Home
Apps

ಭಾರತಕ್ಕೆ ಬಂತು ಟ್ವಿಟರ್ ಲೈಟ್..!

By Gizbot Bureau

ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಡಾಟಾ ಫ್ರೆಂಡ್ಲಿ ಟ್ವೀಟರ್ ಲೈಟ್ ಆಂಡ್ರಾಯ್ಡ್ ಆಪ್ ನ್ನು ಸುಮಾರು 21 ದೇಶಗಳಲ್ಲಿ ಬಿಡುಗಡೆಗೊಳಿಸಿದ್ದು, ಭಾರತದಲ್ಲೂ ಕೂಡ ಅದು ಲಭ್ಯವಿದೆ. ಆಸಕ್ತರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.

ಬಿಲ್ಟ್ ಇನ್ 2ಜಿ ಮತ್ತು 3ಜಿ ನೆಟ್ ವರ್ಕ್ ನ್ನು ಭಾರತದ ಹಲವು ಭಾಗಗಳಲ್ಲಿ ಈಗಲೂ ಬಳಕೆ ಮಾಡಲಾಗುತ್ತದೆ. ಟ್ವೀಟರ್ ಲೈಟ್ ನ ಇನ್ಸ್ಟಾಲ್ ಸೈಜ್ ಕೇವಲ 3ಎಂಬಿ. ಇದು ಡಾಟಾ ಸೇವ್ ಮಾಡುತ್ತದೆ ಮತ್ತು ಜಾಗವನ್ನೂ ಉಳಿಸುತ್ತದೆ. ಅಷ್ಟೇ ಯಾಕೆ ಬಹಳ ವೇಗವಾಗಿ ಕೆಲಸ ಮಾಡುತ್ತದೆ ಜೊತೆಗೆ ನೆಟ್ ವರ್ಕ್ ಸಮಸ್ಯೆ ಇರುವ ಜಾಗಗಳಲ್ಲೂ ಕೂಡ ಟ್ವೀಟರ್ ಬಳಕೆಗೆ ಅನುವು ಮಾಡಿಕೊಡುತ್ತದೆ.

ಭಾರತಕ್ಕೆ ಬಂತು ಟ್ವಿಟರ್ ಲೈಟ್..!

“ ಬಳಕೆದಾರರ ಅನುಭವಕ್ಕೆ ಮೌಲ್ಯವನ್ನು ಸೇರಿಸಲು ಟ್ವೀಟರ್ ಬದ್ಧವಾಗಿದೆ ಮತ್ತು ಅವರಿಗೆ ಉತ್ತಮ ಅನುಭವ ಜೊತೆಗೆ ಅರ್ಥಪೂರ್ಣವಾಗಿ ಟ್ವೀಟರ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಟ್ವೀಟರ್ ಅನುವು ಮಾಡಿಕೊಡುತ್ತದೆ” ಎಂದು ಟ್ವೀಟರ್ ಇಂಡಿಯಾದ ಮುಖ್ಯಸ್ಥರಾಗಿರುವ ಮಹಿಮಾ ಕೌಲ್ ತಿಳಿಸಿದ್ದಾರೆ.

ಸದ್ಯ ಟ್ವೀಟರ್ ಲೈಟ್ ಸುಮಾರು 45 ದೇಶಗಳಲ್ಲಿ ಬಿಡುಗಡೆಗೊಂಡಿದ್ದು ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ. ಫಿಲಿಫೈನ್ಸ್ ನಲ್ಲಿ ಯಶಸ್ವಿ ಕಂಡ ನಂತರ ಟ್ವೀಟರ್ ಈ ಡಾಟಾ ಸ್ನೇಹಿಯಾಗಿರುವ ಲೈಟ್ ಆಂಡ್ರಾಯ್ಡ್ ಆಪ್ ನ್ನು ಡಿಸೆಂಬರ್ 2017 ರಂದು 24 ದೇಶಗಳಲ್ಲಿ ಬಿಡುಗಡೆಗೊಳಿಸಿತ್ತು.

2ಜಿ ಅಥವಾ 3ಜಿ ಯಲ್ಲಿ ಟ್ವೀಟರ್ ಬಳಕೆ ಮಾಡುವಾಗಲೂ ಕೂಡ ಕಂಟೆಂಟ್ ಗಳು ಶೀಘ್ರವಾಗಿ ಡೌನ್ ಲೋಡ್ ಆಗುತ್ತದೆ. ಯಾವುದೇ ನೆಟ್ ವರ್ಕ್ ನಲ್ಲೇ ಇರಲಿ ಟ್ವೀಟರ್ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಈ ಟ್ವೀಟರ್ ಲೈಟ್ ನ್ನು ಬಿಡುಗಡೆಗೊಳಿಸಲಾಗಿದೆ. ಯಾವ ಚಿತ್ರ ಅಥವಾ ವೀಡಿಯೋ ಡೌನ್ ಲೋಡ್ ಆಗಬೇಕು ಎಂಬ ಬಗ್ಗೆ ಬಳಕೆದಾರರು ನಿರ್ಧರಿಸಿಕೊಳ್ಳಬಹುದು.

ಭಾರತಕ್ಕೆ ಬಂತು ಟ್ವಿಟರ್ ಲೈಟ್..!

ಇದರಲ್ಲಿ ನೀವು ಯಾವುದೇ ಸಮಯದಲ್ಲಿ ಬೇಕಿದ್ದರೂ ಲೋಡ್ ಇಮೇಜ್ ಅಥವಾ ಲೋಡ್ ವೀಡಿಯೋ ಕ್ಲಿಕ್ಕಿಸಿ ಕಂಟೆಂಟ್ ನ್ನು ಲೋಡ್ ಮಾಡಬಹುದು ಮತ್ತು ಡಾಟಾ, ಹಣವನ್ನು ಉಳಿತಾಯ ಮಾಡಬಹುದು ಎನ್ನುತ್ತದೆ ಟ್ವೀಟರ್. ಇದರಲ್ಲಿರುವ ಬುಕ್ ಮಾರ್ಕ್ ಸೌಲಭ್ಯವು ಟ್ವೀಟ್ ಗಳನ್ನು ಸೇವ್ ಮಾಡಿಕೊಂಡು ಮುಂದೊಂದು ದಿನ ಬಳಕೆ ಮಾಡಲು ನೆರವು ನೀಡುತ್ತದೆ.

ಟ್ವೀಟರ್ ಲೈಟ್ ಫುಶ್ ನೋಟಿಫಿಕೇಷನ್ ಗೆ ಬೆಂಬಲ ನೀಡುತ್ತದೆ. ಇದರಿಂದ ಜಗತ್ತಿನ ಆಗುಹೋಗುಗಳನ್ನು ಟ್ವೀಟರ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸದ್ಯ ಈ ಮೈಕ್ರೋ ಬ್ಲಾಗ್ ನಲ್ಲಿ 335 ಮಿಲಿಯನ್ ಬಳಕೆದಾರರಿದ್ದಾರೆ. ನೈಟ್ ಮೋಡ್ ವೈಶಿಷ್ಟ್ಯತೆಯು ಡಾರ್ಕ್ ಆಗಿರುವ ಥೀಮ್ ನ್ನು ಒದಗಿಸುತ್ತದೆ ಹಾಗಾಗಿ ಇದು ಕಣ್ಣುಗಳಿಗೆ ಸುಲಭವಾಗುತ್ತದೆ ಮತ್ತು ಹಗಲಿನಲ್ಲಿ ಜೊತೆಗೆ ರಾತ್ರಿಯಲ್ಲಿ ಯಾವುದೇ ಸಮಯದಲ್ಲಿ ಉತ್ತಮ ರೀತಿಯ ಓದುಗಾರಿಕೆಗೆ ಸಹಕಾರಿಯಾಗಿದೆ. ಒಟ್ಟಾರೆ ಟ್ವೀಟರ್ ಲೈಟ್ ಹಳ್ಳಿಗಾಡು ಪ್ರದೇಶದ ಜನರಿಗೂ ಟ್ವೀಟರ್ ಬಳಕೆ ಮಾಡಲು ಹೆಚ್ಚು ನೆರವಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ.

Best Mobiles in India

English summary
Twitter Lite comes to India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+