ವಯಕಾಮ್‌ 18ನಿಂದ ವೂಟ್‌ ಕಿಡ್ಸ್‌ ಲಾಂಚ್‌..! ವೂಟ್‌ಗೂ ಬರಲಿದೆ ಸಬ್‌ಸ್ಕ್ರೀಪ್ಷನ್‌..?

By Gizbot Bureau
|

ಈ ಮಕ್ಕಳ ದಿನಕ್ಕೆ ವಯಾಕಾಮ್‌ 18 ಒಡೆತನದ ವೂಟ್‌ ತನ್ನ ಮೊದಲ ಚಂದಾದಾರಿಕೆ ಹೊಂದಿದ ಮಕ್ಕಳ ಆಧಾರಿತ ವೂಟ್‌ ಕಿಡ್ಸ್‌ನ್ನು ಪ್ರಾರಂಭಿಸಿದೆ. 2 ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿರಿಸಿಕೊಂಡಿರುವ ವೂಟ್‌ ಕಿಡ್ಸ್‌ ಅರ್ಧ ವರ್ಷದ ಬೀಟಾ ಪರೀಕ್ಷೆಯನ್ನು ಸಹ ಪೊರೈಸಿದೆ. “ವೀಕ್ಷಿಸಿ, ಓದಿ, ಆಲಿಸಿ ಮತ್ತು ಕಲಿಯಿರಿ” ಎಂಬ ತನ್ನ ನಾಲ್ಕು-ಚತುರ್ಭುಜ ಅಂಶಗಳನ್ನು ತಲುಪಿಸುವ ಪ್ರಯತ್ನವಾಗಿ 20,000ಕ್ಕೂ ಹೆಚ್ಚು ವೀಡಿಯೊಗಳು, ಇ-ಪುಸ್ತಕಗಳು, ಕಥೆಗಳು ಮತ್ತು ರಸಪ್ರಶ್ನೆಗಳನ್ನು ನೀಡುವುದಾಗಿ ವೂಟ್‌ ಹೇಳಿಕೊಂಡಿದೆ.

ದೊಡ್ಡ ವಿಡಿಯೋ ಗ್ರಂಥಾಲಯ

ದೊಡ್ಡ ವಿಡಿಯೋ ಗ್ರಂಥಾಲಯ

ವೂಟ್‌ ಕಿಡ್ಸ್‌ ಕಂಟೆಂಟ್‌ ಗ್ರಂಥಾಲಯ ನಿರ್ಮಿಸಲು ವೂಟ್‌, ನಿಕಾಲೂಡೆನ್‌, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ವಾರ್ನರ್‌ಮೀಡಿಯಾ, ಗ್ರೀನ್ ಗೋಲ್ಡ್, ಬಿಬಿಸಿಯ ಸಿಬೀಬೀಸ್, ಟಿವಿ ಅಸಾಹಿ, ಸೋನಿ ಮ್ಯೂಸಿಕ್, ಹಸ್ಬ್ರೋ, ಮ್ಯಾಟೆಲ್ ಮತ್ತು ಲೆಗೊ ಮತ್ತಿತರ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ವೂಟ್‌ ಆಪ್‌ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿದೆ, ವೂಟ್ ಕಿಡ್ಸ್ ಬೆಲೆ 7 ದಿನಗಳ ಉಚಿತ ಪ್ರಯೋಗದ ನಂತರ ತಿಂಗಳಿಗೆ 99 ರೂ. ಅಥವಾ 30 ದಿನಗಳ ಉಚಿತ ಪ್ರಯೋಗದ ನಂತರ ವರ್ಷಕ್ಕೆ 799 ರೂ. ಆಗಿದೆ.

ಪೋಷಕ ನಿಯಂತ್ರಿತ ಆಪ್‌

ಪೋಷಕ ನಿಯಂತ್ರಿತ ಆಪ್‌

ಮಗುವಿನ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಾಮರ್ಥ್ಯಗಳ ಸಮಗ್ರ ಬೆಳವಣಿಗೆಗೆ ಸಹಾಯ ಮಾಡುವ ಅರ್ಥಪೂರ್ಣವಾದ ಸಮಯ ಬಯಸುವ ಭಾರತೀಯ ಪೋಷಕರ ಅಗತ್ಯಗಳನ್ನು ವೂಟ್ ಕಿಡ್ಸ್ ಪೂರೈಸುತ್ತದೆ ಎಂದು ವೂಟ್ ಕಿಡ್ಸ್ ವ್ಯವಹಾರ ಮುಖ್ಯಸ್ಥ ಸೌಗಾಟೊ ಭೌಮಿಕ್ ಹೇಳಿದ್ದಾರೆ. ಈ ಆಪ್‌ ಟೂನ್ ವಿಡಿಯೋಗಳು, ಇ-ಪುಸ್ತಕಗಳು, ಆಡಿಯೋ ಕಥೆಗಳು ಮತ್ತು ಮೋಜಿನ ರಸಪ್ರಶ್ನೆಗಳೊಂದಿಗೆ ಪೋಷಕ-ನಿಯಂತ್ರಿತ ಆಪ್‌ ಆಗಿದ್ದು, ಸುರಕ್ಷಿತ ಮತ್ತು ಮನರಂಜನೆಯನ್ನು ಒದಗಿಸುವ ಬಹುಮುಖ ಕೊಡುಗೆಗಳನ್ನು ನೀಡುತ್ತದೆ.

ಇಸಿಎನಿಂದ ಪ್ರಮಾಣಿತ

ಇಸಿಎನಿಂದ ಪ್ರಮಾಣಿತ

ವೂಟ್‌ ಕಿಡ್ಸ್‌ ಆರಂಭಿಕ ಬಾಲ್ಯದ ಒಕ್ಕೂಟ (Early Childhood Association - ECA) ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ವಯಾಕಾಮ್‌ 18 ತಿಳಿಸಿದೆ. ಹೆಚ್ಚುವರಿಯಾಗಿ, ಜಾಹೀರಾತು-ಮುಕ್ತ ಕ್ಯುರೇಟೆಡ್ ವಿಡಿಯೋ ಗ್ರಂಥಾಲಯವಿದ್ದು, ಇದರಲ್ಲಿ ಐದು ಕೌಶಲ್ಯ-ಸೆಟ್ ಡೊಮೇನ್‌ಗಳು, ಕರಡಿ ಟೇಲ್ಸ್ ಮತ್ತು ಜಟಕಾ ಟೇಲ್ಸ್‌ಗಳ ಆಡಿಯೋ ಪುಸ್ತಕಗಳು ಮತ್ತು ಪಾತ್ರಗಳ ಕಥೆಗಳ ಆಡಿಯೋಗಳನ್ನು ಒಳಗೊಂಡಿರುವ ಬಹು-ಆಯ್ಕೆ ಪ್ರಶ್ನೆಗಳಿವೆ.

ಪೋಷಕರ ನಿಯಂತ್ರಣದಲ್ಲಿರುವುದರಿಂದ ಪ್ರಗತಿಯನ್ನು ಮೌಲ್ಯಮಾಪನ ಮಾಡಬಹುದು, ಸ್ಕ್ರೀನ್‌ ಸಮಯ ಮಿತಿಗೊಳಿಸಬಹುದು ಹಾಗೂ ಯಾವ ಕಂಟೆಂಟ್‌ ನೋಡಿದ್ದಾರೆ ಎಂಬುದನ್ನು ಟ್ರಾಕ್‌ ಮಾಡಬಹುದು.

ಬ್ರಾಂಡ್‌ ವೂಟ್‌

ಬ್ರಾಂಡ್‌ ವೂಟ್‌

ವೂಟ್ ಕಿಡ್ಸ್‌ನಲ್ಲಿ ಚಂದಾದಾರಿಕೆ ಪ್ರಾರಂಭಿಸಿರುವುದು ಡಿಜಿಟಲ್‌ ವ್ಯವಸ್ಥೆಯಲ್ಲಿ ಸಂಪೂರ್ಣ ವೂಟ್‌ ಬ್ರಾಂಡ್‌ ನಿರ್ಮಿಸುವ ನಮ್ಮ ಪ್ರಯಾಣದ ಮೊದಲ ಹೆಜ್ಜೆ ಎಂದು ವಯಾಕಾಮ್ 18 ಡಿಜಿಟಲ್ ವೆಂಚರ್ಸ್ ಸಿಒಒ ಗೌರವ್ ರಕ್ಷಿತ್ ಹೇಳಿದ್ದಾರೆ. "ಉತ್ಪನ್ನ ಅನುಭವ", "ವಿಷಯ" ಮತ್ತು "ಸುರಕ್ಷತೆ"ಯ ಮೂರು ಸ್ತಂಭಗಳ ಮೇಲೆ ವೂಟ್ ಕಿಡ್ಸ್‌ನ್ನು ನಿರ್ಮಿಸಲಾಗಿದೆ.

ವಿನೋದದಲ್ಲಿ ಒಳ್ಳೆಯತನ

ವಿನೋದದಲ್ಲಿ ಒಳ್ಳೆಯತನ

ವೂಟ್ ಕಿಡ್ಸ್‌ನಲ್ಲಿ, ಮಕ್ಕಳ ಸ್ನೇಹಿಯಾಗಿರುವ ವಿಷಯವನ್ನು ಪೋಷಕರ ಗಮನದೊಂದಿಗೆ ನೀಡುತ್ತಿದ್ದೇವೆ. ತಲ್ಲೀನಗೊಳಿಸುವ ಸಹ-ಬಳಕೆಯ ಅನುಭವದೊಂದಿಗೆ ಮಕ್ಕಳನ್ನು ಬಂಧಿಸಲು ಪಾಲಕರಿಗೆ ಅವಕಾಶ ನೀಡುತ್ತದೆ. ಇದು, ನಮ್ಮ ಬ್ರಾಂಡ್‌ನ ತತ್ವವಾಗಿರುವ ‘ಮಾಸ್ತಿ ಮೇ ಅಚೈ' [ವಿನೋದದಲ್ಲಿ ಒಳ್ಳೆಯತನ] ಯನ್ನು ಅರ್ಥಪೂರ್ಣವಾಗಿ ಪ್ರತಿಬಿಂಬಿಸುತ್ತದೆ.

 ಕಿಡ್ಸ್‌ ಮನರಂಜನೆಯಲ್ಲಿ ನಾಯಕ

ಕಿಡ್ಸ್‌ ಮನರಂಜನೆಯಲ್ಲಿ ನಾಯಕ

ಸವಾಲಿನ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ವಯಾಕಾಮ್ 18 ಬೆಳೆದಿದೆ ಎಂದು ವಯಾಕಾಮ್ 18 ಗ್ರೂಪ್ ಸಿಇಒ ಮತ್ತು ಎಂಡಿ ಸುಧಾಂಶು ವ್ಯಾಟ್ಸ್ ಹೇಳಿದರು. ಕಳೆದ ಐದು ವರ್ಷಗಳಿಂದ ಮಕ್ಕಳ ಮನರಂಜನಾ ವಿಷಯದಲ್ಲಿ ನಮ್ಮ ನೆಟ್‌ವರ್ಕ್‌ ನಾಯಕನಾಗಿ ಬೆಳೆದಿದೆ. ಡಿಜಿಟಲ್ ಪ್ಲೇ ವೂಟ್ ದೇಶದ ಎರಡನೇ ಅತಿದೊಡ್ಡ ವಿಡಿಯೋ-ಆನ್-ಡಿಮ್ಯಾಂಡ್ ಪ್ಲಾಟ್‌ಫಾರ್ಮ್ ಆಗಿದೆ. ವಯಕಾಮ್‌ 18ನ ಈ ಎರಡು ವೇದಿಕೆಯ ಬೆಳವಣಿಗೆಯ ಸಾರಾಂಶ ವೂಟ್ ಕಿಡ್ಸ್ ಆಗಿದೆ ಎಂದರು.

ವೂಟ್‌ಗೂ ಸಬ್‌ಸ್ಕ್ರೀಪ್ಷನ್‌..?

ವೂಟ್‌ಗೂ ಸಬ್‌ಸ್ಕ್ರೀಪ್ಷನ್‌..?

ವೂಟ್ ಕಿಡ್ಸ್ ವಿನೋದ ಮತ್ತು ಕಲಿಕೆ ನೀಡುವ ಭಾರತದ ಮೊದಲ ಮತ್ತು ಏಕೈಕ ಬಹು-ಸ್ವರೂಪದ ಮಕ್ಕಳ ಅಪ್ಲಿಕೇಶನ್ ಆಗಿದೆ. ಬೇರೆ ಯಾವುದೇ ಮಕ್ಕಳ ಅಪ್ಲಿಕೇಶನ್ ಒಂದೇ ಸ್ಥಳದಲ್ಲಿ ವೀಕ್ಷಿಸಲು, ಓದಲು, ಕೇಳಲು ಮತ್ತು ಕಲಿಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಸುಧಾಂಶು, ಶೀಘ್ರದಲ್ಲಿಯೇ ತನ್ನ ಮುಖ್ಯ ಜಾಹೀರಾತು-ನೇತೃತ್ವದ ಪ್ಲಾಟ್‌ಫಾರ್ಮ್‌ ವೂಟ್‌ಗೂ ಕೂಡ ಚಂದಾದಾರಿಕೆಯನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಹುಟ್ಟುಹಾಕಿದ್ದಾರೆ.

Best Mobiles in India

Read more about:
English summary
Voot Kids Stable Version Released With Content From Nickelodeon, Warner Media, And Lego

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X