ಭಾರತಕ್ಕೆ ಬಂದಿದೆ 'ಊಬರ್ ಈಟ್ಸ್',ಊಬರ್ ನ ಫುಡ್ ಡೆಲಿವರಿ ಸೇವೆ

By Tejaswini P G

  ಆಪ್ ಆಧಾರಿತ ಕ್ಯಾಬ್ ಸೇವೆಯಲ್ಲಿ ಯಶಸ್ವಿಯಾಗಿರುವ ಊಬರ್ ಈಗ ಮತ್ತೊಂದು ನೂತನ ಪ್ರಯತ್ನಕ್ಕೆ ಮುಂದಾಗಿದೆ.ಊಬರ್ ಲಾಂಚ್ ಮಾಡಿದೆ "ಊಬರ್ ಈಟ್ಸ್" ಎಂಬ ಫುಡ್ ಡೆಲಿವರಿ ಸೇವೆ. 300ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಊಬರ್, 'ಊಬರ್ ಈಟ್ಸ್' ಸೇವೆಯನ್ನು ಬೆಂಗಳೂರಿನಲ್ಲಿ ಲಾಂಚ್ ಮಾಡಿದೆ.

  ಭಾರತಕ್ಕೆ ಬಂದಿದೆ 'ಊಬರ್ ಈಟ್ಸ್',ಊಬರ್ ನ ಫುಡ್ ಡೆಲಿವರಿ ಸೇವೆ

  'ಊಬರ್ ಈಟ್ಸ್' ಸೇವೆಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಊಬರ್ ಈಟ್ಸ್ ಇಂಡಿಯಾ ದ ಮುಖ್ಯಸ್ಥ, ಭಾವಿಕ್ ರಾಥೋಡ್ " ಭಾರತದಲ್ಲಿ ಊಬರ್ ಈಟ್ಸ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಾಲ್ಕು ತಿಂಗಳೊಳಗೆ ಈ ಸೇವೆಯನ್ನು ಬೆಂಗಳೂರಿನಲ್ಲಿ ಲಾಂಚ್ ಮಾಡತ್ತಿರುವುದು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ.

  ಬೆಂಗಳೂರಿನ ಜನರು ತಮ್ಮ ಸ್ಥಳೀಯ ಆಹಾರವನ್ನು ಮಾತ್ರವಲ್ಲದೆ ಬೇರೆ ಬೇರೆ ಸ್ಥಳಗಳ, ವಿಭಿನ್ನ ಶೈಲಿಗಳ ಆಹಾರವನ್ನು ಕೂಡ ತಿನ್ನಲು ಬಯಸುತ್ತಾರೆ.ಹೀಗಾಗಿ ನಮ್ಮ ರೆಸ್ಟೋರೆಂಟ್ಗಳ ಬಳಗವನ್ನು ಇನ್ನಷ್ಟು ವಿಸ್ತರಿಸಿ,ಜನರಿಗೆ ಅವರು ಬಯಸುವ ಉತ್ತಮ ಗುಣಮಟ್ಟದ ಆಹಾರವನ್ನು ತಲುಪಿಸಲು ವಿಶಾಲವಾದ ಡೆಲಿವರಿ ಜಾಲವನ್ನು ಸೃಷಿಸುವ ಗುರಿ ನಮ್ಮದು" ಎಂದು ಹೇಳಿದ್ದಾರೆ.

  "ಆರಾಮದಾಯಕ ಫುಡ್ ಡೆಲಿವೆರಿ ಎಂದರೆ ಊಬರ್ ಈಟ್ಸ್ ಎನ್ನುವಂತಾಗಬೇಕು ಎಂಬುದು ನಮ್ಮ ಕನಸು.ದೇಶದಾದ್ಯಂತ ಜನರು ತಮಗಿಷ್ಟವಾದ ಆಹಾರವನ್ನು ಮನೆಯಲ್ಲೇ ಕುಳಿತು ರೆಸ್ಟೋರೆಂಟ್ಗಳಿಂದ ಆರ್ಡರ್ ಮಾಡುವ ಅನುಭವವನ್ನು ಸರಳವಾಗಿಸುವ ಪ್ರಯತ್ನ ನಮ್ಮದು.ಕೇವಲ ತಮ್ಮ ಮೊಬೈಲ್ನಲ್ಲಿ ಊಬರ್ ಈಟ್ಸ್ ಆಪ್ ತರೆಯುವ ಮೂಲಕ ಬಳಕೆದಾರರು ಗುರುಗ್ರಾಮದಲ್ಲಿ ಚಿಕನ್ ರೋಲ್ ,ಮುಂಬೈನಲ್ಲಿ ವಡಾಪಾವ್ ಅಥವಾ ಬೆಂಗಳೂರಿನಲ್ಲಿ ದೋಸೆ ಅಥವಾ ಬೇರೆ ಏನನ್ನಾದರೂ ಆರ್ಡರ್ ಮಾಡುವಂತಿರಬೇಕು" ಎಂದು ಅವರು ಹೇಳಿದರು.

  ಜಿಯೋ ಫೋನ್ ಬಗ್ಗೆ ಇಂದು ಹೊರಬಿದ್ದ ಹೊಸ 5 ಫೀಚರ್ಸ್!..ಯಾರೂ ಊಹಿಸಿರಲಿಲ್ಲ!!

  ಊಬರ್ ನ ಈ ಹೊಸ ಸೇವೆಯೊಂದಿಗೆ, ಬೆಂಗಳೂರಿಗರು ಈಗ ಅವರವರ ಅಭಿರುಚಿಗನುಗುಣವಾಗಿ ಅಥವಾ ಸಂದರ್ಭಕ್ಕನುಸಾರವಾಗಿ ಬೇಕಾದ ಆಹಾರವನ್ನು ತಮ್ಮ ಮೊಬೈಲ್ನಿಂದಲೇ ಆರ್ಡರ್ ಮಾಡಬಹುದು. ಸ್ಥಳೀಯರ ಮೆಚ್ಚಿನ ಅಡಿಗಾಸ್ ಅಥವ ಮಧುರೈ ಇಡ್ಲಿ ಇರಬಹುದು, ಟ್ರಫಲ್ಸ್ ಇರಬಹುದು, ಅಥವ ಬರಿಸ್ತಾ,ಕ್ರಿಸ್ಪಿ ಕ್ರೀಮ್,ಚಾಯ್ ಪಾಯಿಂಟ್, ಫ್ರೆಶ್ ಮೆನು ಇರಬಹುದು, ಇಷ್ಟೇ ಅಲ್ಲದೆ ಇನ್ನು ಅನೇಕ ರೆಸ್ಟೋರೆಂಟ್ಗಳಿಂದ ನೀವು ಊಬರ್ ಈಟ್ಸ್ ಮೂಲಕ ಫುಡ್ ಆರ್ಡರ್ ಮಾಡುವುದಲ್ಲದೆ ಡೆಲಿವೆರಿಯನ್ನು ಪಡೆಯಬಹುದು.

  ಊಬರ್ ಈಟ್ಸ್ ಅನ್ನು ಈ ಪ್ರಾಂತ್ಯದಲ್ಲಿ ಯಶಸ್ವಿಯಾಗಿಸಲೆಂದೇ ಊಬರ್ ವರ್ತಿಕಾ ಬನ್ಸಾಲ್ ಅವರನ್ನು ಊಬರ್ ಈಟ್ಸ್ ನ ಬೆಂಗಳೂರಿನ ಶಾಖೆಯ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಿದೆ.ಅವರು ಹಲವಾರು ರೆಸ್ಟೋರೆಂಟ್ಗಳು ಮತ್ತು ಡೆಲಿವೆರಿ ಪಾರ್ಟ್ನರ್ಗಳೊಂದಿಗೆ ಪಾರ್ಟ್ನರ್ಶಿಪ್ ಮಾಡಿಕೊಳ್ಳುವುದಲ್ಲದೆ ಗ್ರಾಹಕರಿಗೆ ತೃಪ್ತಿದಾಯಕ ಅನುಭವವನ್ನು ನೀಡುವತ್ತ ಗಮನಹರಿಸಲಿದ್ದಾರೆ.

  "ದಕ್ಷಿಣ ಭಾರತದ ಉಪಹಾರವೇ ಅಗಿರಲಿ ಅಥವ ಚೈನೀಸ್ ಭೋಜನವಿರಲಿ, ಬೆಂಗಳೂರಿನ ಫುಡೀಗಳಿಗೆ ಜಗತ್ತೇ ಅವರ ತಟ್ಟೆಯಲ್ಲಿರಬೇಕೆಂಬ ಹಂಬಲ.ಇವರಿಗೆಂದೇ ಬಂದಿದೆ ಊಬರ್ ಈಟ್ಸ್.ಊಬರ್ ಈಟ್ಸ್ ಹೊಂದಿದೆ ಶ್ರೇಷ್ಠ ಗುಣಮಟ್ಟದ ರೆಸ್ಟೋರೆಂಟ್ಗಳು, ಆಧುನಿಕ ತಂತ್ರಜ್ಞಾನ, ಮತ್ತು ದಕ್ಷ ಆಹಾರ ವಿತರಕರ ಜಾಲ ಇವುಗಳ ಪರಿಪೂರ್ಣ ಸಂಯೋಜನೆ. ಈ ಮೂಲಕ ಊಬರ್ ಈಟ್ಸ್ ನಿಮಗೆ ನೀಡಲಿದೆ ಅದ್ಭುತ ಮತ್ತು ರುಚಿಕರ ಆಹಾರ ಅನ್ವೇಷಿಸುವ ಅವಕಾಶ.

  ಈ ಸೇವೆಯನ್ನು ನಾವು ಮೊದಲಿಗೆ ಕೋರಮಂಗಲ,HSRಲೇಔಟ್ ಮತ್ತು ಬಿಟಿಎಮ್ ಲೇಔಟ್ ಗಳಲ್ಲಿ ಲಾಂಚ್ ಮಾಡಲು ತುಂಬ ಉತ್ಸುಕರಾಗಿದ್ದೇವೆ. ಭವಿಷ್ಯದಲ್ಲಿ ಈ ಸೇವೆಯನ್ನು ಬೆಂಗಳೂರಿನ ಬೇರೆ ಸ್ಥಳಗಳಿಗೂ ವಿಸ್ತರಿಸುವ ಯೋಜನೆ ಇದೆ"ಎಂದು ಹೇಳಿದ್ದಾರೆ ವರ್ತಿಕಾ ಬನ್ಸಾಲ್, ಜನರಲ್ ಮ್ಯಾನೇಜರ್,ಊಬರ್ ಈಟ್ಸ್, ಬೆಂಗಳೂರು.

  ಊಬರ್ ನ ಕ್ಯಾಬ್ ಬುಕ್ ಮಾಡುವ ಆಪ್ಗಿಂತ ಊಬರ್ ಈಟ್ಸ್ ನ ಆಪ್ ವಿಭಿನ್ನವಾಗಿದೆ. ಫುಡ್ ಡೆಲಿವೆರಿಯನ್ನು ಸರಳ ಮತ್ತು ಪರಿಪೂರ್ಣವಾಗಿಸಲು ಊಬರ್ ಈಟ್ಸ್ ಗಾಗಿ ಹೊಸ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.ಈ ಆಪ್ ಅನ್ನು ಐಓಎಸ್ ಮತ್ತು ಆಂಡ್ರಾಯ್ಡ್ ಮೊಬೈಲ್ಗಳಿಗೆ ಆಪಲ್ ಸ್ಟೋರ್ ಅಥವ ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಅಲ್ಲದೆ ubereats.com ಮೂಲಕ ಆನ್ಲೈನ್ ನಲ್ಲಿ ಆರ್ಡರ್ ಮಾಡಬಹುದು.

  ಈ ಮಧ್ಯೆ ಊಬರ್ ಭಾರತದಲ್ಲಿ ನೂತನ 'ಊಬರ್ ಫಾರ್ ಬಿಸ್ನೆಸ್’ ಎಂಬ ಹೊಸ ಸೇವೆಯನ್ನೂ ಘೋಷಿಸಿದೆ. ಪ್ರತಿದಿನ ಪ್ರಯಾಣಿಸಲು, ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬರುಲು, ಪ್ರತಿನಿತ್ಯ ಮನೆ ಮತ್ತು ಕಛೇರಿಗಳ ನಡುವೆ ಪ್ರಯಾಣಿಸಲು ಮತ್ತು ಇನ್ನು ಇದೇ ರೀತಿಯ ಹಲವು ಸಂದರ್ಭಗಳಿಗಾಗಿ ಈ ಸೇವಯನ್ನು ವಿನ್ಯಾಸಗೊಳಿಸಲಾಗಿದೆ.

  Read more about:
  English summary
  Uber, the popular cab service provider has now launched "UberEATS" service in Bengaluru, partnering with over 300 restaurants.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more