ಮಾರ್ಚ್ 27ಕ್ಕೆ ಭಾರತಕ್ಕೆ ಬರಲಿದೆಯಾ ಐಫೋನ್ X ರೂಪದ ವಿವೋ ವಿ9?

By Tejaswini P G

  2017ರ ವರ್ಷಾಂತ್ಯದಲ್ಲಿ ವಿವೋ ಸಂಸ್ಥೆಯು 24MP ಮೂನ್ಲೈಟ್ ಸೆಲ್ಫೀ ಕ್ಯಾಮೆರಾ ಹೊಂದಿರುವ ವಿವೋ ವಿ7+ ಮತ್ತು ವಿವೋ ವಿ7 ಮೊಬೈಲ್ಗಳನ್ನು ಲಾಂಚ್ ಮಾಡಿತ್ತು. ತದನಂತರ ಅದು ಭಾರತದ ಮಾರುಕಟ್ಟೆಯಲ್ಲಿ ಯಾವುದೇ ಮೊಬೈಲ್ ಅನ್ನು ಬಿಡುಗಡೆ ಮಾಡಿಲ್ಲ. ಆದರೆ ಈಗ ಮತ್ತೆ ಭಾರತದಲ್ಲಿ ಸ್ಮಾರ್ಟ್ಫೋನ್ ಒಂದನ್ನು ಲಾಂಚ್ ಮಾಡಲು ವಿವೋ ತಯಾರಿ ನಡೆಸಿದ್ದು, ಮಾರ್ಚ್ 27ರಂದು ನಡೆಯಲಿರುವ ಲಾಂಚ್ ಸಮಾರಂಭಕ್ಕೆ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿಕೊಡಲಾಗಿದೆ.

  ವಿವೋ ಸಂಸ್ಥೆಯು ತಾನು ಲಾಂಚ್ ಮಾಡಲಿರುವ ಮೊಬೈಲ್ ನ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ ಅದು ವಿವೋ ವಿ9 ಆಗಿರಬಹುದೆಂಬ ಊಹಾಪೋಹಗಳಿವೆ. ಅದು ರೂ 18990/- ಬೆಲೆಯ ವಿವೋ ವಿ7 ನ ಸೀಕ್ವೆಲ್ ಆಗಿರಲಿದೆ. IANS ನ ವರದಿಗಳ ಅನುಸಾರ ವಿವೋ ನ ಈ ನೂತನ ಸ್ಮಾರ್ಟ್ಫೋನ್ ನಲ್ಲಿ ಐಫೋನ್ X ಮಾದರಿಯ 'ನಾಚ್' ಒಂದು ಇರಲಿದೆ. ಅಲ್ಲದೆ ವಿವೋ ನ ಈ ಹೊಸ ಸ್ಮಾರ್ಟ್ಫೋನ್ ನ ಬೆಲೆ ಅಂದಾಜು ರೂ 25000 ಆಗಿರಲಿದೆ ಎನ್ನುವ ವದಂತಿಗಳಿವೆ.

  ಮಾರ್ಚ್ 27ಕ್ಕೆ ಭಾರತಕ್ಕೆ ಬರಲಿದೆಯಾ ಐಫೋನ್ X ರೂಪದ ವಿವೋ ವಿ9?

  ವಿವೋ ವಿ9 ಬಗ್ಗೆ ಹೇಳುವುದಾದರೆ , ಈ ಸ್ಮಾರ್ಟ್ಫೋನ್ ನ ಹಲವಾರು ಮಾಹಿತಿಗಳು ಈಗಾಗಲೇ ಸೋರಿಕೆಯಾಗಿದೆ ಮತ್ತು ಈ ಕುರಿತು ಸಾಕಷ್ಟು ವದಂತಿಗಳೂ ಕೇಳಿಬಂದಿದೆ. ಇತ್ತೀಚೆಗೆ ಸೋರಿಕೆಯಾದ ವಿವೋ ವಿ9 ನ ಚಿತ್ರಗಳಲ್ಲಿ ಐಫೋನ್ X ಮಾದರಿಯ ನಾಚ್ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಗಳನ್ನು ಕಾಣಬಹುದಾಗಿದೆ. ಇದರ ಡಿಸ್ಪ್ಲೇ ಕುರಿತು ಹೇಳುವುದಾದರೆ ಅದು ಪ್ಯಾನಲ್ ನ ಅಂಚಿನಿಂದ ಅಂಚಿನವರೆಗೆ ಇರುವಂತೆ ಕಾಣಿಸುತ್ತಿದ್ದು, ಡಿಸ್ಪ್ಲೇ ಯ ಮೇಲ್ಭಾಗದಲ್ಲಿ ನಾಚ್ ಅನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ಪೋನ್ ಎಲ್ಲಾ ಬದಿಗಳಲ್ಲೂ ತೆಳುವಾದ ಅಂಚುಗಳನ್ನು ಹೊಂದಿದ್ದು, ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಫೋನ್ ನ ಹಿಂಭಾಗದಲ್ಲಿ ಇರಿಸಲಾಗಿದೆ.

  ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
  ವಿವೋ ಮಾಧ್ಯಮಗಳಿಗೆ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಎದ್ದು ಕಾಣಿಸುತ್ತಿದೆ. ಈ ಹಿಂದಿನ ಮೊಬೈಲ್ಗಳಂತೆ ವಿವೋ ವಿ9 ಕೂಡ 24MP ಸೆಲ್ಫೀ ಕ್ಯಾಮೆರಾ ಹೊಂದಿರಲಿದೆ. ಒಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 660 SoC ಹೊಂದಿರಲಿದ್ದು,ಇದರಲ್ಲಿ ಆಂಡ್ರಾಯ್ಡ್ ಓರಿಯೋ ನ ಮೂಲ ಆವೃತ್ತಿ ಇರಲಿದೆ. ಸಧ್ಯಕ್ಕೆ ಮಾರ್ಚ್ 27ಕ್ಕೆ ಲಾಂಚ್ ಆಗಲಿರುವ ವಿವೋ ನ ಹೊಸ ಸ್ಮಾರ್ಟ್ಫೋನ್ ನ ಕುರಿತು ಇನ್ಯಾವುದೇ ಮಾಹಿತಿ ಲಭ್ಯವಿಲ್ಲ. ಮುಂಬರುವ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆಗಳಿವೆ.

  ಇದೇ ಸಂದರ್ಭದಲ್ಲಿ ವಿವೋ ಸಂಸ್ಥೆಯ ಮತ್ತೊಂದು ಸ್ಮಾರ್ಟ್ಫೋನ್ ಕುರಿತು ಊಹಾಪೋಹಗಳಿದ್ದು, ಅದರ ಹೆಸರು ವಿವೋ ಎಪೆಕ್ಸ್ ಎಂದು ಹೇಳಲಾಗುತ್ತಿದೆ. ಇದೊಂದು ಫ್ಲ್ಯಾಗ್ಶಿಪ್ ಮೊಬೈಲ್ ಆಗಿರಲಿದ್ದು ಶಕ್ತಿಶಾಲಿ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 845 SoC ಮತ್ತು ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರಲಿದೆ. 2018 ರ ಮಧ್ಯದಲ್ಲಿ ವಿವೋ ಎಪೆಕ್ಸ್ ನ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

  English summary
  After the launch of the Vivo V7+ and V7 smartphones with a 24MP moonlight selfie camera back in late 2017. to know more visit to kannada.gizvot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more