ಬೆಂಗಳೂರಿಗೆ ಬರಲಿದೆ ಊಬರ್ ನ ಹೊಸ ರೈಡ್ ಸೇವೆ-ಊಬರ್ ಪ್ರೀಮಿಯರ್
ಊಬರ್ ನ ಪೂಲ್, ಗೋ ಮತ್ತು XL ಸೇವೆಗಳು ಪೂರೈಸದ ಜನರ ನಿರೀಕ್ಷೆಗಳನ್ನು ಪೂರೈಸಲು ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಊಬರ್ ಪ್ರೀಮಿಯರ್ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಿದೆ.
ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಊಬರ್ ನ ನೂತನ ರೈಡ್ ಆಯ್ಕೆಯಾದ ಊಬರ್ ಫ್ರೀಮಿಯರ್.

ಪ್ರೀಮಿಯರ್ ಈಗಾಗಲೇ ಇರುವ ಊಬರ್ ಆಪ್ ನಲ್ಲಿ ಹೊಸ ಆಯ್ಕೆಯಾಗಿ ಲಭ್ಯವಾಗಲಿದ್ದು, ಸಧ್ಯ ಲಭ್ಯವಿರುವ ಊಬರ್ ಸೇವೆಗಳಿಗಿಂತ ಮೇಲ್ದರ್ಜೆಯ ಸೇವೆ ಇದಾಗಲಿದೆ. ಸಧ್ಯಕ್ಕೆ ನೂತನ ಪ್ರೀಮಿಯರ್ ಸೇವೆಯು ಮುಂಬೈ ಮತ್ತು ಪುಣೆ ನಗರಗಳಲ್ಲಿ ಲಭ್ಯವಿದೆ.
"ಪ್ರತಿಯೊಂದು ಪ್ರಯಾಣವನ್ನು ಒಂದು ಉತ್ತಮ ಅನುಭವವನ್ನಾಗಿ ಮಾಡುವುದು ಊಬರ್ ನ ಗುರಿಯಾಗಿದೆ. ಪ್ರಯಾಣಕ್ಕೆ ಸ್ವಂತ ವಾಹನದ ಬಳಕೆಗೆ ಉತ್ತಮ ಬದಲೀ ವ್ಯವಸ್ಥೆಯನ್ನು ನೀಡಲು ಹೊಸ ಸೇವೆಗಳನ್ನು ನೀಡುವುದರತ್ತ ನಾವು ಗಮನ ಹರಿಸುತ್ತೇವೆ. ಈ ಪ್ರಯತ್ನದ ಫಲವೇ ಪ್ರೀಮಿಯರ್ ಸೇವೆಯ ಬಿಡುಗಡೆ ಮತ್ತು ಈಗ ಈ ಸೇವೆ ಬೆಂಗಳೂರಿಗೆ ಕಾಲಿಡಲಿದೆ. ನಾವು ನಮ್ಮ ಪ್ರಯಾಣಿಕರ ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಪಡೆಯುತ್ತಿದ್ದು ಅವರಿಗೆ ಊಬರ್ನಲ್ಲಿ ಉತ್ತಮ ಅನುಭವವನ್ನೊದಗಿಸಲು ಸದಾ ಪ್ರಯತ್ನಿಸುತ್ತೇವೆ. ನಗರದೊಳಗಿನ ಪ್ರಯಾಣದ ಕುರಿತು ಪ್ರಯಾಣಿಕರ ನಿರೀಕ್ಷೆಗಳನ್ನು ಈಡೇರಿಸುವ ಸಲುವಾಗಿ ಊಬರ್ ಪ್ರೀಮಿಯರ್ ಅನ್ನು ವಿನ್ಯಾಸಗೊಳಿಸಲಾಗಿದ್ದು ಜನರಿಗೆ ತಮ್ಮದೇ ವಾಹನದಲ್ಲಿ ಪ್ರಯಾಣಿಸುವ ಅನುಭವ ನೀಡುವ ಉದ್ದೇಶ ಊಬರ್ ನದ್ದು " ಎಂದು ಊಬರ್ ವಕ್ತಾರರು ಹೇಳಿದ್ದಾರೆ.
"ಕೆಲಸದ ನಿಮಿತ್ತ ನಡೆಯುವ ಮೀಟಿಂಗ್ ಗಳಿರಬಹುದು , ಶಾಪಿಂಗ್ ಸಂಭ್ರಮವಿರಬಹುದು, ಬಂಧು ಬಳಗದವರೊಂದಿಗೆ ವಿಹಾರವಿರಬಹುದು ಅಥವಾ ನಿಮ್ಮ ಬಿಸ್ನೆಸ್ ಪಾರ್ಟ್ನರ್ಗಳಿಗೆ ಸತ್ಕಾರ ನೀಡುತ್ತಿರಬಹುದು ಅಥವಾ ಏರ್ಪೋರ್ಟ್ ಪ್ರಯಾಣಗಳಿರಬಹುದು, ಈ ಎಲ್ಲಾ ಸಂದರ್ಭಗಳಲ್ಲೂ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲು ಪ್ರೀಮಿಯರ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಯಾಣದ ನಂತರ ಪ್ರಯಾಣಿಕರಿಗೆ ಪ್ರಯಾಣದ ಕುರಿತು ತಮ್ಮ ಅನಿಸಿಕೆಗಳನ್ನು ನೀಡುವ ಸೌಲಭ್ಯವಿದ್ದು ಈ ಮೂಲಕ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಊಬರ್ ನಡೆಸುತ್ತದೆ." ಎಂದು ಊಬರ್ ತಿಳಿಸಿದೆ.
ಊಬರ್ ನ ಪ್ರೀಮಿಯರ್ ಸೇವೆಯನ್ನು ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಡ್ರೈವರ್ ಕಾಂಪ್ಲಿಮೆಂಟ್ಸ್ ಮತ್ತು ಡ್ರೈವರ್ ರೇಟಿಂಗ್ಸ್ ಫೀಚರ್ಗಳ ಮೂಲಕ ಪ್ರಯಾಣಿಕರು ನೀಡಿರುವ ಅಭಿಪ್ರಾಯ ಮತ್ತು ಸಲಹೆಗಳ ಆಧಾರದ ಮೇಲೆ ಊಬರ್ ಪ್ರೀಮಿಯರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಪ್ರೀಮಿಯರ್ ಸೇವೆಯಲ್ಲಿ ಭಾಗಿಯಾಗುವ ಚಾಲಕರನ್ನು ಬಹಳ ಮುತುವರ್ಜಿಯಿಂದ ಆಯ್ಕೆ ಮಾಡಲಾಗುತ್ತದೆ. ಯಾವ ಚಾಲಕರು ತಮ್ಮ ಸೇವೆಗೆ ಡ್ರೈವರ್ ಕಾಂಪ್ಲಿಮೆಂಟ್ಸ್ ಮತ್ತು ಡ್ರೈವರ್ ರೇಟಿಂಗ್ಸ್ ಮೂಲಕ ಪ್ರಯಾಣಿಕರಿಂದ ಸತತವಾಗಿ 5-ಸ್ಟಾರ್ ರೇಟಿಂಗ್ ಪಡೆದಿರುತ್ತಾರೋ, ಅಂತಹ ಉನ್ನತ ರೇಟಿಂಗ್ ನ ಚಾಲಕರು ಪ್ರೀಮಿಯರ್ ಸೇವೆಯಲ್ಲಿ ಭಾಗಿಯಾಗುತ್ತಾರೆ.
ಎಕಾನಮಿ ಪ್ಲಸ್ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಊಬರ್ ನ ಪೂಲ್, ಗೋ ಮತ್ತು XL ಸೇವೆಗಳು ಪೂರೈಸದ ಜನರ ನಿರೀಕ್ಷೆಗಳನ್ನು ಪೂರೈಸಲು ಮತ್ತು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಅನುಭವವನ್ನು ಅವರಿಗೆ ಒದಗಿಸುವ ಸಲುವಾಗಿ ಬೆಂಗಳೂರಿನಲ್ಲಿ ಪ್ರೀಮಿಯರ್ ಸೇವೆಯನ್ನು ಊಬರ್ ಪ್ರಾರಂಭಿಸಿದೆ.


Click it and Unblock the Notifications








