ಮನೆಯಲ್ಲೇ ಕುಳಿತು ಹಣ ಗಳಿಸಬೇಕಿದ್ದಲ್ಲಿ ಈ ಆಪ್ ಇನ್ಸ್ಟಾಲ್ ಮಾಡಿಕೊಂಡು ಹೂಡಿಕೆ ಮಾಡಿ

By Gizbot Bureau
|

“ಖರ್ಚು ಮಾಡಿದ ನಂತರ ಉಳಿದದ್ದನ್ನು ಉಳಿತಾಯ ಮಾಡುವುದಕ್ಕೆ ಹಾಕುವುದಲ್ಲ ಬದಲಾಗಿ ಉಳಿತಾಯ ಮಾಡಿದ ನಂತರ ಉಳಿದ ಹಣವನ್ನು ಖರ್ಚು ಮಾಡಲು ಬಳಸಿ” ಎಂದು ವಾರೆನ್ ಬಫೆಟ್ ಹೇಳುತ್ತಾರೆ. ಪ್ರತಿಯೊಬ್ಬರ ಜೀವನಕ್ಕೂ ಕೂಡ ಉಳಿತಾಯ ಅನ್ನುವುದು ಬೇಕೇ ಬೇಕು. ಹಾಗಂತ ಹಣವನ್ನು ಯಾವುದೋ ಡಬ್ಬದಲ್ಲಿ ಅಡಗಿಸಿ ಇಟ್ಟರೆ ಮರಿ ಹಾಕುತ್ತದೆಯೋ? ಹಾಗೆ ಅಡಗಿಸಿ ಇಟ್ಟುಕೊಂಡವರ ಕಥೆಯೆಲ್ಲಾ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ.

ಫಿಕ್ಸ್ಡ್ ಡೆಪಾಸಿಟ್

ಇರುವ ಹಣದಿಂದ ಮತ್ತಷ್ಟು ಹಣ ಗಳಿಸಬೇಕು ಎಂದರೆ ಹೂಡಿಕೆ ಮಾಡಬೇಕು. ಹೂಡಿಕೆ ಅಂದ ಕೂಡಲೇ ಹೆಚ್ಚಿನವರಿಗೆ ಬ್ಯಾಂಕಿನ ಎಫ್.ಡಿ (ಫಿಕ್ಸ್ಡ್ ಡೆಪಾಸಿಟ್) ನೆನಪಾಗಬಹುದು. ಆದರೆ ಇದೀಗ ಫಿಕ್ಸ್ಡ್ ಡೆಪಾಸಿಟ್ ಗಿಂತಲೂ ಅಧಿಕ ಹಣವನ್ನು ಲಾಭದಾಯಕವಾಗಿ ಪಡೆಯುವುದಕ್ಕೆ ಅವಕಾಶವಿದೆ. ಅದಕ್ಕೆ ಸ್ವಲ್ಪ ತಲೆ ಇರಬೇಕು ಅಷ್ಟೇ. ಹೇಗೆ ಎಂದು ಕೇಳುತ್ತಿದ್ದೀರಾ? ಅದುವೇ ಮ್ಯೂಚುವಲ್ ಫಂಡ್!

ಮೊದಲೆಲ್ಲಾ ಯಾವುದೇ ಹಣದ ವ್ಯವಹಾರ ಮಾಡುವುದಾದರೆ ಬ್ಯಾಂಕಿಗೆ ಹೋಗಬೇಕಿತ್ತು. ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿತ್ತು. ವ್ಯವಹಾರ ಸ್ವಲ್ಪ ಕಠಿಣವೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಕೈಯಲ್ಲಿರುವ ಮೊಬೈಲ್ ನಿಂದಲೇ ನಿಮ್ಮ ಎಲ್ಲಾ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಎಸ್, ಹೂಡಿಕೆ ಕೂಡ ಮೊಬೈಲ್ ನಿಂದಲೇ ಸಾಧ್ಯವಿದೆ. ಅದ್ರಲ್ಲೂ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಾದರೆ ಬಹಳ ಸುಲಭವಾಗಿ ಫಿಸ್ಡಂ ಆಪ್ ಮೂಲಕ ಮಾಡಬಹುದು.

ಏನಿದು ಫಿಸ್ಡಂ ಆಪ್?

ಏನಿದು ಫಿಸ್ಡಂ ಆಪ್?

ಫಿಸ್ಡಂ ಅನ್ನುವುದು ಆಟೋಮೇಡೆಟ್ ಇನ್ವೆನ್ಸ್ಟ್ ಮೆಂಟ್ ಸರ್ವೀಸ್ ಪ್ರೊವೈಡರ್. ಆನ್ ಲೈನ್ ಹೂಡಿಕೆ ಖಾತೆಯನ್ನು ಇದು ನಿರ್ವಹಿಸುತ್ತದೆ. ಯಾವುದೇ ಪ್ರದೇಶದಲ್ಲಿ ಡೆಸ್ಕ್ ಟಾಪ್, ಟ್ಯಾಬ್ಲೆಟ್, ಮೊಬೈಲ್ ಮೂಲಕ ನೀವು 24/7 ನಿಮ್ಮ ಹೂಡಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕೆ ಇದು ಅವಕಾಶ ನೀಡುತ್ತದೆ. ಯಾವುದೇ ಪೇಪರ್ ವರ್ಕ್ ಇಲ್ಲದೆ ಪ್ರತಿಯೊಂದು ವ್ಯವಹಾರವನ್ನು ಆನ್ ಲೈನ್ ನಲ್ಲಿಯೇ ನಡೆಸಲಾಗುತ್ತದೆ ಮತ್ತು ನೀವಿರುವ ಜಾಗದಲ್ಲೇ ಮಾಡಬಹುದಾಗಿದೆ.

