Subscribe to Gizbot

ಟೆಲಿಕಾಂ ಕಂಪೆನಿಗಳ ಮೋಸಕ್ಕೆ ಬ್ರೇಕ್ ಹಾಕಲಿದೆ ಟ್ರಾಯ್‌ನ ಹೊಸ ಆಪ್!!

Written By:

ಟೆಲಿಕಾಂ ಕಂಪೆನಿಗಳ ಮೋಸದ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಬ್ಯಾಂಕ್‌, ಟ್ರಾವೆಲ್ಸ್, ಬ್ರೋಕರ್ಸ್ ಇತ್ಯಾದಿಗಳಿಂದ ಬರುತ್ತಿರುವ ಜಾಹೀರಾತುಗಳು ನಿಮಗೆ ತೊಂದರೆ ಎನಿಸುತ್ತಿದೆಯಾ? ಹಾಗಾದರೆ, ಟ್ರಾಯ್‌ ಸಿದ್ಧಪಡಿಸಿರುವ 'ಡು ನಾಟ್ ಡಿಸ್ಟರ್ಬ್‌ (ಡಿಎನ್‌ಡಿ) ಮೊಬೈಲ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.!!

ಹೌದು, ಯಾರಿಗೇ ಆದರೂ ಬಯಸದ ಕರೆ ಮತ್ತು ಎಸ್ಸೆಮ್ಮೆಸ್‌ಗಳು ಸಾಕಷ್ಟು ಕಿರಿ, ಕಿರಿ ಎನಿಸುತ್ತವೆ. ಹಾಗಾಗಿ, ದೂರಸಂಪರ್ಕ ವಲಯದ ನಿಯಂತ್ರಕ ಟ್ರಾಯ್‌, 'ಡಿಎನ್‌ಡಿ ಮೊಬೈಲ್‌ ಆಪ್‌' ಅನ್ನು ಬಿಡುಗಡೆಗೊಳಿಸಿದೆ.! ಈ ಆಪ್‌ನಿಂದ ಕಿರಿಕಿರಿ ಕರೆ, ಎಸ್ಸೆಮ್ಮೆಸ್‌ಗಳನ್ನು ಸುಲಭವಾಗಿ ತಡೆಯಬಹುದಾಗಿದ್ದು, ಹಾಗಾದರೆ, ಈ ಆಪ್‌ನಿಂದ ಏನೆಲ್ಲಾ ಉಪಯೋಗಗಳಿವೆ ಎಂಬದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಎನ್‌ಡಿಯಲ್ಲಿ ನಿಮ್ಮ ನಂಬರ್ ಸೇಫ್!!

ಡಿಎನ್‌ಡಿಯಲ್ಲಿ ನಿಮ್ಮ ನಂಬರ್ ಸೇಫ್!!

ಟ್ರಾಯ್ ಬಿಡುಗಡೆ ಮಾಡಿರುವ ಡಿಎನ್‌ಡಿ ಆಪ್‌ ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಆಪ್ ತನ್ನ ರಿಜಿಸ್ಟ್ರಾರ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ಹಾಗಾಗಿ, ಟೆಲಿಕಾಂ ಕಂಪೆನಿಗಳ ಮೋಸದ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಎಲ್ಲಾ ಜಾಹಿರಾತುಗಳು ನಿಮ್ಮನ್ನು ತಲುಪುವುದಿಲ್ಲ.!!

ಆಪ್‌ ಕಾರ್ಯನಿರ್ವಹಣೆ ಹೇಗೆ?

ಆಪ್‌ ಕಾರ್ಯನಿರ್ವಹಣೆ ಹೇಗೆ?

ಭಾರತದ ಟೆಲಿಕಾಂ ಕಂಪೆನಿಗಳನ್ನು ನಿಯಂತ್ರಿಸುತ್ತಿರುವ ಸರ್ಕಾರದ ಸಂಸ್ಥೆ ಟ್ರಾಯ್ ಆಗಿರುವುದರಿಂದ ಈ ಡಿಎನ್‌ಡಿ ಆಪ್‌ನಲ್ಲಿ ಎಲ್ಲಾ ಬಳಕೆದಾರರಿಗೂ ಸ್ವಂತ ಹಕ್ಕಿದೆ.!! ಒಮ್ಮೆ ಈ ಆಪ್‌ನಲ್ಲಿ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದರೆ ಜಾಹಿರಾತು ಕಳುಹಿಸಬಹುದಾದ ಸಂಖ್ಯೆಗಳ ಪಟ್ಟಿಗೆ ನಿಮ್ಮ ಮೊಬೈಲ್‌ ಸಂಖ್ಯೆ ಸೇರ್ಪಡೆಯಾಗುವುದಿಲ್ಲ.!!

ನಿಮ್ಮ ಆಯ್ಕೆಯ ಜಾಹಿರಾತು!!

ನಿಮ್ಮ ಆಯ್ಕೆಯ ಜಾಹಿರಾತು!!

ಡಿಎನ್‌ಡಿ ಆಪ್‌ ಮೂಲಕ ಯಾವ ಬಗೆಯ ವಾಣಿಜ್ಯ ಜಾಹೀರಾತು, ಸಂಪರ್ಕವನ್ನು ನೀವು ಬಯಸುವುದಿಲ್ಲ ಎಂದು ಆಯ್ಕೆ ಮಾಡಬಹುದು. ಇದರಿಂದ ಟೆಲಿಕಾಂ ಕಂಪೆನಿಗಳು ನಿಮಗೆ ಕಳುಹಿಸುವ ಮೆಸೇಜ್‌ಗಳು ನಿಲ್ಲಲಿವೆ. ಮತ್ತು ನಿಮ್ಮ ಆದ್ಯತೆಗಳನ್ನು ನಿಮಗೆ ಬೇಕಾದಾಗ ಇದನ್ನು ಬದಲಿಸುವ ಅವಕಾಶ ಕೂಡ ಇದೆ.!!

ದೂರು ದಾಖಲಿಸಬಹುದು.!!

ದೂರು ದಾಖಲಿಸಬಹುದು.!!

ಗ್ರಾಹಕರ ಕ್ಷೇಮಕ್ಕಾಗಿ ಬಂದಿರುವ ಈ ಆಪ್‌ ಮೂಲಕ ರಿಜಿಸ್ಟರ್ ಆಗಿದ್ದರೂ ಸಹ ನಿಮಗೆ ಕಿರಿ ಕಿರಿ ಕರೆ ಅಥವಾ ಎಸ್‌ಎಮ್‌ಎಸ್‌fಗಳು ಬಂದರೆ ಆ ಬಗ್ಗೆ ದೂರು ದಾಖಲಿಸಬಹುದು.! ನೀವು ದೂರು ದಾಖಲಿಸಿದ ನಂತರ, ದೂರಿಗೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಹ ಟ್ರಾಯ್‌ನಿಂದ ಮಾಹಿತಿ ಸಿಗುತ್ತದೆ.!!

ಎಲ್ಲಾ ಬಳಕೆದಾರರಿಗೂ ಲಭ್ಯ.!!

ಎಲ್ಲಾ ಬಳಕೆದಾರರಿಗೂ ಲಭ್ಯ.!!

ಟ್ರಾಯ್ ಬಿಡುಗಡೆ ಮಾಡಿರುವ ಈ ಡಿಎನ್‌ಡಿ ಆಪ್‌ ಎಲ್ಲಾ ಆಂಡ್ರಾಯ್, ಆಪಲ್ ಮತ್ತು ವಿಂಡೋಸ್ ಬಳಕೆದಾರರಿಗೂ ಲಭ್ಯವಿದ್ದು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ಗೆ ಭೇಟಿ ನೀಡಿ ' ಡಿಎನ್‌ಡಿ ಸರ್ವಿಸ್' ಎಂದು ಸರ್ಚ್ ಮಾಡಿದರೆ ಈ ಆಪ್ ಸಿಗಲಿದೆ.!!

ಓದಿರಿ:ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
TRAI has come out with an app named 'DND Services' that will help mobile users manage unsolicited commercial communications (UCC).to know more visit to kannada.gizbot.com'
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot