ಚಾಲಕರಿಗೆಂದೇ ಹೊಸತೊಂದು ಆಪ್ ಲಾಂಚ್ ಮಾಡಿದ ಊಬರ್

By Tejaswini P G
|

ಚಾಲಕರಿಗೆ ಪ್ರಯಾಣವನ್ನು ಸರಳವಾಗಿಸಲು ರೈಡ್-ಶೇರಿಂಗ್ ಆಪ್ ಆದ ಊಬರ್ ಏಪ್ರಿಲ್ 11ರಂದು ಹೊಸತೊಂದು ಡ್ರೈವರ್ ಆಪ್ ಅನ್ನು ಲಾಂಚ್ ಮಾಡಿದೆ.

ಚಾಲಕರಿಗೆಂದೇ ಹೊಸತೊಂದು ಆಪ್ ಲಾಂಚ್ ಮಾಡಿದ ಊಬರ್


ಈ ಹೊಸ ಆಪ್ ಹೆಚ್ಚು ಸರಳ ಮತ್ತು ಖಾಸಗಿ ಅನುಭವವನ್ನು ಚಾಲಕರಿಗೆ ನೀಡುತ್ತದಲ್ಲದೆ, ಡ್ರೈವರ್ ಮತ್ತು ಡೆಲಿವರಿ ಪಾರ್ಟ್ನರ್ಗಳಿಗೆ ಪ್ರಯಾಣದ ಪ್ರತಿಯೊಂದು ನಿಮಿಷವೂ ಅಗತ್ಯ ಬೆಂಬಲ ನೀಡುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರಿನ 100ಕ್ಕೂ ಅಧಿಕ ಡ್ರೈವರ್ ಮತ್ತು ಪಾರ್ಟ್ನರ್ಗಳ ಅಭಿಪ್ರಾಯ ಪಡೆದು ಅದಕ್ಕೆ ತಕ್ಕುದಾಗಿ ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

"ಹಲವು ತಿಂಗಳುಗಳ ಕಾಲ ಅನೇಕ ಚಾಲಕರ ಮತ್ತು ಪಾರ್ಟ್ನರ್ಗಳ ಜೊತೆ ಸಂವಾದ ನಡೆಸಿ, ಅವರನ್ನು ಸಂದರ್ಶಿಸಿದ ನಂತರ ಜಗತ್ತಿನಾದ್ಯಂತ ಇರುವ ಊಬರ್ ನ ಚಾಲರಕರನ್ನೊಳಗೊಂಡ ಆಪ್ ನ ಬೀಟಾ ಆವೃತ್ತಿಯನ್ನು ಲಾಂಚ್ ಮಾಡಲಾಗಿದೆ. ಅವರ ಪ್ರತಿಕ್ರಿಯೆಯನ್ನು ಸಂಗ್ರಹಿಸುವ ಸಲುವಾಗಿ ಅನೇಕ ಕ್ರಮಗಳನ್ನು ಅಳವಡಿಸಕೊಳ್ಳಲಾಯಿತು. ನಮ್ಮ ತಂಡದ ಸದಸ್ಯರೊಂದಿಗೆ ಪ್ರಯಾಣ, ಚಾಲಕರೊಂದಿಗೆ ಲಂಚ್ ಮತ್ತು ಮೀಟಿಂಗ್ ಹೀಗೆ ಅನೇಕ ಕ್ರಮಗಳನ್ನು ಅನುಸರಿಸಲಾಯಿತು. ನಾವು ಚಾಲಕರೊಂದಿಗೆ ಪ್ರತಿದಿನವೂ ಮೆಸೇಜ್ಗಳ ಮೂಲಕ ಸಂವಾದ ನಡೆಸಿ ಅವರ ಅಗತ್ಯಗಳನ್ನು ತಿಳಿದುಕೊಂಡೆವು" ಎಂದು ಊಬರ್ ಸಂಸ್ಥೆಯು ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.

"ಅವರ ಅಭಿಪ್ರಾಯಗಳು ಆಪ್ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲು ಸಹಾಯಕವಾಯಿತು. ಅದರ ಫೀಚರ್ಗಳನ್ನು ಅವರು ನಾವೆಣಿಸಿದ್ದಕ್ಕಿಂತ ಭಿನ್ನವಾಗಿ ಬಳಸಿದರಲ್ಲದೆ ಅದನ್ನು ಮತ್ತಷ್ಟು ಉತ್ತಮವಾಗಿಸಿವುದು ಹೇಗೆಂದು ಸಲಹೆ ಸೂಚನೆಗಳನ್ನು ನೀಡಿದರು. ನಾಲ್ಕು ತಿಂಗಳ ನಂತರ, 100,000 ಕ್ಕೂ ಅಧಿಕ ಟ್ರಿಪ್ಗಳು ಮತ್ತು ಸಾವಿರಾರು ಸಂಭಾಷಣೆಗಳು ಮತ್ತು ಅನೇಕ ಬಗ್ ಗಳನ್ನು ಪರಿಹರಿಸಿದರ ಫಲವಾಗಿ ನಾವು ಉತ್ತಮವಾದ ಪ್ರಾಡಕ್ಟ್ ಒಂದನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾಯಿತು. ಈ ಸಹಭಾಗಿತ್ವದ ಫಲವಾಗಿ ವಿನ್ಯಾಸಗೊಳಿಸಲಾಗಿರುವ ಈ ನೂತನ ಆಪ್, ಚಾಲಕರಿಗಾಗಿ ಚಾಲಕರೊಂದಿಗೆ ಬೆರೆತು ಅಭಿವೃದ್ಧಿಪಡಿಸಿದ ಈ ಆಪ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಪ್ರಯಾಣದ ಪ್ರತಿಯೊಂದು ಕ್ಷಣವೂ ಚಾಲಕರ ಅಗತ್ಯಗಳನ್ನು ಈ ಆಪ್ ಪೂರೈಸಲಿದೆ" ಎಂದು ಬ್ಲಾಗ್ ನಲ್ಲಿ ಹೇಳಲಾಗಿದೆ.

ಭಾರತದಲ್ಲಿ ಈ ಆಪ್ ಸಧ್ಯಕ್ಕೆ ಕೊಚ್ಚಿಯ ಆಯ್ದ ಡ್ರೈವರ್ ಪಾರ್ಟ್ನರ್ ಮತ್ತು ಚೆನ್ನೈ ನ ಆಯ್ದ ಕೋರಿಯರ್ ಪಾರ್ಟ್ನರ್ಗಳಿಗೆ ಮಾತ್ರ ಲಭ್ಯವಿದೆ. ಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ದೇಶದಾದ್ಯಂತ ಇರುವ ಡ್ರೈವರ್ ಮತ್ತು ಡೆಲಿವರಿ ಪಾರ್ಟ್ನರ್ಗಳೊಂದಿಗೆ ಈ ಆಪ್ ಅನ್ನು ಹಂಚಿಕೊಳ್ಳಲಾಗುವುದು.

"ಈ ನೂತನ ಪಾರ್ಟ್ನರ್ (ಡ್ರೈವರ್ ಮತ್ತು ಕೊರಿಯರ್ ಪಾರ್ಟ್ನರ್ಗಳಿಗೆ) ಆಪ್ ನ ಲಾಂಚ್ ಊಬರ್ ಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಜನರತ್ತ ನಮ್ಮ ನಿಷ್ಠೆಗೆ ಇದು ಸಾಕ್ಷಿಯಾಗಿದೆ. ಅವರ ಅಗತ್ಯಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಆಪ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಬೆಂಗಳೂರಿನ 100ಕ್ಕೂ ಅಧಿಕ ಪಾರ್ಟ್ನರ್ಗಳು ಈ ಗ್ಲೋಬಲ್ ಬೀಟಾ ಲಾಂಚ್ನಲ್ಲಿ ಭಾಗಿಯಾಗಿದ್ದರು. ಗ್ರೂಪ್ ಸೆಶನ್ಗಳು, ರೈಡ್ ಎಲಾಂಗ್, ವ್ಯಕ್ತಿಗಳೊಂದಿಗೆ ಖುದ್ದು ಸಂದರ್ಶನ ನಡೆಸುವುದು, ಹೀಗೆ ಹಲವು ವಿಧಾನಗಳ ಮೂಲಕ ನಮ್ಮ ತಂಡ ಪಾರ್ಟ್ನರ್ಗಳೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಕಲೆಹಾಕಿತು. ಅವರ ಅನಿಸಿಕೆಯ ಪ್ರತಿಯೊಂದು ವಿಷಯವೂ ಬಹಳ ಮಹತ್ತ್ವದ್ದಾಗಿದ್ದು, ಆಪ್ ನ ಅಭಿವೃಧ್ಧಿಯಲ್ಲಿ ಅದನ್ನು ಬಳಸಿಕೊಳ್ಳಲಾಗಿದೆ" ಎಂದು ಪ್ರದೀಪ್ ಪರಮೇಶ್ವರನ್, ಹೆಡ್ ಆಫ್ ಸೆಂಟ್ರಲ್ ಆಪರೇಶನ್ಸ್,ಊಬರ್ ಇಂಡಿಯಾ & SA ಅವರು ಹೇಳಿದ್ದಾರೆ.

ನೂತನ ಆಪ್ ನ ಪ್ರಮುಖ ಫೀಚರ್ಗಳು ಹೀಗಿವೆ

ಅರ್ನಿಂಗ್ಸ್ ಟ್ರ್ಯಾಕರ್ : ಈ ನೂತನ ರಿಯಲ್-ಟೈಮ್ ಅರ್ನಿಂಗ್ಸ್ ಟ್ರ್ಯಾಕರ್ ಮೂಲಕ ಚಾಲಕರು ಅವರ ಹಿಂದಿನ ಟ್ರಿಪ್ ನಲ್ಲಿ ಎಷ್ಟು ಆದಾಯಗಳಿಸಿದರು ಎಂಬುದನ್ನು ಸರಳವಾಗಿ ತಿಳಿಯಬಹುದು. ಈ ಮೂಲಕ ಅವರು ತಮ್ಮ ಪ್ರಗತಿಯ ಬಗ್ಗೆ ನಿಗಾ ಇಡಬಹುದು ಮತ್ತು ಗುರಿ ತಲುಪಲು ಸಹಾಯಕವಾಗುವುದು.

ಸ್ಟೇಟಸ್ ಬಾರ್: ಚಾಲಕರಿಗೆ ತಮ್ಮ ಸುತ್ತಮುತ್ತಲಿನ ಮಾರುಕಟ್ಟೆಯ ಸ್ಥಿತಿಗತಿ ತಿಳಿಸುವುದಲ್ಲದೆ ಸಮೀಪದಲ್ಲಿ ಲಭ್ಯವಿರುವ ಟ್ರಿಪ್ಗಳ ಕುರಿತು ಮಾಹಿತಿ ನೀಡುತ್ತದೆ. ಚಾಲಕರು "ಆಪರ್ಚ್ಯುನಿಟಿ" ಮೇಲೆ ಕ್ಲಿಕ್ ಮಾಡಿದಾಗ ಆಪ್ ಅದು ಶಿಫಾರಸು ಮಾಡುವ ಸ್ಥಳಗಳಿಗೆ ತೆರಳಲು ಸಹಕಾರಿಯಾಗುವಂತೆ ನ್ಯಾವಿಗೇಶನ್ ನೀಡುತ್ತದೆ.

ನೋಟಿಫಿಕೇಶನ್ಗಳು: ಈ ಫೀಚರ್ ಮೂಲಕ ಚಾಲಕರು ತಮ್ಮ ಮುಂದಿನ ಆದಾಯದ ಅವಕಾಶ, ಪ್ರಯಾಣಿಕರ ಅನಿಸಿಕೆ, ತಮ್ಮ ಖಾತೆಯ ಕುರಿತು ಮಾಹಿತಿ ಇತ್ಯಾದಿಗಳಿಗೆ ಸಂಬಂಧಿಸಿದ ಸಂದೇಶಗಳನ್ನು ನೋಡಬಹುದು.

ಡ್ರೈವರ್ ಪ್ರೊಫೈಲ್: ಊಬರ್ ನೊಂದಿಗೆ ಚಾಲಕರಾಗಿ ಕಾರ್ನಿರ್ವಹಿಸುವುದಲ್ಲದೆ ಅವರು ಬೇರೆ ಇನ್ನೇನು ಮಾಡುತ್ತಾರೆ ಎಂಬುದನ್ನು ಚಾಲಕರು ಇಲ್ಲಿ ಅಭಿವ್ಯಕ್ತಿಪಡಿಸಬಹುದು. ಈ ಮೂಲಕ ಪ್ರಯಾಣಿಕರು ತಮ್ಮ ಚಾಲಕರ ಬಗ್ಗೆ ಹೆಚ್ಚು ತಿಳಿಯಬಹುದು ಮತ್ತು ಚಾಲಕರ ಮತ್ತು ಪ್ರಯಾಣಿಕರ ನಡುವಿನ ಸಂಬಂಧವನ್ನು ಹೆಚ್ಚು ಗಟ್ಟಿಯಾಗಿಸಬಹುದು.

ಡ್ರೈವರ್ ಆಪ್ ಬೇಸಿಕ್ಸ್: ಮುಂದಿನ ದಿನಗಳಲ್ಲಿ ಡ್ರೈವರ್ಗಳಿಗೆ ಲಭ್ಯವಾಗಲಿರುವ ಊಬರ್ ನ ನೂತನ ಆಪ್ ಕುರಿತು ಹೆಚ್ಚಿನ ಮಾಹಿತಿ ಮತ್ತು ಅದನ್ನು ಬಳಸಲು ಸಹಾಯವಾಗುವಂತೆ ಗೈಡ್ ಆಗಿ ಈ ಫೀಚರ್ ಕೆಲಸಮಾಡುತ್ತದೆ.

ತೇಜ್‌ನಲ್ಲಿ ಕಾಸು ಬರ್ತಿಲ್ವಾ: ಭೀಮ್ ಆಪ್‌ ಬಳಸಿ ಭರ್ಜರಿ ಕ್ಯಾಷ್ ಬ್ಯಾಕ್ ಪಡೆಯಿರಿ..!ತೇಜ್‌ನಲ್ಲಿ ಕಾಸು ಬರ್ತಿಲ್ವಾ: ಭೀಮ್ ಆಪ್‌ ಬಳಸಿ ಭರ್ಜರಿ ಕ್ಯಾಷ್ ಬ್ಯಾಕ್ ಪಡೆಯಿರಿ..!

Best Mobiles in India

Read more about:
English summary
With an aim to smoothen the ride for its drivers, ridesharing company Uber today announced the launch of its new driver app.The new app provides a more simple and personalized experience, designed to support drivers and delivery partners at every moment of their journey. The app was built after listening to drivers and 100 partners from Bangalore.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X