ಉಬರ್ ನಿಂದ ಬೆಂಗಳೂರಿನಲ್ಲಿ ಹೊಸ ಸೇವೆ: ತಿಳಿಯಲೇ ಬೇಕು

ಊಬರ್ ಭಾರತದಲ್ಲಿ ವೃದ್ಧರು ಮತ್ತು ಅಂಗವಿಕಲರಿಗಾಗಿ ವಿಶೇಷ ಪ್ರಯಾಣದ ಸೇವೆಯನ್ನು ಎಮ್ಫಸಿಸ್ ಸಹಯೋಗದಲ್ಲಿ ಪ್ರಾರಂಭಿಸಿದ್ದು, ಊಬರ್ಅಸಿಸ್ಟ್ ಮತ್ತು ಊಬರ್ಆಕ್ಸೆಸ್ ಸೇವೆಗಳನ್ನು ಮೊದಲಿಗೆ ಬೆಂಗಳೂರಿನಲ್ಲಿ ಲಾಂಚ್ ಮಾಡಿದೆ.

By Tejaswini P G
|

ಖ್ಯಾತ ರೈಡ್-ಶೇರಿಂಗ್ ಆಪ್ ಊಬರ್ ಭಾರತದಲ್ಲಿ ಎರಡು ಹೊಸ ಸೇವೆಗಳನ್ನು ಪ್ರಾರಂಭಿಸಿದೆ. ಊಬರ್ ಆಕ್ಸೆಸ್ ಮತ್ತು ಊಬರ್ ಅಸಿಸ್ಟ್ಎಂದು ಕರೆಯಲಾಗುತ್ತಿರುವ ಈ ಸೇವೆಗಳು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಇದಕ್ಕಾಗಿ ಖ್ಯಾತ ಐಟಿ ಕಂಪೆನಿಯಾದ ಎಮ್ಫಸಿಸ್ ತಮ್ಮ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ನ ಅಂಗವಾಗಿ ಊಬರ್ ಜೊತೆ ಕೈಜೋಡಿಸಿದೆ.

ಉಬರ್ ನಿಂದ ಬೆಂಗಳೂರಿನಲ್ಲಿ ಹೊಸ ಸೇವೆ: ತಿಳಿಯಲೇ ಬೇಕು

ಹಿರಿಯ ನಾಗರೀಕರ ಮತ್ತು ಅಂಗವೈಕಲ್ಯ ಹೊಂದಿರುವವರ ಪ್ರತಿ ನಿತ್ಯದ ಪ್ರಯಾಣದ ಆವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಈ ಸೇವೆಯಲ್ಲಿ ಭಾಗಿಯಾಗುವ ಎಲ್ಲಾ ಚಾಲಕರು ಡೈವರ್ಸಿಟಿ ಆಂಡ್ ಈಕ್ವಲ್ ಆಪರ್ಚ್ಯುನಿಟಿ ಸೆಂಟರ್ (DEOC) ಯಿಂದ ತರಬೇತಿ ಮತ್ತು ಪ್ರಮಾಣಪತ್ರ ಪಡೆದಿದ್ದು, ಈ ಸೇವೆಯನ್ನು ಬಳಸುವ ಜನರಿಗೆ ಪ್ರಯಾಣದ ವೇಳೆ ಸೂಕ್ತ ಸೇವೆ ಮತ್ತು ಸಹಾಯ ಒದಗಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಊಬರ್ ಆಕ್ಸೆಸ್ ಸೇವೆಯನ್ನು ಬೆಂಗಳೂರಿನಲ್ಲಿ ಲಾಂಚ್ ಮಾಡಲಾಗಿದೆ. ಈ ಸೇವೆಯಲ್ಲಿ ಬಳಸಲೆಂದೇ 50 ವಾಹನಗಳಿಗೆ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಲಾಗಿದೆ. ವಾಹನದ ಮೇಲ್ಛಾವಣಿಯನ್ನು ಎತ್ತರಿಸಿದ್ದು, ಹೈಡ್ರಾಲಿಕ್ ವೀಲ್ಚೇರ್ ಲಿಫ್ಟ್ ಆನ್ ಡಿಮಾಂಡ್ ಮತ್ತು ಎದುರು ಮುಖ ಮಾಡಿರುವ ವೀಲ್ ಚೇರ್ ಹೊಂದಿರಲಿದೆ.

ವಿದೇಶಿಗ ಹೇಳಿದ ಬಹುಮಾನದ ಆಸೆಗೆ 32 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!!ವಿದೇಶಿಗ ಹೇಳಿದ ಬಹುಮಾನದ ಆಸೆಗೆ 32 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!!

ಹಿರಿಯ ನಾಗರೀಕರು ಮತ್ತು ಅಂಗವೈಕಲ್ಯ ಹೊಂದಿರುವವರಿಗೆ ಪ್ರಯಾಣದ ವೇಳೆ ಹೆಚ್ಚಿನ ಸಹಾಯ ಬೇಕಾಗಬಹುದು. ಇಂತಹ ಸಂದರ್ಭಗಳಿಗೆಂದೇ ಊಬರ್ ಅಸಿಸ್ಟ್ ಸೇವೆಯನ್ನು ತರಲಾಗಿದೆ. 500 ವಾಹನಗಳನ್ನು ಈ ಸೇವೆಗೆ ಮೀಸಲಿರಿಸಿದ್ದು, ಮಡಿಸಬಹುದಾದ ಗಾಲಿಕುರ್ಚಿಗಳು ಈ ವಾಹನದಲ್ಲಿ ಲಭ್ಯವಿರುತ್ತದೆ.


ಎಮ್ಫಸಿಸ್ ನ CSR ಅಂಗವಾದ ಎಮ್ಫಸಿಸ್ F1 ಫೌಂಡೇಶನ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೂ ಎಲ್ಲಾ ಸೇವೆಗಳು ಹಾಗೂ ಸವಲತ್ತುಗಳು ಸಮಾನವಾಗಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದೇ ಉದ್ದೇಶದೊಂದಿಗೆ ಎಮ್ಫಸಿಸ್ F1 ಫೌಂಡೇಶನ್ ಮತ್ತು ಊಬರ್ ಕೈಜೋಡಿಸಿದ್ದು, ಊಬರ್ ಆಕ್ಸೆಸ್ ಮತ್ತು ಊಬರ್ ಅಸಿಸ್ಟ್ ಸೇವೆಗಳನ್ನು ಲಾಂಚ್ ಮಾಡಿದೆ.

ಊಬರ್ ಆಕ್ಸೆಸ್ ವಾಹನಗಳು ಹಿಂಬದಿಯಿಂದ ಪ್ರವೇಶವನ್ನು ಹೊಂದಿದ್ದು, ಪ್ರಯಾಣಿಕರು ಪ್ರಯಾಣದ ವೇಳೆ ಎದುರು ಮುಖವಾಗಿ ಆಸೀನರಾಗಿರುತ್ತಾರೆ. ಬೇರೆ ವೀಲ್ಚೇರ್ ಸೌಲಭ್ಯ ಹೊಂದಿರುವ ವಾಹನಗಳಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಹಿಮ್ಮುಖರಾಗಿ ಅಥವಾ ಒಂದು ಬದಿಗೆ ಮುಖಮಾಡಿ ಆಸೀನರಾಗಬೇಕಾಗುತ್ತದೆ. ಎಲ್ಲಾ ಊಬರ್ ಆಕ್ಸೆಸ್ ವಾಹನಗಳು 4 ಸ್ಟ್ರ್ಯಾಪ್ ಗಳನ್ನು ಹೊಂದಿದ್ದು ಗಾಲಿಕುರ್ಚಿಯನ್ನು ಪ್ರಯಾಣದ ವೇಳೆ ಸುರಕ್ಷಿತವಾಗಿ ವಾಹನದ ನೆಲಕ್ಕೆ ಜೋಡಿಸಲಾಗುತ್ತದೆ. ವಿಶೇಷ ಸಹಾಯದ ಅಗತ್ಯವುಳ್ಳ ಜನರಿಗೆ ಊಬರ್ ಅಸಿಸ್ಟ್ ಮತ್ತು ಊಬರ್ ಆಕ್ಸೆಸ್ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಸೇವೆಗಳಾಗಿವೆ.

ಈ ಸೇವೆಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರಿಯಲ್ ಟೈಮ್ನಲ್ಲಿ ಇತರರೊಂದಿಗೆ ಶೇರ್ ಮಾಡಬಹುದು. ಈ ಮೂಲಕ ಅವರ ಕುಟುಂಬ ಮತ್ತು ಗೆಳೆಯರು ಅವರ್ ಪ್ರಯಾಣವನ್ನು ಟ್ರ್ಯಾಕ್ ಮಾಡಬಹುದು. ಈ ಮೂಲಕ ಅವರ ಸುರಕ್ಷತೆಯ ಬಗ್ಗೆ ಅವರು ಕಾಳಜಿ ವಹಿಸಬಹುದು.

ಊಬರ್ ಅಸಿಸ್ಟ್ ಮತ್ತು ಊಬರ್ ಆಕ್ಸೆಸ್ ಆಂಬ್ಯುಲೆನ್ಸ್ ಸೇವೆಗಳಲ್ಲ, ಇದು ಅಂಗವಿಕಲರು ಮತ್ತು ವಯೋವೃದ್ಧರಿಗೆ ಅವರ ದಿನ ನಿತ್ಯದ ಪ್ರಯಾಣಗಳಿಗೆ ಸೂಕ್ತ ಸಹಕಾರ ನೀಡಬಲ್ಲ ಒಂದು ಹೊಸ ಪ್ರಯಾಣದ ಆಯ್ಕೆಯಾಗಿದೆ.

ಊಬರ್ ಅಸಿಸ್ಟ್ ಮತ್ತು ಊಬರ್ ಆಕ್ಸೆಸ್ ಸೇವೆಯನ್ನು ಬಳಸಲು ಹೀಗೆ ಮಾಡಿ

• ಊಬರ್ ಆಪ್ ತೆರೆಯಿರಿ

• ನೀವು ತಲುಬೇಕಾದ ಸ್ಥಳ ತಿಳಿಸಿ

• ಬಲಕ್ಕೆ ಸ್ಲೈಡ್ ಮಾಡಿ ಊಬರ್ಅಸಿಸ್ಟ್/ಊಬರ್ಆಕ್ಸೆಸ್ ಆಯ್ಕೆ ಮಾಡಿ

• ಪಿಕಪ್ ಲೊಕೇಶನ್ ಸೆಟ್ ಮಾಡಿ ರೈಡ್ ರಿಕ್ವೆಸ್ಟ್ ಮಾಡಿ

Best Mobiles in India

Read more about:
English summary
uberACCESS, an Asia-first launch for Uber in Bengaluru offers 50 retrofitted vehicles, with heightened roof and hydraulic wheelchair lift on-demand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X