ಮೊಬೈಲ್ ವ್ಯಾಲೆಟ್ ಗೆ ಹೊಸ ಸೇರ್ಪಡೆ: ಟ್ರೂ ಬ್ಯಾಲೆನ್ಸ್ ಆಪ್
ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ವ್ಯಾಲೆಟ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದೇ ಮಾದರಿಯಲ್ಲಿ ಟ್ರೂ ಬ್ಯಾಲೆನ್ಸ್ ಮ್ಯಾನೇಜ್ ಮೆಂಟ್ ಆಪ್ ತನ್ನ ಮೊಬೈಲ್ ವ್ಯಾಲೆಟ್ ಆಪ್ ಅನ್ನು ಬಿಡುಗಡೆ ಮಾಡಿದೆ ಈ ಮೂಲಕ ಡಿಜಿಟಲ್ ವ್ಯಾಲೆಟ್ ಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಲಿದೆ.

ಈ ಟ್ರೂ ಬ್ಯಾಲೆನ್ಸ್ ವ್ಯಾಲೆಟ್ ಆಪ್ ಗೆ ಹಣವನ್ನು ತುಂಬಿದರೆ ಇದರಿಂದ ವೇಗವಾಗಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಹಣವನ್ನು ಆಪ್ ನಿಂದ ಆಪ್ ಗೆ ವರ್ಗಹಿಸಬಹುದಾಗಿದೆ. ಇದಲ್ಲದೇ ಈ ಆಪ್ ನಲ್ಲಿ ಆಕೌಂಟ್ ನಿಂದ ಆಕೌಂಟ್ ಗೆ ಹಣವನ್ನು ಸಂದಾಯ ಮಾಡುವ ಆಯ್ಕೆಯನ್ನು ಕಾಣಬಹುದಾಗಿದೆ.
ದಿನೇ ದಿನೇ ಭಾರತೀಯರು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಈ ಹೊಸ ಆಪ್ ಸಹ ಮೊಬೈಲ್ ವ್ಯಾಲೆಟ್ ಸೇವೆಯನ್ನು ಮತ್ತಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ನೀಡಲಿದೆ ಎನ್ನಲಾಗಿದೆ.
ಈಗಾಗಲೇ ಮೊಬೈಲ್ ವ್ಯಾಲೆಟ್ ಗಳ ಸಂಖ್ಯೆ ಹೆಚ್ಚಾಗಿದೆ ಈ ಸಂಧರ್ಭದಲ್ಲಿ ಈ ಟ್ರೂ ಬ್ಯಾಲೆನ್ಸ್ ಆಪ್ ಒಂದೇ ಸ್ವೇಪ್ ನಲ್ಲಿ ಅನೇಕ ಸೇವೆಗಳನ್ನು ನೀಡುವ ಯೋಜನೆಯನ್ನು ರೂಪಿಸಿದ್ದು, ಬೇರೆ ಮಾದರಿಯ ಆಪ್ ಗಳಿಗೆ ಇದು ಸ್ಪರ್ಧೇಯನ್ನು ನೀಡಲಿದೆ ಎನ್ನಲಾಗಿದೆ.
ಈ ಆಪ್ ನಲ್ಲಿ ಹಣವನ್ನು ಡೆಪಾಸಿಟ್ ಇಡುವ ಆಯ್ಕೆಯನ್ನು ನೀಡಲಿದ್ದು, ಒಂದು ಕ್ಲಿಕ್ ನಲ್ಲಿ ರೀಚಾರ್ಜ್ ಸೇರಿದರಂತೆ ಹಲವು ಹೊಸ ಆಯ್ಕೆಗಳು ಈ ಆಪ್ ನಲ್ಲಿ ಕಾಣಿಸಿಕೊಳ್ಳಲಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಲಾಂಚ್ ಆಗುತ್ತಿರುವ ಮೊಬೈಲ್ ವ್ಯಾಲೆಟ್ ಗಳ ಪೈಕಿ ಈ ಹೊಸ ಆಪ್ ಹೇಗೆ ಹಿಟ್ ಆಗಲಿದೆ ನೋಡಬೇಕು.


Click it and Unblock the Notifications








