Home
Apps

ಹೊಸದಾಗಿ ಬಿಡುಗಡೆಯಾಗುವ ಐಫೋನ್‌ನಲ್ಲಿ ಆಂಡ್ರಾಯ್ಡ್ ಮೀರಿಸುವ ಬ್ಯಾಟರಿ...!

By Tejaswini P G

ನಾವಿನ್ನೂ ಈ ವರ್ಷ ಬಿಡುಗಡೆಯಾದ ಆಪಲ್ ಐಫೋನ್ ಗಳ ಗುಂಗಿನಲ್ಲೇ ಇದ್ದೇವೆ. ಆದರೆ 2018 ರಲ್ಲಿ ಬಿಡುಗಡೆಯಾಗಲಿರುವ ಆಪಲ್ ಐಫೋನ್ ಗಳ ಬಗ್ಗೆ ಈಗಾಗಲೇ ಹಲವು ವದಂತಿಗಳು ಕೇಳಿಬರುತ್ತಿವೆ.

ಹೊಸದಾಗಿ ಬಿಡುಗಡೆಯಾಗುವ ಐಫೋನ್‌ನಲ್ಲಿ ಆಂಡ್ರಾಯ್ಡ್ ಮೀರಿಸುವ ಬ್ಯಾಟರಿ...!

ಈವರೆಗೆ ನಮಗೆ ದೊರೆತಿರುವ ಮಾಹಿತಿಗಳ ಅನುಸಾರ ಆಪಲ್ ಸಂಸ್ಥೆಯು 2018 ರಲ್ಲಿ 3 ವಿಭಿನ್ನ ಐಫೋನ್ ಗಳನ್ನು ಲಾಂಚ್ ಮಾಡಲಿದೆ. ಅವುಗಳ ಪೈಕಿ ಎರಡು ಐಫೋನ್ ಗಳು OLED ಡಿಸ್ಪ್ಲೇ ಹೊಂದಿದ್ದರೆ, ಇನ್ನುಳಿದ ಒಂದು ಮಾಡೆಲ್ ಐಫೋನ್ X ನ ಅಗ್ಗದ ಆವೃತ್ತಿಯಾಗಿರಲಿದ್ದು LCD ಡಿಸ್ಪ್ಲೇ ಹೊಂದಿರಲಿದೆ. ಇನ್ನು ಕೆಜಿಐ ಸೆಕ್ಯುರಿಟೀಸ್ ನ ಖ್ಯಾತ ವಿಶ್ಲೇಷಕರಾದ ಮಿಂಗ್-ಚಿ ಕ್ಯೋ ಅವರು ಮುಂಬರಲಿರುವ ಆಪಲ್ ಐಫೋನ್ಗಳ ಕುರಿತು ಮತ್ತಷ್ಟು ಕುತೂಹಲಕಾರಿ ಅಂಶಗಳನ್ನು ತಿಳಿಸಿದ್ದಾರೆ.

ಅವರ ಅನುಸಾರ 2018 ರಲ್ಲಿ ಬರಲಿರುವ ಎಲ್ಲಾ ಐಫೋನ್ ಮಾಡೆಲ್ ಗಳು ದೊಡ್ಡ ಗಾತ್ರದ ಬ್ಯಾಟರಿಯೊಂದಿಗೆ ಬರಲಿವೆ. ಈ ಸುದ್ದಿ ಕೇಳಿ ನೀವು ಸಂತೋಷಪಡುವುದು ಸಹಜ. ಆದರೆ ಸಂಭ್ರಮಿಸುವ ಮೊದಲು ನೀವು ತಿಳಿಯಬೇಕಾದ ವಿಷಯವೇನೆಂದರೆ ಬ್ಯಾಟರಿಯ ಗಾತ್ರ ಹಿರಿದಾದ ಮಾತ್ರಕ್ಕೆ ಅದರ ಬ್ಯಾಟರಿ ಲೈಫ್ ಹೆಚ್ಚಾಗಬೇಕೆಂದೇನಿಲ್ಲ.ಮಿಂಗ್-ಚಿ ಕ್ಯೋ ರ ಪ್ರಕಾರ ಮುಂದೆ ಬರಲಿರುವ ಸುಧಾರಿತ 3ಡಿ ಸೆನ್ಸಿಂಗ್ ಸಾಮರ್ಥ್ಯ ಮತ್ತು AR ಗೆ ಸಂಬಂಧಿಸಿದ ಫೀಚರ್ಗಳಿಗೆ ಅಗತ್ಯ ಬೆಂಬಲ ನೀಡುವ ಸಲುವಾಗಿ ಆಪಲ್ ದೊಡ್ಡ ಗಾತ್ರದ ಬ್ಯಾಟರಿಗಳನ್ನು ಈ ಮೊಬೈಲ್ಗಳಲ್ಲಿ ಅಳವಡಿಸಲಿದೆ.

ಈ ವರ್ಷವೂ ಕೂಡ ಆಪಲ್ ತನ್ನ ಐಫೋನ್ X ನಲ್ಲಿ ನೂತನ್ ಬ್ಯಾಟರಿ ವಿನ್ಯಾಸವನ್ನು ಅಳವಡಿಸಿದ್ದು, ಬ್ಯಾಟರಿಯ 2 ಭಾಗಗಳನ್ನು ಒಂದಕ್ಕೊಂದು ಜೋಡಿಸಿ L-ಆಕಾರವನ್ನು ಹೊಂದಿತ್ತು.ಹಾಗಾಗಿ 2018 ರಲ್ಲಿ ಮತ್ತೆ ಆಪಲ್ ಬ್ಯಾಟರಿಯ ವಿನ್ಯಾಸದಲ್ಲಿ ಬದಲಾವಣೆಗಳನ್ನು ತಂದರೆ ಆಶ್ಚರ್ಯವೇನಿಲ್ಲ.

ಅಲ್ಲದೆ ಈಗಿರುವ ಫ್ಲೆಕ್ಸ್ ಪಿಸಿಬಿ ಯ ಬದಲಾಗಿ ಹೊಸ ಐಫೋನ್ಗಳ ಬ್ಯಾಟರಿಗೆ ರಿಜಿಡ್-ಫ್ಲೆಕ್ಸ್ ಪಿಸಿಬಿ ಯನ್ನು ಬಳಸಲಾಗುವುದು. ಹಾಗೆಯೇ ಬ್ಯಾಟರಿ ಗಾತ್ರ ದೊಡ್ಡದಾದಂತೆ ಐಫೋನಿನ ಪ್ರಾಸೆಸರ್ ಮೊದಲಾದ ಭಾಗಗಳ ಗಾತ್ರ ಕಿರಿದಾಗುವ ಸಾಧ್ಯತೆಯಿದೆ.

ಇನ್ನು ಮಿಂಗ್-ಚಿ ಕ್ಯೋ ಅವರು ಆಪಲ್ 2018ರಲ್ಲಿ ಐಫೋನ್ X ನ ಉತ್ತರಾಧಿಕಾರಿಯಾಗಿ ಹೊಸ ಫೋನ್ ಒಂದನ್ನು ಲಾಂಚ್ ಮಾಡಲಿರುವುದಾಗಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಆಪಲ್ ಸಂಸ್ಥೆಯು ಪ್ಲಸ್-ಸೈಜ್ ನ ಅಂದರೆ ದೊಡ್ಡ ಗಾತ್ರದ ಫೋನ್ ಒಂದನ್ನು ಬಿಡುಗಡೆ ಮಾಡಲಿದ್ದು, ಅದು 6.5 ಇಂಚ್ ನ OLED ಡಿಸ್ಪ್ಲೇ ಹೊಂದಿರಲಿದೆ. ಇನ್ನು ಮೂರನೆಯ ಐಫೋನ್ ಮಾಡೆಲ್ 6.1 ಇಂಚ್ ನ LCD ಡಿಸ್ಪ್ಲೇಯೊಂದಿಗೆ ಬರಲಿದೆ.

2018ರಲ್ಲಿ ಬರಲಿರುವ ಐಫೋನ್ಗಳ ಕುರಿತು ಇಷ್ಟೆಲ್ಲಾ ಮಾಹಿತಿ ಇಲ್ಲಿ ನೀಡಿದ್ದರೂ ಈ ಮಾಹಿತಿಯನ್ನು ಸಂಪೂರ್ಣವಾಗಿ ನಂಬಬೇಡಿ ಎಂಬ ಕಿವಿಮಾತು ನಿಮಗೆ ನೀಡಲು ಬಯಸುತ್ತೇವೆ. ಆಪಲ್ ಕುರಿತು ಏನೇ ವದಂತಿ ಅಥವಾ ಮಾಹಿತಿ ಕೇಳಿಬಂದರೂ ಅದನ್ನು ಕೊನೆವರೆಗೂ ವದಂತಿಯಾಗಿಯೇ ಪರಿಗಣಿಸಬೇಕು. ಏಕೆಂದರೆ ಆಪಲ್ ಸದಾ ಕೊನೆ ಘಳಿಗೆಯಲ್ಲಿ ಏನಾದರೂ ಆಶ್ಚರ್ಯಗಳನ್ನು ನೀಡುವುದರಲ್ಲಿ ಹೆಸರು ಗಳಿಸಿದೆ.

Best Mobiles in India

English summary
Upcoming Apple iPhones will feature significantly larger batteries. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+