Subscribe to Gizbot

ಜನಪ್ರಿಯ ಆಪ್ 'ಟ್ರೂ ಬ್ಯಾಲೆನ್ಸ್' ತಂದಿದೆ ಮೊಬೈಲ್ ವಾಲೆಟ್ ಸೇವೆ!!

Written By:

ಮೊಬೈಲ್ ಬ್ಯಾಲೆನ್ಸ್ ನಿರ್ವಹಣೆ ಮಾಡುವ ಅತ್ಯಂತ ಜನಪ್ರಿಯ ಕಿರುತಂತ್ರಾಂಶ ಆಪ್ ಟ್ರೂ ಬ್ಯಾಲೆನ್ಸ್ ಇದೀಗ ಹಣಕಾಸು ತಂತ್ರಜ್ಞಾನ ವಹಿವಾಟಿಗೆ ಪ್ರವೇಶ ಮಾಡಿದೆ.! ಹೌದು, ಸುಮಾರು 5 ಕೋಟಿಗಳಷ್ಟು ಡೌನ್‌ಲೋಡ್‌ ಕಂಡಿರುವ ಟ್ರೂ ಬ್ಯಾಲೆನ್ಸ್ ಇದೀಗ ಮೊಬೈಲ್‌ ವಾಲೆಟ್ ಸೇವೆಗೆ ಚಾಲನೆ ನೀಡಿದೆ.!!

ತೇಜ್, ಫೋನ್ ಪೇ ನಂತೆ ಆರ್‌ಬಿಐ ನಿಬಂಧನೆಗಳಿಗೆ ಅನುಗುಣವಾಗಿ ಟ್ರೂ ಬ್ಯಾಲೆನ್ಸ್ ಕೂಡ ಇದೀಗ ಮೊಬೈಲ್‌ ವಾಲೆಟ್ ಸೇವೆಯನ್ನು ತಂದಿದ್ದು, ಹಾಗಾದರೆ, ಟ್ರೂ ಬ್ಯಾಲೆನ್ಸ್ ಬಿಡುಗಡೆ ಮಾಡಿರುವ ಮೊಬೈಲ್‌ ವಾಲೆಟ್‌ನಲ್ಲಿ ಬೇರೆ ಏನೆಲ್ಲಾ ವಿಶೇಷ ಸೇವೆಗಳನ್ನು ನೀಡಲಾಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರೂ ಬ್ಯಾಲೆನ್ಸ್ ಮೊಬೈಲ್‌ ವಾಲೆಟ್!!

ಟ್ರೂ ಬ್ಯಾಲೆನ್ಸ್ ಮೊಬೈಲ್‌ ವಾಲೆಟ್!!

ಟ್ರೂ ಬ್ಯಾಲೆನ್ಸ್ ಮೊಬೈಲ್‌ ವಾಲೆಟ್ ಆಯ್ಕೆಯನ್ನು ತಂದಿದ್ದು, ಈ ಸೌಲಭ್ಯದ ಮೂಲಕ ಗ್ರಾಹಕರು ವಾಲೆಟ್‌ನಿಂದ ವಾಲೆಟ್‌ಗೆ ಸುಲಭವಾಗಿ ಹಣ ವರ್ಗಾವಣೆ ಮಾಡುವ ಹಾಗೂ ವಾಲೆಟ್‌ನಿಂದ ಸುಲಭವಾಗಿ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡುವ ಆಯ್ಕೆ ಹೊಂದಿದ್ದಾರೆ.!!

ಒನ್ ಕ್ಲಿಕ್‌ –ರೀಚಾರ್ಜ್‌!!

ಒನ್ ಕ್ಲಿಕ್‌ –ರೀಚಾರ್ಜ್‌!!

ವಾಲೆಟ್‌ನಿಂದ ಹಣ ವರ್ಗಾವಣೆ ಕಾರ್ಯವಲ್ಲದೆ, ‘ಒನ್ ಕ್ಲಿಕ್‌ -ರೀಚಾರ್ಜ್‌ ಫೀಚರ್' ಸೌಲಭ್ಯವನ್ನೂ ಸಹ ಆಪ್‌ನಲ್ಲಿ ಒದಗಿಸಲಾಗುತ್ತಿದ್ದು, ಇದರಿಂದ ಆಪ್‌ ಮೂಲಕ ಫೋನ್‌ ಬಿಲ್‌ಗಳನ್ನೂ ಪಾವತಿಸುವ, ಬ್ಯಾಲನ್ಸ್ ಪರೀಕ್ಷಿಸುವ ಆಪ್‌ನಿಂದ ಬಿಲ್ಸ್ ಪರೀಕ್ಷಿಸುವ ಆಪ್‌ ಆಗಿ ಪ್ರಗತಿ ಕಂಡಿದೆ.!!

ಉಚಿತವಾಗಿ ಹಣ ಠೇವಣಿ!!

ಉಚಿತವಾಗಿ ಹಣ ಠೇವಣಿ!!

ಇಷ್ಟೆಲ್ಲಾ ಸೇವೆಗಳನ್ನು ನೀಡುತ್ತಿರುವ ಟ್ರೂ ಬ್ಯಾಲೆನ್ಸ್ ಆಪ್‌ ಇದೀಗ ಗ್ರಾಹಕರು ಹಣವನ್ನು ತಮ್ಮ ಟ್ರೂ ಬ್ಯಾಲನ್ಸ್‌ ವಾಲೆಟ್‌ನಲ್ಲಿ ಉಚಿತವಾಗಿ ಹಣ ಠೇವಣಿ ಇರಿಸಬಹುದು ಎಂದು ಹೇಳಿದೆ. ಈ ಮೂಲಕ ಸುಲಭವಾಗಿ ಫೋನ್‌ ರೀಚಾರ್ಜ್ ಮಾಡಿಸಬಹುದು ಎಂದು ತಿಳಿಸಿದೆ.!! .

ಡೇಟಾ ಸುರಕ್ಷತೆ

ಡೇಟಾ ಸುರಕ್ಷತೆ

ಟ್ರೂ ಬ್ಯಾಲನ್ಸ್ ವಾಲೆಟ್ ಆರ್‌ಬಿಐ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಗ್ರಾಹಕರ ಡೇಟಾ ಸುರಕ್ಷತೆ ಕಾಯ್ದುಕೊಳ್ಳಲು ಗರಿಷ್ಠ ಆದ್ಯತೆ ನೀಡಲಾಗುತ್ತಿದೆ ಮತ್ತು ಡಿಜಿಟಲ್‌ ಪಾವತಿ ಸೇವೆ ಒದಗಿಸುವ ಮೂಲಕ ನಾವು ಈಗ ಸಾಧನೆಯ ಇನ್ನೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದೇವೆ ಎಂದು ಟ್ರೂ ಬ್ಯಾಲೆನ್ಸ್ ಆಡಳಿತ ವರ್ಗ ಹೇಳಿದೆ.!!

ಅಡಚಣೆ ಇಲ್ಲದ ಸೇವೆ!!

ಅಡಚಣೆ ಇಲ್ಲದ ಸೇವೆ!!

ಗ್ರಾಹಕರ ಜತೆ ನಿರಂತರ ಸಂಪರ್ಕದಲ್ಲಿ ಇರುವುದು ಮತ್ತು ವಹಿವಾಟು ವಿಸ್ತರಿಸಲು ಈ ಮೊಬೈಲ್‌ ವಾಲೆಟ್ ವಹಿವಾಟು ಆರಂಭಿಸಲಾಗಿದೆ. ಹಾಗಾಗಿ, ಗ್ರಾಹಕರು ತಮ್ಮ ಮೊಬೈಲ್‌ನಿಂದ ಸುರಕ್ಷಿತವಾಗಿ ಮತ್ತು ಯಾವುದೇ ಅಡಚಣೆ ಇಲ್ಲದೇ ನಿರಂತರವಾಗಿ ವಿವಿಧ ಸೇವೆಗಳಿಗೆ ಹಣ ಪಾವತಿಸಬಹುದು. ಎಂದು ಟ್ರೂ ಬ್ಯಾಲನ್ಸ್‌ನ ಸಿಇಒ ಚಾರ್ಲಿ ಲೀ ಹೇಳಿದ್ದಾರೆ.

ಓದಿರಿ:ವಿಶ್ವದ ಕೆಲವೇ ನಗರಗಳು ಹೊಂದಿರುವ ಇಂಟರ್‌ನೆಟ್‌ ಸ್ಪೀಡ್ ಈಗ ಬೆಂಗಳೂರಿನಲ್ಲಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
True Balance, which got a mobile wallet license from the RBI earlier this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot