ನಿಮಗೆ ಗೊತ್ತಿರಲಿ!..ಹಳೆಯ ವಸ್ತುವನ್ನು ತಕ್ಷಣವೇ ಖರೀದಿಸುವ ವೆಬ್‌ಸೈಟ್ 'ಝೀಫೋ'!!

ನಿಮಗೆ ಒಎಲ್ಎಕ್ಸ್ ವೆಬ್‌ಸೈಟ್ ಗೊತ್ತಲ್ವಾ? ಅದೇ ರೀತಿಯದ್ದೆ ಆದ ಹೊಸದೊಂದು ವೆಬ್‌ಸೈಟ್ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ.!

|

ನಿಮಗೆ ಒಎಲ್ಎಕ್ಸ್ ವೆಬ್‌ಸೈಟ್ ಗೊತ್ತಲ್ವಾ? ಅದೇ ರೀತಿಯದ್ದೆ ಆದ ಹೊಸದೊಂದು ವೆಬ್‌ಸೈಟ್ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ.! ಆದರೆ, ಒಎಲ್ಎಕ್ಸ್ ಗಿಂತಲೂ ಕೊಂಚ ವಿಭಿನ್ನ ಕಾರ್ಯನಿರ್ವಹಣೆಯಿಂದ ಕೆಲವೇ ದಿವಸಗಳಲ್ಲಿ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ!!

ಹೌದು, ಗೋಝೀಫೋ( GoZefo) ಎಂಬ ನೂತನ ಆನ್‌ಲೈನ್ ನವೋದ್ಯಮ ಹುಟ್ಟಿಕೊಂಡಿದ್ದು, ಗ್ರಾಹಕರು ಮಾರಲು ಇಚ್ಚಿಸಿರುವ ಯಾವುದೇ ವಸ್ತುಗಳನ್ನು ಕೇವಲ 48 ಗಂಟೆಗಳ ಒಳಾಗಾಗಿ ಖರೀದಿಸುವ ಆಯ್ಕೆಯನ್ನು ನೀಡಿದೆ.!! ಮೊಬೈಲ್ಸ್, ಎಲೆಕ್ಟ್ರಾನಿಕ್ ಉಪಕರಣ, ಪೀಠೋಪಕರಣ ಎಲ್ಲವನ್ನು ತಕ್ಷಣವೇ ಮಾರುವ ಆಯ್ಕೆಯನ್ನು ಈ ಗೋಝೀಫೋ ಹೊಂದಿದೆ.!!

ಹಾಗಾದರೆ, ಗೋಝೀಫೋ( GoZefo) ಹೇಗೆ ಕಾರ್ಯನಿರ್ವಹಿಸುತ್ತದೆ? ಒಎಲ್‌ಎಕ್ಸ್‌ಗಿಂತಲೂ ಗೋಝೀಫೋ( GoZefo) ವೆಬ್‌ಸೈಟ್ ಬೆಸ್ಟ್ ಏಕೆ? ಇದರಿಂದ ಗ್ರಾಹಕರಿಗೆ ಹೇಗೆಲ್ಲಾ ಲಾಭ? ಎಲ್ಲೆಲ್ಲಿ ಗೋಝೀಫೋ( GoZefo) ಕಾರ್ಯನಿರ್ವಹಿಸುತ್ತದೆ ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

2015ರಲ್ಲಿ ಹುಟ್ಟಿದ ಗೋಝೀಫೋ( GoZefo)!!

2015ರಲ್ಲಿ ಹುಟ್ಟಿದ ಗೋಝೀಫೋ( GoZefo)!!

ರೋಹಿತ್ ರಾಮಸುಬ್ರಮಣಿಯನ್, ಕರಣ್ ಗುಪ್ತ, ಹಿಮೇಶ್ ಜೋಷಿ ಹಾಗೂ ಅರ್ಜಿತ್ ಗುಪ್ತ ಎಂಬುವವರು 2015ರ ಆಗಸ್ಟ್​ನಲ್ಲಿ ಬೆಂಗಳೂರಿನಲ್ಲಿ ಗೋಝೀಫೋ( GoZefo) ನವೋದ್ಯಮ ಹುಟ್ಟಿಹಾಕಿದ್ದಾರೆ. ಪೀಠೋಪಕರಣ ಮಾರಾಟ ಹಾಗೂ ಖರೀದಿಗೆ ಸೀಮಿತಗೊಂದ್ದ ಗೋಝೀಫೋ, ಇಂದು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಗೃಹೋಪಯೋಗಿ ಯಂತ್ರೋಪಕರಣಗಳನ್ನೂ ತನ್ನ ಪಟ್ಟಿಗೆ ಸೇರಿಸಿಕೊಂಡಿದೆ.!!

ಗೋಝೀಫೋ( GoZefo) ಹೇಗೆ ಕಾರ್ಯನಿರ್ವಹಿಸುತ್ತದೆ?

ಗೋಝೀಫೋ( GoZefo) ಹೇಗೆ ಕಾರ್ಯನಿರ್ವಹಿಸುತ್ತದೆ?

ಗ್ರಾಹಕರು ತಾವು ಮಾರಲಿಚ್ಛಿಸುವ ವಸ್ತುವಿನ ಫೋಟೋ ಹಾಗೂ ಅದರ ಬಗೆಗಿನ ವಿವರಗಳನ್ನು ಝೀಫೋ ವೆಬ್‌ಸೈಟ್‌ನಲ್ಲಿ ಅಪ್​ಲೋಡ್ ಮಾಡಿದರೆ ಸಾಕಾಗುತ್ತದೆ, ನಂತರ ಝೀಫೋ ಪ್ರತಿನಿಧಿಗಳು ಗ್ರಾಹಕರಿದ್ದಲ್ಲಿಗೆ ತೆರಳಿ ವಸ್ತುವನ್ನು ಪರಿಶೀಲಿಸಿ, ಗ್ರಾಹಕರು ಬಯಸುವ ಬೆಲೆಯನ್ನು ತುಲನೆ ಮಾಡಿ, ಅದಕ್ಕೆ ನ್ಯಾಯಯುತವಾದ ಬೆಲೆ ನಿಗದಿಪಡಿಸುತ್ತಾರೆ. ಅದನ್ನು ಝೀಫೋಗೆ ಮಾರುವ ಅಥವಾ ಬಿಡುವ ನಿರ್ಧಾರ ಗ್ರಾಹಕರದ್ದಾಗಿರುತ್ತದೆ.!!

ಹಣ ಪಾವತಿಸಿಸುತ್ತಾರೆ.!!

ಹಣ ಪಾವತಿಸಿಸುತ್ತಾರೆ.!!

ಝೀಫೋ ಪ್ರತಿನಿಧಿಗಳು ನಿಮ್ಮ ವಸ್ತುವನ್ನು ಪರಿಶೀಲಿಸಿ ಬೆಲೆ ನಿಗದಿಮಾಡುತ್ತಾರೆ. ಝೀಫೋ ಪ್ರತಿನಿಧಿಗಳು ನಿಗದಿಪಡಿಸಿದ ಬೆಲೆಗೆ ಗ್ರಾಹಕರು ಒಪ್ಪಿದಲ್ಲಿ, ಕೇವಲ 48 ತಾಸುಗಳಲ್ಲಿ ಹಣ ಪಾವತಿಸಿ ಆ ವಸ್ತುವನ್ನು ಅಲ್ಲಿಂದ ತನ್ನ ಗೋದಾಮಿಗೆ ಸಾಗಿಸುತ್ತಾರೆ. ಅವರ ಜೊತೆ ನೀವು ವಸ್ತುವಿನ ಬೆಲೆ ಬಗ್ಗೆ ಚರ್ಚೆ ಮಾಡಬಹುದು ಎಂದು ಝೀಫೋ ಮುಖ್ಯಸ್ಥರು ಹೇಳಿದ್ದಾರೆ.!!

ಆನ್‌ಲೈನ್‌ನಲ್ಲಿ ಮರು ಮಾರಾಟ.!!

ಆನ್‌ಲೈನ್‌ನಲ್ಲಿ ಮರು ಮಾರಾಟ.!!

