Subscribe to Gizbot

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಈ ಆಪ್ ಇದ್ರೆ ನೀವು ಟಿಕೇಟ್ ಇಲ್ಲವೇ ಪ್ರಯಾಣ ಮಾಡಬಹುದು..!

Written By:

ದೇಶದ ನರನಾಡಿಯಂತಿರುವ ರೈಲ್ವೆ ಡಿಜಿಟಲ್ ಆಗುತ್ತಿದ್ದು, ರೈಲ್ವೆ ಪ್ರಯಾಣವನ್ನು ಮತ್ತಷ್ಟು ಸರಳ ಮತ್ತು ಸುಲಭವಾಗಿಗುವ ಸಲುವಾಗಿ ರೈಲ್ವೆ ಇಲಾಖೆಯೂ ತನ್ನ ವೆಬ್‌ ಸೈಟ್ ಮತ್ತು ಆಪ್‌ಗಳನ್ನು ಹೊಸದಾಗಿ ನಿರ್ಮಿಸಿದೆ. ಇದರೊಂದಿಗೆ ಜನರಲ್ ಪ್ರಯಾಣಿಕರಿಗೆ ಮತ್ತು ಪ್ಲಾಟ್ ಫಾರ್ಟ್ ಟಿಕೇಟ್ ಪಡೆಯುವವರಿಗೆ ಸಹಾಯ ಮಾಡಲು ಹೊಸದೊಂದು ಆಪ್ ನಿರ್ಮಾಣಕ್ಕೆ ಮುಂದಾಗಿದೆ.

ಈ ಆಪ್ ಇದ್ರೆ ನೀವು ಟಿಕೇಟ್ ಇಲ್ಲವೇ ಪ್ರಯಾಣ ಮಾಡಬಹುದು..!

UTS ಎಂಬ ಹೆಸರಿನಲ್ಲಿ ಹೊಸದೊಂದು ಆಪ್ ಅನ್ನು ಬಿಡುಗಡೆ ಮಾಡಿರುವ ರೈಲ್ವೆ ಇಲಾಖೆಯೂ, ದಿನ ನಿತ್ಯ ರೈಲು ಸೇವೆಯನ್ನು ಬಳಸುವವರಿಗಾಗಿಯೇ ಈ ಆಪ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ಈ ಆಪ್ ಅನ್ನು ವಿನ್ಯಾಸ ಮಾಡಿದ್ದು, ಈ ಕುರಿತ ಮಾಹಿತಿಯೂ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿತ್ಯ ಓಡಾಡುವವರಿಗೆ:

ನಿತ್ಯ ಓಡಾಡುವವರಿಗೆ:

ಮುಂಗಡವಾಗಿ ಟಿಕೇಟ್ ಬುಕ್ ಮಾಡದೆ ರೈಲಿನಲ್ಲಿ ಪ್ರಯಾಣಿಸಬೇಕಿದ್ದವರಿಗೆ ಮತ್ತು ನಿತ್ಯ ರೈಲಿನಲ್ಲಿ ಓಡಾಡುವವರಿಗೆ ಅನುಕೂಲವಾಗುವಂತೆ UTS ಎಂಬ ಹೆಸರಿನಲ್ಲಿ ಹೊಸದೊಂದು ಆಪ್ ಕಾರ್ಯಚರಣೆಯನ್ನು ಆರಂಭಿಸಿದೆ. ಇದು ಅನ್‌-ರಿಸರ್ವ್‌ಡ್‌ (ಮುಂಗಡ ಕಾಯ್ದಿರಿಸದ) ಟಿಕೆಟ್‌ ಪಡೆಯಲು ಅತ್ಯುತ್ತಮ ಆಪ್ ಆಗಿದೆ.

ಪ್ಲೇ ಸ್ಟೋರಿನಲ್ಲಿದೆ.

ಪ್ಲೇ ಸ್ಟೋರಿನಲ್ಲಿದೆ.

ಗೂಗಲ್ ಪ್ಲೇ ಸ್ಟೋರಿನಲ್ಲಿ UTS ಎಂದು ಸರ್ಚ್ ಮಾಡಿದ ಸಂದರ್ಭದಲ್ಲಿ ಮೊದಲನೆದಾಗಿ ಕಾಣಿಸಿಕೊಳ್ಳುವ ಆಪ್ ಅನ್ನು ಆಂಡ್ರಾಯ್ಡ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಮೊಬೈಲ್ ನಂಬರ್ ನೀಡಿ ಲಾಗ್ ಇನ್ ಆಗಬೇಕಾಗಿದ್ದು, ನಿಮ್ಮ ಫೆವರೆಟ್ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ:

ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ:

ನೀವು ಹೊರಡಲು ರೆಡಿಯಾಗಿರುವ ರೈಲಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಆದರೆ ಟೀಕೆಟ್ ಖರೀದಿಸಲುಯ ಉದ್ದದ ಕ್ಯೂ ಇರಲಿದೆ. ಹಾಗಾಗಿ ಈ ಆಪ್ ಇನ್ ಸ್ಟಾಲ್ ಮಾಡಿಕೊಂಡರೆ ನೀವು ಆಪ್ ನಲ್ಲಿಯೇ ಟಿಕೇಟ್ ಬುಕ್ ಮಾಡಿಕೊಳ್ಳಬಹುದು. ಅಲ್ಲದೇ ಪ್ಲ್ಯಾಟ್‌ಫಾರ್ಮ್‌ ಟಿಕೇಟ್ ಅನ್ನು ಆಪ್ ಮೂಲಕವೇ ಪಡೆದುಕೊಳ್ಳಬಹುದು.

ಎರಡು ಮಾದರಿಯ ಸೇವೆ:

ಎರಡು ಮಾದರಿಯ ಸೇವೆ:

ಪೇಪರ್ ಲೈಸ್ ಮತ್ತು ಪೇಪರ್ ಸೇವೆ. ನೀವು ಆಪ್ ಮೂಲಕ ಟಿಕೇಟ್ ಬುಕ್ ಮಾಡುವ ಸಂದರ್ಭದಲ್ಲಿ ಟಿಕೇಟ್ ಇಲ್ಲದೇ ಸ್ಮಾರ್ಟ್‌ಫೋನ್‌ನಲ್ಲಿಯೇ ವರ್ಚುವಲ್ ಟಿಕೇಟ್ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ರೈಲ್ವೇ ನಿಲ್ದಾಣದ ಬಳಿ ಇರಬೇಕು, ಇನ್ನೊಂದು ಟೆಕೇಟ್ ಬುಕ್ ಮಾಡಿಕೊಂಡು ಪ್ರಿಂಟ್ ಪಡೆದು ಪ್ರಯಾಣಿಸಬೇಕಾಗಿದೆ.

Bike-Car ಜಾತಕ ಹೇಳುವ ಆಪ್..!
IRCTC Rail Connect:

IRCTC Rail Connect:

IRCTC Rail Connect ಆಪ್‌ ಮೂಲಕ ಬಳಕೆದಾರರು ದೂರದ ಊರುಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಮುಂಗಡವಾಗಿ ಸೀಟು ಕಾಯ್ದಿರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಬಳಕೆದಾರರು ಖಾತೆ ತೆರೆದು ಲಾಗಿನ್‌ ಆಗಿ ಟಿಕೆಟ್‌ ಬುಕ್‌ ಮಾಡಬಹುದಾಗಿದ್ದು, ಗೂಗಲ್ ಪ್ಲೇ ಸ್ಟೋರಿನಲ್ಲಿ ಈ ಆಪ್ ಲಭ್ಯವಿದೆ. .

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
UTS Mobile Ticketing app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot