Home
Apps

ಶೀಘ್ರದಲ್ಲಿಯೇ ವಾಟ್ಸ್‌ಆಪ್‌ನ್ನು ಆಕ್ರಮಿಸಿಕೊಳ್ಳಲಿವೆ ಈ ಫೀಚರ್ಸ್‌..!

By Gizbot Bureau

ಜಗತ್ತಿನ ಪ್ರಸಿದ್ಧ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸ್‌ಆಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಹೆಚ್ಚು ನಿರೀಕ್ಷಿತ ಫೀಚರ್‌ಗಳ ಅಪ್‌ಡೇಟ್‌ ಪಡೆದಿಲ್ಲ. ಬಹುನಿರೀಕ್ಷಿತ ಡಾರ್ಕ್ ಮೋಡ್ ಬಗ್ಗೆ ವದಂತಿಗಳು ದೀರ್ಘ ಸಮಯದಿಂದ ಕೇಳಿಬರುತ್ತಿದೆ. ಡಾರ್ಕ್‌ ಮೋಡ್‌ ಜೊತೆ ಮುಂಬರುವ ಅಪ್‌ಡೇಟ್‌ಗಳಲ್ಲಿ ವಾಟ್ಸ್‌ಆಪ್ ಬಳಕೆದಾರರು ಅನೇಕ ಫೀಚರ್‌ಗಳನ್ನು ನಿರೀಕ್ಷಿಸಬಹುದು.

ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ

ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಸ್ವಯಂ-ವಿನಾಶಕಾರಿ ಸಂದೇಶ, ಹೊಸ ಸ್ಪ್ಲಾಶ್ ಪರದೆ ಮತ್ತು ಹೈಡ್ ಮ್ಯೂಟ್ ಸ್ಟೇಟಸ್ ಫೀಚರ್‌ಗಳಾಗಿವೆ. ಈ ನವೀಕರಣಗಳನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊರತರಲಾಗುತ್ತಿದ್ದು, ಇತ್ತೀಚಿನ ಬೀಟಾ ರೋಲ್‌ ಔಟ್ ಪಡೆದ ಕೆಲವು ಆಂಡ್ರಾಯ್ಡ್ ಬಳಕೆದಾರರು ಈಗಾಗಲೇ ಈ ಫೀಚರ್‌ಗಳನ್ನು ಬಳಸುತ್ತಿದ್ದಾರೆ. ಆ ಫೀಚರ್‌ಗಳ ಸುತ್ತ ಒಂದು ನೋಟ..

ಡಾರ್ಕ್ ಮೋಡ್

ಡಾರ್ಕ್ ಮೋಡ್

ಇನ್‌ಸ್ಟಾಗ್ರಾಮ್, ಟ್ವಿಟ್ಟರ್, ಗೂಗಲ್ ಫೋಟೋಸ್‌, ಯೂಟ್ಯೂಬ್, ಫೇಸ್‌ಬುಕ್, ಮೆಸೆಂಜರ್ ಮತ್ತು ಇನ್ನೂ ಅನೇಕ ವೇದಿಕೆಗಳು ಈಗಾಗಲೇ ಡಾರ್ಕ್ ಮೋಡ್ ಪರಿಚಯಿಸಿದ್ದು, ಈ ಓಟದಲ್ಲಿ ವಾಟ್ಸ್‌ಆಪ್ ಕೊನೆಯ ಸ್ಥಾನದಲ್ಲಿದೆ. ವಾಟ್ಸ್‌ಆಪ್‌ನಲ್ಲಿ ಡಾರ್ಕ್ ಮೋಡ್ ಇನ್ನೂ ಅಭಿವೃದ್ಧಿಯಾಗುತ್ತಿದ್ದರೂ, ಕೆಲವು ಹಳೆಯ ಬೀಟಾ ಆವೃತ್ತಿಗಳಲ್ಲಿ ಈ ಫೀಚರ್‌ನ್ನು ಗುರುತಿಸಲಾಗಿದೆ. ಆದಾಗ್ಯೂ, ಶೀಘ್ರದಲ್ಲಿಯೇ ಡಾರ್ಕ್ ಮೋಡ್ ಅನ್ನು ವಾಟ್ಸ್‌ಆಪ್‌ ಬಿಡುಗಡೆ ಮಾಡುತ್ತೆ ಎನ್ನಲಾಗಿದ್ದು, ಡಾರ್ಕ್ ಮೋಡ್‌ ಡಾರ್ಕ್ ಟೆಕ್ಸ್ಟ್ ಬಬಲ್‌ಗಳೊಂದಿಗೆ ಬರುತ್ತದೆ.

ಸ್ವಯಂ-ವಿನಾಶಕಾರಿ ಸಂದೇಶಗಳು

ಸ್ವಯಂ-ವಿನಾಶಕಾರಿ ಸಂದೇಶಗಳು

ವಾಟ್ಸ್‌ಆಪ್‌ನ ಡಿಲೀಟ್‌ ಫಾರ್‌ ಆಲ್‌ ಫೀಚರ್‌ ಸ್ವಲ್ಪ ಸಮಯದಿಂದ ಬಳಕೆಗೆ ಬಂದಿದೆ. ಇದರ ಜೊತೆ ವಾಟ್ಸ್‌ಆಪ್ ಶೀಘ್ರದಲ್ಲೇ ಸ್ವಯಂ-ವಿನಾಶಕಾರಿ ಸಂದೇಶ ಫೀಚರ್‌ ಪರಿಚಯಿಸಬಹುದು, ಇದು ಬಳಕೆದಾರರಿಗೆ 5 ಸೆಕೆಂಡುಗಳು, 1 ಗಂಟೆ, 1 ದಿನ, 7 ದಿನಗಳು ಅಥವಾ 30 ದಿನಗಳ ನಂತರ ಸಂದೇಶವನ್ನು ಮರುಪಡೆಯಲು ಅನುವು ಮಾಡಿಕೊಡುತ್ತದೆ. ಇದು ಸ್ನ್ಯಾಪ್‌ಚಾಟ್ ಮೂಲಕ ಕಳುಹಿಸುವ ಸ್ನ್ಯಾಪ್‌ಗಳಂತೆಯೇ ಇರುತ್ತದೆ.

ಸ್ಪ್ಲಾಶ್ ಪರದೆ

ಸ್ಪ್ಲಾಶ್ ಪರದೆ

ನೀವು ಅಪ್ಲಿಕೇಶನ್‌ನ್ನು ಮೊದಲ ಬಾರಿಗೆ ಪ್ರಾರಂಭಿಸಿದಾಗ ವಾಟ್ಸ್‌ಆಪ್‌ ಲೋಗೋ ಕಾಣಿಸಿಕೊಳ್ಳುತ್ತದೆ. ಇದು ಇತ್ತೀಚಿನ ಅಪ್‌ಡೇಟ್‌ನಲ್ಲಿ ಸ್ಪ್ಲಾಶ್ ಸ್ಕ್ರೀನ್ ವೈಶಿಷ್ಟ್ಯ ಸೇರಿಸಿದ ನಂತರ ಕಾಣುತ್ತಿದೆ. ಡಾರ್ಕ್ ಮೋಡ್‌ನಲ್ಲಿ ವಾಟ್ಸ್‌ಆಪ್‌ ಲೋಗೋ ವಿಭಿನ್ನವಾಗಿ ಕಾಣಿಸುತ್ತದೆ. ಸ್ಪ್ಲಾಶ್‌ ಸ್ಕ್ರೀನ್ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಮ್ಯೂಟೆಡ್‌ ಸ್ಟೇಟಸ್‌ ಹೈಡ್‌ ಮಾಡಿ

ಮ್ಯೂಟೆಡ್‌ ಸ್ಟೇಟಸ್‌ ಹೈಡ್‌ ಮಾಡಿ

ಮ್ಯೂಟೆಡ್‌ ಸ್ಟೇಟಸ್‌ ಹೈಡ್‌ ಫೀಚರ್‌ನಲ್ಲಿ ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿ ಮ್ಯೂಟ್ ಮಾಡಿದ ಎಲ್ಲ ಸ್ಟೇಟಸ್‌ಗಳ ಅಪ್‌ಡೇಟ್‌ಗಳನ್ನು ಹೈಟ್‌ ಮಾಡಲು ಅನುಮತಸಿತ್ತದೆ. ಈ ಫೀಚರ್‌ನಡಿಯಲ್ಲಿ ಮ್ಯೂಟ್ ಮಾಡಲಾದ ಸ್ಟೇಟಸ್‌ ಅಪ್‌ಡೇಟ್‌ಗಳ ವಿಭಾಗದ ಮೇಲೆ ಹೈಡ್‌ ಬಟನ್ ಇರುತ್ತದೆ. ನಂತರ, 'ಶೋ' ಬಟನ್ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಹೈಡ್ ಸ್ಟೇಟಸ್‌ಗಳನ್ನು ಮತ್ತೆ ನೋಡಬಹುದು.

Best Mobiles in India

English summary
Upcoming WhatsApp Features For Android And iOS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+