ಭಾರತದಲ್ಲಿ ಮಹಿಳೆಯರ ಸುರಕ್ಷಿತೆಗಾಗಿ ಇರುವ ಬೆಸ್ಟ್ ಆಪ್ ಗಳು

By Gizbot Bureau
|

ಭಾರತದಲ್ಲಿ ಮಹಿಳಾ ಸುರಕ್ಷತೆ ಎಂಬ ವಿಚಾರ ಯಾವಾಗಲೂ ಕೂಡ ಚರ್ಚೆಯಲ್ಲಿರುತ್ತದೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ ಮತ್ತು ಮಹಿಳೆಯರು ಇದೀಗ ತಮ್ಮನ್ನ ತಾವು ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳುತ್ತಿದ್ದಾರೆ. ಅಡುಗೆಮನೆಗೆ ಸೀಮಿತ ಎಂಬ ಹಣೆಪಟ್ಟಿಯಿಂದ ಹೊರಗಡೆ ಬಂದು ತನ್ನ ಕಾಲ ಮೇಲೆ ತಾನು ನಿಂತು ದುಡಿಯುವ ಹಂತಕ್ಕೆ ಬಂದಿದ್ದಾಳೆ.ಆದರೆ ಆಕೆಯ ಸುರಕ್ಷತೆಯ ಸಮಸ್ಯೆಯೊಂದು ಭಾರತದಲ್ಲಿ ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಹೀಗಿರುವಾಗ ತಂತ್ರಜ್ಞಾನ ಕೂಡ ಆಕೆಯ ಸುರಕ್ಷತೆಯ ಬಗ್ಗೆ ಸಾಕಷ್ಟು ಮುಂದುವರಿದಿದ್ದು ಅವಳಿಗೆ ನಿರಾಳ ಭಾವ ನೀಡುವುದಕ್ಕೆ ಪ್ರಯತ್ನಿಸುತ್ತಿದೆ. ಹೌದು ಹಲವಾರು ಆಪ್ ಗಳು ಮಹಿಳಾ ಸುರಕ್ಷತೆಗೆ ಒತ್ತು ನೀಡುತ್ತಿದೆ.

ಸಾಕಷ್ಟು ಸುರಕ್ಷತೆ

ಸಾಕಷ್ಟು ಸುರಕ್ಷತೆಯ ಬಗ್ಗೆ ಕಾಳಜಿ ಮಾಡುವ ಆಪ್ ಗಳಿವೆ. ಕೆಲವು ಆಪ್ ಗಳು ಮಹಿಳೆಯರಿಗಾಗಿಯೇ ಸಿದ್ಧಪಡಿಸಲಾಗಿದೆ. ಯಾವುದೇ ಅಗತ್ಯ ಸಂದರ್ಬದಲ್ಲಿ ಅವಳ ನೆರವಿಗೆ ಧಾವಿಸುವುದಕ್ಕೆ ಈ ಆಪ್ ಗಳು ಸಾಕಷ್ಟು ಸಹಕಾರಿಯಾಗಿವೆ. ಕೆಲವು ಸುರಕ್ಷತೆಯ ಆಪ್ ಗಳನ್ನು ಹೊರತುಪಡಿಸಿ ಟ್ರ್ಯಾಕಿಂಗ್ ಫೀಚರ್ ಗಳನ್ನು ಒಳಗೊಂಡಿರುವ ರೈಡ್ ಆಪ್ ಗಳಾಗಿರುವ ಓಲಾ ಮತ್ತು ಊಬರ್ ಗಳು ಕೂಡ ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ಮಾಡುತ್ತಿವೆ. ನಾವಿಲ್ಲಿ ಕೆಲವು ಪ್ರಮುಖ ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ಮಾಡುವ ಆಪ್ ಗಳ ಬಗ್ಗೆ ಹೇಳುತ್ತಿದ್ದೇವೆ. ಯಾರಿಗೆಲ್ಲ ಈ ಆಪ್ ಗಳ ಪರಿಚಯವಿಲ್ಲವೋ ಅವರು ಇನ್ನು ಮುಂದಾದರೂ ನಿಮ್ಮ ಸುರಕ್ಷತೆಗಾಗಿ ಈ ಆಪ್ ಗಳನ್ನು ಬಳಕೆ ಮಾಡಿ.

ಹಿಮ್ಮತ್

ಹಿಮ್ಮತ್

ದೆಹಲಿ ಪೋಲೀಸರಿಂದ ಬಿಡುಗಡೆಗೊಂಡಿರುವ ಆಪ್ ಹಿಮ್ಮತ್. ದೆಹಲಿಯಲ್ಲಿರುವ ಮಹಿಳೆಯರಿಗಾಗಿ ಈ ಆಪ್ ನ್ನು ಶಿಫಾರಸು ಮಾಡಲಾಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಭಾರತದಲ್ಲಿ 2011 ರಿಂದ 2015 ರ ವರೆಗೆ ನಡೆದಿರುವ ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳು 41.7% ದಿಂದ 53.9% ಗೆ ಏರಿದೆ. ಅದರಲ್ಲಿ ದೆಹಲಿಯೇ ಪ್ರಥಮ ಸ್ಥಾನದಲ್ಲಿದೆ.

ಒಮ್ಮೆ ಹಿಮ್ಮತ್ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡರೆ ಬಳಕೆದಾರರಿಗೆ ಓಟಿಪಿ ಲಭ್ಯವಾಗುತ್ತದೆ. ಇದು ಕಾನ್ಫಿಗರೇಷನ್ ಪ್ರೊಸೆಸ್ ನ್ನು ಪೂರ್ಣಗೊಳಿಸುವುದಕ್ಕೆ ನೆರವಾಗುತ್ತದೆ.

ಯಾವುದೇ ಸಮಸ್ಯೆಯ ಸಂದರ್ಬದಲ್ಲಿ ಹಿಮ್ಮತ್ ಆಪ್ ಮೂಲಕ ಕೇವಲ ಒಂದು SOS ಅಲರ್ಟ್ ನ್ನು ಕಳುಹಿಸಿದರೆ ಸಾಕು. ಸ್ವಯಂಚಾಲಿತವಾಗಿ ನಿಮ್ಮ ಪ್ರದೇಶ ಮತ್ತು ಆಡಿಯೋ-ವೀಡಿಯೋ ಮಾಹಿತಿಯು ದೆಹಲಿ ಪೋಲೀಸ್ ಕಂಟ್ರೋಲ್ ರೂಮ್ ನವರು ಟ್ರೇಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗುತ್ತದೆ ಮತ್ತು ಅವರು ಕೂಡಲೇ ನಿಮ್ಮ ನೆರವಿಗೆ ಧಾವಿಸುತ್ತಾರೆ.

ಮೈ ಸೇಫ್ಟಿ ಪಿನ್

ಮೈ ಸೇಫ್ಟಿ ಪಿನ್

ಮೈ ಸೇಫ್ಟಿ ಪಿನ್ ಆಪ್ ಮ್ಯಾಪ್ ಆಧಾರಿತ ಆಪ್ ಆಗಿದ್ದು ಸುರಕ್ಷತೆಯ ಅಗತ್ಯತೆ ಇರುವಾಗ ನೇವಿಗೇಷನ್ ಪ್ರಕ್ರಿಯೆಗೆ ನೆರವು ನೀಡುತ್ತದೆ.ಬಳಕೆದಾರರು ಹೋಗಲು ಇಚ್ಛಿಸುವ ಪ್ರದೇಶಧ ಸುರಕ್ಷತೆಯ ಬಗ್ಗೆ ಅಪ್ಲಿಕೇಷನ್ ಮಾಹಿತಿ ನೀಡುತ್ತದೆ. ಒಂದು ವೇಳೆ ಮ್ಯಾಪ್ ನಲ್ಲಿ ಪ್ರದೇಶವು ಕೆಂಪು ವರ್ಣದ ಪಿನ್ ನಲ್ಲಿ ಸೂಚಿಸಲ್ಪಟ್ಟರೆ ಆ ಪ್ರದೇಶವು ನಿಮಗೆ ಅಸುರಕ್ಷಿತವಾಗಿದೆ ಎಂದರ್ಥ. ಹಸಿರು ವರ್ಣದ ಪಿನ್ ನಲ್ಲಿ ಸೂಚಿಸಲ್ಪಟ್ಟರೆ ಸುರಕ್ಷಿತವಾಗಿದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಆಂಬರ್ ಪಿನ್ ಗಳನ್ನು ತೋರಿಸಿದರೆ ಮಧ್ಯಮ ಸುರಕ್ಷತೆಯ ಸೂಚನೆಯಾಗಿರುತ್ತದೆ. ಸೇಫ್ ಪಿನ್ ಆಪ್ ಮೂಲಕ ನೀವು ನಿರ್ಧಿಷ್ಟ ಪ್ರದೇಶದ ಸಾರ್ವಜನಿಕ ಸೇವೆಯ ಬಗೆಗಿನ ಮಾಹಿತಿಯನ್ನು ಕೂಡ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಮ್ಯಾಪ್ ಆಧಾರಿತ ಆಪ್ ಇದಾಗಿರುವುದರಿಂದಾಗಿ ಮೈ ಸೇಫ್ಟಿ ಪಿನ್ ಆಪ್ ಮೂಲಕ ಬಳಕೆದಾರರು ಹತ್ತಿರದ ಪೋಲೀಸ್ ಸ್ಟೇಷನ್ ಮಾಹಿತಿ, ಹತ್ತಿರದ ಏಟಿಎಂ, ಕ್ಲಿನಿಕ್, ಫಾರ್ಮಸಿ ಮತ್ತು ಇತ್ಯಾದಿ ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದು. ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ನಿಮ್ಮ ಕಾಂಟ್ಯಾಕ್ಟ್ಸ್ ನಲ್ಲಿ ಸೂಚಿಸುವ ವ್ಯಕ್ತಿಗಳಿಗೆ ನಿಮ್ಮ ರಿಯಲ್ ಟೈಮ್ ಲೊಕೇಷನ್ ನ್ನು ಕೂಡ ಈ ಆಪ್ ಮೂಲಕ ನೀವು ಹಂಚಿಕೊಳ್ಳಬಹುದು. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಈ ಆಪ್ ನಿಮಗೆ ಬಳಸುವುದಕ್ಕೆ ಲಭ್ಯವಿರುತ್ತದೆ.

ಸ್ಮಾರ್ಟ್ 24X7

ಸ್ಮಾರ್ಟ್ 24X7

ಸ್ಮಾರ್ಟ್ 24X7 ಆಪ್ ನಲ್ಲಿ ತುರ್ತು ಪರಿಸ್ಥಿತಿಗಾಗಿ ಮೂರು ಹಂತದ ಕಾರ್ಯವಿಧಾನವನ್ನು ಹೊಂದಿದೆ. ಮೊದಲನೆಯದಾಗಿ ಸಮಸ್ಯೆಯಲ್ಲಿರುವ ಮಹಿಳೆಯರು ಆಪ್ ನಲ್ಲಿರುವ ಪ್ಯಾನಿಕ್ ಬಟನ್ ನ್ನು ಒತ್ತುವ ಅಗತ್ಯವಿರುತ್ತದೆ. ಇದು ಮೂರು ವಿಭಿನ್ನ ರೀತಿಯ ಸೇವೆಗಳನ್ನು ಒದಗಿಸುತ್ತದೆ. ನಿಮ್ಮ ತೊಂದರೆಯ ಪ್ರಕಾರ ಅಗತ್ಯವಾದ ಸೇವೆಯನ್ನು ಆಯ್ಕೆ ಮಾಡಿದಾಗ ಪ್ಯಾನಿಕ್ ಬಟನ್ ಸಂದೇಶವನ್ನು ಅಗತ್ಯ ಸೇವೆಯನ್ನು ನೀಡುವವರಿಗೆ ರವಾನಿಸುತ್ತದೆ.

ಸ್ಮಾರ್ಟ್ 24X7 ಆಪ್ ಅನಿಶ್ಚಿತ ಸಂದರ್ಬದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು ನಕಲಿ ಕರೆಗಳ ವೈಶಿಷ್ಟ್ಯತೆಯನ್ನು ಹೊಂದಿದೆ. ಆಪ್ ನಲ್ಲಿ ಪ್ಯಾನಿಕ್ ಸನ್ನಿವೇಶ ಅಥವಾ ಭಯದ ಸನ್ನಿವೇಶದ ಇಮೇಜ್ ಗಳು, ಆಡಿಯೋಗಳು ಮತ್ತು ಇತರೆ ಡಾಟಾಗಳ ದಾಖಲೆಗಳನ್ನು ಹೊಂದುವುದಕ್ಕೆ ನೆರವು ನೀಡುತ್ತದೆ ಮತ್ತು ನಂತರ ಅದನ್ನು ನೀವು ಪೋಲೀಸರಿಗೆ ಕಳುಹಿಸಿ ಕೊಡಬಹುದಾಗಿದೆ.ಸ್ಮಾರ್ಟ್ 24X7 ಆಪ್ ನ 24X ಕಾಲ್ ಸೆಂಟರ್ ವ್ಯವಸ್ಥೆಯನ್ನು ಕೂಡ ಹೊಂದಿದೆ.ಇದರಲ್ಲಿ ಪೋಲೀಸರಿಗೆ ಮನೆಕೆಲಸದವರ ನೊಂದಣಿ ಪ್ರಕ್ರಿಯೆ, ಪ್ರಯಾಣದ ನವೀಕರಣದ ವಿವರಗಳು ಇತ್ಯಾದಿ ಫೀಚರ್ ಗಳು ಕೂಡ ಲಭ್ಯವಿದೆ. ತುರ್ತು ಸಂದರ್ಬದಲ್ಲಿ ಎಸ್ಓಎಸ್ ಕಳುಹಿಸುವುದಕ್ಕೂ ಕೂಡ ಇದು ಹಿರಿಯ ನಾಗರೀಕ ಸ್ನೇಹಿ ವ್ಯವಸ್ಥೆಯನ್ನು ಹೊಂದಿದೆ.

ಹಾಕ್ ಐ(Hawk Eye)

ಹಾಕ್ ಐ(Hawk Eye)

ಹೈದ್ರಾಬಾದ್ ಪೋಲೀಸರು ಹ್ಯಾಕ್ ಐ ಆಪ್ ನ್ನು ಅಭಿವೃದ್ಧಿ ಪಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಈ ಆಪ್ ಹಲವು ಸೇವೆಗಳನ್ನು ನೀಡುತ್ತದೆ. ಮಹಿಳೆಯರಿಗಾಗಿಯೇ ವುಮೆನ್ ಟ್ರಾವೆಲ್ ಮೇಡ್ ಸೇಫ್ ಅನ್ನೋ ವಿಶೇಷ ಫೀಚರ್ ಇದರಲ್ಲಿದೆ. ಇದು ಕೆಲಸಕ್ಕೆ ಹೋಗುವ ಮಹಿಳೆಯರ ಸುರಕ್ಷತೆಗಾಗಿ ನಿರ್ಮಿಸಲಾಗಿರುವ ವೈಶಿಷ್ಟ್ಯತೆಯಾಗಿದ್ದು ದಿನದ ಅಸುರಕ್ಷಿತ ಸಮಯದಲ್ಲಿ ಹೊರಗಡೆ ಓಡಾಡಬೇಕಾದ ಅನಿವಾರ್ಯತೆಯನ್ನು ಎದುರಿಸುವ ಮಹಿಳೆಯರ ಭದ್ರತೆಗಾಗಿ ಇದನ್ನು ನಿರ್ಮಿಸಲಾಗಿದೆ.

ಮನೆಗೆ ತಲುಪುವ ದೃಷ್ಟಿಯಿಂದ ಆಟೋ ಅಥವಾ ಬಸ್ ಅಥವಾ ಯಾವುದೇ ರೀತಿಯ ಪ್ರಯಾಣವನ್ನು ಮಾಡುವ ಮುನ್ನ ಆಕೆ ಆ ವೆಹಿಕಲ್ ನ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಬೇಕು. ವೆಹಿಕಲ್ ನಂಬರ್ ನ್ನು ನೋಟ್ ಮಾಡಿಕೊಳ್ಳಬೇಕು ಮತ್ತು ಹತ್ತುವ, ಇಳಿಯುವ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು.ಈ ಮಾಹಿತಿಯು ಪೋಲೀಸರಿಗೆ ರವಾನೆಯಾಗುತ್ತದೆ.ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದು ಇನ್ಸ್ಪೆಕ್ಟರ್ ಗೆ, ಎಸಿಪಿ, ಡಿಸಿಪಿ ಮತ್ತು ನೀವಿರುವ ಸ್ಥಳದಲ್ಲಿರುವ ಮೊಬೈಲ್ ಪೆಟ್ರೋಲಿಂಗ್ ವ್ಯಾನ್ ಗಳಿಗೆ ಕಳುಹಿಸಿಕೊಡಲಾಗುತ್ತದೆ.ಆ ಮೂಲಕ ಮಹಿಳಾ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

ಟೆಲ್ ಟೈಲ್

ಟೆಲ್ ಟೈಲ್

ಇದು ದೆಹಲಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಮತ್ತೊಂದು ಸೇಫ್ಟಿ ಆಪ್ ಆಗಿದ್ದು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ ಲಿಮಿಟೆಡ್ ನವರು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಆಪ್ ಪ್ರಮುಖವಾಗಿ ಮಹಿಳೆಯರಿಗಾಗಿದ್ದು ಇತರೆ ನಾಗರೀಕರು ಕೂಡ ಪ್ರಯಾಣದ ಸಂದರ್ಬದಲ್ಲಿ ಬಳಕೆ ಮಾಡಬಹುದು.

ನಿಮ್ಮ ಲೊಕೇಷನ್ ಮಾಹಿತಿಯನ್ನು ವಾಹನಗಳಾದ ಬಸ್, ಆಟೋ, ಮತ್ತು ಇತರೆ ಯಾವುದೇ ಸಾರ್ವಜನಿಕ ವಾಹನದಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಸಹಾಯದಿಂದ ನಿಮ್ಮ ಇತರೆ ಕಾಂಟ್ಯಾಕ್ಟ್ಸ್ ಗೆ ಕಳುಹಿಸುವ ಅವಕಾಶವನ್ನು ಇದು ನೀಡುತ್ತದೆ.

ಟೆಲ್ ಟೇಲ್ ನಲ್ಲಿ ಎಸ್ಓಎಸ್ ಮೆಸೇಜ್ ಫೀಚರ್ ಕೂಡ ಇದ್ದು ಅಲರ್ಟ್ ಮೆಸೇಜ್ ಗಳನ್ನು ಕೂಡ ಕಳುಹಿಸಬಹುದು.ಪ್ಯಾನಿಕ್ ಬಟನ್ ಕ್ಲಿಕ್ ಮಾಡುವ ಮೂಲಕ ಅಥವಾ ಪವರ್ ಬಟನ್ ನ್ನು ಮೂರು ಬಾರಿ ಕ್ಲಿಕ್ಕಿಸುವ ಮೂಲಕ ಎಸ್ಓಎಸ್ ಅಲರ್ಟ್ ನ್ನು ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ.ಸಣ್ಣ ಜರ್ಕ್ ಮೂಲಕ ಸ್ಮಾರ್ಟ್ ಫೋನ್ ನ್ನು ಮೂರು ಬಾರಿ ಅಲುಗಾಡಿಸುವ ಮೂಲಕವೂ ಕೂಡ ಈ ಮೆಸೇಜ್ ನ್ನು ಕಳುಹಿಸುವುದಕ್ಕೆ ಅವಕಾಶವಿರುತ್ತದೆ.

ಒಂದು ವೇಳೆ ರಿಸೀವರ್ ಬಳಿ ಟೆಲ್ ಟೇಲ್ ಆಪ್ ಇಲ್ಲದೆ ಇದ್ದರೂ ಕೂಡ ಅಲರ್ಟ್ ಮೆಸೇಜ್ ಎಸ್ಎಂಎಸ್ ಥವಾ ಅಲರಾಂ ರಿಂಗ್ ಮೂಲಕ ತಲುಪಬೇಕಾಗಿರುವ ವ್ಯಕ್ತಿಗೆ ತಲುಪುತ್ತದೆ. ನೀವಿರುವ ಸ್ಥಳದ ಮಾಹಿತಿಯೂ ಕೂಡ ರಿಸೀವರ್ ಗೆ ತಲುಪುತ್ತದೆ.

ಇದೇ ರೀತಿಯ ಇನ್ನೂ ಹಲವು ಆಪ್ ಗಳು ಲಭ್ಯವಿದೆ ಉದಾಹರಣೆಗೆ ಬಿಸೇಫ್, ಶೇಕ್2ಸೇಫ್ಟಿ ಮತ್ತು ಇತ್ಯಾದಿಗಳು ಎಸ್ಓಎಸ್ ಅಲರ್ಟ್ ಗಳನ್ನು ಅವಶ್ಯಕತೆ ಇರುವ ಸಮಯದಲ್ಲಿ ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಆಪ್ ಗಳು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಕಾರ್ಯ ನಿರ್ವಹಿಸುತ್ತದೆ. ಮಹಿಳೆಯರು ಈ ಆಪ್ ನ ಸದುಪಯೋದವನ್ನು ಪಡೆದುಕೊಳ್ಳುವುದು ಒಳ್ಳೆಯದು.

Most Read Articles
Best Mobiles in India

Read more about:
English summary
The safety of women in India has always been a debatable topic. India is a progressing nation and many women have achieved remarkable milestones. But, their safety is still a questionable matter. At the same time, technology has provided some relief with safety apps for women.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X