Subscribe to Gizbot

ತಡರಾತ್ರಿ ಉದ್ಯೋಗಿಗಳಿಗೆ ಉಬರ್ ಕಲ್ಪಿಸಿದೆ ಹೊಸ ಸೇವೆ

By: Shwetha PS

ಉಬರ್ ಅಪ್ಲಿಕೇಶನ್ "ಉಬರ್ ಫಾರ್ ಬ್ಯುಸಿನೆಸ್" ಎಂಬ ಸೇವೆಯನ್ನು ಲಾಂಚ್ ಮಾಡಿದ್ದು ಇದು ಹೊಸ ಬಳಕೆದಾರರಿಗೆ ನಿತ್ಯ ಸಂಚಾರ ಮಾಡಲು, ತಡರಾತ್ರಿ ರೈಡ್‌ಗಳು ಮತ್ತು ಕಚೇರಿಯಿಂದ ಮನೆಗೆ

ತಡರಾತ್ರಿ ಉದ್ಯೋಗಿಗಳಿಗೆ ಉಬರ್ ಕಲ್ಪಿಸಿದೆ ಹೊಸ ಸೇವೆ

ತಲುಪಿಸುವಂತಹ ಸೇವೆಗಳನ್ನು ಮಾಡುತ್ತಿದೆ. ಈ ಹೊಸ ಸೇವೆಯು ಸಂಸ್ಥೆಗಳ ಉದ್ಯೋಗಿಗಳಿಗೆ ಅನುಕೂಲಕರವಾಗಿರುವಂತೆ ಈ ಸಂಚಾರವನ್ನು ಸುಗಮವಾಗಿಸಿದೆ. ಇದು ಸಂಚಾರ ವ್ಯವಸ್ಥೆಯನ್ನು ಉದ್ಯೋಗಿಗಳಿಗೆ ಉತ್ತಮವಾಗಿಸಿದ್ದು ಕಡಿಮೆ ದರದಲ್ಲಿ ಪ್ರಯಾಣದ ಅನುಕೂಲವನ್ನು ಉದ್ಯೋಗಿಗಳಿಗೆ ನೀಡಲಿದೆ. ಉಬರ್ ಫಾರ್ ಬ್ಯುಸಿನೆಸ್ ಕೆಲವೊಂದು ವಿಶಿಷ್ಟತೆಗಳನ್ನು ಹೊಂದಿದ್ದು ಅವುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಸ್ವಯಂಚಾಲಿತ ಕಾರ್ಯಕ್ರಮಗಳು

ಪ್ರಯಾಣಿಸುವವರು ಈ ಸೌಲಭ್ಯದ ಮೂಲಕ ರೈಡಿಂಗ್‌ಗಳನ್ನು ವ್ಯವಸ್ಥಿತಗೊಳಿಸಬಹುದಾಗಿದೆ. ವ್ಯವಹಾರ ಪ್ರಯಾಣ, ಏರ್‌ಪೋರ್ಟ್ ರೈಡ್‌ಗಳು ಹೀಗೆ ಮೊದಲಾದ ಅನುಕೂಲಗಳನ್ನು ಮಾಡಿಕೊಳ್ಳಬಹುದಾಗಿದೆ.

ಉದ್ಯೋಗಿಗಳು ತಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದಾದಲ್ಲಿ ಮನೆಗೆ ಸುಗಮವಾದ ರೈಡ್ ಪ್ರಯಾಣವನ್ನು ನಿಯೋಜಿಸಬಹುದಾಗಿದೆ. ಈ ರೈಡ್‌ಗಳು ರಾತ್ರಿ 8 ನಂತರವೇ ಕಾರ್ಯನಿರ್ವಹಿಸುತ್ತದೆ. ಪ್ರತಿ ಪ್ರಯಾಣದ ದರ, ದೀರ್ಘ ಪ್ರಯಾಣ ಬೇಕಾದಲ್ಲಿ ಹೀಗೆ ಮೊದಲಾದ ಯೋಜನೆಗಳನ್ನು ಮಾಡಿಕೊಳ್ಳಬಹುದಾಗಿದೆ.

ಹೊಸ ನಿಯಮಗಳು

ಉದ್ಯೋಗಿಗಳು, ಗ್ರಾಹಕರು, ಎಲ್ಲಾ ಬಗೆಯ ಕಾರುಗಳನ್ನು ಬಳಸಿಕೊಳ್ಳಬಹುದಾಗಿದೆ. ಅಂತೆಯೇ ದರಕ್ಕೆ ಅನುಗುಣವಾಗಿ ಕಾರುಗಳನ್ನು ಬುಕ್ ಮಾಡಿಕೊಳ್ಳಬಹುದು.

ಉಬರ್ ಪ್ರವೇಶಕ್ಕಾಗಿ ಕಸ್ಟಮೈಸ್ ಮಾಡಿದ ಹಂತಗಳು

ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ನೀವು ನಿಮ್ಮ ಎಲ್ಲಾ ಉದ್ಯೋಗಿಗಳಿಗೆ ರೂ 500 ಅಥವಾ ಅದಕ್ಕಿಂತ ಹೆಚ್ಚಿನ ದರವನ್ನು ನೀಡಬಹುದಾಗಿದೆ. ತಂಡ, ಮಟ್ಟ ಅಥವಾ ಸ್ಥಳವನ್ನು ಆಧರಿಸಿ ಪ್ರಯಾಣ ನೀತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ನೀತಿ

ಉಬರ್ ಸೆಂಟ್ರಲ್‌ಗೆ ಸುಲಭವಾಗಿ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದ್ದು ವೈಶಿಷ್ಟ್ಯತೆಗಳನ್ನು ರೂಪಿಸಲಾಗಿದೆ. ಇದನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ ಮತ್ತು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಹಕರು ರೈಡ್ ಮಾಡಬಹುದಾಗಿದೆ. ಹೆಚ್ಚು ಸಮಯಗಳ ಕಾಲ ಉಬರ್‌ಗಾಗಿ ಕಾಯುವುದು, ಇಮೇಲ್‌ಗಳಿಗಾಗಿ ನಿರೀಕ್ಷಿಸುವುದು, ಉಬರ್‌ ದೊರೆಯಲು ಹೆಚ್ಚು ಕಾಯುವುದು ಮೊದಲಾದ ಅಡಚಣೆಗಳನ್ನು ಈ ಫೀಚರ್ ದೂರಮಾಡಲಿದೆ. ಸಂಸ್ಥೆಯ ಪ್ರತಿಯೊಬ್ಬ ಕಾರ್ಯಕರ್ತನೂ ಉಬರ್ ಅನ್ನು ಇನ್ನಷ್ಟು ಸುಲಲಿತವಾಗಿಸಲು ಸಲಹೆಗಳನ್ನು ನೀಡಬಹುದಾಗಿದೆ.

ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

Read more about:
English summary
Uber for Business aims to give organizations a more efficient way to manage their business travel and improve employees’ experience.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot