ಈ ಆಪ್ ಬಳಸಿ ನಿಮ್ಮ ಕೋರ್ಟ್ ಕೇಸ್ ಬಗ್ಗೆ ಸಂಪೂರ್ಣ ವಿವರ ಪಡೆಯಿರಿ

By Gizbot Bureau
|

ಸರ್ಕಾರಕ್ಕೆ ಸಂಬಂಧಿಸಿದ ಸುಮಾರು 600 ಸೇವೆಗಳನ್ನು ಹೊಂದಿರುವ ಆಪ್ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಉದಾಹರಣೆಗೆ ಇಬುಕ್, ಗ್ಯಾಸ್ ರೀಫಿಲ್, ಪಾನ್, ಪಾಸ್ ಪೋರ್ಟ್ ಇತ್ಯಾದಿಗಳನ್ನುಈ ಆಪ್ ಹೊಂದಿದೆ. ಯಾವುದು ಆಪ್ ಎನ್ನುತ್ತಿದ್ದೀರಾ? ಅದುವೇ ಉಮಾಂಗ್ ಆಪ್. ಇದರ ಜೊತೆಗೆ ಈ ಆಪ್ ನಲ್ಲಿ ಇಕೋರ್ಟ್ ಸೇವೆಗಳಿಗೂ ಕೂಡ ಆಕ್ಸಿಸ್ ಇದೆ. ಉದಾಹರಣೆಗೆ ನಿಮ್ಮ ಕೇಸಿನ ಸಂಪೂರ್ಣ ಹಿಸ್ಟರಿ ಮತ್ತು ಉಳಿದಿರುವ ಕೇ ಗಳು ಇತ್ಯಾದಿಗಳು ಲಭ್ಯವಿದೆ. ಭಾರತದ ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಮತ್ತು ಇತರೆ ಸತ್ರ ನ್ಯಾಯಾಲಯಗಳ ಕೇಸ್ ಗಳು ಇದರಲ್ಲಿ ಲಭ್ಯವಿರುತ್ತದೆ.

ಈ ಆಪ್ ಬಳಸಿ ನಿಮ್ಮ ಕೋರ್ಟ್ ಕೇಸ್ ಬಗ್ಗೆ ಸಂಪೂರ್ಣ ವಿವರ ಪಡೆಯಿರಿ

ನೀವು ಯಾವುದೇ ಕೇಸಿನ ಸ್ಟೇಟಸ್ ಅಥವಾ ಸಂಪೂರ್ಣ ಕೇಸ್ ಹಿಸ್ಟರಿಯನ್ನು ಯಾವುದೇ ಕೋರ್ಟಿಗೆ ಸಂಬಂಧಿಸಿದ್ದೇ ಆದರೂ ಕೂಡ ಉಮಾಂಗ್ ಆಪ್ ಮೂಲಕ ಪರೀಕ್ಷಿಸಬಹುದು. ಹೇಗೆ ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

ಪ್ರಮುಖ ಅಗತ್ಯತೆಗಳು:

ಉಮಾಂಗ್ ಆಪ್ ನ ನೂತನ ವರ್ಷನ್ ಗಳು

ನಿರಂತರವಾಗಿರುವ ಅಂತರ್ಜಾಲ ಸಂಪರ್ಕ

ಇಕೋರ್ಟ್ಸ್ ಸೇವೆಗಳನ್ನು ಉಮಾಂಗ್ ಆಪ್ ಮೂಲಕ ಆಕ್ಸಿಸ್ ಮಾಡುವ ಹಂತಗಳು

1. ಉಮಾಂಗ್ ಆಪ್ ನ್ನು ತೆರೆಯಿರಿ ಮತ್ತು ಸರಿಯಾದ ಕ್ರಿಡೆನ್ಶಿಯಲ್ಸ್ ಬಳಸಿ ಲಾಗಿನ್ ಆಗಿ

2. ಸರ್ವೀಸ್ ಡೈರೆಕ್ಟ್ರಿಯಿಂದ ಇಕೋರ್ಟ್ಸ್ ಸರ್ವೀಸ್ ಆಯ್ಕೆಯನ್ನು ಟ್ಯಾಪ್ ಮಾಡಿ. ಸರ್ಚ್ ಬಾರ್ ಮೂಲಕವೂ ಇಕೋರ್ಟ್ಸ್ ಸೇವೆಗಳನ್ನು ಹುಡುಕಾಡಬಹುದು.

3. ಇಲ್ಲಿ ನಿಮಗೆ ಆಯ್ಕೆಗಳು ಸಿಗುತ್ತದೆ. ಸಿಎನ್ಆರ್ ಸಂಖ್ಯೆ ಬಳಸಿ ಹುಡುಕುವುದು, ಯಾವುದೇ ಕೇಸ್ ಸ್ಟೇಟಸ್ ಹುಡುಕುವುದು, ಕೇಸ್ ಲಿಸ್ಟ್ ಮತ್ತು ನನ್ನ ಕೇಸ್ ಗಳು.

4. ಸಿಎನ್ಆರ್ ನಂಬರ್ ಬಳಸಿ ಕೇಸ್ ಚೆಕ್ ಮಾಡಲು ಸರಿಯಾದ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ನೀವು ಆ ಕೇಸಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಈ ಕೇಸ್ ನ್ನು ನೀವು ನಿಮ್ಮ ಫೇವರೆಟ್ ಲಿಸ್ಟ್ ಗೂ ಸೇರಿಸಿಟ್ಟುಕೊಳ್ಳಬಹುದು ಮತ್ತು ಭವಿಷ್ಯದಲ್ಲಿ ಅದನ್ನು ಆಕ್ಸಿಸ್ ಮಾಡುವುದಕ್ಕಾಗಿ ಮೈ ಕೇಸ್ ಆಯ್ಕೆಗೆ ಸೇರಿಸಿಕೊಳ್ಳಬಹುದು.

Most Read Articles
Best Mobiles in India

Read more about:
English summary
Umang App For eCourt Services: How To Use Umang App

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X