ಗ್ರಾಹಕರಿಗೆ ಹಣಪಾವತಿಸಿ ಆ ವಸ್ತುವನ್ನು ಅಲ್ಲಿಂದ ತನ್ನ ಗೋದಾಮಿಗೆ ಝೀಫೋ ಸಾಗಿಸುತ್ತದೆ. ನಂತರ ದಕ್ಕೆ ಅಗತ್ಯವಿರುವ ನವೀಕರಣವನ್ನು ಮಾಡಿ, ಅದರ ಫೋಟೋ ತೆಗೆದು, ಅದಕ್ಕೊಂದು ಬೆಲೆ ನಿಗದಿಪಡಿಸಿ ತನ್ನ ವೆಬ್​ಸೈಟ್​ನಲ್ಲಿ ಪ್ರದರ್ಶಿಸುತ್ತದೆ. ನಂತರ ಅದನ್ನು ಪಾಲಿತೀನ್ ಕವರ್​ನಿಂದ ಸುತ್ತಿ ಧೂಳಿನಿಂದ ಸುರಕ್ಷಿತಗೊಳಿಸಿ ದಾಸ್ತಾನು ಮಾಡುತ್ತದೆ. ಬೇರೆ ಯಾರಾದರೂ ಅದನ್ನು ಖರೀದಿಸಿದರೆ, ಅವರ ಮನೆಗೆ ಅದನ್ನು ಡೆಲಿವರಿ ಮಾಡಲಾಗುತ್ತದೆ.!!

ಒಎಲ್‌ಎಕ್ಸ್‌ಗಿಂತಲೂ ಗೋಝೀಫೋ ಬೆಸ್ಟ್?

ಒಎಲ್‌ಎಕ್ಸ್‌ಗಿಂತಲೂ ಗೋಝೀಫೋ ಬೆಸ್ಟ್?

ಒಎಲ್‌ಎಕ್ಸ್‌ನಲ್ಲಿ ವಸ್ತುವನ್ನು ಮಾರಲು ಮತ್ತು ಖರೀದಿಸಲು ಗ್ಯಾರಂಟಿ ಇರುವುದಿಲ್ಲ.!! ಆದರೆ, ಗೋಝೀಫೋವಿನಲ್ಲಿ ಹಳೆಯ ವಸ್ತು ಮಾರುವವರು ಹಾಗೂ ಖರೀದಿಸುವವರಿಬ್ಬರ ಕೆಲಸವೂ ಸುಲಭವಾಗುತ್ತದೆ. ಇಷ್ಟೇ ಅಲ್ಲ ಯಾರಾದರೂ ಮನೆ ಮಾರಾಟ ಮಾಡಲು ನಿರ್ಧರಿಸಿ, ಮನೆಯಲ್ಲಿರುವ ಎಲ್ಲಾ ಪೀಠೋಪಕರಣಗಳು ಹಾಗೂ ಇತರೆ ಉಪಕರಣಗಳನ್ನು ಮಾರಬೇಕಾದ ಸಂದರ್ಭ ಎದುರಾದರೆ, ಒಂದೊಂದು ವಸ್ತುವನ್ನು ಮಾರಲು ಒಬ್ಬೊಬ್ಬ ಗ್ರಾಹಕರನ್ನು ಹುಡುಕಬೇಕಾಗುತ್ತದೆ. ಆದರೆ ಝೀಫೋ ಆ ಎಲ್ಲ ವಸ್ತುಗಳನ್ನು ಒಟ್ಟಿಗೇ ಖರೀದಿಸುತ್ತದೆ.!!

ಟೆಲಿಕಾಂ ಅಲ್ಲೋಲಕಲ್ಲೋಲ..399 ರೂ.ಜಿಯೋ ಆಫರ್ ಇನ್ನು 150 ರೂ.ಗೆ ಸಿಗಲಿದೆ!?ಟೆಲಿಕಾಂ ಅಲ್ಲೋಲಕಲ್ಲೋಲ..399 ರೂ.ಜಿಯೋ ಆಫರ್ ಇನ್ನು 150 ರೂ.ಗೆ ಸಿಗಲಿದೆ!?

Best Mobiles in India

English summary
Most retailers focus on getting customers to buy, but their old stuff has to go somewhere. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X