ಜಿಯೋ ಬಳಕೆದಾರರಿಗೆ ಟ್ರು ಅಪ್ಲಿಕೇಶನ್‌ನಿಂದ ಭರ್ಜರಿ ಕೊಡುಗೆ
ಟ್ರು ಬ್ಯಾಲೆನ್ಸ್ ತನ್ನ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರು ನಿರ್ವಹಣೆ, ರೀಚಾರ್ಜ್ ಮತ್ತು ರೀವಾರ್ಡ್‌ಗಳನ್ನು ಒಮ್ಮೆಗೆ ಮಾಡಿಕೊಳ್ಳಬಹುದಾಗಿದೆ.
ಮೊಬೈಲ್ ಬ್ಯಾಲೆನ್ಸ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್ ಟ್ರು ಬ್ಯಾಲೆನ್ಸ್ ತನ್ನ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರು ನಿರ್ವಹಣೆ, ರೀಚಾರ್ಜ್ ಮತ್ತು ರೀವಾರ್ಡ್‌ಗಳನ್ನು ಒಮ್ಮೆಗೆ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಫೀಚರ್ ಬಳಕೆದಾರರಿಗೆ ತಮ್ಮ ಮೆಚ್ಚಿನ ಸಂಪರ್ಕಗಳನ್ನು ಅಪ್ಲಿಕೇಶನ್ ಒಳಗಡೆಯೇ ಪಿನ್ ಮಾಡುವ ಅವಕಾಶವನ್ನು ಒದಗಿಸಲಿದೆ.

'ಒನ್ ಕ್ಲಿಕ್ ರೀಚಾರ್ಜ್' ಫೀಚರ್‌ನಿಂದ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ನಂತರ ಟ್ರು ಬ್ಯಾಲೆನ್ಸ್ ತನ್ನ ಹೊಸ ಅಪ್‌ಡೇಟ್ ಮೂಲಕ ಅಪ್ಲಿಕೇಶನ್‌ನಲ್ಲಿ ಇನ್ನಷ್ಟು ವ್ಯವಸ್ಥೆಗಳನ್ನು ಪ್ರಾಯೋಜಪಡಿಸಿದೆ. ಟ್ರು ಬ್ಯಾಲೆನ್ಸ್ ಅಪ್ಲಿಕೇಶನ್‌ನ ಹೊಸ ಆವೃತ್ತಿಯನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಟ್ರು ಬ್ಯಾಲೆನ್ಸ್ ಸಿಇಒ ಚಾರ್ಲಿ ಲೀ ಈ ಹೊಸ ಆವೃತ್ತಿಯ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿದ್ದು, ನಾವು ಹೊಸದನ್ನು ಮಾಡುವುದಲ್ಲಿ ನಂಬಿಕೆಯನ್ನಿಟ್ಟಿದ್ದೇವೆ ಮತ್ತು ಅನ್ವೇಷಣೆಗಳನ್ನು ನಡೆಸುವ ಮೂಲಕ ಬಳಕೆದಾರರಿಗೆ ನಮ್ಮ ಅನುಭವಗಳನ್ನು ತಿಳಿಸಲು ಬಯಸುತ್ತೇವೆ. ಈ ಹೊಸ ಆವೃತ್ತಿಯನ್ನು ಸರಳ ವೈಶಿಷ್ಟ್ಯಗಳಿಂದ ರೂಪಿಸಲಾಗಿದ್ದು ಮೊಬೈಲ್ ರೀಚಾರ್ಜ್ ಮಾಡಲು ಬಳಕೆದಾರರು ಸ್ಪರ್ಶಿಸಿದರೆ ಸಾಕು ಅದರ ಜೊತೆಗೆ ಬಹುಮಾನಗಳನ್ನು ಗಳಿಸಿಕೊಳ್ಳಬಹುದಾಗಿದೆ.
ನಮ್ಮ ಈ ಹಿಂದಿನ ವೈಶಿಷ್ಟ್ಯಗಳಿಂದ ನಾವು ಉತ್ತಮ ಬಳಕೆದಾರ ಪ್ರತಿಕ್ರಿಯೆಗಳನ್ನು ಗಳಿಸಿಕೊಂಡಿದ್ದೇವೆ ಅದರಂತೆಯೇ ಈ ಹೊಸ ಫೀಚರ್‌ಗೂ ಅಷ್ಟೇ ಉತ್ತಮ ಪ್ರತಿಕ್ರಿಯೆಗಳು ದೊರಕಬಹುದು ಎಂಬುದು ಲೀ ಮಾತಾಗಿದೆ. ಬಳಕೆದಾರರು ಈ ಹೊಸ ಆವೃತ್ತಿಯನ್ನು ಬಳಸಿಕೊಂಡು ರೀಚಾರ್ಜ್ ಪರಿಶೀಲನೆ, ಗಳಿಕೆ ಮತ್ತು ರೀಚಾರ್ಜ್ ಅನ್ನು ಒಮ್ಮೆಲೇ ಮಾಡಿಕೊಳ್ಳಬಹುದು. ಟ್ರು ಬ್ಯಾಲೆನ್ಸ್ ಈ ಹೊಸ ಫೀಚರ್ ಅನ್ನು ಜಿಯೋ ಬಳಕೆದಾರರಿಗೂ ಒದಗಿಸಿದೆ.
ಈ ವರ್ಷದ ಏಪ್ರಿಲ್ 1 ರಿಂದ ಜಿಯೋ ಪಾವತಿ ಸೇವೆಯನ್ನು ಮಾಡಿಕೊಂಡಿದ್ದು ಜಿಯೋ ಬಳಕೆದಾರರಿಗೆ ತಮ್ಮ ಸಿಮ್ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡಿಕೊಳ್ಳಬಹುದಾಗಿದೆ. ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಕರೆಗಳು ಉಚಿತವಾಗಿದ್ದು, ಆಯ್ಕೆಮಾಡಿದ ಡೇಟಾ ಯೋಜನೆಗಳಿಗೆ ಬಳಕೆದಾರರ ಬ್ಯಾಲೆನ್ಸ್ ಬಳಸಲ್ಪಡುತ್ತದೆ. ಡೇಟಾ ವ್ಯಯಕ್ಕೂ ಇದು ಬಳಕೆಯಾಗುತ್ತದೆ.
ಬಳಕೆದಾರರಿಗೆ ಬ್ಯಾಲೆನ್ಸ್ ಟ್ರ್ಯಾಕಿಂಗ್ ಸರಳಗೊಳಿಸಲು, ಬ್ಯಾಲೆನ್ಸ್ ಚೆಕ್ ಆಪ್ಶನ್ ಅನ್ನು ಟ್ರು ಬ್ಯಾಲೆನ್ಸ್ ಅನ್ನು ಪರಿಚಯಿಸಿದೆ. ಅಂತೆಯೇ ಜಿಯೋ ಬಳಕೆದಾರರಿಗೆ ಯಾವುದೇ ತೊಂದರೆ ಇಲ್ಲದೆ 4 ಜಿ ಸಿಮ್‌ನಿಂದ ಸಾಕಷ್ಟು ಬಳಕೆಯನ್ನು ಮಾಡಿಕೊಳ್ಳುವ ವ್ಯವಸ್ಥೆಯನ್ನು ಒದಗಿಸಿದೆ.


Click it and Unblock the Notifications








