Subscribe to Gizbot

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಆಪ್ ‘ಯೊನೊ’!..ಏಕೆ ಗೊತ್ತಾ?

Written By:

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿಂಗ್ ಸೇವೆಯ ಜೊತೆಗೆ ಡಿಜಿಟಲ್‌ ಸೇವೆಗಳೆಲ್ಲ ಒಂದೆಡೆಯೇ ದೊರೆಯುವಂತಹ ಸಮಗ್ರ ಸ್ವರೂಪದ ಆಪ್ 'ಯೊನೊ' ಇದೀಗ ಹೆಚ್ಚು ಸದ್ದು ಮಾಡುತ್ತಿದೆ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಆಧರಿಸಿ ಈ ಎಸ್‌ಬಿಐ ಬ್ಯಾಂಕ್ ಆಪ್‌ ಅಭಿವೃದ್ಧಿಪಡಿಸಿದ್ದು, ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ನಿಡುತ್ತಿದೆ.

ಹಣಕಾಸು ಸೇವೆ ಮತ್ತು ಜೀವನಶೈಲಿಯ ಸೇವೆಗಳು, ಉತ್ಪನ್ನಗಳು ಒಂದೇ ತಾಣದಲ್ಲಿ ದೊರೆಯುವ ವಿಶಿಷ್ಟ ಏಕೈಕ ಆಪ್‌ ಇದಾಗಿದೆ. ಬಳಕೆದಾರರಿಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ವಿಶೇಷ ಸುರಕ್ಷತಾ ತಂತ್ರಜ್ಞಾನವನ್ನು ಈ ಆಪ್‌ನಲ್ಲಿ ಅಳವಡಿಸಿರುವುದರಿಂದ ಬ್ಯಾಂಕಿಂಗ್ ಸೇವೆಗಳನ್ನು ಅತ್ಯಂತ ಹೆಚ್ಚು ಸುರಕ್ಷತೆಯಿಂದ ಪಡೆಯಲು ಗ್ರಾಹಕರಿಗೆ ಸಾಧ್ಯವಾಗಲಿದೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಆಪ್ ‘ಯೊನೊ’!..ಏಕೆ ಗೊತ್ತಾ?

ಈ ಆಪ್‌ ಮೂಲಕ ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆಯನ್ನೂ ತೆರೆಯಬಹುದಾಗಿದ್ದು, ನಿಮ್ಮ ಬ್ಯಾಂಕ್ ಖಾತೆಯಿಂದ ಖಾತೆಗೆ ಹಣ ರವಾನೆ, ಮಂಜೂರಾದ ಸಾಲದ ಮೊತ್ತ ಪಡೆಯುವ, ಸ್ಥಿರ ಠೇವಣಿ ಆಧರಿಸಿ ಓವರ್‌ಡ್ರಾಫ್ಟ್‌ ಪಡೆಯುವುದು, ವಿಮೆ ಉತ್ಪನ್ನಗಳ ಖರೀದಿ, ಹಣ ವೆಚ್ಚ ಮಾಡಿದ ವಿಶ್ಲೇಷಣೆ ಸೇವೆಗಳೆಲ್ಲ ಆಪ್‌ನಲ್ಲಿ ದೊರೆಯಲಿವೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಆಪ್ ‘ಯೊನೊ’!..ಏಕೆ ಗೊತ್ತಾ?

ಸಿನಿಮಾ, ಬಸ್‌, ರೈಲು ಟಿಕೆಟ್ , ಹೋಟೆಲ್‌ ಬುಕ್ಕಿಂಗ್ ಮತ್ತು ಕ್ಯಾಬ್ ಬುಕಿಂಗ್ ಹೀಗೆ ಡಿಜಿಟಲ್‌ ಸೇವೆಗಳೆಲ್ಲ ಒಂದೆಡೆಯೇ ದೊರೆಯುವ ಈ ಆಪ್‌ ಮೂಲಕ ಅಮೆಜಾನ್‌, ಮಿಂತ್ರಾ, ಜಬಾಂಗ್, ಷಾಪರ್ಸ್ ಸ್ಟಾಪ್, ಯಾತ್ರಾ ಸೇರಿದಂತೆ 60ಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳ ವಹಿವಾಟನ್ನು ನಡೆಸಬಹುದು ಮತ್ತು ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.

ಓದಿರಿ: ಮೊಟ್ಟಮೊದಲ ಮೊಬೈಲ್ ಕರೆ ಮಾಡಿ ಇಂದಿಗೆ ಎಷ್ಟು ವರ್ಷ ಗೊತ್ತಾ?..ಇತಿಹಾಸಕ್ಕೊಮ್ಮೆ ಹೋಗೋಣವೆ?!

English summary
What Is SBI YONO App? State Bank of India (SBI) will unveil the country's first integrated lifestyle and banking app. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot