ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಒನ್‍ಪ್ಲಸ್ 6!

By Prateeksha Hosapattankar
|

ಮುಂದಿನ ಪೀಳಿಗೆಯ ಒನ್‍ಪ್ಲಸ್ ನ ಸ್ಮಾರ್ಟ್‍ಫೋನ್ ಕೊಡುಗೆ ಈಗಾಗಲೇ ಅಂತರ್ಜಾಲದಲ್ಲಿ ಸುದ್ದಿ ಮಾಡುತ್ತಿದೆ. ಬರಲಿರುವ ಒನ್‍ಪ್ಲಸ್ 6 ಫೋನಿನ ವಿನ್ಯಾಸ ಮತ್ತು ಸ್ಪೆಸಿಫಿಕೇಷನ್ಸ್ ಬಗ್ಗೆ ಹಲವಾರು ಊಹಾ ಪೋಹಗಳನ್ನು ನಾವು ಬಹಳಷ್ಟು ನೋಡಿದ್ದೇವೆ. ಈ ಫೋನು ಜೂನ್ 2018 ರಲ್ಲಿ ಬರುವುದೆಂದು ನಿರೀಕ್ಷಿಸಲಾಗಿದೆ. ಬಂದ ಸುದ್ದಿ ಹಾಗೂ ಗಾಳಿ ಸುದ್ದಿ ಪ್ರಕಾರ, ಒನ್‍ಪ್ಲಸ್ ಸಿಇಒ ಪೀಟ್ ಲಾವು ಕೂಡ ಧೃಢ ಪಡಿಸಿರುವ ಹಾಗೆ ಕಂಪನಿಯ ಮುಂದಿನ ಪೀಳಿಗೆಯ ಫೋನ್ ಸ್ನಾಪ್‍ಡ್ರಾಗನ್ 845 ಪ್ರೊಸೆಸರ್ ಹೊಂದಿದ್ದು ಇದು ತಡವಾಗಿ ಬರಲಿದೆ.

ಒನ್‍ಪ್ಲಸ್ 6 ನೂತನ ಒಕ್ಸಿಜನ್ ಒಎಸ್ ಮತ್ತು ಯಾರದೂ ಇಲ್ಲದ ಅತಿ ಬಲಿಷ್ಟ ಹಾರ್ಡ್‍ವೇರ್ ಹೊಂದಿದೆ ಎಂದು ಹೇಳದ ಹೊರತು ಮಾತು ಮುಗಿಯದು. ಇದರ ಜೊತೆಗೆ, ಬಂದಿರುವ ಸುದ್ದಿ ಪ್ರಕಾರ ಕ್ಯಾಮೆರಾ ಸೆಟಪ್ ನಲ್ಲಿ ಮತ್ತು ಗಾಜಿನ ಬೊಡಿಯಲ್ಲಿ ಬದಲಾವಣೆ ಮಾಡಲಾಗಿದೆ ವೈಯರಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸುವ ಉದ್ದೇಶದಿಂದ. ಬಹುಶಃ ಸುಧಾರಿತ ಫೇಸ್ ಅನ್ಲೊಕಿಂಗ್ ಫೀಚರ್ ನೋಡಲು ಸಿಗಬಹುದು ಮತ್ತು ಡ್ಯಾಷ್ ಚಾರ್ಜಿಂಗ್ ಸಪೊರ್ಟ್.

ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಒನ್‍ಪ್ಲಸ್ 6!

ಬರೊಬ್ಬರಿ ಸೆಣಸಾಟ ಕಾದಿದೆ

ಎಲ್ಲವನ್ನೂ ನೋಡಿದ ಮೇಲೆ ಒನ್‍ಪ್ಲಸ್ 6 ಬಗ್ಗೆ ಯಾವುದೇ ರೀತಿಯ ಅನುಮಾನವಿಲ್ಲಾ. ಆದರೆ , ಎಮ್‍ಡಬ್ಲ್ಯುಸಿ 2018 ಸ್ಪಷ್ಟವಾಗಿ ಹೇಳಿದೆ ಸ್ಪರ್ಧೆಯು ತುಂಬಾ ಅಮಾನುಷ ಹಾಗೂ ಕಷ್ಟದಾಯಕವಾಗಲಿದೆ. ಆನುವಲ್ ಟೆಕ್ ಶೋ ಈಗಾಗಲೇ ಸಾಕ್ಷಿಯಾಗಿದೆ ದೊಡ್ಡ ಕುಳಗಳ ಕೆಲ ಅದ್ಭುತ ಮೊಬೈಲ್ ಡಿವೈಜ್ ಗಳ ಬಿಡುಗಡೆಗೆ ಹಾಗೂ ಇವುಗಳು ಒನ್‍ಪ್ಲಸ್ ನ ಮುಂದಿನ ಪೀಳಿಗೆಯ ಸ್ಮಾರ್ಟ್‍ಫೋನ್ ಅಧಿಕೃತವಾಗಿ ಬಿಡುಗಡೆಯಾಗುವ ಮುಂಚೆಯೇ ಅದರ ಮೇಲಿದ್ದ ಗಮನವನ್ನು ತಮ್ಮೆಡೆಗೆ ಕದ್ದವು.

ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಒನ್‍ಪ್ಲಸ್ 6!

ಎಮ್‍ಡಬ್ಲ್ಯುಸಿ 2018 ರ ಹೊಳೆಯುವ ನಕ್ಷತ್ರಗಳು

ಸ್ಯಾಮ್ಸಂಗ್ ತನ್ನ ಮುಂಬರುವ ಗೆಲಾಕ್ಸಿ ಎಸ್9 ಮತ್ತು ಗೆಲಾಕ್ಸಿ ಎಸ್9+ ತೋರಿಸಿದೆ. ಇದು ಈಗಾಗಲೇ ನೂತನ ಕ್ವ್ಯಾಲಕೊಮ್ ಸ್ನಾಪ್‍ಡ್ರಾಗನ್ ಚಿಪ್‍ಸೆಟ್ ಹೊಂದಿದ್ದು ಮೆಚ್ಚುವಂತಹ ಕ್ಯಾಮೆರಾ ಹಾರ್ಡ್‍ವೇರ್ ಹೊಂದಿದೆ. ಹೊಸ ಗೆಲಾಕ್ಸಿ ಸ್ಮಾರ್ಟ್‍ಫೋನುಗಳು ಭಾರತದಲ್ಲಿ ದೆಹಲಿಯಲ್ಲಿ ಮಾರ್ಚ್ 6, 2018 ಕ್ಕೆ ಬಿಡುಗಡೆಯಾಗಲಿದೆ. ಇದರ ಹೊರತಾಗಿ ಎಲ್‍ಜಿ ವಿ30ಎಸ್ ಥಿನ್‍ಕ್ಯೂ ಮತ್ತು ವಿ30ಎಸ್ ಥಿನ್‍ಕ್ಯೂ+ ಕಳೆದ ವರ್ಷದ ಸ್ನಾಪ್‍ಡ್ರಾಗನ್ 835 ಸಿಪಿಯು ಹೊಂದಿದೆ ಆದರೆ ಅದರೊಂದಿಗೆ ಆರ್ಟಿಫಿಷಲ್ ಇಂಟೆಲಿಜೆನ್ಸ್ ಒಳಗೊಂಡಿದೆ. ಪಟ್ಟಿಯಲ್ಲಿ ಮುಂದೆ ಆಸಸ್ ಜೆನ್‍ಫೋನ್ 5ಜೆಡ್, ಇದು ಕೂಡ ಪ್ರಪಂಚವನ್ನು ಬೆರಗು ಗೊಳಿಸಿತು ಕ್ವ್ಯಾಲಕೊಮ್ ಸ್ನ್ಯಾಪ್‍ಡ್ರಾಗನ್ 845 ಪ್ರೊಸೆಸರ್ ಹಾಗೂ ಭಾರಿ 8ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೆಜ್ ಹೊಂದಿರುವ ಮೂಲಕ.

ಇದೆಲ್ಲಾ ನಿವiಗೆ ಉತ್ಸಾಹ ತರಿಸದೇ ಹೋದಲ್ಲಿ ನಿಮಗೆ ಖುಷಿಯಾಗಬಹುದು ಹುವಾವೈ ತನ್ನ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲಿದೆ - ಬಹುಶಃ ಪಿ 20, ಈ ಮೊಬೈಲ್ ಮೇಲಿರುವ ನಿರೀಕ್ಷೆ ಪ್ರಕಾರ ಈ ಹುವಾವೈ ಪಿ20 ಸ್ಮಾರ್ಟ್‍ಫೋನು 40 ಎಮ್‍ಪಿ ಟ್ರಿಪಲ್ ಲೆನ್ಸ್ ಕ್ಯಾಮೆರಾ 5 ಪಟ್ಟು ಹೈಬ್ರಿಡ್ ಜೂಮ್ ನೊಂದಿಗೆ ಬರಲಿದೆ. ಅಷ್ಟೇ ಅಲ್ಲಾ ಅಡ್ವಾನ್ಸ್ಡ್ 3ಡಿ ಡೆಪ್ತ್ ಸೆನ್ಸಿಂಗ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಕೂಡ ನಾವು ಕಾಣಬಹುದು ಹೆಚ್ಚಿನ ಸೆಕ್ಯುರಿಟಿ ಅಪ್ಲಿಕೇಷನ್ಸ್ ನೊಂದಿಗೆ.

ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಒನ್‍ಪ್ಲಸ್ 6!

ಒನ್‍ಪ್ಲಸ್ ಅನ್ನು ಏನು ಉಳಿಸಬಹುದು ?

ಮೊಬೈಲ್ ತಂತ್ರಜ್ಞಾನದಲ್ಲಿ ಈ ಎಲ್ಲಾ ತಲೆ ತಿರುಗುವಂತಹ ಬೆಳವಣಿಗೆಗಳನ್ನು ಕಂಡಾಗ, ನಾವು ಒನ್‍ಪ್ಲಸ್ 6 ಅಧಿಕೃತವಾಗಿ ಬಿಡುಗಡೆಯಾಗುವ ದಿನದ ಮುಂಚೆಯೇ ಅಪಾಯದಲ್ಲಿದೆ ಎಂದು ಹೇಳಬಹುದು. ಕೇವಲ ಸ್ನಾಪ್‍ಡ್ರಾಗನ್ 845 ಸಿಪಿಯು ಮತ್ತು 8 ಜಿಬಿ ರಾಮ್ ನಿಂದ ಪ್ರತ್ಯೇಕತೆ ಪಡೆಯಲು ಇಲ್ಲವೇ ಉತ್ತಮ ಸ್ಪರ್ಧೆ ನೀಡಿ ಉಳಿದುಕೊಳ್ಳಲು ಸಾಧ್ಯವಿಲ್ಲಾ. ಒನ್‍ಪ್ಲಸ್ ಇನ್ನೂ ದೊಡ್ಡ ಸುಧಾರಣೆ ಕ್ಯಾಮೆರಾದಲ್ಲಿ ತರಬೇಕು. ಡುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಪೋಟ್ರೇಟ್ ಫೀಚರ್ ಮುಂದಿನ ತಿಂಗಳುಗಳಲ್ಲಿ ಯಾವುದೇ ಲಾಭ ತರಲಿಕ್ಕಿಲ್ಲಾ. ನಾವು ನೈಜತೆಯನ್ನು ಮರೆತಿಲ್ಲಾ ಒನ್‍ಪ್ಲಸ್ ಇನ್ನೂ ಹೊಸ ಕಂಪನಿ ಬಹಳಷ್ಟು ಸಂಪನ್ಮೂಲಗಳನ್ನು ದೊಡ್ಡ ಕಂಪನಿಗಳಾದ ಸ್ಯಾಮ್ಸಂಗ್, ಆಪಲ್ ಮತ್ತು ಹುವಾವೈ ಹಾಗೆ ಹೊಂದಿಲ್ಲಾ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ಆದರೂ, ಇದರ ಬಗ್ಗೆಯೇ ಪ್ರತಿ ಬಾರಿ ತುತ್ತೂರಿ ಊದಿ ಮೂಗಿನ ಕೆಳಗೆ ಸ್ಪರ್ಧೆ ನಡೆಯುವ ಹಾಗೆ ಮಾಡಲಾಗದು. ಸ್ಯಾಮ್ಸಂಗ್ ಅದೇ ಬೆಲೆಯಲ್ಲಿ ಗೆಲಾಕ್ಸಿ ಎ8+ ಅನ್ನು ಐಪಿ68 ರೇಟಿಂಗ್ ನೊಂದಿಗೆ ನೀಡುವುದಾದರೆ , ಒನ್‍ಪ್ಲಸ್ ತನ್ನ ಅದ್ಭುತ ಉತ್ಪನ್ನಗಳನ್ನು ಉಳಿಸಿಕೊಳ್ಳುವಲ್ಲಿ ಸಫಲತೆಯನ್ನು ಕಾಣಬಹುದು. ಇನ್ನೊಂದು ರೀತಿಯಲ್ಲಿ ಕೂಡ ಒನ್‍ಪ್ಲಸ್ ಉಳಿಯಬಹುದು, ಮೈಕ್ರೊಎಸ್‍ಡಿ ಕಾರ್ಡ್ ಸಪೊರ್ಟ್. ಇಲ್ಲಿವರೆಗೆ, ಒನ್‍ಪ್ಲಸ್ ಡಿವೈಜ್ ನಲ್ಲಿ ಸ್ಟೋರೆಜ್ ಹೆಚ್ಚಿಸುವ ಆಯ್ಕೆ ನೀಡಿಲ್ಲಾ. ಮುಂಬರುವ ದಿನಗಳಲ್ಲಿ ಇದನ್ನು ಬದಲಾಯಿಸಿ ಫೋನಿನ ಪ್ರಾಮುಖ್ಯತೆ ಹೆಚ್ಚಿಸಬಹುದು.

