ಪೆಟ್ರೋಲ್ ಬೆಲೆ ತಿಳಿಸುವ ಈ ಆಪ್‌ನಲ್ಲಿ ವಾಹನದ ಮೈಲೇಜ್ ಸಹ ಟ್ರ್ಯಾಕ್ ಮಾಡಬಹುದು!!
ಭಾರತದಲ್ಲಿ ಪ್ರತಿದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಳಿಕೆ ಆಗುತ್ತಲೇ ಇರುವುದರಿಂದ ಎಲ್ಲರಿಗೂ ಇಂದಿನ ಇಂಧನ ಬೆಲೆಯಲ್ಲಿ ಎಷ್ಟು ಏರಿಳಿಕೆಯಾಗಿದೆ ಎಂಬುದನ್ನು ತಿಳಿಯುವ ಕುತೋಹಲ ಇದ್ದೇ ಇರುತ್ತದೆ. ಹಾಗಂತ, ಪೆಟ್ರೋಲ್ ಡೀಸೆಲ್ ಬೆಲೆ ತಿಳಿಯಲು ನೀವು ಪೆಟ್ರೋಲ್ ಬಂಕ್‌ಗೆ ಹೋಬೇಕಿಲ್ಲ. ಇದಕ್ಕಾಗಿಯೇ ಆಪ್‌ಗಳಿವೆ.!

ಹೌದು, ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನಿಮಗೆ ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಎಲ್ಲಿದೆ ಮತ್ತು ಅವುಗಳ ರೇಟಿಂಗ್ ತೋರಿಸುವಂತಹ ಹಲವು ಆಪ್‌ಗಳು ನಮಗೆ ಲಭ್ಯವಿವೆ. ಪ್ರತಿಯೊಂದು ಬ್ರ್ಯಾಂಡ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಇರುವುದರಿಂದ ಅವುಗಳ ಬೆಲೆಯನ್ನು ತಿಳಿಯಲು ಈ ಆಪ್‌ಗಳ ಸಹಾಯ ಪಡೆಯಬಹುದು.

ಡೈಲಿ ಫ್ಯೂಯಲ್ ಪ್ರೈಸ್ (Daily Fuel Price)
ಇಂಡಿಯನ್ ಆಯಿಲ್, ಭಾರತ್ ಪೆಟ್ರೊಲಿಯಂ ಮೊದಲಾದ ಕಂಪನಿಗಳಲ್ಲಿ ಒಂದು ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ಡೈಲಿ ಫ್ಯೂಯಲ್ ಪ್ರೈಸ್ ಆಪ್ ತೋರಿಸುತ್ತದೆ. ಜೊತೆಗೆ ಹತ್ತಿರದಲ್ಲಿರುವ ಪೆಟ್ರೋಲ್ ಸ್ಟೇಷನ್ ಅನ್ನು ಈ ಆಪ್ ಮೂಲಕ ಪತ್ತೆ ಮಾಡಬಹುದಾದ ಆಪ್‌ನಲ್ಲಿ, ವಾಹನದ ಮೈಲೇಜ್ ಅನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ.

ಫ್ಯೂಯಲ್ @ಐಒಸಿ-ಇಂಡಿಯನ್ ಆಯಿಲ್ (Fuel @IOC-IndianOil)
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಡೆವಲಪ್ ಮಾಡಿದ ಈ ಆ್ಯಪ್‌ನಲ್ಲಿ ಪಂಪ್ ಲೋಕೇಟರ್, ಇ- ಬಿಲ್ ಲಾಯಲ್ಟಿ ರಿವಾರ್ಡ್ ಪಾಯಿಂಟ್ಸ್ ಮೊದಲಾದ ಫೀಚರ್‌ಗಳಿವೆ. ಈ ಆ್ಯಪ್ ಮ್ಯಾಪ್ ಮೂಲಕ ಇಂಡಿಯನ್ ಆಯಿಲ್ ಪೆಟ್ರೋಲ್ ಸ್ಟೇಷನ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ.ಇ-ಬಿಲ್ ಮೂಲಕ ಇಂಧನ ಖರೀದಿಯನ್ನು ಟ್ರ್ಯಾಕ್ ಮಾಡಬಹುದು.

ಮ್ಯಾಪ್ ಮೈ ಫ್ಯೂಯಲ್ (MapMyFuel)
ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನಿಮಗೆ ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಎಲ್ಲಿದೆ ಮತ್ತು ಅವುಗಳ ರೇಟಿಂಗ್ ತೋರಿಸುವ ಆಪ್ ಇದಾಗಿದೆ. . ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೊಲಿಯಂ , ಭಾರತ್ ಪೆಟ್ರೊಲಿಯಂ ಮೊದಲಾದ ಕಂಪನಿಗಳ ಇಂಧನ ಬೆಲೆ ತೋರಿಸುವ ಈ ಆಪ್‌ನಲ್ಲಿ ಮೈಲೇಜ್ ಮೀಟರ್ ಇದೆ.

ಡೈಲಿ ಪೆಟೋಲ್/ಡೀಸೆಲ್ ಪ್ರೈಸ್ (Daily Petrol/Diesel Price)
ಭಾರತದ ಪ್ರಮುಖ ನಗರಗಳಲ್ಲಿನ ಇಂಧನ ಬೆಲೆ ತೋರಿಸುವ ಡೈಲಿ ಪೆಟೋಲ್/ಡೀಸೆಲ್ ಪ್ರೈಸ್ ಆಪ್ ಪ್ರಸ್ತುತ ದಿನದ ಇಂಧನ ಬೆಲೆ ಮತ್ತು ಹಿಂದಿನ ದಿನದ ಬೆಲೆಯನ್ನು ಸಹ ತೋರಿಸುತ್ತದೆ. ಯಾವ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ ಎಂಬುದನ್ನು ತೋರಿಸುವ ಈ ಆಪ್ ಮೂಲಕ ಕಳೆದ ಒಂದು ವಾರದಲ್ಲಿ ಇಂಧನ ಬೆಲೆ ಎಷ್ಟಿತ್ತು ಎಂಬುದನ್ನು ನೋಡಬಹುದು.

ಡೈಲಿ ಪೆಟೋಲ್/ಡೀಸೆಲ್ ಪ್ರೈಸ್ ಇನ್ ಇಂಡಿಯಾ (Daily Petrol Diesel Price in India GST Rate Finder)
ದೇಶದಾದ್ಯಂತವಿರುವ 500 ನಗರಗಳಲ್ಲಿ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೊಲಿಯಂ, ಭಾರತ್ ಪೆಟ್ರೊಲಿಯಂ ಮೊದಲಾದ ಕಂಪನಿಗಳ ಇಂಧನ ಬೆಲೆ ಜತೆ ಜಿಎಸ್‍ಟಿ ದರವನ್ನೂ ತೋರಿಸುತ್ತದೆ. ಇಲ್ಲಿ ಕ್ಯಾಲ್ಕಲೇಟ್ ರೇಟ್ಸ್ ಎಂಬ ಫೀಚರ್ ಬಳಸಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು ಲೀಟರ್‌ಗೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದು.


Click it and Unblock the Notifications




