ ಮತ್ತು ಆನ್ ಲೈನ್ ರೇಸಿಂಗ್ ಮೋಡ್ ಗಳಿದೆ. ಇದನ್ನು ಹೊರತು ಪಡಿಸಿ, ಗೇಮ್ ನಲ್ಲಿ ಎಆರ್ ಮೋಡ್ ಕೂಡ ಇದೆ. ಈ ಗೇಮ್ ನಲ್ಲಿ ಸೂಪರ್ ಕಾರ್ ಗಳಿದ್ದು ಫೆರಾರಿ, McLaren P1TM, Koenigsegg One ಮತ್ತು ಇತರೆ ಹಲವು ಕಾರ್ ಗಳಿವೆ. ಗೇಮಿನ ಗ್ರಾಫಿಕ್ಸ್ ಕ್ವಾಲಿಟಿ ಕೂಡ ಅತ್ಯದ್ಭುತವಾಗಿದೆ.

5. ಜಿಟಿ ರೇಸಿಂಗ್ 2

5. ಜಿಟಿ ರೇಸಿಂಗ್ 2

ಜಿಟಿ ರೇಸಿಂಗ್ 2 ಗೇಮ್ಫಾಲ್ಟ್ ನ ಮತ್ತೊಂದು ರೇಸಿಂಗ್ ಗೇಮ್ ಆಗಿದ್ದು ಆಸ್ಫಾಲ್ಟ್ ಸರಣಿ ಗೇಮ್ ನಷ್ಟು ಪ್ರಸಿದ್ಧಿಯಾಗಿಲ್ಲ.ಆದರೆ, ಗೇಮ್ ನಲ್ಲಿ ರಿಯಲ್ ಕಾರುಗಳ ಅನುಭವವನ್ನು ಪಡೆಯಬಹುದಾಗಿದ್ದು 71 ಲೈಸೆನ್ಸ್ ಇರುವ 30 ತಯಾರಿಕಾ ಕಂಪೆನಿಗಳು ಅದರಲ್ಲಿ ಮರ್ಸಿಡೀಸ್ ಬೆಂಝ್, ಫೆರಾರಿ, ಡಾಡ್ಜ್, ನಿಸಾನ್, ಆಡಿ, ಫಾರ್ಡ್, ಮತ್ತು ಹಲವು ಇದೆ. ಇದು ಬೆಸ್ಟ್ ರೇಸಿಂಗ್ ಗೇಮ್ ಗಳಲ್ಲಿ ಒಂದು. ಆನ್ ಲೈನ್ ಮಲ್ಟಿಪ್ಲೇಯರ್ ಮೋಡ್ ಗೆ ಇದು ಅವಕಾಶ ನೀಡಲಿದ್ದು ನಿಮ್ಮ ಸ್ನೇಹಿತರು ಮತ್ತು ಇತರ ಪ್ಲೇಯರ್ ಗಳ ಜೊತೆ ಆಡುವುದಕ್ಕೆ ಅವಕಾಶ ನೀಡುತ್ತದೆ.

Best Mobiles in India

English summary
Top 5 racing games you can play on your smartphone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X