Subscribe to Gizbot

"ನಮ್ಮ ಟೈಗರ್" ಆಪ್ ಸೇವೆ ಶುರು!..ಕ್ಯಾಬ್ ಸೇವೆಯ ಬೆಲೆಗಳು ಇಷ್ಟು!!

Written By:

ಓಲಾ ಹಾಗೂ ಉಬರ್ ಕ್ಯಾಬ್ ಕಂಪನಿಗಳ ವಿರುದ್ಧ ತಿರುಗಿಬಿದ್ದಿದ್ದ ಚಾಲಕರು ಸಂಘಟಿತರಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಚಿಸಿಕೊಂಡಿರುವ "ನಮ್ಮ ಟೈಗರ್" ಆಪ್ ಸೇವೆಗೆ ಚಾಲನೆ ನೀಡಲಾಗಿದೆ ಮತ್ತು ಮೊದಲ ಬಾರಿ "ನಮ್ಮ ಟೈಗರ್" ಕ್ಯಾಬ್ ಸೇವೆಯ ಬೆಲೆಗಳ ಮಾಹಿತಿ ಸಹ ಹೊರಬಿದ್ದಿದೆ.!!

ಕೆಲವೇ ದಿನಗಳ ಹಿಂದಷ್ಟೆ ಡ್ರೈವರ್‌ಗಳಿಗಾಗಿ ಇದ್ದ ನಮ್ಮ ಆಪ್ ಬಿಡುಗಡೆ ಮಾಡಿದ್ದ "ನಮ್ಮ ಟೈಗರ್" ಆಪ್ ತಂಡ ಇದೀಗ ಗ್ರಾಹಕರು ಬಳಸುವ ಆಪ್‌ ಕೂಡ ಬಿಡುಗಡೆ ಮಾಡಿದ್ದು ಕ್ಯಾಬ್ ಸೇವೆಯೂ ಕೂಡ ಶುರುವಾಗಿದೆ.! ಹಾಗಾದರೆ, ನಮ್ಮ ಟೈಗರ್ ಸೇವೆಯ ಬೆಲೆ ಎಷ್ಟು ಎಂಬುದನ್ನು ಮತ್ತು ಇನ್ನಿತರ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐದು ಸಾವಿರ ಚಾಲಕರು!!

ಐದು ಸಾವಿರ ಚಾಲಕರು!!

ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಚಿಸಿಕೊಂಡಿರುವ "ನಮ್ಮ ಟೈಗರ್" ಆಪ್ ಸೇವೆಗೆ ಮೊದಲ ಹಂತದಲ್ಲಿ ಐದು ಸಾವಿರ ಚಾಲಕರನ್ನು ನೋಂದಾಯಿಸಿಕೊಳ್ಳಲಾಗಿದೆ.ಇನ್ನು ಹೆಚ್ಚಿನ ಚಾಲಕರು ಶೀಘ್ರದಲ್ಲಿಯೇ ಟೈಗರ್ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.!!

ಕ್ಯಾಬ್ ಸೇವೆ ಬೆಲೆ ಹೆಚ್ಚು!!

ಕ್ಯಾಬ್ ಸೇವೆ ಬೆಲೆ ಹೆಚ್ಚು!!

ಡ್ರೈವರ್‌ಗಳು ಮತ್ತು ಗ್ರಾಹಕರೀರ್ವರ ಯೋಗಕ್ಷೇಮವನ್ನು ಹೊಂದಿರುವ ಟೈಗರ್ ಕ್ಯಾಬ್‌ನಲ್ಲಿ ಗುಣಮಟ್ಟಕ್ಕೆ ಹಾಗೂ ಜನರ ಸೇವೆಗೆ ಆದ್ಯತೆ ನೀಡಲಾಗಿದೆ ಎಂದು ಚಾಲಕರ ಮುಖಂಡ ತನ್ವೀರ್ ಪಾಷಾ ಹೇಳಿದ್ದಾರೆ. ಹಾಗಾಗಿ, ಟೈಗರ್ ಕ್ಯಾಬ್ ಸೇವೆಗಳು ಓಲಾ ಮತ್ತು ಉಬರ್‌ಗಳಿಗಿಂತ ಸ್ವಲ್ಪ ಹೆಚ್ಚಿದೆ.!!

ಟೈಗರ್ ಕ್ಯಾಬ್ ಸೇವೆ ಬೆಲೆ ಎಷ್ಟು?

ಟೈಗರ್ ಕ್ಯಾಬ್ ಸೇವೆ ಬೆಲೆ ಎಷ್ಟು?

ನಮ್ಮ ಟೈಗರ್" ಆಪ್‌ ಮೂಲಕ ಸದ್ಯಕ್ಕೆ ಎರಡು ಬಗೆಯ ಕ್ಯಾಬ್‌ಗಳನ್ನು ಪರಿಚಯಿಸಲಾಗಿದ್ದು, ಮಿನಿ ಕ್ಯಾಬ್‌ಗೆ ಪ್ರತಿ ಕಿ.ಮೀ.ಗೆ 12.50 ರೂ. ಸೆಡಾನ್‌ನಲ್ಲಿ 14.50 ರೂ. ಹಾಗೂ ಎಸ್‌ಯುವಿನಲ್ಲಿ 18.50 ರೂ. ದರವನ್ನು ನಿಗದಿಪಡಿಸಲಾಗಿದೆ.! ಆದರೆ, ಓಲಾ, ಉಬರ್‌ನ ಹಲವು ವಿಭಾಗಗಳಂತೆ ಕಿ.ಮೀ.ಗೆ 6 ರೂ., 8 ರೂ. ಮತ್ತು 10 ರೂ. ದರವಿದೆ.!!

ರಸ್ತೆಯಲ್ಲಿ ನಿಂತು ಲಿಫ್ಟ್‌ ಕೇಳಬಹದು!!

ರಸ್ತೆಯಲ್ಲಿ ನಿಂತು ಲಿಫ್ಟ್‌ ಕೇಳಬಹದು!!

ರಸ್ತೆಯಲ್ಲಿ ನಿಂತು ಲಿಫ್ಟ್‌ ನೀಡಿ ಎಂದು ಕೇಳಿದರೂ ಸೇವೆ ನೀಡಬೇಕು ಎಂದು ಟೈಗರ್ ಕ್ಯಾಬ್ ತಂಡ ತೀರ್ಮಾನಿಸಿದೆ. ಆದರೆ, ಸದ್ಯಕ್ಕೆ ಆಪ್ ಮೂಲಕವೇ ಕ್ಯಾಬ್ ಬುಕ್ಕಿಂಗ್ ಮಾಡಬಹುದಾಗಿದ್ದು, ಕೆಲ ತಿಂಗಳು ಕಳೆದ ನಂತರ ಇಂತಹ ಸೇವೆಯನ್ನು ಪರಿಚಯಿಸಲಾಗುತ್ತದೆ.!!

ಓದಿರಿ:ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ, ಸಿಸಿಟಿವಿ ಮತ್ತು ಡ್ರೋಣ್ ರಕ್ಷಣೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
TYGR cab comes to town to compete with Uber, Ola. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot