ಟ್ರೂಕಾಲರ್ ಆಪ್‌ ಬಳಕೆದಾರರಿಗೆ ಸಿಹಿಸುದ್ದಿ!..ಇದೀಗ ಬಂದಿವೆ ಬೆಸ್ಟ್ ಫೀಚರ್ಸ್!

|

ಜನಪ್ರಿಯ ಟ್ರೂಕಾಲರ್ ಆಪ್‌ನಲ್ಲಿ ಹೊಸ ಗೌಪ್ಯತೆ ಕೇಂದ್ರಿತ ಗ್ರೂಪ್ ಚಾಟ್ ವೈಶಿಷ್ಟ್ಯವನ್ನು ಪರಿಚಯಿಸಿ ಟ್ರೂಕಾಲರ್ ಕಂಪೆನಿ ಗಮನಸೆಳೆದಿದೆ. ಕಂಪನಿಯು ಹೊಸ ಗೌಪ್ಯತೆಯ ಪದರವನ್ನು ಪರಿಚಯಿಸಿದ್ದು, ಇದೀಗ ನಿಮ್ಮ ಸಂಖ್ಯೆಯನ್ನು ಮರೆಮಾಡಲಾಗುತ್ತದೆ. ಇದರರ್ಥ ಇತರ ಸದಸ್ಯರು ಅವರ ಫೋನ್ ಕಾಂಟ್ಯಾಕ್ಟ್‌ನಲ್ಲಿ ನಿಮ್ಮ ಸಂಖ್ಯೆಯನ್ನು ಉಳಿಸದ ಹೊರತು ನೀವು ಯಾವುದೇ ಗ್ರೂಪ್ ಚಾಟ್‌ಗೆ ಭಾಗಿಯಾಗುವುದಿಲ್ಲ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನೋಡಲು ಅನುಮತಿ ಕೇಳಲು ಅವರು ಸಂಪರ್ಕ ವಿನಂತಿಯನ್ನು ಕಳುಹಿಸುವ ಆಯ್ಕೆ ನೀಡಲಾಗಿದೆ.

 ಹೊಸ ವೈಶಿಷ್ಟ್ಯ

ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಭಾಗವಹಿಸುವವರ ಮುಚ್ಚಿದ ಗುಂಪಿನೊಳಗೆಹಂಚಿಕೊಳ್ಳಲು ಇದೀಗ ಈ ಹೊಸ ವೈಶಿಷ್ಟ್ಯವು ನಿಮಗೆ ಅನುಮತಿಸಲಿದೆ. ಹೊಸ ವೈಶಿಷ್ಟ್ಯವು ಆಮಂತ್ರಣ ಆಧಾರಿತ-ಕಾರ್ಯವಿಧಾನದಲ್ಲಿ ಕಾರ್ಯನಿರ್ವಹಿಸುವುದರಿಂದ ಓರ್ವ ವ್ಯಕ್ತಿಯು ಗುಂಪಿಗೆ ಸೇರಲು ಆಹ್ವಾನವನ್ನು ಸೇರಬಹುದು ಅಥವಾ ತಿರಸ್ಕರಿಸಬಹುದು. ಆದಾಗ್ಯೂ, ಆಹ್ವಾನಿತ ವ್ಯಕ್ತಿಗೆ ಮೊದಲ ಹಂತದಲ್ಲಿ ಸಂದೇಶವನ್ನು ನೋಡಲು ಸಾಧ್ಯವಿಲ್ಲ ಮತ್ತು ಭಾಗವಹಿಸುವವರ ಸಂಪೂರ್ಣ ಪಟ್ಟಿಯನ್ನು ಅವರು ಪ್ರವೇಶಿಸಲು ಸಾಧ್ಯವಿಲ್ಲ.

ಪ್ರೀಮಿಯಂ ಗೋಲ್ಡ್

ಇಷ್ಟು ಮಾತ್ರವಲ್ಲದೇ ,ಕಂಪನಿಯು ಚಂದಾದಾರಿಕೆ ಸೇವೆಯಾದ ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಅನ್ನು ಸಹ ಪ್ರಾರಂಭಿಸಿದೆ. ಈ ಪ್ರೀಮಿಯಂ ಚಂದಾದಾರಿಕೆ ಸೇವೆಯು ನಿಮಗೆ ಮತ್ತಷ್ಟು ಆಯ್ಕೆಗಳನ್ನು ನೀಡಿದೆ. ಪ್ರೀಮಿಯಂ ಚಂದಾದಾರಿಕೆಯಿಂದ ಈಗ ನಿಮ್ಮ ಪ್ರದೇಶದ ಉನ್ನತ ಸ್ಪ್ಯಾಮರ್‌ಗಳನ್ನು ಸ್ವಯಂಚಾಲಿತವಾಗಿ ನವೀಕರಿಸುವುದು ಮತ್ತು ನಿರ್ಬಂಧಿಸುವುದನ್ನು ಒಳಗೊಂಡಿರುವ ಸುಧಾರಿತ ಮತ್ತು ಸ್ಪ್ಯಾಮ್ ನಿರ್ಬಂಧಿಸುವ ವೈಶಿಷ್ಟ್ಯಗಳನ್ನು ಈ ಸೇವೆ ನೀಡುತ್ತಿದೆ. ಇದು ಗ್ರಾಹಕರಿಗೆ ಮೌಲ್ಯ ಮತ್ತು ಬ್ರ್ಯಾಂಡಿಂಗ್ ಸೇರಿಸಲು ಅನುವು ಮಾಡಿಕೊಡುತ್ತದೆ.

ಬ್ಲಾಕ್ ಸಂಖ್ಯೆಗಳು

ಹೊಸ ಸ್ಪ್ಯಾಮ್ ನಿರ್ಬಂಧಿಸುವ ವೈಶಿಷ್ಟ್ಯಗಳಲ್ಲಿ ಸ್ವಯಂ-ನವೀಕರಣ, ಉಚಿತ ಆಟೊಬ್ಲಾಕ್ ಟಾಪ್ ಸ್ಪ್ಯಾಮರ್ ಮತ್ತು ವಿದೇಶಿ ಸಂಖ್ಯೆಗಳು, ನಿಮ್ಮ ಫೋನ್‌ಬುಕ್‌ನಲ್ಲಿಲ್ಲದ ಬ್ಲಾಕ್ ಸಂಖ್ಯೆಗಳು ಮತ್ತು 140 ಸರಣಿ ಟೆಲಿಮಾರ್ಕೆಟರ್‌ಗಳನ್ನು ನಿರ್ಬಂಧಿಸಲಿದೆ (ಈ ವೈಶಿಷ್ಟ್ಯವನ್ನು ಭಾರತ ಬಳಕೆದಾರರಿಗೆ ಮಾತ್ರ ತರಲಾಗಿದೆ). ಈ ಫೀಚರ್ ಆಂಡ್ರಾಯ್ಡ್ ಮತ್ತು ಐಫೋನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಿದ್ದು, ಈ ವೈಶಿಷ್ಟ್ಯವು ಹೊಸ ಬಳಕೆದಾರರನ್ನು ಟ್ರೂ ಕಾಲರ್ ಪ್ಲಾಟ್‌ಫಾರ್ಮ್‌ಗೆ ಹೇಗೆ ಆಕರ್ಷಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

1 ಮಿಲಿಯನ್ ಪಾವತಿಸುವ

ಇನ್ನು ಟ್ರೂಕಾಲರ್ ಇತ್ತೀಚೆಗೆ ಜಾಗತಿಕವಾಗಿ 1 ಮಿಲಿಯನ್ ಪಾವತಿಸುವ ಚಂದಾದಾರರನ್ನು ದಾಟಿದೆ ಎಂದು ಘೋಷಿಸಿದೆ ಮತ್ತು ಅದರ ಪಾವತಿಸಿದ ಚಂದಾದಾರಿಕೆ ಸೇವೆಯಾದ ಟ್ರೂಕಾಲರ್ ಪ್ರೀಮಿಯಂಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದಲ್ಲದೆ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸುವಾಗ, ಹೊಸ ವೈಶಿಷ್ಟ್ಯವನ್ನು ಅನನ್ಯ ಆಹ್ವಾನ-ಆಧಾರಿತ ಕಾರ್ಯವಿಧಾನದೊಂದಿಗೆ ನಿರ್ಮಿಸಲಾಗಿದೆ ಎಂದು ಟ್ರೂಕಾಲರ್ ಮಾಹಿತಿ ನೀಡಿದೆ. ಹಾಗಾಗಿ, ಟ್ರೂ ಕಾಲರ್ ಬಳಕೆದಾರರು ಮತ್ತಷ್ಟು ಹೊಸ ಹೊಸ ಸೇವೆಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಬಹುದು.

Best Mobiles in India

Read more about:
English summary
Truecaller has introduced a privacy-centric Group Chat feature, which is available both Android and iPhone's smartphone users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X