Home
Apps

ಕಾಫಿ ಫಸಲು ಹೆಚ್ಚಿಸುವುದಕ್ಕೆ ಬಂದ ಎರಡು ಸ್ಮಾರ್ಟ್ ಫೋನ್ ಆಪ್ ಗಳು

By Gizbot Bureau

ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಕಾಫಿ ಕುಡಿದರೆ ಮಾತ್ರ ರಿಫ್ರೆಶ್ ಆಗುವುದು ಹೆಚ್ಚಿನವರ ಅಭ್ಯಾ. ನೀವೂ ಕೂಡ ಕಾಫಿ ಪ್ರಿಯರು ಮತ್ತು ಗೆಜೆಟ್ ಪ್ರಿಯರು ಆಗಿದ್ದಲ್ಲಿ ಈ ಲೇಖನವನ್ನು ತಪ್ಪದೇ ಓದಬೇಕು. ಅಂತದ್ದೇನಿದೆ ಎಂದು ಕೇಳುತ್ತಿದ್ದೀರಾ. ಕಾಫಿ ಫಸಲು ಹೆಚ್ಚಿಸುವ ಆಪ್!

ಕಾಫಿ ಫಸಲು ಹೆಚ್ಚಿಸುವುದಕ್ಕೆ ಬಂದ ಎರಡು ಸ್ಮಾರ್ಟ್ ಫೋನ್ ಆಪ್ ಗಳು

ಏನಂದ್ರಿ ಕಾಫಿ ಬೆಳೆ ಅಧಿಕಗೊಳಿಸುವುದಕ್ಕೆ ಮೊಬೈಲ್ ಆಪ್? ತಮಾಷೆ ಮಾಡ್ತಿದ್ದೀರಾ ಅಂತ ಕೇಳಬೇಡಿ. ನಾವು ನಿಜವಾಗಲೂ ಸತ್ಯವನ್ನೇ ಹೇಳುತ್ತಿದ್ದೇವೆ. ರಾಜ್ಯಾದ್ಯಾಂತ ಕಾಫಿ ಫಸಲು ಕೈಕೊಟ್ಟು ರೈತರು ಚಿಂತಾಕ್ರಾಂತರಾಗಿರುವ ಈ ಸಂದರ್ಬದಲ್ಲಿ ನಾವು ಕಾಫಿ ಫಸಲು ಹೆಚ್ಚಿಸಲು ಆಫ್ ಇದೆ ಅಂತ ಹೇಳ್ತಿರೋದು ನಿಮಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ...

ಆದರೆ ಕಾಮರ್ಸ್ ಮತ್ತು ಇಂಡಸ್ಟ್ರೀ ಮಿನಿಸ್ಟರ್ ಆಗಿರುವ ಸುರೇಶ್ ಪ್ರಭು ಎರಡು ಹೊಸ ಮೊಬೈಲ್ ಆಪ್ ಗಳನ್ನು ಬಿಡುಗಡೆಗೊಳಿಸಿದ್ದಾರೆ. ಅದು ಕಾಫಿ ಬೆಳೆಯ ಇಳುವರಿ ಹೆಚ್ಚಳ ಮತ್ತು ಕಾಫಿಯ ಗುಣಮಟ್ಟ ಅಧಿಕಗೊಳಿಸುವ ಮೊಬೈಲ್ ಆಪ್ ಆಗಿದ್ದು ರೈತರಿಗೆ ಅನುಕೂಲ ಮಾಡಿಕೊಡಲಿದೆ.

ಆ ಎರಡು ಆಪ್ ಗಳ ಹೆಸರು ಇಂಡಿಯಾ ಕಾಫಿ ಫೀಲ್ಡ್ ಫೋರ್ಸ್ ಆಪ್ ಮತ್ತು ಕಾಫಿ ಕೃಷಿತರಂಗ –ಡಿಜಿಟಲ್ ಮೊಬೈಲ್ ಎಕ್ಸ್ ಟೆಷನ್ ಸರ್ವೀಸ್ ಫಾರ್ ಕಾಫಿ ಸ್ಟೇಕ್ ಹೋಲ್ಡರ್ಸ್.

ಈ ಆಪ್ ಗಳನ್ನು ಬಿಡುಗಡೆಗೊಳಿಸಿ ಮತಾತನಾಡಿರುವ ಸುರೇಶ್ ಫ್ರಭು ಇವು ಕಾಫಿ ಬೆಳೆಗಾರರು ತಂತ್ರಜ್ಞಾನವನ್ನು ಬಳಕೆ ಮಾಡಿ ಮತ್ತು ಕಾಫಿ ಬೆಳೆಯುವ ರೈತರು ಆ ಮೂಲಕ ಇದರ ಪ್ರೊಡಕ್ಷನ್ ನ್ನು ಅಧಿಕಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಫಿ ಕೃಷಿತರಂಗಾ ಸೇವೆಗಳು ಉತ್ಪಾದನೆಯನ್ನು ಹೆಚ್ಚಿಸುವಿಕೆ, ಲಾಭವನ್ನು ಅಧಿಕಗೊಳಿಸಿಕೊಳ್ಳುವುದು ಹೇಗೆ ಮತ್ತು ಪರಿಸರ ಸುಸ್ಥಿರತೆ ಹೆಚ್ಚಿಸಲು ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತವೆ.

ಈ ಅಪ್ಲಿಕೇಶನ್ ಗಳು ಕಾಫಿ ಬೆಳೆಗಾರರ ಡಿಜಿಟಲೈಸೇಷನ್ ಮತ್ತು ಜಿಯೋ ಟ್ಯಾಗಿಂಗ್ ಮತ್ತು ಪ್ಲಾಂಟೇಶನ್ ವಿವರಗಳನ್ನು ಸಂಗ್ರಹಿಸುವ ಎಸ್ಟೇಟ್ ಗಳಂತಹ ಕ್ಷೇತ್ರ ಚಟುವಟಿಕೆಗಳ ಸಂಪೂರ್ಣ ಪ್ರಕ್ರಿಯೆಯನ್ನು ಸರಾಗಗೊಳಿಸುವ ಪರಿಹಾರವನ್ನು ಒದಗಿಸುತ್ತವೆ.

ಡಾಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಬ್ಲಾಕ್ ಚೈನ್ ನ್ನು ಅವರು ಪ್ರಾರಂಭಿಸಿದ್ದು ಅತಿಯಾದ ಮಳೆ, ಕೀಟಗಳ ಸಮಸ್ಯೆ, ಕಾಯಿಲೆ ಇತ್ಯಾದಿಗಳಿಂದ ಕಾಫಿ ಇಳುವರಿಯಲ್ಲಿ ಆಗುವ ಸಮಸ್ಯೆ ಬಗ್ಗೆ ಪರಿಹಾರ ಕಂಡುಕೊಳ್ಳುವ ಯೋಜನೆ ಇದಾಗಿದೆ.

ಕಾಫಿಯನ್ನು ಭಾರತದಲ್ಲಿ ಸುಮಾರು 4.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು ಸುಮಾರು 3.66 ಲಕ್ಷ ರೈತರು ಬೆಳೆಯುತ್ತಿದ್ದಾರೆ. ಇದರ ಬೆಳೆಗಾರಿಕೆಯು ಕರ್ನಾಟಕದಲ್ಲಿ ಶೇಕಡಾ 54, ಕೇರಳದಲ್ಲಿ ಶೇಕಡಾ 19, ತಮಿಳುನಾಡಿನಲ್ಲಿ ಶೇಕಡಾ 8 ರಷ್ಟು ನಡೆಯುತ್ತದೆ. ಅಷ್ಟೇ ಅಲ್ಲ ಆಂದ್ರಪ್ರದೇಶ ಮತ್ತು ಓರಿಸ್ಸಾ ದಲ್ಲಿ ಶೇಕಡಾ 17.2 ರಷ್ಟು ಮತ್ತು ಈಶಾನ್ಯ ರಾಜ್ಯಗಳಲ್ಲಿ ಶೇಕಡಾ 1.8 ರಷ್ಟು ಬೆಳೆಯಲಾಗುತ್ತದೆ.

ಇನ್ನು ಕೇರಳದಲ್ಲಿ ಪ್ರವಾಹದಿಂದಾಗಿ ಕಾಫಿ ನಷ್ಟವಾಗಿರುವ ಬಗ್ಗೆ ಕಾಫಿ ಬೋರ್ಡ್ ಸಮೀಕ್ಷೆಯನ್ನು ನಡೆಸಲಿದೆ ಮತ್ತು ನಷ್ಟ ಅನುಭವಿಸಿರುವವರಿಗೆ ಸೂಕ್ತ ಸಹಾಯವನ್ನು ನೀಡುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಚಿಂತನೆ ನಡೆಸಲಿದ್ದಾರೆ. ಇನ್ನು ಈ ಆಪ್ ಗಳಿಂದ ಅದೆಷ್ಟು ರೈತರು ಸಹಾಯ ಪಡೆಯುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

Best Mobiles in India

English summary
Two smartphone apps launched for coffee growers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+