ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ – ಹೆಚ್ಚು ಫೀಚರ್ ಒಳಗೊಂಡಿರುವ ಚಂದಾದಾರಿಗೆ
ಟ್ರೂಕಾಲರ್ ಒಂದು ಟ್ರೆಂಡ್ ನಲ್ಲಿ ನಂಬರ್ ಗುರುತಿಸುವ ಸೇವೆಯಾಗಿದ್ದು ಇದನ್ನು ಹೆಚ್ಚಿನವರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಇನ್ಸ್ಟಾಲ್ ಮಾಡಿಕೊಂಡಿರುತ್ತಾರೆ. ಅಪರಿಚಿತ ನಂಬರ್ ನ್ನು ಗುರುತಿಸಿಕೊಳ್ಳಲು ಇದು ನೆರವಾಗುತ್ತದೆ ಮತ್ತು ಅಗತ್ಯವಿದ್ದರೆ ಅವರ ಜೊತೆಗೆ ಸಂಭಾಷನೆ ನಡೆಸಬಡಹುದು ಇಲ್ಲದೇ ಇದ್ದರೆ ನೆಗ್ಲೆಕ್ಟ್ ಕೂಡ ಮಾಡಬಹುದು.

ಉಚಿತ ವರ್ಷನ್ ನ ಟ್ರೂಕಾಲರ್ ಆಪ್ ನಲ್ಲಿ ಇನ್-ಆಪ್ಸ್ ಆಡ್ ಗಳಿರುತ್ತದೆ ಆದರೆ ಪಾವತಿ ವರ್ಷನ್( ತಿಂಗಳಿಗೆ, ಅರ್ಧವಾರ್ಷಿಕ, ವಾರ್ಷಿಕ ಪಾವತಿ) ಪ್ಲಾನ್ ನಲ್ಲಿ ಈ ಆಡ್ ಗಳನ್ನು ಮುಕ್ತವಾಗಿರಿಸಲಾಗಿರುತ್ತದೆ ಮತ್ತು ಬಳಕೆದಾರರಿಗೆ ಉತ್ತಮ ಅನುಭವ ನೀಡಲಾಗುತ್ತದೆ. ಅದರಲ್ಲಿ ಕಾಲ್ ರೆಕಾರ್ಡಿಂಗ್, ಪ್ರತಿಯೊಬ್ಬರ ವಯಕ್ತಿಕ ಪ್ರೊಫೈಲ್ ನೋಡಲು ಅವಕಾಶ ಮತ್ತು ಟ್ರೂಕಾಲರ್ ನಲ್ಲಿ ಯಾರು ನಿಮ್ಮ ಪ್ರೊಫೈಲ್ ನ್ನು ಪರೀಕ್ಷಿಸಿದ್ದಾರೆ ಎಂಬ ಮಾಹಿತಿಯನ್ನೂ ಕೂಡ ನೀಡಲಾಗುತ್ತದೆ.
ಇದೀಗ ಟ್ರೂಕಾಲರ್ ಹೊಸ ಚಂದಾದಾರಿಕೆಯ ಪ್ಲಾನ್ ನಲ್ಲಿ ಬಂದಿದ್ದು ಅದುವೇ ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಪ್ಲಾನ್.ಇಲ್ಲಿ ಪ್ರೀಮಿಯಂ ಚಂದಾದಾರಿಕೆಯ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ.

ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಎಂದರೇನು?
ಹೆಸರೇ ಸೂಚಿಸುವಂತೆ, ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಒಂದು ನೂತನವಾಗಿರುವ ಚಂದಾದಾರಿಕೆಯ ಪ್ಲಾನ್ ಆಗಿದ್ದು ವಾರ್ಷಿಕ 5,000 ರುಪಾಯಿ ಚಂದಾದಾರಿಕೆಯ ಮೊತ್ತವನ್ನು ನಿಗದಿಸಲಾಗಿದೆ. ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಟ್ರೂಕಾಲರ್ ಪ್ರೀಮಿಯಂನ ಎಲ್ಲಾ ವೈಶಿಷ್ಟ್ಯತೆಗಳನ್ನು ಆಫರ್ ಮಾಡುತ್ತದೆ ಮತ್ತು ಅದರ ಜೊತೆಗೆ ಕೆಲವು ಹೆಚ್ಚುವರಿ ವೈಶಿಷ್ಟ್ಯತೆಗಳ ಸೆಟ್ ನ್ನು ನೀಡುತ್ತದೆ. ಇದು ಕೆಲವರು ಅಗತ್ಯವೂ ಆಗಿದೆ ಮತ್ತು ಆಸಕ್ತಿದಾಯಕವೂ ಆಗಿದೆ. ಯಾರು ಗುಂಪಿನಿಂದ ಹೊರ ಇರಲು ಇಚ್ಛಿಸುತ್ತಿರುತ್ತಾರೋ ಅವರಿಗೆ ಅನುಕೂಲ ಮಾಡಿಕೊಡುತ್ತದೆ.
ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಚಂದಾದಾರರಿಗೆ ಚಿನ್ನದ ವರ್ಣದ ಕಾಲರ್ ಐಡಿ ಸಿಗುತ್ತದೆ. ಸಾಮಾನ್ಯ ಕಾಲರ್ ಐಡಿಯು ನೀಲಿ ವರ್ಣದ್ದಾಗಿರುತ್ತದೆ. ಒಂದು ವೇಳೆ ಟ್ರೂ ಕಾಲರ್ ಆಪ್ ಇನ್ಸ್ಟಾಲ್ ಮಾಡಿರುವ ಸ್ಮಾರ್ಟ್ ಫೋನ್ ನಲ್ಲಿ (ಆಂಡ್ರಾಯ್ಡ್ ಅಥವಾ ಐಓಎಸ್ ಎರಡರಲ್ಲೂ) ಕಾಲ್ ಮಾಡಿದಾಗ ಆ ಬಳಕೆದಾರರ ಕಾಲರ್ ಐಡಿಯು ಗೋಲ್ಡ್ ಅಥವಾ ಚಿನ್ನದ ಬಣ್ಣದಲ್ಲಿರುತ್ತದೆ.
ಗೋಲ್ಡ್ ಕಲರ್ರಿನ ಕಾಲರ್ ಐಡಿಯ ಜೊತೆಗೆ ಪ್ರೀಮಿಯಂ ಗೋಲ್ಡ್ ಚಂದಾದಾರರಿಗೆ ಹೆಚ್ಚಿನ ಆದ್ಯತೆಯು ಕಸ್ಟಮರ್ ಸಪೋರ್ಟ್ ನಿಂದ ಕ್ವೆರಿಗಳಿಗೆ ಉತ್ತರಿಸುವಾಗ ಮತ್ತು ಅವರ ಸಮಸ್ಯೆಯನ್ನು ಆಲಿಸುವಾರ ಟ್ರೂಕಾಲರ್ ನಿಂದ ಲಭ್ಯವಾಗುತ್ತದೆ.

ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಗೆ ಚಂದಾದಾರರಾಗುವುದು ಹೇಗೆ?
• ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಟ್ರೂಕಾಲರ್ ಆಪ್ ನ್ನು ಅಪ್ ಡೇಟ್ ಮಾಡಿಕೊಳ್ಳಿ.
• ಆಪ್ ನ್ನು ತೆರೆಯಿರಿ ಮತ್ತು ಮೆನು ಬಟನ್ ನ್ನು ಕ್ಲಿಕ್ಕಿಸಿ.
• ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಸಬ್ಸ್ಕ್ರೈಬ್ ನ್ನು ಸೆಲೆಕ್ಟ್ ಮಾಡಿ ಮತ್ತು ಪೇಮೆಂಟ್ ನ್ನು ಪೂರ್ಣ ಗೊಳಿಸಿ.
• ಇದೀಗ ನೀವು ಟ್ರೂಕಾಲರ್ ಗೋಲ್ಡ್ ಚಂದಾದಾರರಾಗಿರುತ್ತೀರಿ.

ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ನಲ್ಲಿ ನಮ್ಮ ಅನುಭವ :
ನಾವು ಕೂಡ ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಚಂದಾದಾರಿಕೆಯನ್ನು ಕಳೆದ 10 ದಿನಗಳಿಂದ ಪರೀಕ್ಷಿಸುತ್ತಿದ್ದೇವೆ. ಈಗಾಗಲೇ ಮೇಲೆ ತಿಳಿಸಿರುವಂತೆ ಇದುವರೆಗೂ ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮಾಡುತ್ತಿದೆ. ಆದರೆ ನೀವು ಕರೆ ಮಾಡಿದ ವ್ಯಕ್ತಿಗೂ ನಿಮ್ಮ ಗೋಲ್ಡ್ ಕಲರಿನ ಕಾಲರ್ ಐಡಿ ಸಿಗಬೇಕು ಎಂದಾದಲ್ಲಿ ಅವರು ಕೂಡ ತಮ್ಮ ಆಪ್ ನ್ನು ಅಪ್ ಡೇಟ್ ಮಾಡಿಕೊಂಡಿರಬೇಕಾಗುತ್ತದೆ.
ಒಟ್ಟಾರೆ ಯುಐ ಬಗ್ಗೆ ಹೇಳುವುದಾದರೆ ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಸ್ಟ್ಯಾಂಡರ್ಡ್ ಟ್ರೂಕಾಲರ್ ಯುಐ ನಂತೆಯೇ ಇದೆ. ಇದು ನಿಜಕ್ಕೂ ಒಳ್ಳೆಯದು. ಕಾಲ್ ರೆಕಾರ್ಡಿಂಗ್ ಮತ್ತು ನಿಮ್ಮ ಪ್ರೊಫೈಲ್ ನ್ನು ಯಾರು ವೀಕ್ಷಿಸಿದ್ದಾರೆ ಎಂಬ ಬಗೆಗಿನ ಮಾಹಿತಿಯು ಯಾವುದೇ ಸಮಸ್ಯೆಗಳಿಲ್ಲದೆಯೇ ಇದರಲ್ಲೂ ಕೂಡ ಕೆಲಸ ಮಾಡುತ್ತದೆ.
ನಾವು ಟ್ರೂ ಕಾಲರ್ ಬಳಸಿ ಮತ್ತೊಬ್ಬರಿಗೆ ಕರೆ ಮಾಡಲು ಬಳಸಿದಾಗ ಅವರು ಗೋಲ್ಡ್ ಕಾಲರ್ ಐಡಿ ಎಂದು ಗುರುತಿಸಲಿಲ್ಲ. ಹಾಗಾಗಿ ಇದರ ಬಗ್ಗೆ ಪ್ರಶ್ನೆ ಮಾಡಿದ್ದೆವು.
ಖಂಡಿತವಾಗಲೂ ಟ್ರೂಕಾಲರ್ ಪ್ರೀಮಿಯಂ ಗೋಲ್ಡ್ ಪ್ರಯೋಜನಕ್ಕೆ ಬರುವ ಆಡ್-ಆನ್ ಆಗಿದೆ. ಆದರೆ ಅದರ ಬೆಲೆ ಖಂಡಿತ ಎಲ್ಲರಿಗೂ ಕೈಗೆಟುವಂತಿಲ್ಲ.ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಇದು ಪ್ರಯೋಜನಕ್ಕೆ ಬರಬಹುದು ಅಷ್ಟೇ..


Click it and Unblock the Notifications