Home
Apps

Whatsapp: ವಾಟ್ಸಾಪ್‌ನಲ್ಲೂ ಉಬರ್ ಕ್ಯಾಬ್ ಬುಕ್ ಮಾಡಬಹುದು! ಹೇಗೆ ಗೊತ್ತಾ?

Whatsapp Uber Cab Booking: ತಂತ್ರಜ್ಞಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀವು, ಎಲ್ಲಿಗಾದರೂ ಹೋಗಲು ಕ್ಯಾಬ್ ಬುಕ್ ಮಾಡಲು ಬಯಸಿದರೆ, ಆಯಾ ಕ್ಯಾಬ್ ಮೊಬೈಲ್ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿರುತ್ತದೆ. ಅದರ ಮೂಲಕವೇ ನೀವು, ಕ್ಯಾಬ್ ಬುಕ್ ಮಾಡಬಹುದು. ಆದರೆ, ವಾಟ್ಸಾಪ್‌ (WhatsApp) ಮೂಲಕ ಉಬರ್ ಕ್ಯಾಪ್ ಬುಕ್ ಮಾಡಬಹುದು. ಈ ಸೌಲಭ್ಯವನ್ನು ವಾಟ್ಸಾಪ್ ತಂದಿದೆ. ಹಾಗಿದ್ರೆ, ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯೋಣ ಬನ್ನಿ.

ನಿಮ್ಮ ಫೋನಿನಲ್ಲಿ ಸ್ಟೋರೇಜ್ ಅಥವಾ ಇನ್ನಿತರ ಕಾರಣಗಳಿಂದ ಹೆಚ್ಚು ಆಪ್‌ಗಳನ್ನು ಬಳಸುಸುವುದು ತುಸ ಕಷ್ಟ. ಅಂತಹ ಸಂದರ್ಭಗಳಲ್ಲಿ, ಕ್ಯಾಬ್ ಬುಕ್ ಮಾಡಲು ಪ್ರತಿ ಬಾರಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ಕಿರಿಕಿರಿ ಅನಿಸುತ್ತದೆ. ಆದರೆ, ನಿಮ್ಮ ಫೋನ್‌ನಲ್ಲಿ ಕ್ಯಾಬ್ ಸೇವೆಗಾಗಿ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡುವ ಅಗತ್ಯವಿಲ್ಲ. ಅದು ಹೇಗೆ ಎಂಬ ಟ್ರಿಕ್ ಇಲ್ಲಿದೆ. ಹೌದು, ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ ಮಾಡಬಹುದು. ಇದಕ್ಕಾಗಿ ನೀವು ವಾಟ್ಸಾಪ್‌ ಮೂಲಕ ಒಂದು ನಂಬರ್‌ಗೆ ಮೆಸೇಜ್‌ (ಸಂದೇಶ) ಕಳುಹಿಸಬೇಕು. ವಾಟ್ಸಾಪ್‌ ಮೂಲಕ ಕ್ಯಾಬ್ ಬುಕ್ ಮಾಡುವ ಈ ಟ್ರಿಕ್ ತಿಳಿಯಲು ಮುಂದೆ ಓದಿ.

Whatsapp: ವಾಟ್ಸಾಪ್‌ನಲ್ಲೂ ಉಬರ್ ಕ್ಯಾಬ್ ಬುಕ್ ಮಾಡಬಹುದು! ಹೇಗೆ ಗೊತ್ತಾ?

ವಾಟ್ಸಾಪ್ ಮೂಲಕ ಉಬರ್ ಕ್ಯಾಬ್‌ ಬುಕ್ ಮಾಡುವ ಸುಲಭ ಟ್ರಿಕ್

* ನೀವು ವಾಟ್ಸಾಪ್ ಮೂಲಕ ಎಲ್ಲಿ ಬೇಕಾದರೂ ಕ್ಯಾಬ್ ಬುಕ್ ಮಾಡಬಹುದು. ನೀವು ಇದಕ್ಕಾಗಿ ನಿಮ್ಮ ಫೋನಿನಲ್ಲಿ 7292000002 ನಂಬರ್‌ ಸೇವ್ ಮಾಡಬೇಕು.

* ಈ ನಂಬರ್ ಸೇವ್‌ ಮಾಡಿದ ಬಳಿಕ, ನಿಮ್ಮ ಫೋನಿನಲ್ಲಿ ವಾಟ್ಸಾಪ್‌ ಅನ್ನು ಓಪನ್ ಮಾಡಿ. ಮತ್ತು ರಿಫ್ರೆಶ್ ಮಾಡಿ. ಹೊಸದಾಗಿ ಸೇವ್ ಮಾಡಿದ ನಂಬರ್‌ ನಿಮಗೆ ಇಲ್ಲಿ ಕಾಣುತ್ತದೆ. ಇದರ ನಂತರ, ಚಾಟ್ ವಿಭಾಗವನ್ನು ತೆರೆಯಿರಿ ಮತ್ತು ಚಾಟ್‌ನಲ್ಲಿ ಹಾಯ್ ಎಂದು ಮೆಸೇಜ್ ಕಳುಹಿಸಿ.

* ಆಗ ಭಾಷೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಭಾಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬಹುದು. ಇದರ ನಂತರ ನಿಮ್ಮ ಸ್ಥಳವನ್ನು ನಮೂದಿಸಿ. ಪಿಕಪ್ ಸ್ಥಳವನ್ನು ಆಯ್ಕೆಮಾಡಿ. ಇದರ ನಂತರ ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಲಾಗುತ್ತದೆ.

* ನಿಮ್ಮ ವಾಟ್ಸಾಪ್‌ನಲ್ಲಿ ಚಾಲಕರ ವಿವರಗಳು ಬರುತ್ತವೆ. ಇದು ಶೇರ್ ಪಿನ್, ಕಾಂಟಾಕ್ಟ್‌ ನಂಬರ್ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ. ಚಾಲಕನಿಗೆ ಪಿನ್ ಹೇಳುವ ಮೂಲಕ ನಿಮ್ಮ ಪ್ರಯಾಣವನ್ನು ನೀವು ಪ್ರಾರಂಭಿಸಬಹುದು.

ಈ ವಿಧಾನದ ಮೂಲಕವೂ ಬುಕ್ ಮಾಡಬಹುದು!

ನೀವು ಹಾಯ್ ಎಂಬ ಮೆಸೇಜ್ ಕಳುಹಿಸಿದ ನಂತರ, ಯಾವುದೇ ಉತ್ತರವನ್ನು ಪಡೆಯದಿದ್ದರೆ ಚಿಂತಿಸಬೇಡಿ. ಈ ಸೇವೆಯು ವಿವಿಧ ಫೋನ್‌ಗಳಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತದೆ. ನಿಮಗೆ ಲಾಗಿನ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಗಿನ್ ಅನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ. ನಿಮ್ಮ ನೋಂದಾಯಿತ ಸಂಖ್ಯೆಗೆ ಒಟಿಪಿ (OTP) ಕಳುಹಿಸಲಾಗುತ್ತದೆ. ಒಟಿಪಿ ಅನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಇದರ ನಂತರ ನೀವು ಹೊಸದಾಗಿ ಕ್ಯಾಬ್ ಬುಕ್ ಮಾಡಬಹುದು.

ಒಟ್ಟಾರೆ, ತಂತ್ರಜ್ಞಾನ ಮುಂದುವರಿದಂತೆ ನೀವು ಕುಳಿತಲ್ಲಿಯೇ ಅದರ ಲಾಭ ಪಡೆಯಬಹುದು. ಇದು ಪ್ರಯೋಜನದಂತೆಯೇ ಕೆಲವು ಅಪಾಯಗಳನ್ನು ಉಂಟು ಮಾಡಬಹುದು. ಹೀಗಾಗಿ, ನೀವು ಎಚ್ಚರಿಕೆಯಿಂದ ಈ ಆಪ್‌ಗಳನ್ನು ಬಳಸಬೇಕಾಗುತ್ತದೆ. ನೀವು ಸಹ ಒಮ್ಮೆ ವಾಟ್ಸಾಪ್ ಮೂಲಕವೂ ಉಬರ್ ಕ್ಯಾಬ್ ಬುಕ್ ಮಾಡಿ. ಇದರ ಅನುಭವದ ಬಗ್ಗೆ ನಿಮ್ಮ ಆಪ್ತರ ಬಳಿ ಹಂಚಿಕೊಳ್ಳಿ.

Best Mobiles in India

English summary
Uber cab can be booked on WhatsApp too. Do You Know How? how it works.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+