ಟ್ರೈನಿನ ಲೈವ್ ಲೊಕೇಷನ್ ತಿಳಿಯುವುದಕ್ಕೆ ಇದೀಗ ಗೂಗಲ್ ಮ್ಯಾಪ್ ಬೇಕಾಗಿಯೇ ಇಲ್ಲ

By Gizbot Bureau
|

ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಗಳು ಯಾರಾದರೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಅವರು ಇದೀಗ ಎಲ್ಲಿಗೆ ತಲುಪಿದರು ಎಂದು ನೀವು ಆಗಾಗ ಟ್ರ್ಯಾಕ್ ಮಾಡಲು ಬಯಸುತ್ತೀರಾ?ಅವರು ಹತ್ತಿರುವ ಟ್ರೈನ್ ಇದೀಗ ಯಾವ ಪ್ರದೇಶದಲ್ಲಿದೆ ಎಂಬ ಮಾಹಿತಿ ನಿಮಗೆ ಬೇಕಾಗಿದ್ಯಾ? ಅದಕ್ಕಾಗಿ ನೀವು ಗೂಗಲ್ ಮ್ಯಾಪ್ ಬಳಸುವ ಅಗತ್ಯವಿಲ್ಲ. ಹಾಗಾದ್ರೆ ಗೂಗಲ್ ಮ್ಯಾಪ್ ಬಳಸದೆಯೇ ನಿಖರವಾಗಿರುವ ರೈಲ್ವೇಯ ಲೈವ್ ಲೊಕೇಷನ್ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಲೊಕೇಷನ್

ಹೌದು ಲೊಕೇಷನ್ ವಿವರ ಎಂದ ಕೂಡಲೇ ನಮಗೆ ಗೂಗಲ್ ಮ್ಯಾಪ್ ನೆನಪಾಗುತ್ತದೆ. ಗೂಗಲ್ ಮ್ಯಾಪ್ ಬಿಟ್ಟರೆ ನಮ್ಮ ಲೊಕೇಷನ್ ವಿವರ ತಿಳಿಯುವುದಕ್ಕೆ ಬೇರೆ ಯಾವುದೇ ಮಾರ್ಗಗಳೇ ಇಲ್ಲ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಹೌದು ಇದೀಗ ಗೂಗಲ್ ಮ್ಯಾಪ್ ಇಲ್ಲದೆಯೂ ಕೂಡ ರೈಲು ಎಲ್ಲಿದೆ ಎಂಬ ವಿವರವನ್ನು ಪಡೆಯುವುದಕ್ಕೆ ಸಾಧ್ಯವಿದೆ. ಅದಕ್ಕಾಗಿ ನೀವು ನಿಮ್ಮ ಫೋನಿನಲ್ಲಿ ರೈಲ್ ಯಾತ್ರಿ ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.

ಏನಿದು ರೈಲ್ ಯಾತ್ರಿ?

ಏನಿದು ರೈಲ್ ಯಾತ್ರಿ?

ಇದೊಂದು ಆಪ್ ಆಗಿದ್ದು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ. ರೈಲ್ವೇ ಇಲಾಖೆಯ ಮಾಹಿತಿ ಇದರಲ್ಲಿ ಲಭ್ಯವಿದೆ. ಯಾವ ರೈಲು ಯಾವ ಸಮಯಕ್ಕೆ ಯಾವ ಪ್ರದೇಶವನ್ನು ತಲುಪಿದೆ ಎಂಬ ವಿವರವನ್ನು ನೀವು ಈ ಆಪ್ ನಲ್ಲಿ ಪಡೆಯಬಹುದು. ಅಷ್ಟೇ ಅಲ್ಲ ಯಾವ ಸ್ಟೇಷನ್ನಿನಲ್ಲಿ ಆಹಾರದ ಲಭ್ಯತೆ ಇದೆ ಎಂದು ನೋಡಿ ಫುಡ್ ಬುಕ್ ಮಾಡಿಕೊಳ್ಳುವುದಕ್ಕೂ ಕೂಡ ಅವಕಾಶವಿದೆ. ಯಾವ ಸ್ಟೇಷನ್ನಿನಲ್ಲಿ ಯಾವ ರೈಲು ಎಷ್ಟು ಸಮಯ ನಿಲ್ಲುತ್ತದೆ ಇತ್ಯಾದಿ ಪ್ರತಿಯೊಂದು ಸಣ್ಣಪುಟ್ಟ ಭಾರತೀಯ ರೈಲ್ವೇಗೆ ಸಂಬಂಧಿತ ಎಲ್ಲಾ ಮಾಹಿತಿಗಳು ಇದರಲ್ಲಿ ಯಾತ್ರಿಕರಿಗೆ ಲಭ್ಯವಾಗುತ್ತದೆ. ಕೇವಲ ರೈಲಿನ ನಂಬರ್ ಎಂಟರ್ ಮಾಡುವ ಮೂಲಕ ನೀವು ಈ ಮಾಹಿತಿಯನ್ನು ಪಡೆದುಕೊಳ್ಳಬಹುದು.

ವಿವರಗಳನ್ನು ಪಡೆಯುವುದು ಹೇಗೆ?

ರೈಲ್ ಯಾತ್ರಿ ಮೂಲಕ ಹೇಗೆ ರೈಲಿನ ಲೈವ್ ಲೊಕೇಷನ್ ವಿವರ ಪಡೆಯುವುದು ಎಂಬುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಮೊದಲಿಗೆ ಪ್ಲೇ ಸ್ಟೋರ್ ತೆರೆಯಿರಿ

2. ಸರ್ಚ್ ನಲ್ಲಿ ರೈಲ್ ಯಾತ್ರಿಯನ್ನು ಹುಡುಕಾಡಿ

3. ಆಪ್ ನ್ನು ಮೊಬೈಲಿಗೆ ಇನ್ಸ್ಟಾಲ್ ಮಾಡಿ ತೆರೆಯಿರಿ

4. ರೈಲಿನ ಸ್ಟೇಟಸ್ ನಲ್ಲಿ ಸರ್ಚ್ ಮಾಡುವ ಮೂಲಕ ಟ್ರೈನ್ ನಂಬರ್ ಕೊಟ್ರೆ ಆ ಟ್ರೈನ್ ಎಲ್ಲಿದೆ ಎಂದು ತಿಳಿಯುತ್ತದೆ.

5. ನೀವು ಟ್ರೈನಿನ ಒಳಗಿದ್ದೀರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿ.

6. ಟ್ರೈನ್ ಎಲ್ಲಿಂದ ಎಷ್ಟೊತ್ತಿಗೆ ಹೊರಟಿದೆ ಮತ್ತು ನಂತರ ಸದ್ಯ ಎಲ್ಲಿದೆ ಎಲ್ಲಾ ವಿವರವನ್ನು ನಿಮಗೆ ನೀಡಲಾಗುತ್ತದೆ.

7. ಒಂದು ವೇಳೆ ರೈಲಿನ ಒಳಗೆ ಇದ್ದರೂ ಕೂಡ ನೀವು ಎಲ್ಲಿದ್ದೀರಾ ಎಂಬ ವಿವರವನ್ನು ಇದರಲ್ಲಿ ಪಡೆಯಬಹುದು.

8. ಯಾವ್ಯಾವ ಸ್ಟೇಷನ್ ನಲ್ಲಿ ರೈಲು ನಿಲ್ಲುತ್ತದೆ ಮತ್ತು ಯಾವ ಸ್ಟೇಷನ್ ನಲ್ಲಿ ಆಹಾರದ ಲಭ್ಯತೆ ಇದೆ ಎಂಬ ವಿವರವನ್ನು ಪಡೆದು ಫುಡ್ ಬುಕ್ ಮಾಡಿಕೊಳ್ಳುವುದಕ್ಕೂ ಕೂಡ ಅವಕಾಶವಿದೆ. ಅಷ್ಟೇ ಅಲ್ಲ ನಿಮಗೆ ಯಾವುದೇ ರೀತಿಯ ಮೆಡಿಕಲ್ ತುರ್ತು ಪರಿಸ್ಥಿತಿ ನಿರ್ಮಾಣವಾದರೂ ಕೂಡ ಈ ಆಪ್ ಮೂಲಕವೇ ಸಹಾಯ ಪಡೆಯಬಹುದು.

9. ಪ್ರತಿ ಸ್ಟೇಷನ್ ಗೆ ತಲುಪಿದ ಕೂಡಲೇ ನಿಮಗೆ ಇಂಟಿಮೇಷನ್ ಬೇಕಿದ್ದಲ್ಲಿ ಅಲಾರಾಂನ್ನು ಕೂಡ ಸೆಟ್ ಮಾಡಿ ಇಟ್ಟುಕೊಳ್ಳಬಹುದು.

ಆಪ್

ಇದಿಷ್ಟೇ ಅಲ್ಲ ಈ ಆಪ್ ನಲ್ಲಿ ರೆಫರಲ್ ಕೋಡ್ ಲಭ್ಯವಿದ್ದು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಅವರೂ ಕೂಡ ಆಪ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಮಾಡಿದರೆ ರೆಫರಲ್ ಕೋಡ್ ನಿಂದ ಹಣವನ್ನು ಗಳಿಸಬಹುದು. ಒಟ್ಟಾರೆ ಈ ಆಪ್ ರೈಲ್ವೇಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ನೀವೂ ಅಥವಾ ನಿಮ್ಮವರು ಯಾರಾದರೂ ಪದೇ ಪದೇ ರೈಲಿನಲ್ಲಿ ಸಂಚಾರ ಮಾಡುವವರಾಗಿದಲ್ಲಿ ರೈಲ್ ಯಾತ್ರಿ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡು ಟ್ರೈ ಮಾಡಬಹುದು.

Best Mobiles in India

Read more about:
English summary
Track Live Location Of Trains, Without Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X