Subscribe to Gizbot

ಸರ್ಕಾರದ ಎಲ್ಲಾ ದಾಖಲೆಗಳ ಕಣಜ ಈ ಡಿಜಿಟಲ್ ಆಪ್!.ಇದಿದ್ದರೆ ಟ್ರಾಫಿಕ್ ಪೊಲೀಸ್ ತಲೆನೊವ್ವಿಲ್ಲ!!

Written By:

ಜನರು ತಮ್ಮೆಲ್ಲಾ ಹಲವು ದಾಖಲೆ ಪತ್ರಗಳನ್ನು ಸದಾ ಜೊತೆಗೇ ಕೊಂಡೊಯ್ಯುವ ಸಮಸ್ಯೆಯನ್ನು ದೂರ ಮಾಡಲು ಸರ್ಕಾರ ಬಿಡುಗಡೆ ಡಿಜಿ ಲಾಕರ್ ಅನ್ನು ದೇಶದಾಧ್ಯಂತ ಈಗಾಗಲೇ 1 ಕೋಟಿಗೂ ಹೆಚ್ಚು ಜನ ಬಳಕೆ ಮಾಡುತ್ತಿದ್ದಾರೆ. ಆದರೆ, ಡಿಜಿ ಲಾಕರ್ ಬಗ್ಗೆ ತಿಳಿಯದವರು ಮಾತ್ರ ಇನ್ನೂ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!!

ಹೌದು, . ದಾಖಲೆಗಳು ಕಳೆದು ಹೋದರೆ ಬದಲಿ ದಾಖಲೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಲೆನೋವಿನ ವಿಷಯ. ಈ ರೀತಿಯ ಅಲೆದಾಡುವ ಪ್ರಮೇಯ ತಪ್ಪಿಸಲು ದಾಖಲೆಗಳ ಸಂರಕ್ಷಣೆಗಾಗಿಯೇ ಕೇಂದ್ರ ಸರ್ಕಾರ 'ಡಿಜಿ ಲಾಕರ್' ಸೌಲಭ್ಯವನ್ನು ಜಾರಿಗೆ ತಂದಿದೆ.!

ಸರ್ಕಾರದ ಎಲ್ಲಾ ದಾಖಲೆಗಳ ಕಣಜ ಈ ಡಿಜಿಟಲ್ ಆಪ್!!

ಈ ಆಪ್ ಸೌಲಭ್ಯ ಬಳಸಿ ಅಧಿಕೃತ ದಾಖಲೆಗಳನ್ನು ಟ್ರಾಫಿಕ್ ಪೊಲೀಸ್ ಸೇರಿದಂತೆ ಸರ್ಕಾರದ ಕಚೇರಿಗಳೆಲ್ಲೇಡೆ ಬಳಕೆಮಾಡಬಹುದಾಗಿದೆ.!! ಹಾಗಾದರೆ, ಈ 'ಡಿಜಿ ಲಾಕರ್' ಸೌಲಭ್ಯ ಬಳಕೆ ಹೇಗೆ? ದಾಖಲೆಗಳ ಕಣಜವಾಗಿ ಈ ಆಪ್‌ ಅನ್ನು ಹೇಗೆ ಬಳಸಿಕೊಳ್ಳಬಹುದು?ಇದು ಸುರಕ್ಷಿತ ವ್ಯವಸ್ಥೆಯೇ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಡಿಜಿ ಲಾಕರ್?

ಏನಿದು ಡಿಜಿ ಲಾಕರ್?

ಇದೊಂದು ‘ಡಿಜಿಟಲ್‌ ಲಾಕರ್‌'. ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ಪ್ರದರ್ಶಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ ವ್ಯವಸ್ಥೆ ಈ ಡಿಜಿ ಲಾಕರ್.! ಡಿಜಿಟಲ್ ಇಂಡಿಯಾ' ಯೋಜನೆಯಡಿ ಈ ಡಿಜಿಟಲ್ ಆಪ್ ಅನ್ನು ಕೇಂದ್ರ ಸರ್ಕಾರ ಹೊರತಂದಿತ್ತು.!!

ಎಂದಿನಿಂದ ಜಾರಿಯಾಗಿದೆ?

ಎಂದಿನಿಂದ ಜಾರಿಯಾಗಿದೆ?

ಸ್ಮಾರ್ಟ್‌ಫೋನ್ ಮೂಲಕ ದಾಖಲೆಗಳನ್ನು ಪ್ರಸ್ತುತಪಡಿಸಬಹುದಾದ ಹಾಗೂ ಕಾಗದರಹಿತ ಆಡಳಿತ ಪರಿಕಲ್ಪನೆ ಹೊಂದಿರುವ ಈ ‘ಡಿಜಿ ಲಾಕರ್' ಆಪ್ 2016ರ ಸೆಪ್ಟೆಂಬರ್‌ 7ರಿಂದ ಜಾರಿಗೆ ಬಂದಿದೆ. ಆದರೆ, 40 ಕೋಟಿ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿದ್ದರೂ ಈ ಲಾಕರ್ ಬಳಸುವವರ ಸಂಖ್ಯೆ ಮಾತ್ರ ಒಂದು ಕೋಟಿಯಷ್ಟಿದೆ.!!

ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ!!

ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ!!

ಡಿಜಿ ಲಾಕರ್ ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು. ಯಾರೇ ಕೇಳಿದರೂ ತೋರಿಸಲೂಬಹುದು. ಸರ್ಕಾರಿ ಕಚೇರಿಯ ಸೌಲಭ್ಯ ಪಡೆಯಲು ಆನ್‌ಲೈನ್‌ ಮೂಲಕ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.! ಹಾಗಾಗಿ, ಇದು ಕೂಡ ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ .!!

ಡಿಜಿ ಲಾಕರ್ ಹೇಗಿದೆ?

ಡಿಜಿ ಲಾಕರ್ ಹೇಗಿದೆ?

https://digilocker.gov.in/' ವೆಬ್‌ಸೈಟ್ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ DigiLocker ಆಪ್ ಮೂಲಕ ಈ ಆನ್‌ಲೈನ್ ವ್ಯವಸ್ಥೆ ಬಳಸಬಹುದು. 1 ಜಿ.ಬಿಯಷ್ಟು ದಾಖಲೆಗಳನ್ನು ಸಂಗ್ರಹಿಸುವ ಸಾಮರ್ಥ್ಯ ಈ ಆಪ್‌ನಲ್ಲಿದ್ದು, ನಿಮ್ಮೆಲ್ಲಾ ದಾಖಲೆಗಳನ್ನು ಈ ಆಪ್‌ನಲ್ಲಿ ಸೇವೆ ಮಾಡಿಕೊಳ್ಳಬಹುದು.

How to Activate UAN Number? KANNADA
ಡಿಜಿ ಲಾಕರ್ ಬಳಕೆ?

ಡಿಜಿ ಲಾಕರ್ ಬಳಕೆ?

ಡಿಜಿ ಲಾಕರ್ ಆಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ ನಂಬರ್‌ ಮೂಲಕ ಲಾಗಿನ್‌ ಆಗಿ ಆಪ್ ತೆರೆಯಬಹುದು. ನಂತರ, ಆಧಾರ್ ಸಂಖ್ಯೆಯನ್ನು ನಮೂದಿಸಿ ಆಪ್‌ನಲ್ಲಿ ಕಾಣಿಸುವ ಸಂಬಂಧಪಟ್ಟ ಇಲಾಖೆಯನ್ನು ಆಯ್ಕೆ ಮಾಡಿಕೊಂಡುನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದು.!!

ಯಾವ್ಯಾವ ದಾಖಲೆ ದೊರೆಯುತ್ತವೆ?

ಯಾವ್ಯಾವ ದಾಖಲೆ ದೊರೆಯುತ್ತವೆ?

ವಾಹನ ನೋಂದಣಿ ಪ್ರಮಾಣಪತ್ರ, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ, ಎಲ್‌ಪಿಜಿ ಠೇವಣಿ ರಸೀದಿ ಹೀಗೆ ಕೇಂದ್ರಸರ್ಕಾರದ ಬಹುತೇಕ ಎಲ್ಲಾ ದಾಖಲೆಗಳು ಡಿಜಿ ಆಪ್‌ನಲ್ಲಿ ಲಭ್ಯವಿವೆ. ಕೆಲವು ರಾಜ್ಯಗಳು( ಕರ್ನಾಟಕ ಬಿಟ್ಟು) ಕಂದಾಯ ದಾಖಲೆಗಳು, ಜನನ ಪ್ರಮಾಣಪತ್ರ, ಪಡಿತರ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಸಹ ಡಿಜಿ ಲಾಕರ್‌ಗೆ ಅಳವಡಿಸಿವೆ.!!

ಟ್ರಾಫಿಕ್ ಪೊಲೀಸ್‌ಸರಿಗೂ ತೋರಿಸಿ!!

ಟ್ರಾಫಿಕ್ ಪೊಲೀಸ್‌ಸರಿಗೂ ತೋರಿಸಿ!!

ಡಿಜಿ ಲಾಕರ್‌ನಲ್ಲಿರುವ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ ಪತ್ರಗಳಿಗೆ ಮಾನ್ಯತೆ ಇದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸರಲ್ಲಿ ಗೊಂದಲಗಳಿದ್ದರೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.!!

ಓದಿರಿ:ಗಣರಾಜ್ಯೋತ್ಸವ ದಿನದಿಂದ ಜಿಯೋ ಗ್ರಾಹಕರಿಗೆ ಹಬ್ಬ!..ಮತ್ತೆ ಭರ್ಜರಿ ಆಫರ್ ಬಿಡುಗಡೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
What are advantages of Digital Locker, How to register and use the Digital Locker.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot