Home
Apps

ಟ್ರೂಕಾಲರ್‌ನಲ್ಲಿ ಇನ್ಮುಂದೆ ಕಾಲ್‌ ರೆಕಾರ್ಡಿಂಗ್ ಸಹ ಮಾಡಬಹುದು..!

By Gizbot Bureau

ಒಂದಾನೊಂದು ಕಾಲದಲ್ಲಿ ಅಪರಿಚಿತ ನಂಬರ್ ಗಳ ಕರೆಗಳು ಅದೆಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದವು. ಯಾರು ಎಂದು ಪ್ರಶ್ನಿಸಿದರೆ ಆ ಕಡೆಯಿಂದ ಉತ್ತರವಿಲ್ಲ, ಸುಮ್ಮನೆ ಅನಗತ್ಯವಾಗಿ ಏನೇನೋ ಮಾತನಾಡುವುದು. ಆದರೆ ಯಾವಾಗ ಟ್ರೂಕಾಲರ್ ಆಪ್ ಬಂತೋ ಅಂದಿನಿಂದ ಇಂತಹ ಸಮಸ್ಯೆಗಳಿಗೆ ಸಾಕಷ್ಟು ಕಡಿವಾಟ ಬಿತ್ತು.

ಟ್ರೂಕಾಲರ್‌ನಲ್ಲಿ ಇನ್ಮುಂದೆ ಕಾಲ್‌ ರೆಕಾರ್ಡಿಂಗ್ ಸಹ ಮಾಡಬಹುದು..!

ಕಂಡಕಂಡ ನಂಬರ್ ಗಳಿಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದವರು ಬಾಯಿ ಮುಚ್ಚಿಕೊಂಡರು. ಎಲ್ಲಿಂದ, ಯಾರು ಕರೆ ಮಾಡುತ್ತಿರುವುದು ಎಂಬ ವಿವರವನ್ನು ಟ್ರೂ ಕಾಲರ್ ಕರೆಯು ರಿಂಗಣಿಸಿದಾಗಲೇ ನೀಡಿಬಿಡುತ್ತದೆ. ನಮಗೆ ಪರಿಚಯಸ್ಥರಾಗಿದ್ದರೆ ರಿಸೀವ್ ಮಾಡಬಹುದು ಅಥವಾ ಅಗತ್ಯವಾದ ಫೋನ್ ಕರೆ ಅಂದರೆ ರಿಸೀವ್ ಮಾಡಬಹುದು ಇಲ್ಲದೇ ಇದ್ದರೆ ಸುಮ್ಮನೆ ಇಗ್ನೋರ್ ಮಾಡಲು ಕೂಡ ಅವಕಾಶವಿದೆ.

ಆದರೆ ಈ ಟ್ರೂ ಕಾಲರ್ ಈಗ ಒಂದು ಹೆಜ್ಜೆ ಮುಂದೆ ಹೋಗಿದೆ. ಹೌದು ನೀವು ಕರೆಗಳನ್ನು ಸ್ವೀಕಾರ ಮಾಡಿದರೆ ಆ ಕರೆಯಲ್ಲಿ ನಡೆದ ಸಂಭಾಷಣೆಯನ್ನು ಟ್ರೂ ಕಾಲರ್ ಸೇವ್ ಮಾಡುತ್ತದೆ ಮತ್ತು ನಿಮಗೆ ಭವಿಷ್ಯದ ಬಳಕೆಗೆ ನೆರವು ನೀಡುತ್ತದೆ.

ಬ್ಲಾಗ್‌ನಲ್ಲಿ ವಿವರಣೆ

ಬ್ಲಾಗ್‌ನಲ್ಲಿ ವಿವರಣೆ

ಟ್ರೂಕಾಲರ್, ಕಾಲರ್ ಐಡಿ ಆಪ್ ಆಗಿದ್ದು, ಸ್ವೀಡಿಷ್ ನ ಸಂಸ್ಥೆಯೊಂದು ತಯಾರಿಸಿದ ಆಪ್ ಆಗಿದೆ. ಇದುವರೆಗೆ ಯಾರು ಕರೆ ಮಾಡಿದ್ದು ಎಂಬ ವಿವರ ನೀಡುತ್ತಿದ್ದ ಈ ಕಾಲರ್ ಐಡಿ ಆಪ್ ಇನ್ನು ಮುಂದೆ ಕಾಲ್ ಗಳನ್ನು ರೆಕಾರ್ಡ್ ಮಾಡಲು ಕೂಡ ಅವಕಾಶ ನೀಡಲಿದೆಯಂತೆ. ಕಂಪೆನಿಯು ಈ ವಿಚಾರವನ್ನು ಒಂದು ಬೆಂಬಲಿತ ಪೇಜ್ ನಲ್ಲಿ ವಿವರಣೆ ನೀಡಿದ್ದು, ಯಾವ ವರ್ಷನ್ ನಲ್ಲಿ ಈ ಸೌಲಭ್ಯ ದೊರೆಯಲಿದೆ ಮತ್ತು ಇದು ಹೇಗೆ ಕೆಲಸ ನಿರ್ವಹಿಸಲಿದೆ ಎಂಬ ವಿವರಣೆಯನ್ನು ನೀಡಿದೆ.

ಗ್ರಾಹಕರ ಅಗತ್ಯತೆ ಪೂರೈಕೆ

ಗ್ರಾಹಕರ ಅಗತ್ಯತೆ ಪೂರೈಕೆ

ಕಾಲ್ ರೆಕಾರ್ಡಿಂಗ್ ಸೌಲಭ್ಯವನ್ನು ಅಂತಿಮವಾಗಿ ನಾವು ಒದಗಿಸಿದ್ದೇವೆ, ಹಲವು ದಿನಗಳಿಂದ ಬಳಕೆದಾರರು ಈ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರ ಸೌಲಭ್ಯಕ್ಕಾಗಿ ನಾವು ಯಾವಾಗಲೂ ತಯಾರಾಗಿದ್ದೇವೆ. ಅವರ ಅಗತ್ಯತೆಯನ್ನು ನಾವು ಪೂರೈಸಿದ್ದೇವೆ ಎಂದು ಹೇಳಿದೆ ಟ್ರೂಕಾಲ್ ಆಪ್ ಡೆವಲಪ್ ಮಾಡಿದ ಸಂಸ್ಥೆ.

ಕರೆಗಳಿಗೆ ಸಂಪೂರ್ಣ ಭದ್ರತೆ

ಕರೆಗಳಿಗೆ ಸಂಪೂರ್ಣ ಭದ್ರತೆ

ಎಲ್ಲಾ ವಾಯ್ಸ್ ಕಾಲ್ ಗಳು ಡಿವೈಸ್ ನಲ್ಲಿ ಸೇವ್ ಆಗುತ್ತದೆ ಮತ್ತು ಇವುಗಳು ಟ್ರೂಕಾಲರ್ ಸೇವೆಗಳಲ್ಲಿ ಅಪ್ ಲೋಡ್ ಆಗಿರುವುದಿಲ್ಲ.ಅಂದರೆ ಕಂಪೆನಿಯು ನಿಮ್ಮ ಫೋನ್ ಕರೆಗಳನ್ನು ಯಾವುದೇ ಕಾರಣಕ್ಕೂ ಓದುವುದಾಗಲಿ/ ಪ್ರೊಸೆಸ್ ಮಾಡುವುದಾಗಲಿ ಮಾಡುವುದಿಲ್ಲ. ಅಂದರೆ ನಿಮ್ಮ ಕರೆಗಳಿಗೆ ಸಂಪೂರ್ಣ ಭದ್ರತೆ ಇರುತ್ತದೆ. ಆದರೆ ಟ್ರೂ ಕಾಲರ್ ಕರೆಗಳನ್ನು ನಿಮ್ಮ ಡಿವೈಸ್ ನಲ್ಲಿ ಸೇವ್ ಮಾಡಲು ನಿಮ್ಮ ಬಳಿ ಸ್ಟೋರೇಜ್ ಆಕ್ಸಿಸ್ ನ ಅನುಮತಿಯನ್ನು ಕೋರುತ್ತದೆ.

ಯಾವ ಫೋನ್ ಗಳು ಬೆಂಬಲಿಸುತ್ತದೆ?

ಯಾವ ಫೋನ್ ಗಳು ಬೆಂಬಲಿಸುತ್ತದೆ?

ಆದರೆ ಈ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಾಗುವುದಿಲ್ಲ. ಟ್ರೂ ಕಾಲರ್ ತಿಳಿಸಿರುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಮುಂದಿನ ವರ್ಷನ್ ನ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತದೆ. ಆಶ್ಚರ್ಯಕಾರಿಯಾಗಿರುವ ವಿಚಾರವೆಂದರೆ ಆಂಡ್ರಾಯ್ಡ್ 7.1.1 ನಾಗಟ್ ಡಿವೈಸ್ ಗಳಲ್ಲೂ ಕೂಡ ಇದು ಕೆಲಸ ಮಾಡುತ್ತಿಲ್ಲ. ಇದರಲ್ಲಿ ಪ್ರಮುಖವಾಗಿ ನಕ್ಸಸ್ ಡಿವೈಸ್, ಪಿಕ್ಸಲ್ ಡಿವೈಸ್ ಮತ್ತು ಮೋಟೋ ಜಿ4 ಗಳಲ್ಲಿ ಪ್ರಮುಖವಾಗಿ ಟ್ರೂ ಕಾಲರ್ ನ ಈ ಸೇವೆ ಲಭ್ಯವಾಗುವುದಿಲ್ಲ.

14 ದಿನ ಟ್ರಯಲ್

14 ದಿನ ಟ್ರಯಲ್

ಕಂಪೆನಿಯು 14 ದಿನಗಳ ಟ್ರಯನ್ ರನ್ ಗೆ ಅವಕಾಶ ನೀಡುತ್ತದೆ. ನಂತರ ಗ್ರಾಹಕರು ಇದನ್ನು ಖರೀದಿಸಬಹುದು. ಬ್ಲೂಟೂತ್ ರೆಕಾರ್ಡಿಂಗ್ ಎಲ್ಲಾ ಸಮಯದಲ್ಲೂ ಕೆಲಸ ಮಾಡದೇ ಇರಬಹುದು. ಹಾಗಾಗಿ ಈ ಟ್ರೂ ಕಾಲರ್ ಖರೀದಿಸುವುದು ಲಾಭವೇ ಆಗಿದೆ. ಇದು ನೇರವಾಗಿ ಕರೆಗಳನ್ನು ರೆಕಾರ್ಡ್ ಮಾಡುವ ಸವಲತ್ತನ್ನು ಹೊಂದಿದೆ.

ಎಸ್‌ಡಿ ಕಾರ್ಡ್‌ಗೆ ಮೂವ್‌ ಮಾಡುವ ಸಾಧ್ಯತೆ ಇಲ್ಲ

ಎಸ್‌ಡಿ ಕಾರ್ಡ್‌ಗೆ ಮೂವ್‌ ಮಾಡುವ ಸಾಧ್ಯತೆ ಇಲ್ಲ

ಸದ್ಯ ನಿಮ್ಮ ಟ್ರೂಕಾಲರ್ ನಲ್ಲಿ ಈ ಆಯ್ಕೆ ಇಲ್ಲದೇ ಇರಬಹುದು. ಆದರೆ ಭವಿಷ್ಯದಲ್ಲಿ ಬರುತ್ತದೆ ಎಂಬುದನ್ನು ಖಾತ್ರಿ ಪಡಿಸಿದೆ ಟ್ರೂಕಾಲರ್ ಸಂಸ್ಥೆ. ಆದರೆ ಈ ರೆಕಾರ್ಡಿಂಗ್ ಗಳನ್ನು ನೀವು ಎಸ್ ಡಿ ಕಾರ್ಡ್ ಗೆ ಮೂವ್ ಮಾಡಲು ಅವಕಾಶವಿಲ್ಲದೇ ಇರುವ ಸಾಧ್ಯತೆ ಇದೆ. ಪೇಜ್ ನಲ್ಲಿ ಇನ್ನೂ ಒಂದು ಮಾಹಿತಿ ನೀಡಲಾಗಿದ್ದು ಆಪರೇಟಿಂಗ್ ಸಿಸ್ಟಮ್ ಅಪ್ ಗ್ರೇಡ್ ಆದಾಗ ಅದು ಈ ಟ್ರೂಕಾಲರ್ ವೈಶಿಷ್ಟ್ಯದ ಮೇಲೆ ಪರಿಣಾಮ ಬೀರಬಹುದು. ಅಂತಹ ಸಂದರ್ಬದಲ್ಲಿ ನೀವೂ ಟ್ರೂಕಾಲರ್ ನ್ನು ಅನ್ ಇನ್ಸ್ಟಾಲ್ ಮಾಡಿ ಮತ್ತೆ ಪುನಃ ರೀಇನ್ಸ್ಟಾಲ್ ಮಾಡಿದರೆ ಸರಿಯಾಗಿ ವರ್ಕ್ ಆಗುತ್ತದೆ ಎಂದು ತಿಳಿಸಲಾಗಿದೆ.

ಅಪ್‌ಡೇಟ್‌ ಮಾಡಿ

ಅಪ್‌ಡೇಟ್‌ ಮಾಡಿ

ಇನ್ನು ಟ್ರೂಕಾಲರ್ ನ ಅಪ್ ಡೇಟೆಡ್ ಆಪ್ ನಲ್ಲಿ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ನೀವು ಈ ವೈಶಿಷ್ಟ್ಯವನ್ನು ಪಡೆದುಕೊಳ್ಳಬಹುದು. ಮೂರು ಲೈನಿನ ಮೆನುವನ್ನು ಕ್ಲಿಕ್ಕಿಸಿ. ಅದು ನಿಮ್ಮ ಆಪ್ ನ ಮೇಲ್ಬಾಗದ ಎಡಮೂಲೆಯಲ್ಲಿ ಇರುತ್ತದೆ. ಟ್ರೂಕಾಲರ್ ಕಾಲ್ ರೆಕಾರ್ಡಿಂಗ್ಸ್ ನ ಸೆಟ್ಟಿಂಗ್ಸ್ ನ್ನುತೆರೆಯಿರಿ ಮತ್ತು " ರೆಕಾರ್ಡಿಂಗ್ ಕಾಲ್ಸ್" ನ್ನು ಅನೇಬಲ್ ಮಾಡಿ. ಇಷ್ಟು ದಿನ ಕೇವಲ ಕರೆಗಳನ್ನು ವಿವರಗಳನ್ನು ನೀಡುತ್ತಿದ್ದ ಟ್ರೂಕಾಲರ್ ಇನ್ನು ಮುಂದೆ ಕರೆಗಳ ಮಾತಿನ ವಿವರವನ್ನು ದಾಖಲಿಸಲು ನೆರವಾಗುತ್ತದೆ.

Best Mobiles in India

English summary
Truecaller will now let users record calls, but there's a catch. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+