ಟ್ರೂ ಕಾಲರ್ ನಿಂದ ಸೆಕೆಂಡ್ ಲೆವಲ್ ಸೆಕ್ಯೂರಿಟಿ ಸಿಸ್ಟಮ್.....!!!

By: Precilla Dias

ಟ್ರೂ ಕಾಲರ್ ಭಾರತದಲ್ಲಿ ಹೊಸ ಮಾದರಿಯ ಸೆಕ್ಯೂರಿಟಿ ಸಿಸ್ಟಮ್ ಪರಿಚಯಿಸಲು ಮುಂದಾಗಿದೆ. ಕಛೇರಿಗೆ ಬರುವರರ ಮೇಲೆ ಕಣ್ಣಿಡಲು ಎರಡನೇ ಹಂತದ ಸೆಕ್ಯೂರಿಟಿಯನ್ನು ಕಛೇರಿಗಳಿಗೆ ನೀಡಲು ಮುಂದಾಗಿದೆ.

ಟ್ರೂ ಕಾಲರ್ ನಿಂದ ಸೆಕೆಂಡ್ ಲೆವಲ್ ಸೆಕ್ಯೂರಿಟಿ ಸಿಸ್ಟಮ್.....!!!

ಟ್ರೂಕಾಲರ್ ಹೊಸ ಸೇವೆಯನ್ನು ಕಮರ್ಷಿಯಲ್ ಬಿಲ್ಡಿಂಗ್ ಮತ್ತು ರೆಸಿಡೆನ್ಷಿಯಲ್ ಸೆಕ್ಟರ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ನಿಮ್ಮ ಕಛೇರಿ ಮತ್ತು ಮನೆಗಳನ್ನು ಹೆಚ್ಚು ಸೆಕ್ಯೂರ್ ಆಗಿ ಇಡಲು ಸಹಕರಿಸುತ್ತದೆ.

ಇಂದಿನ ದಿನಗಳಲ್ಲಿ ಕಛೇರಿಗಳಿಗೆ ಮತ್ತು ರೆಸಿಡೆನ್ಷಿಯಲ್ ಪ್ರದೇಶಕ್ಕೆ ಬರಲಿರುವ ವಿಜಿಟರ್ ಗಳ ಮೇಲೆ ಕಣ್ಣಿಡಲೇ ಬೇಕಾಗಿದೆ. ಎಷ್ಟು ಜನ ಬರುತ್ತಾರೆ ಹೋಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಟ್ರೂ ಕಾಲರ್ ಈ ಸೆಕ್ಯೂರಿಟಿ ಸೇವೆಯನ್ನು ನೀಡಲು ಮುಂದಾಗಿದೆ.

ಇದಕ್ಕಾಗಿಯೇ ಟ್ರೂ ಕಾಲರ್ ತನ್ನ ಸೇವೆಯ ಬಗ್ಗೆ ಮಾಹಿತಿ ನೀಡಲು ವಾಟಿಕಾ ಬಿನೆಸ್ ಸೆಂಟರ್ ನೊಂದಿಗೆ ಟೈಯಪ್ ಮಾಡಿಕೊಂಡಿದೆ ಎನ್ನಲಾಗಿದೆ. ಟ್ರೂಕಾಲರ್ ಮೊಲು ವಾಟಿಕಾ ಬಿನೆಸ್ ಪಾರ್ಕ್ ನಲ್ಲಿ ಈ ಹೊಸ ಸೆಕ್ಯೂರಿಟಿ ಸೇವೆಯನ್ನು ಆರಂಭಿಸಿದ್ದು, ಹೆಚ್ಚಿನ ಪ್ರಮಾಣದ ಭದ್ರತೆಯನ್ನು ಪಡೆಯಲು ಸಹಾಯ ಮಾಡಿದೆ. '

ಇಂದಿನ ದಿನದಲ್ಲಿ ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಇಲ್ಲವೇ ವಸತಿ ಸಮುಚ್ಛಯಗಳಲ್ಲಿ ಹೆಚ್ಚಿನ ಭದ್ರತೆಯ ಅವಶ್ಯಕತೆಯೂ ಇದೆ. ಈ ಸೇವೆಯನ್ನು ನೀಡುವ ಮೂಲಕ ಟ್ರೂ ಕಾಲರ್ ಹೊಸ ಪ್ರಯತ್ನಕ್ಕೆ ಮುಂದಿಗಿರುವುದು ಉತ್ತಮ ಸಂಗತಿಯಾಗಿದೆ.

Read more about:
English summary
Truecaller has come up with an innovative way to authenticate visitors coming in office buildings and ensuring a second level of security check.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot