ಹೊಸ ಸ್ಮಾರ್ಟ್‌ಫೋನಿನಲ್ಲಿ FB- ವಾಟ್ಸ್‌ಆಪ್‌ಗೂ ಮುನ್ನ ಇನ್‌ಸ್ಟಾಲ್ ಮಾಡಲೇಬೇಕಾದ ಆಪ್‌ಗಳು..!
ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಭರಾಟೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಅನೇಕ ಹೊಸ ಹೊಸ ಸ್ಮಾರ್ಟ್‌ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದ ನಂತರದಲ್ಲಿ ಹೊಂದಲೇಬೇಕಾದ ಆಪ್ ಗಳ ಕುರಿತ ಮಾಹಿತಿಯೂ ಇಲ್ಲಿದೆ.
ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸವೇ ಸೋಶಿಯಲ್ ಮೀಡಿಯಾ ಆಪ್‌ಗಳಾದ ವಾಟ್ಸ್‌ಆಪ್-ಫೇಸ್‌ಬುಕ್ ಸೇರಿದಂತೆ ಹಲವು ಆಪ್‌ಗಳನ್ನು ಡೌನ್‌ಲೋಡ್ ಮಾಡಿ, ಇನ್ಸ್ಟಾಲ್ ಮಾಡುವುದು. ಆದರೆ ಇದಕ್ಕಿಂತಲೂ ಮುಖ್ಯವಾಗಿ ಮತ್ತು ಮುಂಚಿತವಾಗಿ ಸ್ಮಾರ್ಟ್‌ಫೋನಿನಲ್ಲಿ ಈ ಐದು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಅವುಗಳು ಯಾವುವು ಅಂದ್ರಾ..? ಮುಂದಿದೆ ನೋಡಿ..!

ಲಾಸ್ಟ್ ಪಾಸ್:
ಇಂದು ಎಲ್ಲಾ ಆಪ್‌ಗಳಿಗೂ ಸಾಕಷ್ಟು ಪಾಸ್‌ವರ್ಡ್‌ಗಳನ್ನು ನೀಡಬೇಕಾಗುತ್ತಿದೆ. ಒಂದೊಂದಕ್ಕೂ ಬೇರೆ ಬೇರೆ ಪಾಸ್‌ವರ್ಡ್ ನೀಡಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ನೀವು ಲಾಸ್ಟ್ ಪಾಸ್ ಆಪ್ ಹಾಕಿಕೊಂಡಲ್ಲಿ ಇದು ಎಲ್ಲಾ ಪಾಸ್ ವರ್ಡ್‌ಗಳನ್ನು ಸೇವ್ ಮಾಡಿಕೊಳ್ಳುವುದಲ್ಲದೇ, ಯಾರು ಕದಿಯಲು ಸಾಧ್ಯವಾಗದ ಪಾಸ್‌ವರ್ಡ್‌ಗಳನ್ನು ತಾನೇ ಜನರೇಟ್ ಮಾಡಿಕೊಡಲಿದೆ. ಇದರಿಂದ ನಿಮ್ಮ ಕಾರ್ಯಸುಲಭವಾಗಲಿದೆ. ಅಲ್ಲದೇ ನಿಮ್ಮ ಕಾರ್ಡ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಡಲಿದೆ. ಹ್ಯಾಕರ್ಸ್ ಗಳಿಂದ ತಪ್ಪಿಸಿಕೊಳ್ಳಲು ಉತ್ತಮ ಮಾರ್ಗ.

ವಂಡರ್ ಲಿಸ್ಟ್:
ಇದು ನೀವು ಮಾಡಲೇ ಬೇಕಾದ ಕಾರ್ಯಗಳ ಲಿಸ್ಟ್ ಮಾಡಿಕೊಳ್ಳುವ ಆಪ್ ಆಗಿದ್ದು, ಸಮಯ ನಿರ್ವಹಣೆ ಮತ್ತು ನಿಮ್ಮ ಅಸಿಸ್ಟೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಸಹಾಯವಾಗಲಿದೆ. ಸ್ಮಾರ್ಟ್‌ಫೋನ್‌ಕೊಂಡಿದನ್ನು ಸಾರ್ಥಕ ಮಾಡಲಿದೆ.

ಮೈಕ್ರೋ ಸಾಫ್ಟ್ಆಪ್‌ಗಳು:
ಸದ್ಯ ಹೆಚ್ಚು ಬೇಡಿಕೆಯಲ್ಲಿರುವ ಆಪ್‌ಗಳು ಇವಾಗಿವೆ. ಸ್ಮಾರ್ಟ್‌ಫೋನಿನಲ್ಲಿಯೇ ಆಫೀಸ್ ಕಾರ್ಯಗಳನ್ನು ಮಾಡಲು ಇವುಗಳು ಸಹಾಯವನ್ನು ಮಾಡಲಿವೆ. ಇದಕ್ಕಾಗಿ ನೀವು ಸ್ಮಾರ್ಟ್‌ಫೋನ್ ಕೊಂಡ ನಂತರದಲ್ಲಿ ಮೈಕ್ರೊ ಸಾಫ್ಟ್ ಆಪ್ ಗಳಾದ, ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಕರೋಟನಾ, ಔಟ್ ಲುಕ್ ಗಳ್ನು ಇನ್‌ಸ್ಟಾಲ್ ಮಾಡಿಕೊಳ್ಳಲೇ ಬೇಕಾಗಿದೆ.

ಗೂಗಲ್ ಡ್ರೈವ್:
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಎಷ್ಟು ಖಾಲಿ ಜಾಗವಿದ್ದರೂ ಸಾಲುವುದಿಲ್ಲ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಡ್ರೈವ್ ಇನ್‌ಸ್ಟಾಲ್ ಮಾಡಿಕೊಂಡರೆ ಮುಖ್ಯವಾದ ಫೈಲ್‌ಗಳನ್ನು ಕ್ಲೌಡ್‌ಗೆ ಆಪ್‌ಲೋಡ್ ಮಾಡಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚುವರಿ ಸ್ಥಳಾವಕಾಶವು ಸ್ಮಾರ್ಟ್‌ಫೋನಿನಲ್ಲಿ ದೊರೆಯಲಿದೆ.


ಎವರ್ ನೋಟ್:
ಸ್ಮಾರ್ಟ್‌ಫೋನ್ ಇಂದಿನ ದಿನದಲ್ಲಿ ಸಾಕಷ್ಟು ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಇದೇ ಮಾದರಿಯಲ್ಲಿ ಎವರ್ ನೋಟ್ ಆಪ್ ನಿಮಗೆ ನೋಟ್ ಬುಕ್ ಮಾದರಿಯಲ್ಲಿ ಸಹಾಯ ಮಾಡಲಿದೆ. ಏನ್ನನ್ನು ಬೇಕಾದರು ಇದರಲ್ಲಿ ಬರೆದಿಟ್ಟುಕೊಳ್ಳಬಹದು. ಅಲ್ಲದೇ ಇದಕ್ಕೆ ವಿಡಿಯೋ, ಫೋಟೋ ಸೇರಿಸಿಕೊಳ್ಳಬಹುದು. ಇದು ಕ್ಲೌಡ್ ಸೇವೆಯನ್ನು ಹೊಂದಿದೆ.


Click it and Unblock the Notifications