ಈ ಆಪ್‌ ಡೌನ್‌ಲೋಡ್ ಮಾಡಿಕೊಂಡ್ರೆ ಎಲ್ಲಾ ಸರಕಾರಿ ಉಚಿತ ಸೇವೆಗಳು ಸ್ಮಾರ್ಟ್‌ಫೋನಿನಲ್ಲಿಯೇ..!

|

ಇಂದಿನ ದಿನದಲ್ಲಿ ಡಿಜಿಟಲ್ ಇಂಡಿಯಾ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಭಾರತ ಸರ್ಕಾರವು ತನ್ನ ಎಲ್ಲಾ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ದೇಶದ ಮೂಲೆ ಮೂಲೆಗೂ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಇದೇ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿರುವದರಿಂದಾಗಿ ಎಲ್ಲಾ ಸೇವೆಗಳನ್ನು ಆಪ್ ಮಾದರಿಯಲ್ಲಿ ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ.

ಈ ಆಪ್‌ ಡೌನ್‌ಲೋಡ್ ಮಾಡಿಕೊಂಡ್ರೆ ಎಲ್ಲಾ ಸರಕಾರಿ ಉಚಿತ ಸೇವೆಗಳು..!

ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಪ್ರಮುಖ ಆಪ್‌ಗಳ ಕುರಿತು ಮಾಹಿತಿ ಇಲ್ಲಿದ್ದು, ಇದರ ಸಹಾಯದಿಂದ ನೀವು ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಮತ್ತು ಬೆರಳ ತುದಿಯಲ್ಲಿಯೇ ಸರಕಾರ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ನಿನಲ್ಲಿ ಈ ಆಪ್‌ಗಳು ಇದ್ದರೆ ಎಂದಿಗೂ ನಷ್ಟವಂತು ಇಲ್ಲ.

BHIM

BHIM

ಭಾರತ್ ಇನ್‌ಟರ್ಫೇಸ್ ಫಾರ್ ಮನಿ ಆಪ್ ಅಂತೂ ಹೆಚ್ಚಿನ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತವನ್ನು ಕ್ಯಾಷ್ ಲೈಸ್ ಮಾಡಿಸುವ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಈ ಆಪ್ ನಲ್ಲಿ ನೀವು ಸುಲಭವಾಗಿ ಹಣವನ್ನು ವರ್ಗಾವಣೆಯನ್ನು ಸುರಕ್ಷಿತವಾಗಿ ಮಾಡಿಸಬಹುದಾಗಿದೆ. ಇದು ಡಿಜಿಟಲ್ ವ್ಯಾಲೆಟ್ ಮಾದರಿಯಲ್ಲಿ ಹಣವನ್ನು ಸಂಗ್ರಹಿಸದೆ, ನೇರವಾಗಿ ನಿಮ್ಮ ಆಕೌಂಟ್ ನಿಂದಲೇ ಹಣವನ್ನು ವರ್ಗಾವಣೆ ಮಾಡಲಿದೆ.

ಸ್ವಚ್ ಭಾರತ್ ಅಭಿಯಾನ್

ಸ್ವಚ್ ಭಾರತ್ ಅಭಿಯಾನ್

ನಿಮ್ಮ ಮನೆಯ ಸುತ್ತಮುತ್ತ ಹೆಚ್ಚಿನ ಕಸ ಸಂಗ್ರಹವಾಗುತ್ತಿರುವ ಸಂದರ್ಭದಲ್ಲಿ ನಿಮ್ಮ ಪಾಲಿಕೆಯ ಅಧಿಕಾರಿಗೆ ಈ ಕುರಿತು ತ್ವರಿತವಾಗಿ ಮಾಹಿತಿಯನ್ನು ನೀಡುವ ಸಲುವಾಗಿ ಸ್ಪಚ್ ಭಾರತ್ ಅಭಿಯಾನ್ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಇದರ ಮೂಲಕವೇ ಮಾಹಿತಿಯನ್ನು ರವಾನೆ ಮಾಡಬಹುದಾಗಿದೆ.

GST ರೆಟಿಂಗ್ ಫೆಂಡರ್:

GST ರೆಟಿಂಗ್ ಫೆಂಡರ್:

ಮಾರುಕಟ್ಟೆಯಲ್ಲಿ ವರ್ತಕರು GST ಶುರುವಾದ ನಂತರದಲ್ಲಿ ಗ್ರಾಹಕರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದ್ದಾರೆ. GST ಹೆಸರಿನಲ್ಲಿ ಹೆಚ್ಚಿನ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾರೆ. ಆದರೆ ಇದನ್ನು ಪ್ರಶ್ನೆ ಮಾಡುವ ಸಲುವಾಗಿ ಮತ್ತು ಯಾವ ವಸ್ತುಗಳ ಮೇಲೆ ಎಷ್ಟು GST ಎಂಬುದನ್ನು ತಿಳಿದುಕೊಳ್ಳಲು ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

UMANG

UMANG

ಉಮಾಗ್ ಎಂದು ಕರೆಸಿಕೊಳ್ಳುತ್ತಿರುವ 'ಯೂನಿಫೈಡ್ ಮೊಬೈಲ್ ಆಪ್ ಫಾರ್ ನ್ಯೂ ಎಜ್ ಗರ್ವನೆನ್ಸ್' ಆಪ್ ಎಲ್ಲಾ ಸರಿಕಾರಿ ಸೇವೆಗಳ ಮಾಯ ಪೆಟ್ಟಿಗೆ ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ಸರಕಾರಿ ಸೇವೆಗಳ ಕುರಿತ ಎಲ್ಲ ಮಾಹಿತಿಯೂ ಲಭ್ಯವಿರಲಿದೆ ಎನ್ನಲಾಗಿದೆ.

ಪಾಸ್‌ಪೋರ್ಟ್ ಸೇವಾ:

ಪಾಸ್‌ಪೋರ್ಟ್ ಸೇವಾ:

ಪಾಸ್‌ಪೋರ್ಟ್ ಮಾಡಿಸಿಕೊಳ್ಳಬೇಕು ಎನ್ನುವವರಿಗಾಗಿಯೇ ಲಭ್ಯವಿರುವ ಆಪ್‌ ಇದಾಗಿದೆ. ಇದಲ್ಲದೇ ಪಾಸ್ಟ್ ಪೋರ್ಟ್ ಮಾಡಿಸಲು ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.

ಆನ್‌ಲೈನ್ RTI

ಆನ್‌ಲೈನ್ RTI

ರೈಟ್ ಟು ಇನ್‌ಫರ್ಮೆಷನ್ ಅನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳುವ ಆಪ್ ಇದಾಗಿದೆ. ಇದಕ್ಕಾಗಿಯೇ ನೀವು ಆಪ್ಲಿಕೇಷನ್ ಗಳನ್ನು ಕಳುಹಿಸುವುದರಿಂದಾಗಿ ಹಿಡಿದು ಎಲ್ಲಾ ಮಾದರಿ ಮಾಹಿತಿಯನ್ನು ಇದರ ಮೂಲಕವೇ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಮೈ ಗೌರ್ನಮೆಂಟ್:

ಮೈ ಗೌರ್ನಮೆಂಟ್:

ಇದಲ್ಲದೇ ಕೇಂದ್ರ ಸರಕಾರವು ಯಾವ ಕಾರ್ಯಗಳನ್ನು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ನೀವು ಮೈ ಗೌರ್ನಮೆಂಟ್ ಆಪ್ ಅನ್ನು ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಸರಕಾರದ ಕುರಿತು ಮಾಹಿತಿಗಳು ಲಭ್ಯವಾಗಲಿದೆ. ಈ ಎಲ್ಲಾ ಆಪ್‌ಗಳು ಮಾರುಕಟ್ಟೆಯಲ್ಲಿ ಉಚಿತವಾಗಿ ಬಳಕೆಗೆ ಲಭ್ಯವಿರಲಿದೆ.

Best Mobiles in India

English summary
Useful Apps by Government of India to Download Right Now. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X