ಫಿಸ್ಡಂ ನೀಡುವ ಮಾಹಿತಿ:

ಫಿಸ್ಡಂ ನೀಡುವ ಮಾಹಿತಿ:

ಫಿಸ್ಡಂ ಮೂಲಕ ನೀವು ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಸೂಕ್ತ? ಯಾವ ಮ್ಯೂಚುವಲ್ ಫಂಡ್ ನಲ್ಲಿ ಹೆಚ್ಚು ಲಾಭವಿದೆ? ಯಾವುದರಲ್ಲಿ ಹೂಡಿಕೆ ತೆರಿಗೆಗೆ ಅನುಕೂಲ ಮಾಡಿಕೊಡುತ್ತದೆ? ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಹಣವನ್ನು ಎಷ್ಟು ವರ್ಷಕ್ಕೆ ಪಡೆಯಬಹುದು? ಎಂಬಿತ್ಯಾದಿ ಮಾಹಿತಿಯನ್ನು ಅವಲೋಕಿಸಿ ಹೂಡಿಕೆ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಸುಮಾರು 3000 ದಿಂದ 5000 ಮ್ಯೂಚುವಲ್ ಫಂಡ್ ಸಂಸ್ಥೆಗಳ ಮಾಹಿತಿ ಇಲ್ಲಿ ನಿಮಗೆ ಲಭ್ಯವಾಗುತ್ತದೆ.

ಯಾವಾಗ ಬೇಕಿದ್ದರೂ ಹಣ ಡ್ರಾ ಮಾಡಲು ಅವಕಾಶ:

ಯಾವಾಗ ಬೇಕಿದ್ದರೂ ಹಣ ಡ್ರಾ ಮಾಡಲು ಅವಕಾಶ:

ಇನ್ನು ಈ ಆಪ್ ನಲ್ಲಿ ನೀವು ಹೂಡಿಕೆ ಮಾಡಿರುವ ಹಣವನ್ನು ಯಾವಾಗ ಬೇಕಿದ್ದರೂ ಡ್ರಾ ಮಾಡಿಕೊಳ್ಳಬಹುದು. ನೀವು ಅಂದುಕೊಂಡಷ್ಟು ಲಾಭ ಬರುತ್ತಿಲ್ಲ ಎಂದು ಅನ್ನಿಸಿದರೆ ಒಂದು ಮ್ಯೂಚುವಲ್ ಫಂಡ್ ನಿಂದ ಇನ್ನೊಂದು ಮ್ಯೂಚುವಲ್ ಫಂಡ್ ಗೆ ಸ್ವಿಚ್ ಆಗುವುದಕ್ಕೂ ಕೂಡ ಇದರಲ್ಲಿ ಅವಕಾಶವಿರುತ್ತದೆ. ಹಣ ಡ್ರಾ ಮಾಡುವುದಕ್ಕಾಗಿ ನೀವು ಎಲ್ಲಿಗೂ ತೆರಳಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ವಿತ್ ಡ್ರಾವಲ್ ಗೆ ಫಿಸ್ಡಂ ನಲ್ಲಿ ಅಪ್ಲೈ ಮಾಡಬಹುದು ಮತ್ತು ಯಾವುದೇ ಪೇಪರ್ ವರ್ಕ್ ಇಲ್ಲದೆ ನೀವು ಹೂಡಿಕೆ ಮಾಡಿದ ಹಣ ನಿಮಗೆ ಮರಳಿ ಲಾಭಾಂಶವೂ ಸೇರಿ ನೀವು ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ಪುನಃ ಲಭ್ಯವಾಗುತ್ತದೆ.

ಹಲವು ಬ್ಯಾಂಕ್ ಗಳ ಜೊತೆಗೆ ಟೈ ಅಪ್:

ಹಲವು ಬ್ಯಾಂಕ್ ಗಳ ಜೊತೆಗೆ ಟೈ ಅಪ್:

ಫಿಸ್ಡಂ ಕೆಲವು ಪ್ರಮುಖ ಬ್ಯಾಂಕ್ ಗಳ ಜೊತೆಗೆ ಟೈ ಅಪ್ ಕೂಡ ಮಾಡಿಕೊಂಡಿದ್ದು ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಮೂಲಕವೂ ಕೂಡ ನೀವು ಫಿಸ್ಡಂನಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ಹಾಗಾಗಿ ನಿಮ್ಮ ಹಣದ ಸುರಕ್ಷತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಒಟ್ಟಿನಲ್ಲಿ ಸಿಂಪಲ್ ಆಪ್ ವೊಂದು ಮನೆಯಲ್ಲೇ ಹಣ ಗಳಿಸುವುದಕ್ಕೆ ನಿಮಗೆ ಅವಕಾಶ ನೀಡುತ್ತದೆಯಲ್ಲದೆ ಸಮಯದ ಉಳಿತಾಯಕ್ಕೂ ನೆರವಾಗುತ್ತದೆ ಎಂಬುದು ಮಾತ್ರ ಸತ್ಯ.

Best Mobiles in India

Read more about:
English summary
Want To Earn Money From Home? Download This App

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X