ಊಬರ್ ಸೇಫ್ ಕ್ಯಾಂಪೇನ್ ನ ಅಂಗವಾಗಿ 2 ಸ್ಕೀಮ್ಗಳನ್ನು ಲಾಂಚ್ ಮಾಡಿದ ಊಬರ್

ಊಬರ್ ಸೇಫ್ ಕ್ಯಾಂಪೇನ್ ನ ಅಂಗವಾಗಿ ಊಬರ್ ಚಾಲಕರ ಮತ್ತು ಪ್ರಯಾಣಿಕರಿಬ್ಬರ ಹಿತ ದೃಷ್ಟಿಯಿಂದ ಡ್ರೈವರ್ ಶೇರ್ ಮೈ ಟ್ರಿಪ್ ಮತ್ತು ಡ್ರೈವರ್ ಪಾರ್ಟ್ನರ್ಗಳ ಖಾತೆಗಳ ಡಿ-ಡ್ಯೂಪ್ಲಿಫಿಕೇಶನ್ ಫೀಚರ್ಗಳನ್ನು ಲಾಂಚ್ ಮಾಡಿದೆ.

By Tejaswini P G
|

ಪ್ರಸಿದ್ಧ ಕ್ಯಾಬ್ ಸೇವೆಯ ಸಂಸ್ಥೆಯಾದ ಊಬರ್ ತನ್ನ ಗ್ರಾಹಕ ಮತ್ತು ಚಾಲಕರಿಬ್ಬರ ಸುರಕ್ಷತೆಯ ದೃಷ್ಟಿಯಲ್ಲಿ ಊಬರ್ ಸೇಫ್ ಕ್ಯಾಂಪೇನ್ ನಲ್ಲಿ ಎರಡು ಹೊಸ ಸ್ಕೀಮ್ಗಳನ್ನು ಲಾಂಚ್ ಮಾಡಿದೆ.ಈ ಹೊಸ ಕ್ಯಾಂಪೇನ್ ನ ಅಂಗವಾಗಿ ಚಾಲಕರಿಗೂ ಶೇರ್ ಟ್ರಿಪ್ ಫೀಚರ್ ಅನ್ನು ನೀಡಲಾಗಿದೆ. ಈ ಫೀಚರ್ ಮೂಲಕ ಚಾಲಕರೂ ಕೂಡ ತಮ್ಮ ಪ್ರಯಾಣದ ದಾರಿ, ಬೇಕಾಗುವ ಸಮಯ ಮುಂತಾದ ಎಲ್ಲಾ ಮಾಹಿತಿಯನ್ನು ತಮ್ಮ ಪರಿವಾರ ಮತ್ತು ಸ್ನೇಹಿತರೊಡನೆ ರಿಯಲ್ ಟೈಮ್ನಲ್ಲಿ ಹಂಚಿಕೊಳ್ಳಬಹುದು.

ಊಬರ್ ಸೇಫ್ ಕ್ಯಾಂಪೇನ್ ನ ಅಂಗವಾಗಿ 2 ಸ್ಕೀಮ್ಗಳನ್ನು ಲಾಂಚ್ ಮಾಡಿದ ಊಬರ್

ಊಬರ್ ಸೇಫ್ ಕ್ಯಾಂಪೇನ್ ನ ಅಂಗವಾಗಿ ಊಬರ್ ಮತ್ತೊಂದು ಹೊಸ ಹೆಜ್ಜೆಯನ್ನಿಟ್ಟಿದೆ.ಊಬರ್ ತನ್ನ ಪ್ಲ್ಯಾಟ್ಫಾರ್ಮ್ ನಲ್ಲಿರುವ ಡ್ಯೂಪ್ಲಿಕೇಟ್ ಡ್ರೈವರ್ ಪಾರ್ಟ್ನರ್ ಖಾತೆಗಳನ್ನು ಹುಡುಕಿ ಅದನ್ನು ನಿಷ್ಕ್ರಿಯಗೊಳಿಸಲಿದೆ. ಈ ಮೂಲಕ ಸರಿಯಾದ ವ್ಯಕ್ತಿಯೇ ಪ್ರಯಾಣದ ವೇಳೆ ವಾಹನ ಚಲಾಯಿಸುತ್ತಿದ್ದಾರೆ ಎಂದು ಖಾತ್ರಿಪಡಿಸುವ ಮೂಲಕ ಪ್ರಯಾಣಿಕರು ಯಾವುದೇ ರೀತಿಯ ಭಯವಿಲ್ಲದೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣದ ಅನುಭವವನ್ನು ಪಡೆಯಬಹುದು.

ಊಬರ್ ಇಂಡಿಯಾದ ಸೆಂಟ್ರಲ್ ಆಪರೇಶನ್ಸ್ ಹೆಡ್ ಆಗಿರುವ ಪ್ರದೀಪ್ ಪರಮೇಶ್ವರನ್ ಅವರು " ನೀವು ಚಾಲಕರಾಗಿರಲಿ ಅಥವಾ ಪ್ರಯಾಣಿಕರಾಗಿರಲಿ, ನಿಮ್ಮ ಪ್ರಯಾಣದ ವೇಳೆಯ ಸುರಕ್ಷತೆಯ ಸಂಪೂರ್ಣ ಹೊಣೆ ಊಬರ್ ನದ್ದು. ನಾವು ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಮೇಲೆ ಬಂಡವಾಳ ಹೂಡುವ ಮೂಲಕ ಎಲ್ಲರಿಗೂ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣದ ಅನುಭವವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ." ಎಂದು ಹೇಳಿದರು.

"ನಾವು ಪ್ರತಿ ದಿನವೂ ನಮ್ಮ ಬಳಕೆದಾರರಿಗೆ ಯಾವುದೇ ತೊಂದರೆ ಇಲ್ಲದ ಉತ್ತಮ ಅನುಭವವನ್ನು ನೀಡಲು ಶ್ರಮವಹಿಸಿ ಪ್ರಯತ್ನಿಸುತ್ತೇವೆ ಮಾತ್ರವಲ್ಲದೆ 'ಊಬರ್ ಸೇಫ್ ಕ್ಯಾಂಪೇನ್’ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳ ಫಲವಾಗಿದೆ. ನಮ್ಮ ಸುರಕ್ಷತೆಯ ಫೀಚರ್ಗಳು ಬೇರೆಯವರಿಗಿಂತ ತುಂಬ ಉತ್ತಮವಾಗಿದ್ದು, ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ." ಎಂದು ಅವರು ತಿಳಿಸಿದ್ದಾರೆ.

ಗೂಗಲ್ ತೆಕ್ಕೆಗೆ ಬೀಳಲಿದೆ HTC ಮೊಬೈಲ್ ಕಂಪೆನಿ?!ಗೂಗಲ್ ತೆಕ್ಕೆಗೆ ಬೀಳಲಿದೆ HTC ಮೊಬೈಲ್ ಕಂಪೆನಿ?!

ನೂತನ ತಂತ್ರಜ್ಞಾನ ಬಳಸುವ ಮೂಲಕ ಊಬರ್ ತನ್ನ ಸೇವೆಯ ಪ್ರಾರಂಭದಿಂದ ಕೊನೆಯವರೆಗೂ ಸುರಕ್ಷತಾ ಕ್ರಮಗಳನ್ನು ಮೈಗೂಡಿಸಿಕೊಳ್ಳುವುದು ಸಾಧ್ಯವಾಗಿದೆ. ಒಬ್ಬ ಪ್ರಯಾಣಿಕ ಊಬರ್ ನ ಕ್ಯಾಬ್ ಕಾಯ್ದಿರಿಸುವ ಸಮಯದಿಂದ ಹಿಡಿದು, ಪ್ರಯಾಣದ ವೇಳೆ ಮತ್ತು ಅವರು ತಲುಪಬೇಕಾದ ಸ್ಥಳ ತಲುಪುವ ತನಕವೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಊಬರ್ ಪಾಲಿಸಲಿದೆ ಎಂದು ಊಬರ್ ಸಂಸ್ಥೆ ತಿಳಿಸಿದೆ.

"ಜನರಿಗೆ ಊಬರ್ನಲ್ಲಿ ಸುರಕ್ಷಿತವಾದ ಪ್ರಯಾಣವನ್ನು ನೀಡಬೇಕಾದರೆ ಅದಕ್ಕೆ ಹಲವಾರು ಜನರ ಪ್ರಯತ್ನಗಳು ಕೂಡುವ ಅಗತ್ಯವಿದೆ. ಪ್ರಯಾಣಿಕರು, ಚಾಲಕರು, ಊಬರ್ ಸಂಸ್ಥೆ, ಕಾನೂನು ಕಾಪಾಡುವ ಸಂಸ್ಥೆಗಳು, ನಿಯಮಗಳನ್ನು ಮಾಡುವ ಅಧಿಕಾರಿಗಳು ಹಾಗೂ ಸಂಪೂರ್ಣ ಭಾರತ ಒಟ್ಟಾಗಿ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಗರಗಳನ್ನು ಸುರಕ್ಷಿತವಾಗಿಸಬೇಕು. ಪ್ರಜೆಗಳಿಗೆ ಬೇಕೆಂದಾಗ ಬೇಕಾದಲ್ಲಿಗೆ ಹೋಗುವ ಸ್ವಾತಂತ್ರ್ಯ ಸಿಗುವಂತಾಗಬೇಕು.ಇದನ್ನು ಮನದಲ್ಲಿರಿಸಿಕೊಂಡು ನಾವು ಕಾನೂನು ಕಾಪಾಡುವ ಸಂಸ್ಥೆಗಳೊಂದಿಗೆ, ಹಲವಾರು NGOಗಳೊಂದಿಗೆ ಮತ್ತು ಸರಕಾರದೊಂದಿಗೆ ನಗರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೈಜೋಡಿಸಿದ್ದೇವೆ.ಈ ಮೂಲಕ ಯಾವದೇ ರೀತಿಯ ಅಹಿತಕರ ಘಟನೆಗಳನ್ನು ಮೊದಲೇ ಊಹಿಸಿ ತಡೆಗಟ್ಟಲು ಪ್ರಯತ್ನಿಸುತ್ತೇವೆ ಮಾತ್ರವಲ್ಲದೆ ನಗರಗಳನ್ನ ಊಬರ್ ಸೇಫ್ ಆಗಿಸುತ್ತೇವೆ" ಎಂದು ಪ್ರದೀಪ್ ಅವರು ಹೇಳಿದ್ದಾರೆ.

ಅಪೂರ್ವ ದಲಾಲ್, ಹೆಡ್ ಆಫ್ ಇಂಜಿನಿಯರಿಂಗ್, ಊಬರ್ ಇಂಡಿಯಾ ಅವರು "ಊಬರ್ ನಲ್ಲಿ ನೂತನ ತಂತ್ರಜ್ಞಾನ ಬಳಸಿ ಸುರಕ್ಷತೆ ಹೆಚ್ಚಿಸಲು ಹೊಸ ವಿಧಾನಗಳನ್ನು ಆವಿಷ್ಕರಿಸಲು ಪ್ರಯತ್ನಿಸುತ್ತೇವೆ. ಪ್ರತೀ ಹೆಜ್ಜೆಯಲ್ಲೂ ತಂತ್ರಜ್ಷಾನದ ಬಳಕೆಯನ್ನು ಹೆಚ್ಚಿಸುವ ಮೂಲಕ ಪಾರದರ್ಶಕತೆಯನ್ನೂ ಹೊಣೆಗಾರಿಕೆಯನ್ನೂ ತರುತ್ತೇವೆ. ಟೂ-ವೇ ಫೀಡ್ಬ್ಯಾಕ್ ಮತ್ತು ರೇಟಿಂಗ್ ವ್ಯವಸ್ಥೆ, ಟೆಲಿಮ್ಯಾಟಿಕ್ಸ್, GPS ಮೊದಲಾದ ಫೀಚರ್ಗಳ ಮೂಲಕ ಪ್ರಯಾಣಿಕರು ಮತ್ತು ಚಾಲಕರ ನಡುವೆ ನಂಬಿಕೆ ಹೆಚ್ಚಿಸಬಹುದಲ್ಲದೆ ಧನಾತ್ಮಕ ಪರಿಣಾಮವನ್ನು ಬೀರಬಹುದು. ಈ ದಿನ ನಾವು ಚಾಲಕರಿಗಾಗಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಆಧಾರಿತ ಸುರಕ್ಷತಾ ಫೀಚರ್ಗಳ ಅಂಗವಾಗಿ ಡ್ರೈವರ್ ಶೇರ್ ಮೈ ಟ್ರಿಪ್ ಫೀಚರ್ ಅನ್ನು ಭಾರತ ಮತ್ತು ವಿಶ್ವದಾದ್ಯಂತ ಲಾಂಚ್ ಮಾಡಲು ಉತ್ಸುಕರಾಗಿದ್ದೇವೆ. ಈ ಮೂಲಕ ಚಾಲಕರಿಗೂ ಒಂದು ರೀತಿಯ ಹಿಡಿತವನ್ನು ನೀಡುವ ಮೂಲಕ ಅವರು ನೆಮ್ಮದಿಯಿಂದ ವಾಹನ ಚಲಾಯಿಸುವಂತೆ ಮಾಡಲಿದ್ದೇವೆ ಮತ್ತು ಚಾಲಕರಿಗೂ ಊಬರ್ ಸೇಫ್ ಎನಿಸಲಿದೆ" ಎಂದು ಹೇಳಿದ್ದಾರೆ.

Best Mobiles in India

Read more about:
English summary
The new Uber campaign includes a Share Trip feature for drivers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X