Subscribe to Gizbot

ಟೆಕ್ನೋ ಜೊತೆ ಕೈಜೋಡಿಸಿದ ವೊಡಾಫೋನ್: ಸ್ಮಾರ್ಟ್‌ಫೋನ್‌ ಮೇಲೆ ರೂ. 2,200 ಕ್ಯಾಷ್ ಬ್ಯಾಕ್

Posted By: Tejaswini P G

ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಎನಿಸಿರುವ ವೊಡಾಫೋನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆದ ಟೆಕ್ನೋ ಜೊತೆ ಕೈಜೋಡಿಸಿದ್ದು, ಟೆಕ್ನೋ ಅದರ ಕ್ಯಾಮನ್ ಐ ಸರಣಿಯ 4ಜಿ ಹ್ಯಾಂಡ್ಸೆಟ್ ಗಳ ಖರೀದಿಯ ಮೇಲೆ ರೂ 2,200 ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್ ನೀಡಲಿದೆ.

ಟೆಕ್ನೋ ಜೊತೆ ಕೈಜೋಡಿಸಿದ ವೊಡಾಫೋನ್: ಸ್ಮಾರ್ಟ್‌ಫೋನ್‌ ಮೇಲೆ ಕ್ಯಾಷ್ ಬ್ಯಾಕ್

"ಗ್ರಾಹಕರಿಗೆ ಈ ಕ್ಯಾಶ್ಬ್ಯಾಕ್ ಆಫರ್ ನೊಂದಿಗೆ ವೊಡಾಫೋನ್ ಪ್ಲೇ ಗೆ 3 ತಿಂಗಳ ಉಚಿತ ಸಬ್ಸ್ಕ್ರಿಪ್ಶನ್ ಕೂಡ ದೊರೆಯಲಿದ್ದು ಅವರು ಅನಿಯಮಿತ ವೀಡಿಯೋ ಕಂಟೆಂಟ್ ಅನ್ನು ಪಡೆಯಬಹುದಾಗಿದೆ. ಈ ಆಫರ್ ಮಾರ್ಚ್ 14 ರಿಂದ ಜೂನ್ 30 ರ ವರೆಗೆ ದೊರೆಯಲಿದೆ" ಎಂದು ಟೆಕ್ನೋ ತಿಳಿಸಿದೆ.

ಈ ಹೊಸ ಆಫರ್ ಅನ್ನು ಪಡೆಯಲು ಗ್ರಾಹರು ಈ ಮಾರ್ಚ್ 14, 2018 ರಿಂದ ಜೂನ್ 30, 2018 ರೊಳಗೆ ಈ ಸ್ಮಾರ್ಟ್ಫೋನ್ ಗಳನ್ನು ಖರಿದಿಸಬೇಕಾಗಿದೆ.

How to find out where you can get your Aadhaar card done (KANNADA)
"ವೊಡಾಫೋನ್ ನ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರು ಮತ್ತು ಹೊಸ ಪ್ರೀಪೇಯ್ಡ್ ಗ್ರಾಹಕರು ಈ ಆಫರ್ ಅನ್ನು ಪಡೆಯಲು 18 ತಿಂಗಳ ಕಾಲ ರೂ 150 ರ ರೀಚಾರ್ಜ್ ಮಾಡಬೇಕಾಗಿದೆ, ಮತ್ತು ಈ ಮೂಲಕ ರೂ 900 ರ ಕ್ಯಾಶ್ಬ್ಯಾಕ್ ಕೂಡ ಪಡೆಯಬಹುದಾಗಿದೆ. ಮುಂದಿನ 18 ತಿಂಗಳು ಹೆಚ್ಚುವರಿಯಾಗಿ ರೂ 150 ರ ರೀಚಾರ್ಜ್ ಮಾಡುವ ಮೂಲಕ ಗ್ರಾಹಕರು ಪುನಃ ರೂ 1300 ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದಾಗಿದ್ದು, ಈ ಮೂಲಕ ಗ್ರಾಹಕರ ಒಟ್ಟಾಗಿ ರೂ 2,200 ಮೌಲ್ಯದ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ" ಎಂದು ಟೆಕ್ನೋ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕ್ಯಾಶ್ಬ್ಯಾಕ್ ನ ಮೊತ್ತವನ್ನು ಅವರ ವೊಡಾಫೋನ್ M-Pesa ವ್ಯಾಲೆಟ್ ಗಳಿಗೆ ಜಮಾ ಮಾಡಲಾಗುವುದು.

ಈ ಆಫರ್ ಟೆಕ್ನೋ ನ 'ಐ-ಸೀರೀಸ್' ನ ಹ್ಯಾಂಡ್ಸೆಟ್ ಗಳ ಮೇಲೂ ಅನ್ವಯವಾಗಲಿದ್ದು, ಈ ಮೊಬೈಲ್ಗಳ ಬೆಲೆ ರೂ 6,990 ರಿಂದ ರೂ 14,990 ರ ಶ್ರೇಣಿಯಲ್ಲಿದೆ.

ಇದೇ ಸಂದರ್ಭದಲ್ಲಿ ಸ್ಥಳೀಯ ಮೊಬೈಲ್ ತಯಾರಕರಾದ ಇಂಟೆಕ್ಸ್ ಟೆಕ್ನಾಲಜೀಸ್ ಕೂಡ ರಿಲಯೆನ್ಸ್ ಜಿಯೋ ಜೊತೆ ಕೈಜೋಡಿಸಿದ್ದು, 'ಜಿಯೋ ಫುಟ್ಬಾಲ್ ಆಫರ್' ನೀಡುತ್ತಿದೆ. ಇದರ ಅನ್ವಯ ಆಯ್ದ ಇಂಟೆಕ್ಸ್ 4ಜಿ ಸ್ಮಾರ್ಟ್ಫೋನ್ ಮಾಡೆಲ್ ಗಳ ಖರೀದಿಯ ಮೇಲೆ ರೂ 2,200 ಮೌಲ್ಯದ ಇನ್ಸ್ಟೆಂಟ್ ಕ್ಯಾಶಬ್ಯಾಕ್ ಪಡೆಯಬಹುದಾಗಿದೆ.

ಈ ರೂ 2,200 ಮೌಲ್ಯದ ಕ್ಯಾಶಬ್ಯಾಕ್ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮತ್ತು ಹೊಸ ಜಿಯೋ ಗ್ರಾಹಕರಿಗೆ ಅನ್ವಯವಾಗಲಿದ್ದು, ಇಂಟೆಕ್ಸ್ ಫೋನ್ ಖರೀದಿಸುವವರು ಮಾರ್ಚ್ 31,2018 ರ ಒಳಗೆ ರೂ 198 ಅಥವಾ ರೂ 299 ರ ರೀಚಾರ್ಜ್ ಮಾಡಬೇಕಾಗಿದೆ. ಜಿಯೋ ಅರ್ಹ ಇಂಟೆಕ್ಸ್ ಬಳಕೆದಾರರಿಗೆ ರೂ 50 ಮೌಲ್ಯದ 44 ವೌಚರ್ಗಳನ್ನು ನೀಡಲಿದ್ದು, ಅದನ್ನು ಮೈಜಿಯೋ ಆಪ್ ಮೂಲಕ ಮಾಡುವ ಮುಂದಿನ ರೂ 198 ಅಥವಾ ರೂ 299 ರ ರೀಚಾರ್ಚ್ ಮೇಲೆ ರಿಡೀಮ್ ಮಾಡಬಹುದಾಗಿದೆ.

ಇಂಟೆಕ್ಸ್ ಸ್ಮಾರ್ಟ್ಫೋನ್ ನ ಮಧ್ಯಮ ಮತ್ತು ಉನ್ನತ ಶ್ರೇಣಿಯ ಮಾಡೆಲ್ಗಳ ಮೇಲೆ ಈ ಆಫರ್ ಅನ್ವಯವಾಗಲಿದೆ.

English summary
Vodafone partners with Tecno to offer cashback offers worth Rs 2,200. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot