ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಪೋಲೀಸ್ ಜೊತೆ ಕೈ ಜೋಡಿಸಿದ ಊಬರ್

ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ದೆಹಲಿ ಪೋಲೀಸ್ ಜೊತೆ ಊಬರ್ ಕೈಜೋಡಿಸಿದೆ. ದೆಹಲಿ ಪೋಲೀಸ್ ಮಹಿಳೆಯರ ಸುರಕ್ಷತೆಗಾಗಿ ಲಾಂಚ್ ಮಾಡಿರುವ 'ಹಿಮ್ಮತ್' ಆಪ್ ಊಬರ್ ನ ಮಹಿಳಾ ಪ್ರಯಾಣಿಕರಿಗೆ ಲಭ್ಯವಾಗಲಿದೆ.

By Tejaswini P G
|

ಖ್ಯಾತ ಕ್ಯಾಬ್ ಸೇವಾ ಸಂಸ್ಥೆಯಾದ ಊಬರ್ ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ದೆಹಲಿ ಪೋಲೀಸರೊಂದಿಗೆ ಕೈಜೋಡಿಸಿದ್ದಾರೆ.ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಪೋಲೀಸರು ಲಾಂಚ್ ಮಾಡಿದ್ದ 'ಹಿಮ್ಮತ್' ಆಪ್ ಅನ್ನು ಊಬರ್ ನ ಮೊಬೈಲ್ ಆಪ್ ನ ಮೂಲಕ ಆಕ್ಸೆಸ್ ಮಾಡಲು ಇನ್ನು ಮುಂದೆ ಸಾಧ್ಯವಾಗಲಿದೆ.

ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಪೋಲೀಸ್ ಜೊತೆ ಕೈ ಜೋಡಿಸಿದ ಊಬರ್

ದೆಹಲಿ ಪೋಲೀಸರಿಗೆ ಈ ರೀತಿಯ ಪಾರ್ಟ್ನರ್ಶಿಪ್ ಇದೇ ಮೊದಲಾಗಿದ್ದು, ಈ ಒಪ್ಪಂದದೊಂದಿಗೆ ಹಿಮ್ಮತ್ ಆಪ್ ಊಬರ್ ಆಪ್ ನ ಮೂಲಕ ಲಕ್ಷಾಂತರ ಮಹಿಳೆಯರಿಗೆ ತಲುಪಲಿದೆ.ಈ ಸಹಯೋಗವು ದೆಹಲಿ ಪೋಲೀಸರಿಗೆ ಮಹಿಳಾ ಸುರಕ್ಷತೆಯ ಜವಾಬ್ದಾರಿಯನ್ನು ಇನ್ನಷ್ಟು ದಕ್ಷವಾಗಿ ನಿಭಾಯಿಸಲು ಸಹಕಾರಿಯಾಗಲಿದೆ.

ಜನವರಿ 2015ರಲ್ಲಿ ಬಿಡುಗಡೆಯಾದ ಹಿಮ್ಮತ್ ಆಪ್ ಅನ್ನು ಇದುವರೆಗೆ 90 ಸಾವಿರ ಜನರು ಡೌನ್ಲೋಡ್ ಮಾಡಿದ್ದಾರಲ್ಲದೆ ಈಗಾಗಲೇ 31 ಸಾವಿರಕ್ಕೂ ಅಧಿಕ ಬಳಕೆದಾರರು ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.ಈ ಸಹಯೋಗದೊಂದಿಗೆ ಊಬರ್ ಕಂಪೆನಿಯು ಈ ಆಪ್ ಅನ್ನು ತನ್ನೆಲ್ಲಾ ಮಹಿಳಾ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

ಈ ಸಹಯೋಗದ ಬಗ್ಗೆ ಮಾತನಾಡಿದ ಊಬರ್ ಇಂಡಿಯಾ & ಸೌತ್ ಏಷಿಯಾ ದ ಪಬ್ಲಿಕ್ ಪಾಲಿಸಿ ಹೆಡ್, ಶ್ವೇತಾ ಕೋಹ್ಲಿ" ಊಬರ್ ನಲ್ಲಿ ನಮಗೆ ಪ್ರಯಾಣಿಕರ ಸುರಕ್ಷತೆಯೇ ಅತ್ಯಂತ ಮುಖ್ಯವಾದುದು.ದೆಹಲಿಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಯಾಣದ ವೇಳೆ ಎದುರಾಗುವ ಅಪಾಯಗಳನ್ನು ಎದುರಿಸಲು ತಂತ್ರಜ್ಞಾನದ ಅಗತ್ಯ ತುಂಬಾ ಇದೆ.ಈ ನಿಟ್ಟಿನಲ್ಲಿ ದೆಹಲಿ ಪೋಲೀಸರೊಂದಿಗೆ ಕೈ ಜೋಡಿಸಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ 'ಸ್ಮಾರ್ಟ್​ ಪಾರ್ಕಿಂಗ್'​ ಶುರು!!ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ 'ಸ್ಮಾರ್ಟ್​ ಪಾರ್ಕಿಂಗ್'​ ಶುರು!!

ಹಿಮ್ಮತ್ ಆಪ್ ಅನ್ನು ಊಬರ್ ಆಪ್ ನ ಮೂಲಕ ಮಹಿಳಾ ಪ್ರಯಾಣಿಕರಿಗೆ ಸಿಗುವಂತೆ ಮಾಡುವುದರೊಂದಿಗೆ ನಾವು ಅವರ ಸುರಕ್ಷತೆಯ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ದೆಹಲಿ ಪೋಲೀಸರು ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಇದನ್ನು ಸಾಧಿಸಲು ಹಿಮ್ಮತ್ ಆಪ್ ನಂತಹ ಉತ್ತಮ ಪ್ರಯತ್ನವನ್ನು ಮಾಡತ್ತಿರುವುದು ನಿಜಕ್ಕೂ ಶ್ಲಾಘನೀಯ" ಎಂದಿದ್ದಾರೆ.

ಈ ಸಹಯೋಗದ ಮೊದಲ ಹಂತದಲ್ಲಿ ಊಬರ್ ಆಪ್ ನಿಂದ ಹಿಮ್ಮತ್ ಆಪ್ ಗೆ ಇನ್-ಆಪ್ ಆಕ್ಸೆಸ್ ಕೊಡಲಿದ್ದು, ಆಪ್ ಸ್ಟೋರ್ ನಿಂದ ಹಿಮ್ಮತ್ ಆಪ್ ಅನ್ನು ಡೌನ್ಲೋಡ್ ಮಾಡಲು ಲಿಂಕ್ ಅನ್ನು ನೀಡಲಿದೆ. ಎರಡನೆಯ ಹಂತದಲ್ಲಿ ಊಬರ್ ಬಳಕೆದಾರರು ಊಬರ್ ಆಪ್ನಿಂದ ಹಿಮ್ಮತ್ ಆಪ್ ಆನ್ನು ನೇರವಾಗಿ ಆಕ್ಸೆಸ್ ಮಾಡಬಹುದು. ಕೊನೆಯ ಹಂತದಲ್ಲಿ ಊಬರ್ ಮತ್ತು ಹಿಮ್ಮತ್ ಆಪ್ ನ API ಇಂಟಗ್ರೇಟ್ ಅಥವ ಜೋಡಿಸುವ ಯೋಜನೆ ಹೊಂದಿದೆ.

"ತಂತ್ರಜ್ಞಾನದ ಬಳಕೆಯಿಂದ ಶಕ್ತಿಯುತ ಸುರಕ್ಷತಾ ಜಾಲವನ್ನು ನಿರ್ಮಿಸುವುದು ಸಾಧ್ಯ ಹಾಗೂ ತೊಂದರೆಯಲ್ಲಿರುವ ಮಹಿಳೆಯರಿಗೆ ಸಮಯೋಚಿತ ನೆರವು ನೀಡಲು ಹಿಮ್ಮತ್ ಆಪ್ ಅನ್ನು ಬಳಸಬಹುದು. ಊಬರ್ ನೊಂದಿಗಿನ ಸಹಯೋಗದಿಂದ ಇನ್ನೂ ಹೆಚ್ಚಿನ ಮಹಿಳೆಯರು ಹಿಮ್ಮತ್ ಆಪ್ನ ಸಮಯೋಚಿತ ನೆರವನ್ನು ಪಡೆಯಬಹುದು.

ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ 'ಎಮರ್ಜೆನ್ಸಿ ಬಟನ್' ಜೊತೆಗೆ ಪೋಲೀಸ್ ಸಹಾಯವಾಣಿಯನ್ನು ತಲುಪಲು ಇನ್ನೊಂದು ಮಾಧ್ಯಮ ದೊರಕಿದಂತಾಯಿತು" ಎಂದು ಹೇಳಿದ್ದಾರೆ ಸಂಜಯ್ ಬನಿವಾಲ್ , ಸ್ಪೆಶಲ್ ಕಮೀಶನರ್ ಪೋಲೀಸ್, ವುಮೆನ್ ಸೇಫ್ಟಿ, ಏರ್ಪೋರ್ಟ್ಸ್ ಆಂಡ್ ಮಾರ್ಡನೈಸೇಶನ್ .

ದೆಹಲಿ ಪೋಲೀಸ್ ನ ಕ್ರೈಮ್ ಬ್ರಾಂಚ್ ನ ಡಿಸಿಪಿ,ಮಧುರ್ ವರ್ಮಾ ಅವರು "ಸಮಾಜವು ಈಗಿರುವ ಸಂಕುಚಿತ ಮನಸ್ಥಿತಿಯಿಂದ ಹೊರಬರಬೇಕಾದರೆ ವಿಶೇಷ ಮಹಿಳಾ ಸುರಕ್ಷತಾ ಅಭಿಯಾನಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ನಡೆಸಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಾವು ಈಗಾಗಲೇ ಮಹಿಳಾ ಸಹಾಯವಾಣಿ ಸಂಖ್ಯೆ 1091 ಅನ್ನು ಹೊಂದಿದ್ದೇವೆ.

ಈಗೀಗ ಸೈಬರ್ ಸ್ಟಾಕಿಂಗ್ ಪ್ರಕರಣಗಳು ಹೆಚ್ಚಾಗಿದ್ದು ಇದರ ವಿರುದ್ಧ 1096 ಸ್ಟಾಕಿಂಗ್ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ.ಹಿಮ್ಮತ್ ಆಪ್ ಕೂಡ ಮಹಿಳೆಯರ ಸುರಕ್ಷತೆಯೆಡೆಗೆ ದೆಹಲಿ ಪೋಲೀಸರ ಮತ್ತೊಂದು ಹೆಜ್ಜೆ. ಸುರಕ್ಷತೆಯತ್ತ ನಾವು ಹೆಚ್ಚಿನ ಗಮನ ಹರಿಸಬೇಕಿದ್ದು , ಊಬರ್ ನಮ್ಮನ್ನು ನಮ್ಮ ಗುರಿಗೆ ಇನ್ನಷ್ಟು ಹತ್ತಿರ ಕರೆದೊಯ್ಯುತ್ತಿರುವದು ಸಂತೋಷಕರ ವಿಷಯವಾಗಿದೆ" ಎಂದು ಹೇಳಿದ್ದಾರೆ.

Best Mobiles in India

Read more about:
English summary
This is Delhi Police’s first partnership with any technology company

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X