ಇದರ ಹೊರತಾಗಿ, ಆರ್ಟಿಫಿಷಲ್ ಇಂಟೆಲಿಜೆನ್ಸ್ ಕೂಡ ಒನ್‍ಪ್ಲಸ್ 6 ರ ಆಟದ ರೀತಿಯನ್ನು ಬದಲಿಸಬಹುದು. ಸ್ಮಾರ್ಟ್‍ಫೋನ್ ಕೆಲ ಮಷಿನ್ ಲರ್ನಿಂಗ್ ಉಪಯೋಗಿಸಬಹುದು. ಹೊನರ್ ವ್ಯು 10 ಮಾಡಿದ ಹಾಗೆ. ಇದು ಬಳಕೆದಾರರ ದಿನಂಪ್ರತಿಯ ಅನುಭವವನ್ನು ಇನ್ನೂ ಚೆನ್ನಾಗಿ ಮಾಡುತ್ತದೆ.

ಕೊನೆಯದು ಆದರೂ ಮುಖ್ಯವಾದ ಅಂಶ, ದೊಡ್ಡ ಬ್ಯಾಟರಿ ಯುನಿಟ್, ಸುಧಾರಿತ ಆಡಿಯೊ ಮತ್ತು ಅವಶ್ಯಕ ಆಕ್ಸೆಸರೀಜ್ (ಇಯರ್ ಫೋನ್) ನೀಡುವುದು ಉಪಯೋಗಕಾರಿಯಾಗಲಿದೆ. ಒನ್‍ಪ್ಲಸ್ 6 ಎಲ್ಲಾ ರೀತಿಯಲ್ಲಿ ಸರಿಯಾಗಲಿಕ್ಕಿಲ್ಲಾ ಆದರೆ ಕಂಪನಿ ಈ ಎಲ್ಲಾ ಫೀಚರ್ ಗಳನ್ನು ಅಳವಡಿಸಿಕೊಂಡಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಉತ್ತಮ ಬೆಲೆಯ ಹ್ಯಾಂಡ್ ಸೆಟ್ ಆಗುವ ಸಾಧ್ಯತೆ ಖಂಡಿತ ಇದೆ. ಹೆಚ್ಚಿನ ಮಾಹಿತಿಗಾಗಿ ಗಿಜ್‍ಬಾಟ್ ನೊಂದಿಗೆ ಸಂಪರ್ಕದಲ್ಲಿರಿ.

Most Read Articles
Best Mobiles in India

English summary
The upcoming OnePlus 6 will undoubtedly be a force to reckon with. But can it compete with the smartphones showcased at the Mobile World Congress 2018? Let’s find out. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more